ಆಂಧ್ರಪ್ರದೇಶದಲ್ಲಿ ರಾಜಕೀಯಕ್ಕೂ, ಸಿನಿಮಾ ರಂಗಕ್ಕೂ ಮೊದಲಿನಿಂದಲೂ ನಂಟಿದೆ. ತೆಲುಗು ಚಿತ್ರರಂಗದ ದಿಗ್ಗಜ (Tollywood) ಎನ್.ಟಿ.ರಾಮರಾವ್ (NTR) ಸೇರಿದಂತೆ ಹಲವರು ರಾಜಕೀಯದಲ್ಲೂ ಗುರುತಿಸಿಕೊಂಡವರು. ಈ ಸಾಲಿಗೆ ತೆಲುಗು ಸಿನಿಮಾರಂಗದ ‘ಪವರ್ ಸ್ಟಾರ್’ (Power Star) ಪವನ್ ಕಲ್ಯಾಣ್ (Pawan Kalyan) ಸಹ ಸೇರುತ್ತಾರೆ. ನಟ, ನಿರ್ಮಾಪಕನಾಗಿ ಸಾಕಷ್ಟು ಹೆಸರು ಮಾಡಿರುವ ಪವನ್ ಕಲ್ಯಾಣ್, ರಾಜಕೀಯದಲ್ಲೂ ಗುರುತಿಸಿಕೊಂಡವರು. ಜನಸೇನಾ (Jana Sena) ಎಂಬ ರಾಜಕೀಯ ಪಕ್ಷವನ್ನು ಕಟ್ಟಿ, ಆ ಮೂಲಕ ರಾಜಕೀಯ ರಂಗಕ್ಕೂ ಧುಮುಕಿದವರು. ರಾಜಕೀಯಕ್ಕೆ ಬಂದಾಗಿನಿಂದಲೂ ಕೆಲ ಪಕ್ಷಗಳೊಂದಿಗೆ ವೈಮನಸ್ಸು ಉದ್ದೇ ಇದೆ. ಅದರಲ್ಲೂ ಮುಖ್ಯವಾಗಿ ಆಂಧ್ರಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ ಜೊತೆ ಪವನ್ ವೈಮನಸ್ಸು ಇದ್ದೇ ಇದೆ. ಇದೀಗ ಪವನ್ ಕಲ್ಯಾಣ್ ಅಭಿಮಾನಿಯೊಬ್ಬ ಸಿಎಂ ಹತ್ಯೆಯ ಬೆದರಿಕೆ ಹಾಕಿ ಜೈಲು ಸೇರಿದ್ದಾನೆ.
ಪವನ್ ಕಲ್ಯಾಣ್ ಅಭಿಮಾನಿಗೆ ಕೋಳ
ಪವನ್ ಕಲ್ಯಾಣ್ ಅಭಿಮಾನಿಯೊಬ್ಬನನ್ನು ಆಂಧ್ರ ಪ್ರದೇಶದ ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ರಾಜಾಪಲೇಮ್ ಫಣಿ ಎಂದು ಗುರುತಿಸಲಾಗಿದೆ. ರಾಜಾಮಹೇಂದ್ರವರಂನ ನಿವಾಸಿಯಾದ ಈತ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ ವಿಶೇಷವೆಂದರೆ ಬಂಧಿತ ರಾಜಾಪಲೇಮ್ ಪವನ್ ಕಲ್ಯಾಣ್ ಅವ್ರ ಬಹುದೊಡ್ಡ ಅಭಿಮಾನಿ. ಅಲ್ಲದೇ ಪವನ್’ರ ಜನಸೇವಾ ಪಕ್ಷದ ಬೆಂಬಲಿಗ.
ಇದನ್ನೂ ಓದಿ: Puneeth Rajkumar Movie: ಅಪ್ಪು ಚಿತ್ರಕ್ಕೆ ಶಿವಣ್ಣ, ರಾಘಣ್ಣ ಸಾಥ್: ಶೂಟಿಂಗ್ ಮುಗಿಸಿದ ‘ಜೇಮ್ಸ್’
ಆಂಧ್ರ ಸಿಎಂ ಹತ್ಯೆ ಮಾಡೋದಾಗಿ ಬೆದರಿಕೆ ಹಾಕಿದ್ದ ಫಣಿ
ಬಂಧಿತ ಫಣಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಜನವರಿ 16ರಂದು ಸರಣಿ ಟ್ವೀಟ್ ಗಳನ್ನು ಮಾಡಿದ್ದ ಪಣಿ, ಬಾಂಬ್ ಸ್ಫೋಟಿಸಿ ಸಿಎಂ ಜಗನ್ ಮೋಹನ್ ರೆಡ್ಡಿಯವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಆ ಪೋಸ್ಟ್ ಗಳು ವೈರಲ್ ಆಗುತ್ತಿದ್ದಂತೆ, ಅವುಗಳನ್ನು ಡಿಲೀಟ್ ಮಾಡಿದ್ದ. ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿತ್ತು.
ಜಗನ್ ಸೇವಾದಳದ ಉಪಾಧ್ಯಕ್ಷರಾದ ಮಲ್ಯಂ ಶ್ರೀಕಾಂತ್ ಎನ್ನುವವರು ಈ ಬಗ್ಗೆ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ದೂರು ದಾಖಲಿಸಿಕೊಂಡಿದ್ದ ಸಿಐಡಿ ಸೈಬರ್ ಕ್ರೈಂ ವಿಭಾಗದ ಪೊಲೀಸರು ಐಪಿ ವಿಳಾಸ ಆಧರಿಸಿ ಬೆದರಿಕೆ ಹಾಕಿದ್ದವನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿ ಫಣಿ ಪವನ್ ಕಲ್ಯಾಣ್ ಅವರ ಜನ ಸೇನಾ ಪಕ್ಷದ ಬೆಂಬಲಿಗ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ. ರಾಜಾಪಲೇಮ್ ಫಣಿ ಪವನ್ ಕಲ್ಯಾಣ ಅವರ ಜನಸೇನಾ ಪಕ್ಷದ ಬೆಂಬಲಿಗನಾಗಿದ್ದ. ಈತನ ಮೇಲೆ ಐಪಿಸಿ ಕಲಂ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ, ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಸಿಐಡಿ ಸೈಬರ್ ಕ್ರೈಂ ಎಸ್ಪಿಾ ಜಿ.ಆರ್. ರಾಧಿಕಾ ಹೇಳಿದ್ದಾರೆ
ಪವನ್ ಹಾಗೂ ಜಗನ್ ವಾರ್ ಇದೇ ಮೊದಲಲ್ಲ
ನಟ ಕಮ್ ರಾಜಕಾರಣಿ ಪವನ್ ಕಲ್ಯಾಣ್ ಹಾಗೂ ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ನಡುವಿನ ವಿವಾದ, ವಾಕ್ಸಮರಗಳು ಇದೇ ಮೊದಲೇನಲ್ಲ. ಈ ಹಿಂದೆ ಹಲವು ಬಾರಿ ಪವನ್ ಕಲ್ಯಾಣ್ ಜಗನ್ ಮೋಹನ್ ರೆಡ್ಡಿ ವಿರುದ್ಧ ತಿರುಗಿ ಬಿದ್ದಿದ್ದರು,
ಇದನ್ನೂ ಓದಿ: Shah Rukh Khan: ಮತ್ತೆ ಸೋಶಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟ ಬಾಲಿವುಡ್ ಬಾದ್‌ಷಾ
ಇತ್ತೀಚೆಗಷ್ಟೇ ಕೊರೋನಾ ಸಂಬಂಧ ಆಂಧ್ರ ಪ್ರದೇಶ ಸರ್ಕಾರ ತಂದಿದ್ದ ರೂಲ್ಸ್ ಬಗ್ಗೆ ಪವನ್ ಕಲ್ಯಾಣ್ ಕಿಡಿ ಕಾರಿದ್ದರು. ಇದೀಗ ಪವನ್ ಅಭಿಮಾನಿಯ ಬಂಧನದಿಂದ ಸ್ಟಾರ್ ವಾರ್ ಜೋರಾದಂತೆ ಆಗಿದೆ. ವಿಚಾರಣೆ ನಡೆಯುತ್ತಿದ್ದು, ಎಲ್ಲೆಡೆ ಈ ಬಗ್ಗೆ ಚರ್ಚೆ ಶುರುವಾಗಿದೆ.
ವರದಿ: ಅಣ್ಣಪ್ಪ ಆಚಾರ್ಯ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ