ಎರಡು ತಿಂಗಳ ಲಾಕ್ಡೌನ್ ನಂತರ ಈಗ ಟಾಲಿವುಡ್ನಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿದೆ. ಈಗಾಗಲೇ ಸಿಕ್ಕಿರುವ ಷರತ್ತುಬದ್ಧ ಅನುಮತಿಗೆ ತಕ್ಕಂತೆ ನಿಯಮಗಳನ್ನು ಪಾಲಿಸುತ್ತಲೇ ಸಿನಿಮಾಗಳ ಚಿತ್ರೀಕರಣ ಆರಂಭಗೊಂಡಿದೆ.
ಟಾಲಿವುಡ್ನ ನ್ಯಾಚುರಲ್ ಸ್ಟಾರ್ ನಾನಿ ಇಂದು ಸಿನಿಮಾ ಚಿತ್ರೀಕರಣಕ್ಕೆ ಹಾಜರಾಗಿದ್ದರು. ಸೆಟ್ನಲ್ಲಿ ತೆಗೆದ ತಮ್ಮ ಫೋಟೋವನ್ನು ಬಹಳ ಖುಷಿಯಿಂದ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
'ವಿ' ನಾನಿ ಅಭಿನಯಿಸುತ್ತಿರುವ ಸಿನಿಮಾ. ಮೋಹನ್ ಕೃಷ್ಣ ಇಂದ್ರಗಂಟಿ ನಿರ್ದೇಶನದ ಈ ಚಿತ್ರ ಆ್ಯಕ್ಷನ್ ಥ್ರಿಲ್ಲರ್ ಆಗಿದೆ. ಆದಿತಿ ರಾವ್ ಹೈದರಿ, ಜಗಪತಿ ಬಾಬು ನಿವೇತಾ ಥಾಮಸ್, ಸುಧೀರ್ ಬಾಬು, ವೆನ್ನೆಲ ಕಿಶೋರ್ ಸೇರಿದಂತೆ ಹಲವಾರು ಕಲಾವಿದರು ತಾರಾಗಣದಲ್ಲಿದ್ದಾರೆ.
ಇದನ್ನೂ ಓದಿ: Weight Loss Tip: ತೂಕ ಇಳಿಸಿಕೊಳ್ಳಲು ಹೀಗೆ ಮಾಡಿ ಎಂದ ಬಾಲಿವುಡ್ ನಟಿ ಭೂಮಿ ಪೆಡ್ನೆಕರ್..!
'ವಿ' ನಾನಿ ಅಭಿನಯದ 25ನೇ ಸಿನಿಮಾ. ಇದರಲ್ಲಿ ನಾನಿ ಮೊದಲ ಬಾರಿಗೆ ವಿಲನ್ ಆಗಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಮೊದಲು ಮಾರ್ಚ್ಗೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಆದರೆ ಕೊರೋನಾದಿಂದಾಗಿ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ.
Jacqueline Fernandez: ಜಾಕ್ವೆಲಿನ್ ಹೊಸ ಫೋಟೋಶೂಟ್ ಕುರಿತಾಗಿ ಆರಂಭವಾಯ್ತು ಹೊಸ ಚರ್ಚೆ..!
ಇದನ್ನೂ ಓದಿ: ಮೇಕಪ್ ಇಲ್ಲದ ಲುಕ್ಸ್ನಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ