Pavitra Lokesh: ಏನೇ ಆಗ್ಲೀ, ನರೇಶ್​ಗೆ ಡೈವೋರ್ಸ್ ಕೊಡಲ್ಲ ಅಂದ ರಮ್ಯಾ ರಘುಪತಿ

Ramya Raghupati: ಈ ನಡುವೆ ನರೇಶ್​ ಮೂರನೇ ಪತ್ನಿ ರಮ್ಯಾ (Ramya) ಕೂಡ ಮಾಧ್ಯಮಗಳ ಮುಂದೆ ಬಂದಿದ್ದು, ಈ ಕುರಿತು ಹೇಳಿಕೆ ನೀಡಿದ್ದಾರೆ.  ನ್ಯೂಸ್ 18 ಕನ್ನಡ ಜೊತೆ ಮಾತನಾಡಿರುವ ರಮ್ಯಾ ರಘುಪತಿ, ಪವಿತ್ರಾ ಲೋಕೇಶ್ ವಿರುದ್ದ ಗುಡುಗಿದ್ದಾರೆ.

ರಮ್ಯಾ ರಘುಪತಿ

ರಮ್ಯಾ ರಘುಪತಿ

  • Share this:
ಸ್ಯಾಂಡಲ್​ವುಡ್​ (Sandalwood) ಹಾಗೂ ಟಾಲಿವುಡ್ (Tollywood) ನಟಿ ಪವಿತ್ರಾ ಲೋಕೇಶ್​ (Pavitra Lokesh) ಫುಲ್ ಸುದ್ದಿಯಲ್ಲಿದ್ಧಾರೆ. ಟಾಲಿವುಡ್​ ನಟ ನರೇಶ್​ (Naresh)  ಅವರ ಜೊತೆಗಿನ ಅವರ ಸಂಬಂಧದ ಬಗ್ಗೆ ಹಲವಾರು ವಿಚಾರಗಳು ಕೇಳಿ ಬರುತ್ತಿದೆ. ಈ ನಡುವೆ ನರೇಶ್​ ಮೂರನೇ ಪತ್ನಿ ರಮ್ಯಾ (Ramya) ಕೂಡ ಮಾಧ್ಯಮಗಳ ಮುಂದೆ ಬಂದಿದ್ದು, ಈ ಕುರಿತು ಹೇಳಿಕೆ ನೀಡಿದ್ದಾರೆ.  ನ್ಯೂಸ್ 18 ಕನ್ನಡ ಜೊತೆ ಮಾತನಾಡಿರುವ ರಮ್ಯಾ ರಘುಪತಿ, ಪವಿತ್ರಾ ಲೋಕೇಶ್ ವಿರುದ್ದ ಗುಡುಗಿದ್ದಾರೆ.

ಉಂಡ ತಟ್ಟೆಗೆ ರಂಧ್ರ ಮಾಡಿದ ಪವಿತ್ರಾ ಲೋಕೇಶ್​? 

ಪವಿತ್ರಾ ಲೋಕೇಶ್ ಒಂದು ಸಲ ನಮ್ಮ ಮನೆಗೆ ಬಂದಿದ್ಲು. ನಾನೇ  ನನ್ನ ಕೈಯಾರೆ ಬೆಳ್ಳಿ ತಟ್ಟೆಯಲ್ಲಿ  ಅನ್ನ ತುಪ್ಪದ ಊಟದ ಹಾಕಿದ್ದೆ. ನನ್ನ ಮನೆ ಬೆಳ್ಳಿ ತಟ್ಟೆಯನ್ನು ಪವಿತ್ರಾ ಲೋಕೇಶ್ ರಂಧ್ರ ಮಾಡ್ತಾಳೆ  ಅಂತ ನಾನು ಅನ್ಕೊಂಡಿರಲಿಲ್ಲ ಎಂದು ರಮ್ಯಾ ಪವಿತ್ರಾ ಲೋಕೇಶ್​ ವಿರುದ್ಧ ಕಿಡಿಕಾರಿದ್ದಾರೆ.

ಹಾಗೆಯೇ, ಇಷ್ಟು ದಿನ ನನಗೆ ಇದರ ಬಗ್ಗೆ ಗೊತ್ತಿರಲಿಲ್ಲ ಈಗ ನನಗೆ ನನ್ನ ಗಂಡ ಡೈವೋರ್ಸ್ ಲೆಟರ್ ಕಳುಹಿಸಿದ್ದಾರೆ. ನಾನು ಯಾವುದೇ ಕಾರಣಕ್ಕೂ ಡೈವೋರ್ಸ್ ಕೊಡೊದಿಲ್ಲ ನನ್ನ ಅತ್ತೆ ಹೇಳಿ ಹೋಗಿದ್ದಾರೆ ನಮ್ಮ ಮನೆಯೊಳಗೆ ಯಾವುದೇ ದುಷ್ಟ ಶಕ್ತಿ ಬರಬಾರದು ಅಂತ ಎಂದಿದ್ದಾರೆ.  ನನ್ನ ಗಂಡನ ಹೆಸರು ಪವಿತ್ರಾ ಲೋಕೇಶ್ ಅಷ್ಟೇ ಅಲ್ಲ ಇನ್ನು 6-7 ಜನರ ಜೊತೆ ಕೇಳಿ ಬಂದಿದೆ ಎಂದಿರುವ ಅವರು ಈ ಮೊದಲು ಸಹ ನರೇಶ್​ ಬಗ್ಗೆ ಸ್ಫೋಟಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದರು.


ಇನ್ನು ನನಗೆ ಡೈವೋರ್ಸ್ ಕೊಡದೇ ಅವರು ಮತ್ತೊಂದು ಮದುವೆಯಾಗಲು ಹೇಗೆ ಸಾಧ್ಯ. ನಾನು ನ್ನನ ಕುಟುಂಬದ ಬಗ್ಗೆ ಮಾತನಾಡಬಾರದು ಎನ್ನುವ ಉದ್ದೇಶಕ್ಕೆ ಸುಮ್ಮನಿದ್ದೆ. ಆದರೆ ಅವರೇ ನನ್ನ ಮೇಲೆ 500 ಕೋಟಿ ಹಗರಣದ ಆರೋಪ ಹೊರಿಸಿದ್ದಾರೆ. ಇದು ಸರಿಯಲ್ಲ. ನಾನು ಡೈವೋರ್ಸ್ ನೋಟೀಸ್​ ಬಂದಿರುವ ಕಾರಣ ಮಾಧ್ಯಮಗಳ ಮುಂದೆ ಬಂದಿದ್ದೇನೆ. ಇಷ್ಟು ದಿನ ಮನೆಯ ವಿಚಾರ ಬೀದಿಗೆ ಬರಬಾರದು ಎಂದು ಸುಮ್ಮನಿದ್ದೆ ಎಂದಿದ್ದಾರೆ.

2010ರಲ್ಲಿ ನಾವು ಮದುವೆಯಾಗಿದ್ದೇವೆ. 2012ರಲ್ಲಿ ನಮಗೆ ಮಗ ಹುಟ್ಟಿದ. ಒಂದು ಸಾಮಾನ್ಯ ಸಂಸಾರದಂತೆ ನಮ್ಮಲ್ಲೂ ಸಣ್ಣ-ಪುಟ್ಟ ಸಮಸ್ಯೆಗಳು ಬಂದಿವೆ. ಹಾಗೆಯೆ ಹಲವಾರು ವಿಚಾರವಾಗಿ ನಾನು ಸುಮ್ಮನಿದ್ದೆ, ಆದರೆ ಈಗ ಅವರೇ ನನಗೆ ಕೆಟ್ಟ ಹೆಸರು ತರಲು ಹೊರಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಕೇವಲ ಡೈವೋರ್ಸ್ ಪತ್ರಕಳಿಸಿದ್ದಾರೆ. ಸರಿಯಾದ ಲಾಜಿಕಲ್ ಕಾರಣ ಕೊಟ್ಟಿಲ್ಲ. ಅವರು ನನ್ನ ಹತ್ರ ಡೈವೋರ್ಸ್ ಕೇಳೋದಲ್ಲ, ನಾನು ಕೇಳಬೇಕಿತ್ತು. ಬಹಳಷ್ಟು ಜನ ಹುಡುಗಿರ ಬಳಿ ಇದ್ದು ಬರ್ತೀರ, ನನಗೆ ಮಾನಸಿಕ ಕಿರುಕುಳು ಆಗುತ್ತಿತ್ತು, ಆದರೆ ನಾನು ಸುಮ್ಮನಿದ್ದೆ ಎಂದು ನರೇಶ್​ ವಿರುದ್ಧ ಕಿಡಿಕಾರಿದ್ದಾರೆ.

ಒಮ್ಮೆ ಅವರ ತಾಯಿಯೇ ನನಗೆ ನೀನು ನರೇಶ್​ ಹೋದ ಕಡೆ ಹೋಗಬೇಕು ಎಂದಿದ್ದರು. ಆಗಲೂ ನನಗೆ ಅನುಮಾನ ಬಂದಿರಲಿಲ್ಲ. ನಾನು ಅವರ ಮಾತನ್ನ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಬರು ಬರುತ್ತಾ ಕೆಲ ವಿಚಾರಗಳನ್ನು ತಿಳಿದುಕೊಂಡೆ. ಹೀಗೆ ನನಗೆ ಅವರಿಗೆ ಬೇರೆ ಹುಡುಗಿರ ಜೊತೆ ಸಂಬಂಧವಿರುವುದು ತಿಳಿಯಿತು, ಅವರಿಗೆ ಒಂದು ಸಮಯಕ್ಕೆ ಹಲವಾರು ಜನರ ಜೊತೆ ಸಂಬಂಧ ಇತ್ತು ಎಂದಿದ್ದಾರೆ.

ಇನ್ನು ನರೇಶ್​ ಅವರು ಪವಿತ್ರಾ ಲೋಕೇಶ್​ ಅವರ ಬಗ್ಗೆ ನೀಡಿದ್ದ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನನಗೆ ಸತ್ಯವಾಗಲೂ ಗೊತ್ತಿಲ್ಲ. ಆದರೆ ನಾನು ಒಮ್ಮೆ ಹೇಳಿದ್ದೆ, ನಾನು ಈ ಮನೆಯಲ್ಲಿ ಇರುವಾಗ ಯಾವುದೇ ಕಾರಣಕ್ಕೂ ಪವಿತ್ರಾ ಅವರನ್ನು ಒಳಗೆ ಬಿಡುವುದಿಲ್ಲ. ನನ್ನ ಹೆಣ ಹೊರ ಹೋಗಬೇಕು ನಂತರ ಬೇರೆಯವರು ಬರಬೇಕು ಎಂದಿದ್ದೆ. ಹಾಗಾಗಿ ಈ ಕಾರಣದಿಂದ ನರೇಶ್​, ಅವರನ್ನು ರಾಖಿ ಕಟ್ಟಿ ಮನೆಯಲ್ಲಿ ಇಟ್ಟುಕೊಳ್ತೀನಿ ಎಂದಿರಬೇಕು ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಕಾಫಿ ವಿತ್ ಕರಣ್ ಶೋಗೆ ಹೋಗಲ್ವಾ ಸಮಂತಾ? ಬನ್ನಿ ಅಂದ್ರು ರೆಸ್ಪಾನ್ಸ್ ಮಾಡಿಲ್ವಂತೆ ಸುಂದರಿ!

ಯಾರಿದು ನರೇಶ್​? 

ಟಾಲಿವುಡ್​ ಸೂಪರ್​ ಸ್ಟಾರ್​ ಕೃಷ್ಣ ಅವರ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಮಹೇಶ್​ ಬಾಬು ಅವರ ತಂದೆ ಕೃಷ್ಣ ಒಂದಾನೊಂದು ಕಾಲದಲ್ಲಿ ತೆಲುಗು ಚಿತ್ರರಂಗವನ್ನು ಆಳಿದವರು. ಕೃಷ್ಣ ಅವರ ಎರಡನೇ ಹೆಂಡತಿ ಮಗ ಈ ನರೇಶ್​. ಕೃಷ್ಣ ಅವರ ಮೊದಲನೇ ಹೆಂಡತಿ ಹೆಸರು ಇಂದಿರಾ ದೇವಿ. ಕೃಷ್ಣ ಅವರ ಎರಡನೇ ಹೆಂಡತಿ ಹೆಸರು ವಿಜಯ ನಿರ್ಮಲ. ವಿಜಯ ನಿರ್ಮಲ ಅವರ ಮಗನೇ ನರೇಶ್​. ನೀವೂ ಕೂಡ ಸಾಕಷ್ಟು ಸಿನಿಮಾಗಳಲ್ಲಿ ನರೇಶ್​ ಅವರನ್ನು ನೋಡಿದ್ದೀರಾ. ತೆಲುಗು ಚಿತ್ರರಂಗದಲ್ಲೂ ಸಾಕಷ್ಟು ಹೆಸರು ಮಾಡಿದ್ದಾರೆ ನರೇಶ್​​. ನರೇಶ್​ ತಾಯಿ ಅಂದರೆ ವಿಜಯ ನಿರ್ಮಲಾ  ಕೆ.ಎಸ್​ ಮೂರ್ತಿ ಅವರ ಜೊತೆ ಡಿವೋರ್ಸ್ ಪಡೆದು ಕೃಷ್ಣ ಅವರನ್ನು ಮದುವೆಯಾಗಿದ್ದರು.
Published by:Sandhya M
First published: