ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಪುತ್ರ (Ram Charan Teja Movie Updates) ರಾಮ್ ಚರಣ್ ತೇಜಾ ಅಭಿನಯದ ಸಿನಿಮಾ ಟ್ರಿಪಲ್ ಆರ್ ಆಸ್ಕರ್ ಅಂಗಳದಲ್ಲಿ ನಾಟು ನಾಟು ಅಂತಲೇ ಸದ್ದು ಮಾಡಿರೋದು ಗೊತ್ತೇ ಇದೆ. ಈ ಚಿತ್ರ ಆದ್ಮೇಲೆ ರಾಮ್ ಚರಣ್ ತೇಜಾ ಇಮೇಜ್ ಚೇಂಜ್ ಆಗಿದೆ. ಸಿನಿಮಾದ (Ram Charan New Movie Updates) ಪಯಣದಲ್ಲೂ ಬೇಡಿಕೆ ಹೆಚ್ಚಾಗುತ್ತಿದೆ. ರಾಮ್ ಚರಣ್ ತೇಜಾ ಈ ಮೂಲಕ ಬೇರೆ ಲೆವಲ್‌ನ ಸ್ಟಾರ್ ಆಗಿದ್ದಾರೆ. ಜೂನಿಯರ್ ಎನ್.ಟಿ.ಆರ್. ಇಮೇಜ್ ಕೂಡ (Ram Charan Film Updates) ಬದಲಾಗಿದೆ ಬಿಡಿ. ಆದರೆ ನಾವು ಇವತ್ತು ರಾಮ್ ಚರಣ್ ತೇಜಾ ಅವರ ಬಗ್ಗೆ ಹೇಳ್ತಾ ಇದ್ದೇವೆ ನೋಡಿ.
ರಾಮ್ ಚರಣ್ ತೇಜಾ ಒಂದು ಚಿತ್ರದಿಂದ ಇನ್ನೊಂದು ಚಿತ್ರದ ಮಧ್ಯೆ ಒಂದು ಬ್ರೇಕ್ (Tollywood Hero Movie) ತೆಗೆದುಕೊಳ್ಳುತ್ತಾರೆ. ಬ್ರೇಕ್ ಬಗ್ಗೇನೆ ಇಲ್ಲಿ ಇಂಟ್ರಸ್ಟಿಂಗ್ ವಿಷಯ ಹೇಳ್ತಿವಿ ಓದಿ.
ರಾಮ್ ಚರಣ್ ತೇಜಾ ಸ್ಪೆಷಲ್ ಆಗಿದ್ದಾರೆ. ನಟನೆ ಅಂತ ಬಂದ್ರೆ ಡೆಡಿಕೇಷನ್ ಇರುತ್ತದೆ. ಟ್ರಿಪಲ್ ಆರ್ ಸಿನಿಮಾದಲ್ಲಿ ರಾಮ್ ಚರಣ್ ತೇಜಾ ಕಿಚ್ಚು ಹಚ್ಚಿದ್ದಾರೆ. ಈ ಮೂಲಕ ಆಸ್ಕರ್ ಅಂಗಳದಲ್ಲೂ ರಾಮ್ ಚರಣ್ ತೇಜಾ ಬೇಜಾನ್ ಸೌಂಡ್ ಮಾಡಿದ್ದಾರೆ.
ನಾಟು ನಾಟು ಬಳಿಕ ರಾಮ್ ಚರಣ್ ಇಮೇಜ್ ಚೇಂಜ್!
ಟ್ರಿಪಲ್ ಆರ್ ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ ಬಂದ್ಮೇಲೆ ಟಾಲಿವುಡ್‌ನಲ್ಲಿ ಇಡೀ ಸಿನಿಮಾ ತಂಡವನ್ನ ವಿಭಿನ್ನವಾಗಿಯೇ ನೋಡಲಾಗುತ್ತಿದೆ. ಈ ಚಿತ್ರದಲ್ಲಿ ಅಭಿನಯಿಸಿರೋ ನಟರ ಇಮೇಜ್ ಕೂಡ ಚೇಂಜ್ ಆಗುತ್ತಿದೆ. ಈ ವಿಷಯದಲ್ಲಿ ರಾಮ್ ಚರಣ್ ತೇಜಾ ಕೂಡ ಹೊರತಾಗಿಲ್ಲ.
ರಾಮ್ ಚರಣ್ ತೇಜಾ ತಮ್ಮ ಚಿತ್ರ ಜೀವನದಲ್ಲಿ ಈ ಮಟ್ಟದ ಎತ್ತರಕ್ಕೆ ಹೋಗಿರಲಿಲ್ಲ. ಮಗಧೀರ ಮೂಲಕ ದಕ್ಷಿಣದಲ್ಲಿ ಹೊಸ ಅಲೆ ಎಬ್ಬಿಸಿರೋದು ಗೊತ್ತೇ ಇದೆ. ಟ್ರಿಪಲ್ ಆರ್ ಸಿನಿಮಾ ಆದ್ಮೇಲೆ ರಾಮ್ ಚರಣ್ ತೇಜಾ ಮತ್ತಷ್ಟು ಬ್ಯುಸಿ ಆಗಿದ್ದಾರೆ.
ಮಗಧೀರ ರಾಮ್ ಚರಣ್ ತೇಜಾ ಬಿಗ್ ಬ್ರೇಕ್ ಪ್ಲಾನ್ ಯಾಕೆ?
ಹೌದು, ರಾಮ್ ಚರಣ್ ತೇಜಾ ಹೊಸ ಹೊಸ ಪ್ರೋಜೆಕ್ಟ್‌ಗಳನ್ನ ಒಪ್ಪಿಕೊಳ್ಳಲು ಸಜ್ಜಾಗಿದ್ದಾರೆ. ಸದ್ಯ ಗೇಮ್ ಚೇಂಜರ್ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಆದರೆ ಈಗಾಗಲೇ ತಮ್ಮ ಬಳಿ ಬರೋ ಸಿನಿಮಾಗಳನ್ನ ಮಾಡೋ ಮುಂಚೇ ಒಂದು ಬಿಗ್ ಬ್ರೇಕ್ ತೆಗೆದುಕೊಳ್ಳುವ ಪ್ಲಾನ್ ಮಾಡಿದ್ದಾರೆ.
ರಾಮ್ ಚರಣ್ ತೇಜಾ ಸಾಮಾನ್ಯವಾಗಿ ಸಿನಿಮಾ ಮಾಡಿದ್ರೂ ಕೂಡ ಫ್ಯಾಮಿಲಿಗೆ ಟೈಮ್ ಕೊಡ್ತಾರೆ. ಒಂದು ಚಿತ್ರ ಆದ್ಮೇಲೆ ಒಂದು ಬಿಗ್ ಬ್ರೇಕ್ ತೆಗೆದುಕೊಳ್ಳುತ್ತಾರೆ. ಇದು ರಾಮ್ ಚರಣ್ ತೇಜಾ ವಿಷಯದಲ್ಲಿ ಕಾಮನ್ ಆಗಿದೆ. ಆದರೆ ಈ ಸಲ 6 ತಿಂಗಳ ಬಿಗ್ ಬ್ರೇಕ್ ತೆಗೆದುಕೊಳ್ಳುವ ಪ್ಲಾನ್‌ನ್ನ ರಾಮ್ ಚರಣ್ ತೇಜಾ ಹಾಕಿಕೊಂಡಿದ್ದಾರೆ.
ರಾಮ್ ಚರಣ್ ತೇಜಾ ಬಿಗ್ ಬ್ರೇಕ್ ತೆಗೆದುಕೊಳ್ಳಲು ಏನು ಕಾರಣ?
ರಾಮ್ ಚರಣ್ ತೇಜಾ ಇಷ್ಟೊಂದು ದೊಡ್ಡ ಬ್ರೇಕ್ ತೆಗೆದುಕೊಳ್ಳಲು ಕಾರಣವೂ ಇದೆ. ನಿಜ, ಪತ್ನಿ ಉಪಾಸನಾ ಮತ್ತು ರಾಮ್ ಚರಣ್ ತೇಜಾ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಮ್ ಚರಣ್ ತೇಜಾ ಈ ಒಂದು ನಿರ್ಧಾರ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: Prabhu Deva Dance: ಇಂಡಿಯನ್ ಮೈಕಲ್ ಜಾಕ್ಸನ್ ಜೊತೆ ರಮೇಶ್ ಮೂನ್ ವಾಕ್ ಝಲಕ್
ರಾಮ್ ಚರಣ್ ತೇಜಾ ಮೊದಲು ಗೇಮ್ ಚೇಂಜರ್ ಸಿನಿಮಾ ಮುಗಿಸುತ್ತಾರೆ. ಇದಾದ್ಮೇಲೆ ಫ್ಯಾಮಿಲಿಗೆ ಟೈಮ್ ಕೊಡ್ತಾರೆ. ಹಾಗೇನೆ ಈಗಾಗಲೇ ಒಪ್ಪಿಕೊಂಡಿರೋ RC-16 ಸಿನಿಮಾದ ಕೆಲಸದಲ್ಲಿ ಬ್ಯುಸಿ ಆಗಲಿದ್ದಾರೆ. ಇದೆಲ್ಲ ಆದ್ಮೇಲೆ ಕನ್ನಡದ ಪ್ರಶಾಂತ್ ನೀಲ್ ಮತ್ತು ಮಫ್ತಿ ಡೈರೆಕ್ಟರ್ ನರ್ತನ್ ಸಿನಿಮಾ ಮಾಡ್ತಾರೆ ಅನ್ನೋ ಸುದ್ದಿ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ