news18-kannada Updated:September 19, 2020, 3:35 PM IST
ಉಪೇಂದ್ರ-ಸಂಪೂರ್ಣೇಶ್ ಬಾಬು
ಸಂಪೂರ್ಣೇಶ್ ಬಾಬು. ತೆಲುಗಿನ ಹಾಸ್ಯ ನಟ. ಅದರಲ್ಲೂ ಸ್ಪೂಫ್ ಎಂಬ ಹಾಸ್ಯ ಪ್ರಕಾರವನ್ನ ತೆಲುಗು ಚಿತ್ರರಂಗಕ್ಕೆ ಪರಿಚಯಿಸಿ ಯಶಸ್ಸು ಪಡೆದಿರೋ ನಟ. ಹಿಟ್ ಮೂವಿಗಳನ್ನೇ ಅನುಕರಿಸಿ, ಅದೇ ರೀತಿಯ ಹಾಸ್ಯರೂಪದಲ್ಲಿ ದೃಶ್ಯಗಳನ್ನ ಮರುಸೃಷ್ಟಿಸಿ. ನಕ್ಕು ನಗಿಸುವುದರಲ್ಲಿ ಸಂಪೂರ್ಣೇಶ್ ಬಾಬು ಎತ್ತಿದ ಕೈ. ಇಂತಹ ಸಂಪೂರ್ಣೇಶ್ ಬಾಬುಗೆ ತೆಲುಗರ ನಾಡಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಅದರಲ್ಲೂ ರಿಲೀಫ್ ಗಾಗಿ ಸಿನಿಮಾ ನೋಡುವವರು ಅವರ ನಟನೆಯ ಕೆಲ ದೃಶ್ಯಗಳನ್ನಾದರೂ ನೋಡುತ್ತಾ ಎಂಜಾಯ್ ಮಾಡುತ್ತಿರುತ್ತಾರೆ.
ಇಂತಹ ಸಂಪೂರ್ಣೇಶ್ ಬಾಬುಗೆ ಕನ್ನಡ ಹಾಗೂ ಕನ್ನಡಿಗರ ಮೇಲೆ ಅದೇನೋ ಪ್ರೀತಿ ಅಭಿಮಾನ ಕಾಳಜಿ. ಹೀಗಾಗಿ ಕಳೆದ ವರ್ಷ ಕನ್ನಡ ನಾಡು ನೆರೆ ಹಾವಳಿಗೆ ಸಿಲುಕಿ, ಪರದಾಡುವಾಗ ತನ್ನ ಕೈಲಾದಷ್ಟು ಸಹಾಯ ಮಾಡಿದ್ದರು ಸಂಪೂರ್ಣೇಶ್.
ಕರ್ನಾಟಕದಲ್ಲಿ ದೊಡ್ಡ ಮಾರ್ಕೆಟ್ ಇರೋ, ಇಲ್ಲಿಂದಲೇ ಕೋಟ್ಯಾಂತರ ರುಪಾಯಿ ದುಡಿಯೋ ಯಾವ ಪರಭಾಷೆಯ ದೊಡ್ಡ ಸ್ಟಾರ್ ಗಳೂ ಸಹ ಕರ್ನಾಟಕಕ್ಕೆ ಸಹಾಯ ಮಾಡದ ಪರಿಸ್ಥಿತಿಯಲ್ಲಿ, ಸಂಪೂರ್ಣೇಶ್ ಮಾಡಿದ್ದಂತಹ ಎರಡು ಲಕ್ಷ ರುಪಾಯಿ ಕನ್ನಡಿಗರ ಪ್ರೀತಿಗೆ ಕಾರಣವಾಗಿತ್ತು. ನಗಿಸೋ ನಟನ ಹೃದಯ ಶ್ರೀಮಂತಿಕೆಗೆ ಕನ್ನಡಿಗರು ಸೆಲ್ಯೂಟ್ ಅಂದಿದ್ದರು.
ಈಗ ಇದೇ ಸಂಪೂರ್ಣೇಶ್ ಮತ್ತೊಮ್ಮೆ ಕನ್ನಡಿಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಅದು ತಮಗಿರೋ ಕನ್ನಡದ ಅಭಿಮಾನದ ಮೂಲಕ. ಯೆಸ್. ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಬರ್ತ್ಡೇ ಗೆ ಸಂಪೂರ್ಣೇಶ್ ವಿಶ್ ಮಾಡಿದ್ದಾರೆ. ಅದು ಅಪ್ಪಟ ಕನ್ನಡದಲ್ಲಿ. ಇದನ್ನ ಕಂಡು ಕನ್ನಡಿಗರು ಖುಷಿಯಾಗಿದ್ದು, ಕನ್ನಡದ ನಟರೇ ಇಂಗ್ಲಿಷ್ ನಲ್ಲಿ ಪೋಸ್ಟ್ ಮಾಡುವಾಗ, ತೆಲುಗು ನಟನೊಬ್ಬ ಕನ್ನಡ ಬಳಸಿರೋದು ನಿಜಕ್ಕೂ ಅಭಿನಂದನ ಅರ್ಹ ಅಂತಿದ್ದಾರೆ. ಅಂದಹಾಗೆ ಸಂಪೂರ್ಣೇಶ್ ನಟನಾಗಿ ಹೆಸರು ಮಾಡೋಕೆ ಉಪೇಂದ್ರ ಅವರೇ ಸ್ಪೂರ್ತಿ ಅಂತೆ. ಅದನ್ನ ಸಹ ತಮ್ಮ ಪೋಸ್ಟ್ ಮೂಲಕ ಹೇಳಿಕೊಂಡಿದ್ದಾರೆ.
Published by:
Harshith AS
First published:
September 19, 2020, 3:35 PM IST