ಕಳೆದ ವರ್ಷ ಬಿಡುಗಡೆಯಾದ ಪುಷ್ಪ (Pushpa) ಚಿತ್ರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡದಾಗಿ ಸದ್ದು ಮಾಡಿತ್ತು. ಅಲ್ಲದೇ ಈ ಚಿತ್ರದ ಮೂಲಕ ನಟ ಅಲ್ಲು ಅರ್ಜುನ್ (Allu Arjun) ನ್ಯಾಷನಲ್ ಮಟ್ಟದಲ್ಲಿ ಸ್ಟಾರ್ ಆಗಿ ಮಿಂಚಿದರು. ಅಲ್ಲದೇ ಬಾಲಿವುಡ್ ನಲ್ಲಿ ಪುಷ್ಪ ಚಿತ್ರದ ಕ್ರೇಜ್ ಸಖತ್ ಆಗಿಯೇ ವರ್ಕೌಟ್ ಆಯಿತು. ಇದೀಗ ಚಿತ್ರದ 2ನೇ ಭಾಗವು ಸಿದ್ದಗೊಳ್ಳುತ್ತಿದೆ. ಅಲ್ಲದೇ ಪುಷ್ಪ ಚಿತ್ರದ 2ನೇ ಭಾಗದ ಮೇಲೆ ನಿರೀಕ್ಷೆ ಹೆಚ್ಚಿದೆ. ಇದರ ನಡುವೆ ಇನ್ನೂ ಪುಷ್ಪ ಚಿತ್ರದ 2ನೇ ಭಾಗವೇ ಬಿಡುಗಡೆ ಆಗಿಲ್ಲ. ಆದರೆ ಇದಕ್ಕೂ ಮೊದಲೇ ಪುಷ್ಪ ಚಿತ್ರದ 3ನೇ ಭಾಗದ ಕುರಿತು ಸುದ್ದಿಯೊಂದು ಟಾಲಿವುಡ್ನಲ್ಲಿ ಹರಿದಾಡುತ್ತಿದೆ. ಇನ್ನು, ಈ ಸಿನಿಮಾದಲ್ಲಿ ಮಲಯಾಳಂ ನಟ ಫಹಾದ್ ಫಾಸಿಲ್ (Fahadh Faasil) ಮತ್ತು ಅಲ್ಲು ಅವರ ಕಾಳಗಕ್ಕಾಗಿ ಅಭಿಮಾನಿಗಳು ಕಾತುರರಾಗಿದ್ದಾರೆ. ಆದರೆ ಇವುಗಳ ನಡುವೆ ‘ಪುಷ್ಪ 3’ (Pushpa 3) ಬಗ್ಗೆ ಹೊಸ ಸುದ್ದಿ ಹೊರಬಿದ್ದಿದೆ. ಫಹಾದ್ ಫಾಸಿಲ್ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಬರಲಿದೆಯೇ ಪುಷ್ಪ-3?:
ಹೌದು, ಇಂತಹದೊಂದು ಸುದ್ದಿ ಇದೀಗ ಟಾಲಿವುಡ್ ವಲಯದಲ್ಲಿ ಹರಿದಾಡುತ್ತಿದೆ. ಪುಷ್ಪ - 3 ಬಗ್ಗೆ ನಟ ಫಹಾದ್ ಫಾಸಿಲ್ ಮಾತನಾಡಿದ್ದು, ‘ಮೊದಲಿಗೆ ನಿರ್ದೇಶಕ ಸುಕುಮಾರ್ ಅವರು ನನಗೆ ಕಥೆ ಹೇಳಿದಾಗ ಈ ಸಿನಿಮಾ ಕೇವಲ ಒಂದು ಭಾಗದಲ್ಲಿ ತೆರೆಕಾಣಬೇಕಾದ ಸಿನಿಮಾ ಆಗಬೇಕಿತ್ತು. ಆದರೆ ನಂತರ ಎರಡನೇ ಪಾರ್ಟ್ಗೆ ಪ್ಲ್ಯಾನ್ ಮಾಡಲಾಯಿತು. ಸುಕುಮಾರ್ ಅವರು ಇತ್ತೀಚೆಗೆ ನನ್ನ ಬಳಿ ಮಾತನಾಡಿದಾಗ ಮೂರನೇ ಭಾಗಕ್ಕೆ ತಯಾರಾಗುವಂತೆ ಹೇಳಿದ್ದಾರೆ‘ ಎಂದು ಹೇಳುವ ಮೂಲಕ ಪುಷ್ಪ 3 ಬರುವ ಕುರಿತು ಮಾಹಿತಿ ನೀಡಿದರು. ಆದರೆ ಈ ಕುರಿತು ನಿರ್ದೇಶಕ ಸುಕುಮಾರ್ ಅಥವಾ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಆಗಲಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಪುಷ್ಪ 2 ಚಿತ್ರದಲ್ಲಿಯೂ ಮುಂದುವರೆಯಲಿದೆ ಡಾಲಿ ಅಬ್ಬರ:
ಪುಷ್ಪ ಸಿನಿಮಾದಲ್ಲಿ ನಮ್ಮ ಕನ್ನಡದ ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲಿ ಅವರ ಪಾತ್ರಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟಿರಲಿಲ್ಲ. ಆದರೆ ಈ ಬಾರಿ ಪುಷ್ಪ 2 ಸಿನಿಮಾದಲ್ಲಿ ಅವರ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡಲಾಗಿದೆ. ಜೊತೆಗೆ ಈ ಬಾರಿ ತಮಿಳು ಸ್ಟಾರ್ ಒಬ್ಬರು ಸಹ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೌದು, ಪುಷ್ಪ 2 ಚಿತ್ರದಲ್ಲಿ ತಮಿಳು ನಟ ವಿಜಯ್ ಸೇತುಪತಿ ಸಹ ಇರಲಿದ್ದಾರೆ ಎಂಬ ಹೊಸ ಸುದ್ದಿ ಈಗ ಹೊರಬಂದಿದೆ.
ಹೌದು, ಸುಕುಮಾರ್ ತಮ್ಮ ತಂಡದೊಂದಿಗೆ ಪುಷ್ಪ 2 ರ ಕಥೆಗೆ ಫೈನಲ್ ಟಚ್ ನೀಡುತ್ತಿದ್ದು, ಇದು ಕೆಲವೇ ತಿಂಗಳುಗಳಲ್ಲಿ ಶೂಟಿಂಗ್ ಆರಂಭಿಸುವ ನಿರೀಕ್ಷೆ ಇದೆ. 2ನೇ ಭಾಗದಲ್ಲಿ ಅಲ್ಲು ಅರ್ಜುನ್ ಮತ್ತು ಫಹದ್ ಫಾಸಿಲ್ ನಡುವೆ ದೊಡ್ಡ ಫೈಟ್ ಆಗಲಿದೆ.
ಹೇಗಿರಲಿದೆ ಪುಷ್ಪ 2 ಚಿತ್ರ:
ಇನ್ನು, ಪುಷ್ಪ ಮೊದಲ ಭಾಗವು ಸೂಪರ್ ಹಿಟ್ ಆದ ಹಿನ್ನಲೆ 2ನೇ ಭಾಗಕ್ಕೆ ಭರ್ಜರಿ ತಯಾರಿಗಳು ನಡೆದಿವೆ,. ಹೀಗಾಗಿ 2ನೇ ಭಾಗವು ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿದೆ ಎಂದು ನಿರ್ದೇಶಕರು ಈಗಾಗಲೇ ಹೇಳಿದ್ದಾರೆ. ಪುಷ್ಪ 2 ಸಿನಿಮಾದಲ್ಲಿ ಈ ಬಾರಿ ಅಲ್ಲು ಅರ್ಜುನ್ಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆಯಂತೆ. ಪುಷ್ಪರಾಜ್ ಹೇಗೆ ಬೆಳೆಯುತ್ತಾ ಹೋಗುತ್ತಾನೆ ಹಾಗೂ ಹೇಗೆ ಯಶಸ್ಸು ಪಡೆಯುತ್ತಾ ಎಂಬುದನ್ನ ತೋರಿಸಲಾಗುತ್ತದೆ.
ಇದನ್ನೂ ಓದಿ: Allu Arjun: ಪುಷ್ಪ ಚಿತ್ರದ ಐಕಾನಿಕ್ ವಾಕಿಂಗ್ ಸ್ಟೈಲ್ನ ರಹಸ್ಯ ಬಿಚ್ಚಟ್ಟ ಅಲ್ಲು ಅರ್ಜುನ್
ಅಲ್ಲದೇ, ಇಡೀ ಪುಷ್ಪ 2 ಚಿತ್ರದಲ್ಲಿ ಪುಷ್ಪರಾಜ್ ಆರ್ಭಟ ಹೆಚ್ಚಿರಲಿದೆ, ಹಾಗಾಗಿ ರಶ್ಮಿಕಾ ಮಂದಣ್ಣ ಪಾತ್ರದಲ್ಲಿ ಬದಲಾವಣೆಯಾಗುತ್ತದೆ. ಹೆಚ್ಚಾಗಿ ಅವರನ್ನು ತೋರಿಸುವುದಿಲ್ಲವಂತೆ. ಅವಶ್ಯಕ ಇರುವ ಜಾಗಗಳಲ್ಲಿ ಮಾತ್ರ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ. ಅವರ ಪಾತ್ರದ ಡ್ಯೂರೇಷನ್ ಕಡಿಮೆ ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ