ವಿಷ್ಣುವರ್ಧನ್​-ರವಿಚಂದ್ರನ್​ ಜೊತೆ ನಟಿಸಿದ್ದ ನಟಿ ಆರ್ಥಿಕ ಸಂಕಷ್ಟದಲ್ಲಿ: ಸ್ಪಷ್ಟನೆ ಕೊಟ್ಟ ರಾಶಿ..!

Tollywood Actress Raashi:

Anitha E | news18-kannada
Updated:June 1, 2020, 7:51 PM IST
ವಿಷ್ಣುವರ್ಧನ್​-ರವಿಚಂದ್ರನ್​ ಜೊತೆ ನಟಿಸಿದ್ದ ನಟಿ ಆರ್ಥಿಕ ಸಂಕಷ್ಟದಲ್ಲಿ: ಸ್ಪಷ್ಟನೆ ಕೊಟ್ಟ ರಾಶಿ..!
ನಟಿ ರಾಶಿ
  • Share this:
ಬಾಲ ನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ರಾಶಿ, ನಂತರದಲ್ಲಿ ನಾಯಕಿಯಾಗಿ ಟಾಲಿವುಡ್​ನಲ್ಲಿ ರಾರಾಜಿಸಿದರು. ಸ್ಟಾರ್ ನಾಯಕರೊಂದಿಗೆ ತೆರೆ ಹಂಚಿಕೊಳ್ಳುತ್ತಾ ಹಿಟ್​ ಸಿನಿಮಾಗಳನ್ನು ನೀಡುತ್ತಾ ಯಶಸ್ಸಿನ ಉತ್ತುಂಗವನ್ನೇರಿದ ನಟಿ.

ಗೋಕುಲಂಲೋ ಸೀತಾ, ಶುಭಾಕಾಂಕ್ಷಲು ಸಿನಿಮಾಗಳು ರಾಶಿಗೆ ನಾಯಕಿಯಾಗಿ ಗುರುತು ತಂದು ಕೊಟ್ಟ ಚಿತ್ರಗಳು. ನಂತರ 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡ ರಾಶಿಗೆ ಮೆಲ್ಲನೆ ಅವಕಾಶಗಳ ಕೊರತೆ ಎದುರಾಗಿತ್ತು. ಇದೇ ಕಾರಣದಿಂದ ರಾಶಿ ಮಹೇಶ್ ಬಾಬು ಅಭಿನಯದ ನಿಜಂ ಚಿತ್ರದಲ್ಲಿ ಖಳನಾಯಕಿ ಪಾತ್ರದಲ್ಲಿ ನಟಿಸಿದ್ದರು.

Tollywood Actress Raashi facing financial Crises
ನಟಿ ರಾಶಿ


ಇದಾದ ನಂತರ ರಾಶಿಗೆ ಅವಕಾಶಗಳು ಸಿಗುವುದೇ ಬಹುತೇಕ ನಿಂತು ಹೋಗಿತ್ತು. ರಾಶಿ ಆ ಹೊತ್ತಿಗಾಗಲೇ ಕನ್ನಡದಲ್ಲೂ ನಟಿಸಿದ್ದರು. ಸ್ನೇಹ ಚಿತ್ರದಲ್ಲಿ ರವಿಚಂದ್ರನ್​ ಜೊತೆ, ರಮೇಶ್ ಅರವಿಂದ್​ ಅವರೊಂದಿಗೆ ನಿನ್ನೆ ಪ್ರೀತಿಸುವೆ, ವಿಷ್ಣುವರ್ಧನ್ ಜೊತೆ ಸಹ ನಟಿಸಿದ್ದಾರೆ ರಾಶಿ.

ಇದನ್ನೂ ಓದಿ: ಮಗ ಗೌತಮ್ ಟಾಲಿವುಡ್​ ಎಂಟ್ರಿ ಕುರಿತು ಪೋಸ್ಟ್​ ಮಾಡಿದ ಮಹೇಶ್​ ಬಾಬು..!

ತೆಲುಗು, ಹಿಂದಿ, ತಮಿಳು, ಕನ್ನಡ ಹಾಗೂ ಮಲಯಾಳಂನಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ ರಾಶಿಗೆ ಅವಕಾಶಗಳ ಕೊರತೆಯಿಂದಾಗಿ ಹಣಕಾಸಿನ ಸಮಸ್ಯೆ ಎದುರಾಗ ತೊಡಗಿತ್ತು ಎನ್ನಲಾಗುತ್ತಿದೆ. ಈ ಬಗ್ಗೆ ಅಭಿಮಾನಿಗಳು ರಾಶಿ ಅವರಿಗೆ ಕರೆ ಮಾಡಿ ವಿಚಾರಿಸುತ್ತಿದ್ದಾರಂತೆ.

ರಾಶಿ ಇತ್ತೀಚೆಗಷ್ಟೆ ತಮ್ಮ ಯೂಟ್ಯೂಬ್​ ಚಾನಲ್​ನಲ್ಲೇ ತಮ್ಮ ಆರ್ಥಿಕ ಸ್ಥಿತಿಗತಿಯ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳ ಕುರಿತಾಗಿ ಸ್ಪಷ್ಟನೆ ನೀಡಿದ್ದಾರಂತೆ. ಹಣವಿಲ್ಲದೆ ನಾನು ಕಷ್ಟಪಡುತ್ತಿರುವುದಾಗಿ ಓಡಾಡುತ್ತಿರುವ ಸುದ್ದಿಗಳೆಲ್ಲ ನಿರಾಧಾರ. ತನ್ನ ಕುಟುಂಬದೊಂದಿಗೆ ಖುಷಿಯಾಗಿ ಹಾಗೂ ಆರಾಮಾಗಿದ್ದೇನೆ ಎಂದಿದ್ದಾರೆ.ಇದನ್ನೂ ಓದಿ: Samantha Akkineni: ಅಭಿಮಾನಿ ಕೊಟ್ಟ ಸರ್ಪ್ರೈಸ್​ಗೆ ಶಾಕ್​ ಆದ ಸಮಂತಾ ಅಕ್ಕಿನೇನಿ..!

ಆದರೆ ರಾಶಿ ನಿಜಕ್ಕೂ ಹಣಕಾಸಿನ ವಿಷಯದಲ್ಲಿ ಸಮಸ್ಯೆ ಎದುರಿಸುತ್ತಿದ್ದು, ಅದನ್ನು ಹೊರ ಜಗತ್ತಿಗೆ ಗೊತ್ತಾಗದಂತೆ ನೋಡಿಕೊಳ್ಳುತ್ತಿದ್ದಾರೆ ಅನ್ನೋ ಸುದ್ದಿಗಳೂ ಸದ್ಯ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿವೆ.

50ನೇ ವಯಸ್ಸಿನಲ್ಲೂ ಬೋಲ್ಡ್​ ಫೋಟೋಶೂಟ್​ಗೆ ಪೋಸ್​ ಕೊಟ್ಟಿದ್ದ ನಟಿ ಶ್ರೀದೇವಿ..!

First published: June 1, 2020, 7:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading