Allu Arjun and Prabhas: ಕೊನೆಗೂ ಅಂತ್ಯ ಕಂಡ ಅಲ್ಲು ಅರ್ಜುನ್-ಪ್ರಭಾಸ್ ಫ್ಯಾನ್ಸ್ ವಾರ್! ಅಷ್ಟಕ್ಕೂ ಏನಾಗಿತ್ತು?

ಪ್ರಭಾಸ್‌ ಹಾಗೂ ನಟ ಅಲ್ಲು ಅರ್ಜುನ್‌ ಅಭಿಮಾನಿಗಳ ಟ್ವಿಟ್ಟರ್‌ ವಾರ್‌ ಕೊನೆಗೂ ಅಂತ್ಯವಾಗಿದೆ. ಅತಿದೊಡ್ಡ ಫ್ಯಾನ್‌ ಬಳಗವನ್ನು ಹೊಂದಿರುವ ಈ ಇಬ್ಬರೂ ನಟರ ಮಧ್ಯೆ ಇರುವ ಸರಳತೆ.. ಹೃದಯವಂತಿಕೆ ಹಾಗೂ ಗೆಳೆತನ ನೋಡಿ ಅಭಿಮಾನಿಗಳೇ ಸಾಕು ಇನ್ನು ಟ್ರೋಲ್..‌. ನಮ್ಮ ನಡುವೆ ಸಮರ ಬೇಡ ಎಂದಿದ್ದಾರೆ.

ಅಲ್ಲು ಅರ್ಜುನ್ ಮತ್ತು  ಪ್ರಭಾಸ್

ಅಲ್ಲು ಅರ್ಜುನ್ ಮತ್ತು ಪ್ರಭಾಸ್

  • Share this:

ಟಾಲಿವುಡ್‌ ನ ಮೋಸ್ಟ್‌ ಹ್ಯಾಂಡ್‌ ಸಮ್‌ ಹೀರೋ ಪ್ರಭಾಸ್‌ (Handsome hero Prabhas) ಹಾಗೂ ನಟ ಅಲ್ಲು ಅರ್ಜುನ್‌ (Actor Allu Arjun) ಅಭಿಮಾನಿಗಳ ಟ್ವಿಟ್ಟರ್‌ ವಾರ್‌ (Twitter war) ಕೊನೆಗೂ ಅಂತ್ಯವಾಗಿದೆ. ಅತಿದೊಡ್ಡ ಫ್ಯಾನ್‌ ಬಳಗವನ್ನು ಹೊಂದಿರುವ ಈ ಇಬ್ಬರೂ ನಟರ ಮಧ್ಯೆ ಇರುವ ಸರಳತೆ.. ಹೃದಯವಂತಿಕೆ ಹಾಗೂ ಗೆಳೆತನ ನೋಡಿ ಅಭಿಮಾನಿಗಳೇ ಸಾಕು ಇನ್ನು ಟ್ರೋಲ್ (Troll)..‌. ನಮ್ಮ ನಡುವೆ ಸಮರ ಬೇಡ ಎಂದಿದ್ದಾರೆ. ಹಾಗಿದ್ರೆ ಅಷ್ಟಕ್ಕೂ ಆಗಿದ್ದೇನು.. ಅತಿರೇಕಕ್ಕೇ ಹೋಗಿದ್ದ ಅಭಿಮಾನಿಗಳೆಲ್ಲ (Fans) ಇಂಥದ್ದೊಂದು ನಿರ್ಧಾರಕ್ಕೆ ಬರೋಕೆ ಕಾರಣವಾದ ಅಂಶವೇನು ಅನ್ನೋದು ತುಂಬಾ ಇಂಟೆರೆಸ್ಟಿಂಗ್‌ ವಿಚಾರ.


ಅಲ್ಲು ಅರ್ಜುನ್‌ ಹಾಗೂ ಪ್ರಭಾಸ್‌ ಅವರ ವಿಡಿಯೋ ವೈರಲ್ 
ಅಷ್ಟಕ್ಕೂ ನಟರಿಬ್ಬರ ಅಭಿಮಾನಿಗಳು ಈ ಸಮರ ಕೈ ಬಿಡೋಕೆ ಕಾರಣವಾಗಿದ್ದು ಒಂದು ವಿಡಿಯೋ.. ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಅದರಲ್ಲಿ ಕಂಡದ್ದು ನಟರಾದ ಅಲ್ಲು ಅರ್ಜುನ್‌ ಹಾಗೂ ಪ್ರಭಾಸ್‌ ನಡುವೆ ಕಂಡ ಸ್ನೇಹ.


ಹಾಗಿದ್ರೆ ಅಲ್ಲಿ ಆಗಿದ್ದೇನು… ಅಂದರೆ ಇಷ್ಟೇ… ಇತ್ತೀಚಿಗೆ ನಟ ಪ್ರಭಾಸ್‌ ಅವರ ಚಿಕ್ಕಪ್ಪ ಕೃಷ್ಣಂ ರಾಜು ನಿಧನರಾಗಿದ್ದರು. ಅವರ ಅಂತಿಮ ದರ್ಶನಕ್ಕೆ ಟಾಲಿವುಡ್‌ ನಟರ ದಂಡೇ ಆಗಮಿಸಿತ್ತು. ನಟರಾದ ಮಹೇಶ್‌ ಬಾಬು, ಜ್ಯೂನಿಯರ್‌ ಎನ್‌ ಟಿ ಆರ್‌, ಪವನ್‌ ಕಲ್ಯಾಣ, ಚಿರಂಜೀವಿ ಸೇರಿದಂತೆ ಹಲವು ನಟರು ಗಣ್ಯರು ಅಂತಿಮ ದರ್ಶನಕ್ಕೆ ಆಗಮಿಸಿದ್ದರು. ಇದೇ ವೇಳೆ ಅಲ್ಲಿಗೆ ಬಂದಿದ್ದ ಅಲ್ಲು ಅರ್ಜುನ್‌ ಪ್ರಭಾಸ್‌ ರನ್ನು ತಬ್ಬಿಕೊಂಡು ಸಂತೈಸಿದರು. ಪ್ರಭಾಸ್ರ‌ ನ್ನು ಅಲ್ಲು ಅರ್ಜುನ್‌ ಸಮಾಧಾನಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.


ವಿಡಿಯೋ ವೈರಲ್ ಆಗತಿದ್ದಂತೆಯೇ ಟ್ವಿಟ್ಟರ್ ವಾರ್ ಕೂಡ ಎಂಡ್ 
ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆಯೇ ಟ್ವಿಟ್ಟರ್‌ ನಲ್ಲಿ ಫ್ಯಾನ್‌ ವಾರ್‌ ಕೂಡ ಅಂತ್ಯವಾಗಿದೆ. ಈ ನಟರ ಅಭಿಮಾನಿಗಳು ಸಾಕು ಇನ್ನು ಈ ಟ್ವಿಟ್ಟರ್‌ ಯುದ್ಧ ಅಂತ ಹೇಳಿದ್ದಾರೆ. ಒಬ್ಬರು ʼಸಾಕು ಇನ್ನು ಈ ಟ್ರೋಲ್‌ ಗಳು! ಅವರಿಬ್ಬರೂ ಎಂಥ ಸ್ನೇಹಿತರು ಅನ್ನೋದನ್ನ ನಾವು ನೋಡಿದ್ದೇವೆ. ಕಳೆದು ಹೋದ ಸ್ನೇಹವನ್ನ ಮತ್ತೆ ರಿಫ್ರೆಶ್‌ ಮಾಡೋಣ ಹಾಗೇ ಹೊಸದಾಗಿ ಪ್ರಾರಂಭಿಸೋಣʼ ಎಂದಿದ್ದಾರೆ.


ಇದನ್ನೂ ಓದಿ: Radhika Madan: ಬ್ಲ್ಯಾಕ್ ಬ್ಯೂಟಿಯಾದ ರಾಧಿಕಾ ಮದನ್! ಟೊರೊಂಟೋ ಬೀದಿಗಳಲ್ಲಿ ಗ್ಲಾಮರಸ್ ಫೋಟೋಶೂಟ್

ಇನ್ನೊಬ್ಬ ʼ ಕಠಿಣ ಸಮಯದಲ್ಲಿ ನಿಜವಾದ ಗೆಳೆತನ ನಮ್ಮನ್ನು ಇನ್ನಷ್ಟು ಗಟ್ಟಿಯಾಗಿಸುತ್ತದೆʼ ಎಂದಿದ್ದಾನೆ. ಮತ್ತೊಬ್ಬ ಇದು ನಿಜವಾದ ಗೆಳೆತನ. ಟ್ರೋಲ್‌ ಮಾಡೋದನ್ನು ನಿಲ್ಲಿಸಿ ಅಂತ ಹೇಳಿದ್ದಾನೆ. ಹಾಗೇ ಇನ್ನೊಬ್ಬರು ʼಪ್ರಭಾಸ್‌ ಹಾಗೂ ಅಲ್ಲು ಅರ್ಜುನ್‌ ಅಭಿಮಾನಿಗಳೇ ಟ್ರೋಲ್‌ ಮಾಡೋದನ್ನ ನಿಲ್ಲಿಸಿ. ಇವರಿಬ್ಬರ ಬಂಧ ಸ್ನೇಹಕ್ಕಿಂತಲೂ ಮಿಗಿಲಾಗಿದೆʼ ಎಂದಿದ್ದಾರೆ. ಮತ್ತೊಬ್ಬರು ಎಲ್ಲ ನಟರು ಬಂದು ಪ್ರಭಾಸ್‌ ಗೆ ಸಂತೈಸಿದ ಪೋಟೋಗಳನ್ನು ಕೊಲ್ಯಾಜ್‌ ಮಾಡಿ ಇನ್ಮುಂದೆ ಯಾವ ನಟರ ಮೇಲೂ ಟ್ರೋಲ್‌ ಮಾಡಬೇಡಿ ಎಂದು ಬರೆದಿದ್ದಾರೆ.


ಫ್ಯಾನ್ ವಾರ್ ಶುರುವಾಗೋದಕ್ಕೆ ಕಾರಣ ಇದೇ
ಅಷ್ಟಕ್ಕೂ ಈ ಇಬ್ಬರೂ ದಕ್ಷಿಣದ ನಟರು ಇಡೀ ಭಾರತ ಚಿತ್ರರಂಗ ನಮ್ಮತ್ತ ತಿರುಗಿನೋಡುವಂತೆ ಮಾಡಿದವರು. ಪ್ರಭಾಸ್‌ ರ ಬಾಹುಬಲಿ.. ಅಲ್ಲು ಅರ್ಜುನ್‌ ರ ಪುಷ್ಪ ಕ್ಕೆ ಭಾರತ ಚಿತ್ರರಂಗ ಭೇಷ್‌ ಎಂದಿದೆ. ಪತ್ರಿಕೆಯೊಂದರ ಮುಖಪುಟದಿಂದ ಆರಂಭವಾದ ಫ್ಯಾನ್‌ ವಾರ್‌ ಹಾಗೆ ಮುಂದುವರಿದಿತ್ತು. ಆದ್ರೆ ದಕ್ಷಿಣ ಭಾರತದ ಹೆಮ್ಮೆ ಎನ್ನಿಸಿಕೊಳ್ಳುವ ಈ ನಟರ ಅಭಿಮಾನಿಗಳ ಯುದ್ಧ ಮುಗಿದದ್ದು ಸದ್ಯಕ್ಕೆ ಸಮಾಧಾನಕರ ಸಂಗತಿಯಂತೂ ಹೌದು.


ಇದನ್ನೂ ಓದಿ:  Bollywood Couple: ಬಾಲಿವುಡ್​ನ ಈ ಸ್ಟಾರ್​ ಜೋಡಿಗೆ ಆತ್ಮವಿಶ್ವಾಸದ ಜೊತೆ ಅಹಂಕಾರನೂ ಇದ್ಯಂತೆ; ಖ್ಯಾತ ಜ್ಯೋತಿಷಿ

ಇನ್ನು ನಟ ಅಲ್ಲು ಅರ್ಜುನ್‌ ದಿ ರೂಲ್‌ ಚಿತ್ರದ ಚಿತ್ರೀಕರಣಕ್ಕೆ ಸಜ್ಜಾಗುತ್ತಿದ್ದಾರೆ. ಇದರಲ್ಲಿ ನಟಿ ರಶ್ಮಿಕಾ ಮಂದಣ್ಣ ಹಾಗೂ ಫಹದ್‌ ಫಾಸೀಲ್‌ ಕೂಡ ನಟಿಸಿದ್ದಾರೆ. ಇನ್ನೊಂದೆಡೆ ನಟ ಪ್ರಭಾಸ್‌ ತಮ್ಮ ಆದಿಪುರುಷ ಚಿತ್ರದ ಪ್ರಮೋಷನ್‌ ಕೈಗೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಸೈಫ್‌ ಅಲಿಖಾನ್‌ ಹಾಗೂ ಕೃತಿ ಸನೋನ್ ಕೂಡ ಕಾಣಸಿಕೊಂಡಿದ್ದಾರೆ.

Published by:Ashwini Prabhu
First published: