Anushka Shetty: ಮತ್ತೊಮ್ಮೆ ಕನ್ನಡಿಗರ ಮನಗೆದ್ದ ಅನುಷ್ಕಾ: ಕನ್ನಡದಲ್ಲಿ ಅಪ್ಪ ಅಮ್ಮನಿಗೆ ಶುಭ ಕೋರಿದ ಕನ್ನಡತಿ

ಕನ್ನಡದವರೇ ಆದರೂ ಕನ್ನಡವನ್ನೇ ಮರೆಯುವವರ ನಡುವೆ ತೆಲುಗಿನಲ್ಲಿ ಹೆಸರು ಸಂಪಾದಿಸಿದರೂ ತಮ್ಮ ಕನ್ನಡತನ ಮರೆಯದ ಅವರ ಬಗ್ಗೆ ಸದಾ ಮೆಚ್ಚುಗೆ ಜೊತೆ ಖುಷಿ, ಪ್ರಶಂಸೆ ವ್ಯಕ್ತವಾಗುತ್ತಿರುತ್ತದೆ

  • Share this:
    ಟಾಲಿವುಡ್​ ಸಿನಿಮಾದ ಸ್ಟಾರ್​ ನಟಿ ಅನುಷ್ಕಾ ತೆಲುಗು ನಾಡಿನಲ್ಲಿದ್ದರೂ  ಕನ್ನಡ ಮರೆಯದ ಅಪ್ಪಟ ಕನ್ನಡತಿ. ಸದಾ ತಮ್ಮ ಕನ್ನಡಾಭಿಮಾನವನ್ನು ತೋರ್ಪಡಿಸುತ್ತಾ ಕನ್ನಡಿಗರ ಮನ ಗೆಲ್ಲುತ್ತಲೇ ಇರುತ್ತಾರೆ. ಮೂಲತಃ ದಕ್ಷಿಣ ಕನ್ನಡದವರಾದರೂ ನಟಿ ಅನುಷ್ಕಾ ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ. ತಮ್ಮ ವಿದ್ಯಾಭ್ಯಾಸ ಮುಗಿಸಿದ್ದು ಇದೇ ಸಿಲಿಕಾನ್​ ಸಿಟಿಯಲ್ಲಿ. ಬಳಿಕ ತೆಲುಗು ಸಿನಿಮಾ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ ನಟಿಗೆ ಸಿಕ್ಕಿದ್ದು ಮಾತ್ರ ಅಭೂತಪೂರ್ವ ಯಶಸ್ಸು. ಈ ಯಶಸ್ಸಿನ ಉತ್ತಂಗದಲ್ಲೂ ಅವರು ತಮ್ಮ ಕನ್ನಡಾಭಿಮಾನವನ್ನು ಮಾತ್ರ ಎಂದಿಗೂ ಮರೆತಿಲ್ಲ. ತಮ್ಮ  ಸಾಮಾಜಿಕ ಜಾಲತಾಣದಲ್ಲಿ ಅವರು ಬಹುತೇಕ ಪೋಸ್ಟ್​ಗಳಲ್ಲಿ ಕನ್ನಡ ಕಡ್ಡಾಯವಾಗಿದೆ.

    ಅನುಷ್ಕಾ ಶೆಟ್ಟಿ ತೆಲುಗಿನಲ್ಲಿ ಮಾತ್ರವಲ್ಲದೇ, ತಮಿಳು ಚಿತ್ರದಲ್ಲಿ ಅಭಿನಯಿಸಿದ್ದು, ಹಿಂದಿ, ಕನ್ನಡ ಸೇರಿದಂತೆ ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಇಷ್ಟೆಲ್ಲಾ ಅಭಿಮಾನಿಗಳಿದ್ದರೂ ಅವರು ಕನ್ನಡ ಪದ ಬಳಕೆ ಮಾಡುವುದರ ಮೂಲಕ ತಾವು ಒಬ್ಬ ಕನ್ನಡತಿ ಎಂಬ ಸಂದೇಶವನ್ನು ಸಾರುತ್ತಲೇ ಇರುತ್ತಾರೆ.

    Tollywood actress Anushka Shetty social media post kannada post praised by kannadigas
    ಅನುಷ್ಕಾ ಕನ್ನಡಭಿಮಾನಕ್ಕೆ ಮೆಚ್ಚುಗೆ

    ಇಂದು ಕೂಡ ಅವರ ಅಪ್ಪ ಅಮ್ಮನ ವಿವಾಹ ವಾರ್ಷಿಕೋತ್ಸವಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಅವರು ಕನ್ನಡದಲ್ಲಿ ಶುಭಕೋರಿದ್ದಾರೆ. ಇಷ್ಟು ದೊಡ್ಡ ನಟಿಯಾದರೂ, ಕನ್ನಡದ ಬಗ್ಗೆ ಅವರ ಅಭಿಮಾನ ಇಂದಿನ ಅನೇಕರಿಗೆ ಸ್ಪೂರ್ತಿಯಾಗಿದೆ.

    ಕನ್ನಡದವರೇ ಆದರೂ ಕನ್ನಡವನ್ನೇ ಮರೆಯುವವರ ನಡುವೆ ತೆಲುಗಿನಲ್ಲಿ ಹೆಸರು ಸಂಪಾದಿಸಿದರೂ ತಮ್ಮ ಕನ್ನಡತನ ಮರೆಯದ ಅವರ ಬಗ್ಗೆ ಸದಾ ಮೆಚ್ಚುಗೆ ಜೊತೆ ಖುಷಿ , ಪ್ರಶಂಸೆ ವ್ಯಕ್ತವಾಗುತ್ತಿರುತ್ತದೆ.
    Published by:Seema R
    First published: