ವಿಜಯ್ ದೇವರಕೊಂಡ (Vijay Deverakonda) ಅವರ ಚಿತ್ರದ ಬಹು ನಿರೀಕ್ಷಿತ ಸಿನಿಮಾ ಲೈಗರ್ ಟ್ರೈಲರ್ (Liger Trailer) ಈಗ ಬಹು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಪುರಿ ಜಗನ್ನಾಥ್ ನಿರ್ದೇಶನದ ಮುಂಬರುವ ಪ್ಯಾನ್-ಇಂಡಿಯಾ (Pan India) ಸಿನಿಮಾ ಬಹಳ ಕುತೂಹಲ ಹುಟ್ಟುಹಾಕಿದೆ. ವಿಜಯ್ ದೇವರಕೊಂಡ ಜೊತೆಗೆ, ಲೈಗರ್ನಲ್ಲಿ ಅನನ್ಯ ಪಾಂಡೆ, ಮೈಕ್ ಟೈಸನ್ ಮತ್ತು ರಮ್ಯಾ ಕೃಷ್ಣನ್ ಕೂಡ ನಟಿಸಿದ್ದಾರೆ. ಈ ಸಿನಿಮಾವು ಈ ವರ್ಷದ ಆಗಸ್ಟ್ 25 ರಂದು ಬಿಡುಗಡೆಯಾಗಲಿದ್ದು, ಇದೀಗ ಚಿತ್ರದ ರೊಮ್ಯಾಂಟಿಕ್ ಸಾಂಗ್ ನ ಟೀಸರ್ ಒಂದು ರಿಲೀಸ್ ಆಗಿದೆ. ಇಂದು ಸಂಜೆ 4 ಗಂಟೆಗೆ ಪುಲ್ ವಿಡಿಯೋ ಸಾಂಗ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.
ಆಫತ್ ಸಾಂಗ್ನ ಟೀಸರ್ ರಿಲೀಸ್:
ಹೌದು, ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡ್ಯ ಇಬ್ಬರ ನಡುವಿನ ರೊಮ್ಯಾಂಟಿಕ್ ಹಾಡಿನ ಟೀಸರ್ ಒಂದು ಬಿಡುಗಡೆ ಆಗಿದ್ದು, ಸಖತ್ ವೈರಲ್ ಆಗುತ್ತಿದೆ. ‘ಆಫತ್‘ ಎಂಬ ಹಾಡಿನ ಟೀಸರ್ ಬಿಡುಗಡೆ ಆಗಿದ್ದು, ವಿಜಯ್ ಮತ್ತು ಅನನ್ಯಾ ಕಾಂಬಿನೇಷನ್ ಸಖತ್ ಆಗಿ ವರ್ಕೋಟ್ ಆದಂತಿದೆ. ಇನ್ನು, ‘ಆಫತ್..’ ಲಿರಿಕಲ್ ವಿಡಿಯೋ ಇಂದು ಸಂಜೆ 4 ಗಂಟೆಗೆ ಬಿಡುಗಡೆ ಆಗಲಿದೆ.
There's always a beautiful drama Queen who will come between a mother and son!#Aafat 💞
Song Tomorrow at 4 PM!#FirstOnTwitter #Liger pic.twitter.com/2gBp7QWiF7
— Vijay Deverakonda (@TheDeverakonda) August 4, 2022
ವ್ಯಕ್ತಿಯೊಬ್ಬನ ಎಡಬಿಡಂಗಿ ಜೀವನವನ್ನು ಈ ಟ್ರೈಲರ್ ಪ್ರತಿನಿಧಿಸುತ್ತದೆ. MMA ಪ್ರಶಸ್ತಿಯನ್ನು ಗೆಲ್ಲಲು ಮಾಡಲು ಪ್ರಯತ್ನಗಳು ಎದುರಾಗುವ ಸಮಸ್ಯೆಗಳು, ಗೆಳತಿಯ ಮೋಸ ಎಲ್ಲವನ್ನು ಇದು ಹೇಳಿದೆ. ಭಾವನೆಗಳ ಏರಿಳಿತವನ್ನು ಈ ಟ್ರೈಲರ್ ಅದ್ಭುತವಾಗಿ ತೋರಿಸಿದೆ. ಲೆಜೆಂಡ್ ಮೈಕ್ ಟೈಸನ್ ಅವರ ಸ್ಟೈಲಿಶ್ ಪರಿಚಯ, ನಂತರ ಲೈಗರ್ ಜೊತೆಗಿನ ಸಂಭಾಷಣೆ ವಿನಿಮಯವು ಖಂಡಿತವಾಗಿಯೂ ಒಂದು ಅದ್ಬುತ ಎನ್ನಬಹುದು. "ನಾನು ಫೈಟರ್" ಎಂದು ವಿಜಯ್ ಹೇಳಿದಾಗ, ಟೈಸನ್, "ನೀವು ಫೈಟರ್ ಆಗಿದ್ದರೆ, ನಾನು ಏನು?" ಎಂದು ಟೈಸನ್ ಕೇಳುತ್ತಾರೆ. ಇನ್ನು ಈ ಎಲ್ಲದರ ಜೊತೆಗೆಟೈಸನ್ ಕಿಲ್ಲರ್ ಲುಕ್ ನೀಡುವ ಕೊನೆಯ ಫ್ರೇಮ್‌ಗಳು ಟ್ರೈಲರ್‌ಗೆ ಒಂದು ಸುಂದರವಾದ ಅರ್ಥ ನೀಡುತ್ತದೆ ಎಂದರೆ ತಪ್ಪಲ್ಲ.
ಇದನ್ನೂ ಓದಿ: Liger Trailer: ಲೈಗರ್ ಸಿನಿಮಾದ ಟ್ರೈಲರ್ ರಿಲೀಸ್, ಮಾಸ್ ಲುಕ್ನಲ್ಲಿ ವಿಜಯ್ ದೇವರಕೊಂಡ
ತಾಂತ್ರಿಕವಾಗಿ ಟ್ರೇಲರ್ ಬಗ್ಗೆ ಹೇಳುವುದಾದರೆ ಈ ವಿಚಾರದಲ್ಲಿ ಸಹ ಯಾವುದೇ ಮಾತಿಲ್ಲ. ನಿರ್ಮಾಣ ವಿನ್ಯಾಸ ಮತ್ತು ಛಾಯಾಗ್ರಹಣ ಕೂಡ ಯಾವುದಕ್ಕೂ ಕಮ್ಮಿಯಿಲ್ಲ ಎನ್ನುವಂತಿದ್ದು, ಒಟ್ಟಾರೆಯಾಗಿ ಈ ಟ್ರೈಲರ್ ಹೈಪ್ ಕ್ರಿಯೇಟ್ ಮಾಡಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಧರ್ಮ ಪ್ರೊಡಕ್ಷನ್ಸ್ ಸಹಯೋಗದಲ್ಲಿ ಪುರಿ ಕನೆಕ್ಟ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ. ಪುರಿ ಜಗನ್ನಾಥ್, ಚಾರ್ಮಿ ಕೌರ್, ಕರಣ್ ಜೋಹರ್ ಮತ್ತು ಅಪೂರ್ವ ಮೆಹ್ತಾ ಒಟ್ಟಾಗಿ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡಿದ್ದಾರೆ.
‘ಕಾಫಿ ವಿತ್ ಕರಣ್’ ಶೋಗೆ ಅಥಿತಿಯಾಗಿ ಬಂದ ವಿಜಯ್:
ಇತ್ತೀಚೆಗೆ ಈ ನಟ ಬಾಲಿವುಡ್ ನ ಜನಪ್ರಿಯ ನಿರ್ಮಾಪಕರಾದ ಕರಣ್ ಜೋಹರ್ ಅವರು ನಡೆಸಿ ಕೊಡುವಂತಹ ‘ಕಾಫಿ ವಿತ್ ಕರಣ್’ ಶೋ ನ ಸೀಸನ್ 7 ರ ಎಪಿಸೋಡ್ ವೊಂದರಲ್ಲಿ ಅತಿಥಿಯಾಗಿ ಆಗಮಿಸಿದ್ದರು. ಲೈಗರ್ ಚಿತ್ರದ ಮೂಲಕ ಪ್ಯಾನ್ ಇಂಡಿಯಾಗೆ ಪಾದಾರ್ಪಣೆ ಮಾಡಲು ಸಜ್ಜಾಗಿರುವ ದಕ್ಷಿಣ ಭಾರತದ ಸ್ಟಾರ್ ವಿಜಯ್ ದೇವರಕೊಂಡ ಅವರು ಗುರುವಾರ ‘ಕಾಫಿ ವಿತ್ ಕರಣ್’ ಶೋ ನ ಸೋಫಾದ ಮೇಲೆ ಮೊದಲ ಬಾರಿಗೆ ಕಾಣಿಸಿಕೊಂಡರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ