• Home
  • »
  • News
  • »
  • entertainment
  • »
  • Renu Desai: 19 ವರ್ಷದ ಬಳಿಕ ಬಣ್ಣ ಹಚ್ಚಿದ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ, ಹೋರಾಟಗಾರ್ತಿ ಪಾತ್ರದಲ್ಲಿ ಕಮ್ ಬ್ಯಾಕ್

Renu Desai: 19 ವರ್ಷದ ಬಳಿಕ ಬಣ್ಣ ಹಚ್ಚಿದ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ, ಹೋರಾಟಗಾರ್ತಿ ಪಾತ್ರದಲ್ಲಿ ಕಮ್ ಬ್ಯಾಕ್

ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಹೊಸ ರೂಪ

ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಹೊಸ ರೂಪ

ರೇಣು ದೇಸಾಯಿ ಕೊನೆಯದಾಗಿ ಅಭಿನಯಸಿರೋ ತೆಲುಗು ಚಿತ್ರ ಜಾನಿ, ಈ ಚಿತ್ರ 2003 ರಲ್ಲಿ ತೆರೆ ಕಂಡಿತ್ತು. ಈಗ ಹೆಚ್ಚು ಕಡಿಮೆ 19 ವರ್ಷದ ಬಳಿ ರೇಣು ದೇಸಾಯಿ ತೆಲುಗು ಸಿನಿಮಾವೊಂದಕ್ಕೆ ಬಣ್ಣ ಹಚ್ಚಿದ್ದಾರೆ.

  • Share this:

ಟಾಲಿವುಡ್​ (Tollywood) ಪವರ್ ಸ್ಟಾರ್ ಪವನ್ ಕಲ್ಯಾಣ್ (Pawan Kalyan) ಮಾಜಿ ಪತ್ನಿ ರೇಣು ದೇಸಾಯಿ (Ex Wife Renu desai) ಮತ್ತೆ ಬಣ್ಣ ಹಚ್ಚಿದ್ದಾರೆ. ಹೆಚ್ಚು ಕಡಿಮೆ 19 ವರ್ಷದ ಹಿಂದೆ ರೇಣು ದೇಸಾಯಿ ಸಿನಿಮಾದಲ್ಲಿ ಅಭಿನಯಿಸಿದ್ದರು. ಅದಾದ ಮೇಲೆ ರೇಣು ದೇಸಾಯಿ ಅಭಿನಯಿಸಿರೋ ಸುದ್ದಿನೇ ಕೇಳಿ ಬಂದಿರಲಿಲ್ಲ. ಆದರೆ ಈಗ ರೇಣು ದೇಸಾಯಿ ಅಭಿನಯದ ಟೈಗರ್ ನಾಗೇಶ್ವರ್ ರಾವ್ (Tiger Nageshwara Rao)ಸಿನಿಮಾದಲ್ಲಿ ಒಂದು ಪ್ರಮುಖ ರೋಲ್​ ಅನ್ನೇ ನಿಭಾಯಿಸಿದ್ದಾರೆ. ಈ ಚಿತ್ರದ ರೇಣು ದೇಸಾಯಿ ಪಾತ್ರದ ಟೀಸರ್ ಕೂಡ ಈಗ ರಿಲೀಸ್ ಆಗಿದೆ.

ಹೋರಾಟಗಾರ್ತಿ ಪಾತ್ರದಲ್ಲಿ ರೇಣು ದೇಸಾಯಿ ಕಮ್ ಬ್ಯಾಕ್
ರೇಣು ದೇಸಾಯಿ ತಮ್ಮ ಬಹು ಪ್ರತಿಭೆಯಿಂದಲೇ ಟಾಲಿವುಡ್ ನಲ್ಲಿ ಚಿರಪರಿಚತರಾದವ್ರು. ಹಿರಿ ತೆರೆ, ಕಿರುತೆರೆ ಅಭಿನಯದ ಜೊತೆಗೆ ಎಡಿಟಿಂಗ್ ಕೂಡ ಗೊತ್ತಿರೋ ನಟಿ. ಈ ನಟಿ ಒಂದು ಡೈರೆಕ್ಷನ್ ಕೂಡ ಮಾಡಿದ್ದಾರೆ. ಕಾಸ್ಟೂಮ್ ಡಿಸೈನ್ ಕೂಡ ಮಾಡಿರೋದು ಇದೆ. ಸಿನಿಮಾ ನಿರ್ಮಾಣ ಕೂಡ ಮಾಡಿದ್ದಾರೆ.


Actor Pawan Kalyan Ex wife Renu Desai Came Back to film After 19 Years
ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಹೊಸ ಲುಕ್


ಆದರೆ ರೇಣು ದೇಸಾಯಿ ಇಷ್ಟೆಲ್ಲ ಮಾಡಿದ್ಮೇಲೆ ಕೊನೆಯದಾಗಿ ಅಭಿನಯಸಿರೋ ತೆಲುಗು ಚಿತ್ರ ಜಾನಿ, ಈ ಚಿತ್ರ 2003 ರಲ್ಲಿ ತೆರೆ ಕಂಡಿತ್ತು. ಈಗ ಹೆಚ್ಚು ಕಡಿಮೆ 19 ವರ್ಷದ ಬಳಿ ರೇಣು ದೇಸಾಯಿ ತೆಲುಗು ಸಿನಿಮಾವೊಂದಕ್ಕೆ ಬಣ್ಣ ಹಚ್ಚಿದ್ದಾರೆ.


ರೇಣು ದೇಸಾಯಿ ಕಮ್ ಬ್ಯಾಕ್ ಮಾಡಿರೋ ಸಿನಿಮಾದ ಹೆಸರು ಟೈಗರ್ ನಾಗೇಶ್ವರ್ ರಾವ್. ಈ ಚಿತ್ರದಲ್ಲಿ ರೇಣು ದೇಸಾಯಿ ಪಾತ್ರ ವಿಶೇಷವಾಗಿಯೇ ಇದೆ. ಲೇಖಕಿ ಹೇಮಲತಾ ಪಾತ್ರದಲ್ಲಿ ರೇಣು ದೇಸಾಯಿ ಅಭಿನಯ ಮಾಡಿದ್ದಾರೆ.


ಇದನ್ನೂ ಓದಿ: Meghana Raj: ಮತ್ತೆ ಬಣ್ಣ ಹಚ್ಚಿದ ಮೇಘನಾ ರಾಜ್; ಇದ್ರಲ್ಲಿ ಪ್ರಜ್ವಲ್ ಪೊಲೀಸ್ ಆಫೀಸರ್!


ಈ ಹಿಂದಿನ ಸಿನಿಮಾದಲ್ಲಿ ರೇಣು ದೇಸಾಯಿ ಈ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಟಾಲಿವುಡ್ ನ ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ರೇಣು ದೇಸಾಯಿ ರಿಯಲ್ ಪಾತ್ರವನ್ನೇ ನಿರ್ವಹಿಸುತ್ತಿದ್ದಾರೆ.


Actor Pawan Kalyan Ex wife Renu Desai Came Back to film After 19 Years
ಟೈಗರ್ ಚಿತ್ರದಲ್ಲಿ ಮಾಸ್ ಮಹಾರಾಜ ರವಿತೇಜ


ಹೌದು, ಲೇಖಕಿ, ಸಾಮಾಜಿಕ ಕಾರ್ಯಕರ್ತೆ, ಅಸ್ಪೃಶತೆ ವಿರುದ್ಧ ಹೋರಾಡಿದ ಹೇಮಲತಾ ಲವಣಂ ಪಾತ್ರವನ್ನೇ ರೇಣು ದೇಸಾಯಿ ಈ ಚಿತ್ರದಲ್ಲಿ ನಿಭಾಯಿಸುತ್ತಿದ್ದಾರೆ.
ರೇಣು ದೇಸಾಯಿ ನಿರ್ವಹಿಸಿರೋ ಹೇಮಲತಾ ಪಾತ್ರದ ಟೀಸರ್ ಈಗ ಹೊರ ಬಿದ್ದಿದೆ. ರೇಣು ದೇಸಾಯಿ ಅವರ ಪಾತ್ರದ ಖದರ್ ಈ ಒಂದು ಟೀಸರ್ ನಲ್ಲಿ ರಿವೀಲ್ ಆಗಿದೆ.


ಕುಖ್ಯಾತ ಕಳ್ಳನ ಪಾತ್ರದಲ್ಲಿ ಮಾಸ್ ಮಹಾರಾಜ ರವಿತೇಜ ಅಭಿನಯ
ರೇಣು ದೇಸಾಯಿ ಅಭಿನಯದ ಈ ಚಿತ್ರದಲ್ಲಿ, ಮಾಸ್ ಮಹಾರಾಜ ರವಿತೇಜ ಕುಖ್ಯಾತ ಕಳ್ಳನ ಪಾತ್ರದಲ್ಲಿ ಡಿಫರಂಟ್ ಆಗಿಯೇ ಕಾಣಿಸುತ್ತಿದ್ದಾರೆ. ರವಿತೇಜ ಜೋಡಿಯಾಗಿ ನಟಿ ನೂಪುರ್ ಸನೋನ್, ಗಾಯಿತ್ರಿ ಭಾರದ್ವಾಜ್ ಅಭಿನಯಿಸಿದ್ದಾರೆ.


ಮಾಸ್ ಮಹಾರಾಜ ರವಿತೇಜ ರೆಟ್ರೋ ಲುಕ್ ನ ಖದರ್
ವಂಶಿ ನಿರ್ದೇಶನದ ಈ ಚಿತ್ರದಲ್ಲಿ ಮಾಸ್ ಮಹಾರಾಜ ರವಿತೇಜ ರೆಟ್ರೋ ಲುಕ್​ ನಲ್ಲಿಯೇ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಜಿ.ವಿ.ಪ್ರಕಾಶ್ ಕುಮಾರ್ ಸಂಗೀತ ಕೊಡುತ್ತಿದ್ದಾರೆ. ಶ್ರೀಕಾಂತ್ ವಿಸ್ಸಾ ಮಾಸ್ ಡೈಲಾಗ್ ಬರೆದುಕೊಟ್ಟಿದ್ದಾರೆ.


ಟೈಗರ್ ನಾಗೇಶ್ವರ್ ರಾವ್ ಪ್ಯಾನ್ ಇಂಡಿಯಾ ರಿಲೀಸ್
ವಿಶೇಷವೆಂದ್ರೆ ಈ ಚಿತ್ರವೂ ಕೂಡ ಮಾಸ್ ಲೆವಲ್​ ಗೆ ರೀಚ್ ಆಗಲಿದೆ.ಯಾಕೆಂದ್ರೆ, ಈ ಚಿತ್ರವನ್ನ ನಿರ್ಮಾಪಕರು ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ರಿಲೀಸ್ ಮಾಡೋಕೆ ಪ್ಲಾನ್ ಮಾಡಿದ್ದಾರೆ. ಆ ಹಿನ್ನೆಲೆಯಲ್ಲಿ ಟಾಲಿವುಡ್​ ನ ಈ ಹುಲಿ ಎಲ್ಲೆಡೆ ಗರ್ಜಿಸಲಿದೆ.


ಇದನ್ನೂ ಓದಿ: Yash: ಗನ್​ ಹಿಡಿದು ಫೀಲ್ಡ್​ಗೆ ಇಳಿದ ಯಶ್​, KGF 3 ಕುರಿತು ಸುಳಿವು ನೀಡಿದ ರಾಕಿಭಾಯ್ ಟ್ವೀಟ್


ಇನ್ನು ಈ ಚಿತ್ರದ ಬಗ್ಗೆ ಒಂದು ನಿರೀಕ್ಷೆ ಹುಟ್ಟುಕೊಂಡಿದೆ. ಈ ಮೂಲಕ ಮೊಟ್ಟ ಮೊದಲ ಬಾರಿಗೆ ಮಾಸ್ ಮಹಾರಾಜ ರವಿತೇಜ ಪ್ಯಾನ್ ಇಂಡಿಯಾ ಲೆವಲ್​ಗೂ ಹವಾ ಕ್ರಿಯೇಟ್ ಮಾಡಲಿದ್ದಾರೆ.

First published: