• Home
 • »
 • News
 • »
 • entertainment
 • »
 • Jr NTR Wishes: ಕನ್ನಡಿಗರಿಗೆ 'ಕನ್ನಡ ರಾಜ್ಯೋತ್ಸವ'ದ ಶುಭಾಶಯ ತಿಳಿಸಿದ ಜೂನಿಯರ್ ಎನ್‍ಟಿಆರ್

Jr NTR Wishes: ಕನ್ನಡಿಗರಿಗೆ 'ಕನ್ನಡ ರಾಜ್ಯೋತ್ಸವ'ದ ಶುಭಾಶಯ ತಿಳಿಸಿದ ಜೂನಿಯರ್ ಎನ್‍ಟಿಆರ್

'ಕನ್ನಡ ರಾಜ್ಯೋತ್ಸವ'ದ ಶುಭಾಶಯ ತಿಳಿಸಿದ ಜೂನಿಯರ್ ಎನ್‍ಟಿಆರ್

'ಕನ್ನಡ ರಾಜ್ಯೋತ್ಸವ'ದ ಶುಭಾಶಯ ತಿಳಿಸಿದ ಜೂನಿಯರ್ ಎನ್‍ಟಿಆರ್

'ನಾನು ಕರುನಾಡಿನ ನನ್ನ ಸಹೋದರ ಮತ್ತು ಸಹೋದರಿಯರಿಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯ ತಿಳಿಸುತ್ತೇನೆ' ಎಂದು ಜೂನಿಯರ್ ಎನ್‍ಟಿಆರ್ ಪತ್ರ ಬರೆದಿದ್ದಾರೆ.

 • News18 Kannada
 • Last Updated :
 • Karnataka, India
 • Share this:

  ನವೆಂಬರ್ 1 (November 1) ಬಂತು ಅಂದ್ರೆ ಕನ್ನಡಿಗರಿಗೆ ಸಂಭ್ರಮ. ನಾಡಿನೆಲ್ಲೆಡೆ ರಾಜ್ಯೋತ್ಸವ ಆಚರಣೆ ಸಂಭ್ರಮದಿಂದ ನಡೆಯುತ್ತೆ. ಕಳೆದ ಬಾರಿ ಪುನೀತ್ ರಾಜ್‍ಕುಮಾರ್  (Puneeth Rajkumar) ನಿಧನರಾದ ಕಾರಣ, ಅದ್ಧೂರಿಯಾಗಿ ಆಚರಣೆ ನಡದಿರಲಿಲ್ಲ. ಆದ್ರೆ ಈ ಬಾರಿ ಕನ್ನಡ ರಾಜ್ಯೋತ್ಸವದ ದಿನವೇ ಅಪ್ಪುಗೆ ಕರ್ನಾಟಕ ರತ್ನ (Karnataka Ratna) ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುತ್ತೆ. ಅದಕ್ಕೆ ಕರುನಾಡ ಜನ ಖುಷಿಯಲ್ಲಿದ್ದಾರೆ. ಅಪ್ಪು ಕಾರ್ಯಕ್ರಮಕ್ಕೆ ಜೂನಿಯರ್ ಎನ್‍ಟಿಆರ್ (Jr NTR) ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಸಿಎಂ ಆಹ್ವಾನಕ್ಕೆ ಬರುತ್ತೇವೆ ಎಂದು ಇಬ್ಬರು ನಟರು ಪತ್ರದ ಮೂಲಕ ತಿಳಿಸಿದ್ದಾರೆ. ಅದೇ ಪತ್ರದಲ್ಲಿ ಕರುನಾಡ ಜನತೆಗೆ ಜೂನಿಯರ್ ಎನ್‍ಟಿಆರ್ ಕನ್ನಡ ರಾಜ್ಯೋತ್ಸವದ (Kannada Rajyotsava)  ಶುಭಾಶಯ (Wish) ತಿಳಿಸಿದ್ದಾರೆ.


  ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
  ಕನ್ನಡ ರಾಜ್ಯೋತ್ಸವದ ದಿನ ಪುನೀತ್ ರಾಜ್‍ಕುಮಾರ್ ಅವರಿಗೆ ಮರಣೋತ್ತರವಾಗಿ 'ಕರ್ನಾಟಕ ರತ್ನ' ಪ್ರಶಸ್ತಿ ನೀಡಿ ಗೌರವಿಸಲು ಸರ್ಕಾರ ತೀರ್ಮಾನಿಸಿದೆ. ವಿಧಾನಸೌಧದಲ್ಲಿ ಸಕಲ ತಯಾರಿಗಳು ನಡೆದಿವೆ. ಕಾರ್ಯಕ್ರಮಕ್ಕೆ ಸರ್ಕಾರ ಹಲವು ಗಣ್ಯ ವ್ಯಕ್ತಿಗಳಿಗೆ ಆಹ್ವಾನ ನೀಡಿದೆ. ಜೂನಿಯರ್ ಎನ್‍ಟಿಆರ್ ಅವರು ಕಾರ್ಯಕ್ರಮಕ್ಕೆ ಬರಲು ಒಪ್ಪಿದ್ದಾರೆ. ರಜನಿಕಾಂತ್ ಸಹ ಕಾರ್ಯಕ್ರಮಕ್ಕೆ ಬರುವುದಾಗಿ ಸಿಎಂ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.


  ಜೂನಿಯರ್ ಎನ್‍ಟಿಆರ್ ಪತ್ರದಲ್ಲಿ ಏನಿದೆ?
  'ಪುನೀತ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಗೌರವ ಸಲ್ಲುತ್ತಿರುವಾಗ ನಾನು ಅಲ್ಲಿ ಇರುವುದು ನನ್ನ ಪಾಲಿಗೆ ಹೆಮ್ಮೆಯ ಕ್ಷಣ. ಅಲ್ಲದೇ ಅದು ನನ್ನ ಕರ್ತವ್ಯ ಕೂಡ ಹೌದು. ಕರ್ನಾಟಕ ಸರ್ಕಾರ ಏರ್ಪಡಿಸಿರುವ ಈ ಕಾರ್ಯಕ್ರಮದಲ್ಲಿ ನನ್ನ ಉಪಸ್ಥಿತಿ ಇರುತ್ತದೆ ಎಂಬುದನ್ನು ಈ ಮೂಲಕ ಖಚಿತ ಪಡಿಸುತ್ತೇನೆ' ಎಂದು ಪತ್ರ ಬರೆದಿದ್ದಾರೆ.


  ಇದನ್ನೂ ಓದಿ: BBK Season 9: ದೀಪವೊಂದು ಆರಿ ಹೋಗಿ ವರುಷವಾಗಿದೆ! ಅಪ್ಪುಗಾಗಿ ಹಾಡು ಬರೆದ ರೂಪೇಶ್ ಶೆಟ್ಟಿ 


  ಕನ್ನಡ ರಾಜ್ಯೋತ್ಸವದ ಶುಭಾಶಯ
  ಸಿಎಂ ಬೊಮ್ಮಾಯಿ ಅವರಿಗೆ ಜೂನಿಯರ್ ಎನ್‍ಟಿಆರ್ ಬರೆದಿರುವ ಪತ್ರದಲ್ಲಿ, ಜೂನಿಯರ್ ಎನ್‍ಟಿಆರ್ ಅಪ್ಪು ಕಾರ್ಯಕ್ರಮಕ್ಕೆ ಬರುವುದಾಗಿ ತಿಳಿಸಿದ್ದಾರೆ. ಅಲ್ಲದೇ, 'ನಾನು ಕರುನಾಡಿನ ನನ್ನ ಸಹೋದರ ಮತ್ತು ಸಹೋದರಿಯರಿಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯ ತಿಳಿಸುತ್ತೇನೆ' ಎಂದು ಜೂನಿಯರ್ ಎನ್‍ಟಿಆರ್ ಪತ್ರ ಬರೆದಿದ್ದಾರೆ.


  tollywood actor jr ntr, jr ntr wishes to kannada rajyotsava, jr ntr comes to puneeth award program, jr ntr films, 'ಕನ್ನಡ ರಾಜ್ಯೋತ್ಸವ'ದ ಶುಭಾಶಯ ತಿಳಿಸಿದ ಜೂನಿಯರ್ ಎನ್‍ಟಿಆರ್, ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ, kannada news, karnataka news,
  'ಕನ್ನಡ ರಾಜ್ಯೋತ್ಸವ'ದ ಶುಭಾಶಯ ತಿಳಿಸಿದ ಜೂನಿಯರ್ ಎನ್‍ಟಿಆರ್


  ರಜನಿಕಾಂತ್ ಸಿಎಂ ಅವರಿಗೆ ಬರೆದ ಪತ್ರದಲ್ಲಿ ಏನಿದೆ?
  'ನವೆಂಬರ್ 1 ರಂದು ನಡೆಯುವ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ನಿಮಗೆ ಮತ್ತು ನಿಮ್ಮ ಸರ್ಕಾರಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.


  tollywood actor jr ntr, jr ntr wishes to kannada rajyotsava, jr ntr comes to puneeth award program, jr ntr films, 'ಕನ್ನಡ ರಾಜ್ಯೋತ್ಸವ'ದ ಶುಭಾಶಯ ತಿಳಿಸಿದ ಜೂನಿಯರ್ ಎನ್‍ಟಿಆರ್, ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ, kannada news, karnataka news,
  ಸೂಪರ್ ಸ್ಟಾರ್ ರಜನಿಕಾಂತ್- ಜೂನಿಯರ್ ಎನ್‍ಟಿಆರ್


  ಬೆಂಗಳೂರಿನ ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ, ನಮ್ಮೆಲ್ಲರಿಗೂ ಪ್ರತಿದಿನ ಸ್ಫೂರ್ತಿ ನೀಡುತ್ತಿರುವ ನಮ್ಮ ಅಪ್ಪು ಅವರ ಈ ಸ್ಮರಣೀಯ ಕಾರ್ಯಕ್ರಮದಲ್ಲಿ ನನ್ನ ಭಾಗವಹಿಸುವಿಕೆಯನ್ನು ಮನದಾಳದಿಂದ, ಗೌರವದಿಂದ ಖಚಿತಪಡಿಸಲು ನಾನು ಇಷ್ಟಪಡುತ್ತೇನೆ.' ನವೆಂಬರ್ 1ರ ಮಧ್ಯಾಹ್ನ 2 ಗಂಟೆಗೆ ನಾನು ಚೆನ್ನೈನಿಂದ ನಿರ್ಗಮಿಸುತ್ತಿದ್ದೇನೆ. ನಾನು ಸುಮಾರು 3 ಗಂಟೆಗೆ ಬೆಂಗಳೂರಿಗೆ ಆಗಮಿಸುತ್ತೇನೆ. ಎಂದು ರಜನಿಕಾಂತ್ ಪತ್ರ ಬರೆದಿದ್ದಾರೆ.


  ಇದನ್ನೂ ಓದಿ: SA RI GA MA PA: ಪುನೀತ್ ಮಾಮ ಅಂದ್ರೆ ಇಷ್ಟ! ಅವರು ಬಡವರಿಗೆಲ್ಲಾ ಸಹಾಯ ಮಾಡಿದ್ರು 


  ಪುನೀತ್ ರಾಜ್‍ಕುಮಾರ್ ಪರವಾಗಿ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಕರ್ನಾಟಕ ರತ್ನ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಕಾರ್ಯಕ್ರಮಕ್ಕೆ ರಾಜ್‍ಕುಮಾರ್ ಕುಟುಂಬದ ಸದಸ್ಯರು ಬರಲಿದ್ದಾರೆ.


  ಪುನೀತ್ ರಾಜ್‍ಕುಮಾರ್ ಸ್ಯಾಂಡಲ್‍ವುಡ್ ಮಾತ್ರವಲ್ಲ, ಬೇರೆ ಬೇರೆ ಭಾಷೆಯ ನಟರೊಂದಿಗೂ ಉತ್ತಮ ಬಾಂದವ್ಯ ಹೊಂದಿದ್ದರು. ಎಲ್ಲರಿಗೂ ಅಪ್ಪು ಅಂದ್ರೆ ತುಂಬಾ ಇಷ್ಟ. ಪುನೀತ್ ರಾಜ್‍ಕುಮಾರ್ ನಮ್ಮನ್ನು ಅಗಲಿ 1 ವರ್ಷವಾಗಿದೆ. ನವೆಂಬರ್ 1ರಂದು ಅಪ್ಪುಗೆ ಮರಣೋತ್ತರವಾಗಿ ಅವರಿಗೆ 'ಕರ್ನಾಟಕ ರತ್ನ' ಪ್ರಶಸ್ತಿ ನೀಡಲಾಗುವುದು.

  Published by:Savitha Savitha
  First published: