• Home
  • »
  • News
  • »
  • entertainment
  • »
  • Keerthy Suresh Dasara First Look: ಮಹಾ ನಟಿ ಕೀರ್ತಿ ಸುರೇಶ್ ಸಖತ್ ಫೋಟೋ! ದಸರಾ ಚಿತ್ರದ ಫಸ್ಟ್ ಲುಕ್ ರಿವೀಲ್

Keerthy Suresh Dasara First Look: ಮಹಾ ನಟಿ ಕೀರ್ತಿ ಸುರೇಶ್ ಸಖತ್ ಫೋಟೋ! ದಸರಾ ಚಿತ್ರದ ಫಸ್ಟ್ ಲುಕ್ ರಿವೀಲ್

ದಸರಾ ಚಿತ್ರದ ಫಸ್ಟ್ ಲುಕ್ ರಿವೀಲ್

ದಸರಾ ಚಿತ್ರದ ಫಸ್ಟ್ ಲುಕ್ ರಿವೀಲ್

ದಸರಾ ಸಿನಿಮಾದಲ್ಲಿ ನಾನಿ ಪಾತ್ರದಷ್ಟೇ ಕೀರ್ತಿ ಸುರೇಶ್ ಪಾತ್ರವೂ ಸಂಚಲನ ಸೃಷ್ಟಿಸೋ ಹಾಗೆ ಇದೆ. ಅದರ ಲುಕ್ ಕೂಡ ಗಮನ ಸೆಳೆಯುವಂತಿದೆ. ಹಳದಿ ಬಣ್ಣದ ಸಾರಿಯಲ್ಲಿಯೇ ಕೀರ್ತಿ ಸುರೇಶ್ ಕಂಗೊಳಿಸಿದ್ದಾರೆ. ಆ ರೂಪದ ಮೊದಲ ಲುಕ್ ಈಗ ರಿವೀಲ್ ಆಗಿದೆ.

  • News18 Kannada
  • Last Updated :
  • Bangalore [Bangalore], India
  • Share this:

ಟಾಲಿವುಡ್ (Tollywood) ನಲ್ಲಿ ಸದ್ಯ ದಸರಾ (Dasara) ಸಿನಿಮಾ ಭಾರೀ ಸದ್ದು ಮಾಡುತ್ತಿದೆ. ನಾಯಕ ನಟ (Nani) ನಾನಿ ಅಭಿನಯದ ಈ ಚಿತ್ರದ ಪ್ಯಾನ್ ಇಂಡಿಯಾ ರಿಲೀಸ್ ಆಗುತ್ತಿದೆ. ಬಹು ಭಾಷೆಯಲ್ಲಿಯೇ ತೆರೆ ಕಾಣಲಿರೋ ಈ ಚಿತ್ರದ ಫಸ್ಟ್ ಲುಕ್ ಭಾರೀ ಸೌಂಡ್ ಮಾಡಿತ್ತು. ನಾಯಕ ನಾನಿ ಲುಕ್ ಕೂಡ ಸಾಕಷ್ಟು ಗಮನ ಸೆಳೆದಿತ್ತು. ಆದರೆ ನಾಯಕಿ ಲುಕ್ ಮಾತ್ರ ರಿವೀಲ್ ಆಗಿರಲಿಲ್ಲ. ಈಗ ಅದು ಕೂಡ ಆಗಿದೆ. ಮಹಾನಟಿ ಚಿತ್ರ ಖ್ಯಾತಿಯ (Keerthy Suresh) ನಟಿ ಕೀರ್ತಿ ಸುರೇಶ್ ಈ ಚಿತ್ರದಲ್ಲಿ ಭರ್ಜರಿ ರೋಲ್ ಅನ್ನೇ ಮಾಡಿದ್ದಾರೆ. ಅದರ ಫಸ್ಟ್ ಲುಕ್ ಹೊರ ಬಂದಿದೆ. ಜನರಲ್ಲಿ ಹೊಸ ಕ್ರೇಜ್ ಅನ್ನು ಹುಟ್ಟುಹಾಕಿದೆ.


ಟಾಲಿವುಡ್​ ನಲ್ಲೂ ದಸರಾ ಎಂಬ ಪ್ಯಾನ್ ಇಂಡಿಯಾ ಸಿನಿಮಾ


ಟಾಲಿವುಡ್ ನಲ್ಲಿ ದಸರಾ ಸಿನಿಮಾ ದೊಡ್ಡ ಹವಾ ಕ್ರಿಯೆಟ್ ಮಾಡುತ್ತಿದೆ. ಮಾಸ್ ಸಿನಿಮಾ ಇದಾಗಿರೋದ್ರಿಂದ ಪ್ರೇಕ್ಷಕರಲ್ಲಿ ಸಹಜವಾಗಿಯೇ ಒಂದು ಕುತೂಹಲವೂ ಇದೆ. ನಾಯಕ ನಟ ನಾನಿಯ ಫಸ್ಟ್ ಲುಕ್ ಕೂಡ ಭಾರೀ ಕ್ರೇಜ್ ಹುಟ್ಟುಹಾಕಿದೆ.


ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ದಸರಾ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರದ ನಾಯಕಿ ಕೀರ್ತಿ ಸುರೇಶ್ ಕೂಡ ಅದ್ಬುತ ರೋಲ್ ಅನ್ನೇ ಮಾಡಿದ್ದಾರೆ. ಆದರೆ ಈ ಪಾತ್ರದ ಲುಕ್ ಹೇಗಿರುತ್ತದೆ ಅನ್ನೋದು ಮಾತ್ರ ರಿವೀಲ್ ಆಗಿರಲಿಲ್ಲ.


Tollywood Actress Keerthy Suresh First Look of Dasara film Now Reveal
ದಸರಾ ಚಿತ್ರದಲ್ಲಿ ಕೀರ್ತಿ ಸುರೇಶ್ ಪಾತ್ರ ಹೇಗಿದೆ?


ದಸರಾ ಚಿತ್ರದಲ್ಲಿ ಕೀರ್ತಿ ಸುರೇಶ್ ಪಾತ್ರ ಹೇಗಿದೆ?
ದಸರಾ ಸಿನಿಮಾದಲ್ಲಿ ನಾನಿ ಪಾತ್ರದಷ್ಟೇ ಕೀರ್ತಿ ಸುರೇಶ್ ಪಾತ್ರವೂ ಸಂಚಲನ ಸೃಷ್ಟಿಸೋ ಹಾಗೆ ಇದೆ. ಅದರ ಲುಕ್ ಕೂಡ ಗಮನ ಸೆಳೆಯುವಂತಿದೆ. ಹಳದಿ ಬಣ್ಣದ ಸಾರಿಯಲ್ಲಿಯೇ ಕೀರ್ತಿ ಸುರೇಶ್ ಕಂಗೊಳಿಸಿದ್ದಾರೆ. ಆ ರೂಪದ ಮೊದಲ ಲುಕ್ ಈಗ ರಿವೀಲ್ ಆಗಿದೆ.


ದಸರಾ ಸಿನಿಮಾದ ಕೀರ್ತಿ ಪಾತ್ರದ ಹೆಸರೇನು?
ಹೌದು, ಕೀರ್ತಿ ಸುರೇಶ್ ನಿರ್ವಹಿಸಿರೋ ಪಾತ್ರವೂ ವಿಶೇಷವಾಗಿಯೇ ಇದೆ. ಪಾತ್ರದ ಹೆಸರು ಮಜವಾಗಿಯೇ ಇದೆ. ಪಾತ್ರದ ಮೊದಲ ಲುಕ್ ನೊಂದಿಗೆ ಪಾತ್ರದ ಹೆಸರನ್ನೂ ರಿವೀಲ್ ಮಾಡಿರೋದು ಇಲ್ಲಿ ವಿಶೇಷ ಅನಿಸುತ್ತದೆ.


ಇದನ್ನೂ ಓದಿ: Upendra UI: ಒಂದು ಶಾಟ್ ತೆಗೆಯೋಕೆ 100 ಕ್ಯಾಮೆರಾ! ಉಪ್ಪಿ ಫ್ಯಾನ್ಸ್ ಥ್ರಿಲ್


ಅಂದ್ಹಾಗೆ ದಸರಾ ಚಿತ್ರದಲ್ಲಿ ಕೀರ್ತಿ ಸುರೇಶ್ ನಿರ್ವಹಿಸಿರೋ ಪಾತ್ರದ ಹೆಸರು "ವೆನ್ನಲ" ಅಂತಲೇ ಇದೆ. ಈ ಹೆಸರಿನ ಮೂಲಕ ಕೀರ್ತಿ ಸುರೇಶ್ ಪ್ರೇಕ್ಷಕರ ಮುಂದೆ ಬಂದು ಹೊಸ ರಂಗನ್ನೆ ಈ ದಸರಾ ಸಿನಿಮಾದಲ್ಲಿ ತುಂಬಲಿದ್ದಾರೆ.


Tollywood Actress Keerthy Suresh First Look of Dasara film Now Reveal
ದಸರಾ ಸಿನಿಮಾದ ಕೀರ್ತಿ ಪಾತ್ರದ ಹೆಸರೇನು?


ಟಾಲಿವುಡ್ ದಸರಾ ಚಿತ್ರದಲ್ಲಿ ದೊಡ್ಡ ತಾರಾಬಳ
ದಸರಾ ಸಿನಿಮಾ ಆ್ಯಕ್ಷನ್ ಪ್ಯಾಕ್ಡ್ ಸಿನಿಮಾನೇ ಆಗಿದೆ. ಮಾಸ್ ಕಥೆಯನ್ನೆ ಹೊಂದಿರೋ ಈ ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಇದೆ. ಸಾಯಿ ಕುಮಾರ್, ಸಮುದ್ರಕನಿ, ಜರೀನಾ ವಹಾಬ್ ಅಭಿನಯಿಸಿದ್ದಾರೆ.


ಪ್ಯಾನ್ ಇಂಡಿಯಾ ದಸರಾ ಸಿನಿಮಾ ಯಾವಾಗ ರಿಲೀಸ್?
ಶ್ರೀಕಾಂತ್ ಒಡೆಲಾ ನಿರ್ದೇಶನದ ಈ ಸಿನಿಮಾ ಈಗಲೇ ರಿಲೀಸ್ ಆಗುತ್ತಿಲ್ಲ. ಮುಂದಿನ ವರ್ಷ 2023 ಮಾರ್ಚ್-30 ರಂದು ದಸರಾ ಸಿನಿಮಾ ರಿಲೀಸ್ ಆಗುತ್ತಿದೆ.


ಇದನ್ನೂ ಓದಿ: Kantara-Actor Chetan: ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ ಎಂದ ನಟ ಚೇತನ್! ರಿಷಬ್ ಶೆಟ್ಟಿ ಹೇಳಿದ್ದೇನು?


ಚಿತ್ರಕ್ಕೆ ಸಂತೋಷ್ ನಾರಾಯಣ್ ಸಂಗೀತ ಕೊಟ್ಟಿದ್ದಾರೆ. ಸತ್ಯನ್ ಸೂರ್ಯನ್ ಛಾಯಾಗ್ರಹಣ ಮಾಡಿದ್ದಾರೆ. ವಿಶೇಷವಾಗಿ ಚಿತ್ರಕ್ಕೆ ಅನ್ಬರಿವ್ ಸಾಹಸ ನಿರ್ದೇಶನ ಮಾಡಿದ್ದಾರೆ. ಉಳಿದಂತೆ ಚಿತ್ರದ ಈಗಲೇ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.


ಅದರಲ್ಲೂ ನಟಿ ಕೀರ್ತಿ ಸುರೇಶ್ ಪಾತ್ರದ ಫಸ್ಟ್ ಲುಕ್ ಸಖತ್ ಆಗಿಯೇ ಇದೆ. ಈಗಾಗಲೇ ಎಲ್ಲರ ಗಮನವನ್ನೂ ಇದು ಸೆಳೆಯುತ್ತಿದೆ.

First published: