ಕನ್ನಡದ ಕಾಂತಾರ ಸಿನಿಮಾ (Kantara Movie) ಪ್ಯಾನ್ ಇಂಡಿಯಾ ಚಿತ್ರವಾಗಿ ಭಾರೀ ಸದ್ದು ಮಾಡಿತು. ಸಿನಿಮಾ ಬಗ್ಗೆ ಅನೇಕ ಸ್ಟಾರ್ ನಟರು ಮಾತಾಡಿದ್ದು, ಚಿತ್ರ ಕಥೆ ಹಾಗೂ ರಿಷಬ್ ನಟನೆಯನ್ನು ಹಾಡಿ ಹೊಗಳಿದ್ದಾರೆ. ರಜನಿಕಾಂತ್, ಅನುಷ್ಕಾ ಶೆಟ್ಟಿ, ಕಂಗನಾ ಸೇರಿದಂತೆ ಅನೇಕ ನಟ-ನಟಿಯರು ಕಾಂತಾರ (Kantara) ಬಗ್ಗೆ ಮಾತಾಡಿದ್ದಾರೆ.ಇದೀಗ ಟಾಲಿವುಡ್ ನಟ ಅಲ್ಲು ಅರ್ಜುನ್ (Allu Arjun) ಕೂಡ ಕಾಂತಾರಸಿನಿಮಾದ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಕಾಂತಾರ ಬಗ್ಗೆ ಅಲ್ಲು ಅರ್ಜುನ್ ಮಾತು
ತೆಲುಗು ಚಿತ್ರವೊಂದರ ಕಾರ್ಯಕ್ರಮದ ವೇಳೆ ಮಾತಾಡಿದ ಅಲ್ಲು ಅರ್ಜುನ್, ಇತ್ತೀಚಿಗೆಗಷ್ಟೇ ಸೂಪರ್ ಹಿಟ್ ಆದ ಸಿನಿಮಾ ಕಾಂತಾರ, ಈ ಚಿತ್ರತಂಡಕ್ಕೆ ಅಭಿನಂದನೆಗಳು ಎಂದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಿಷಬ್ ಶೆಟ್ಟಿ (Rishab Shetty) ನಟನೆ ಹಾಗೂ ನಿರ್ದೇಶನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ದಕ್ಷಿಣ ಭಾರತದ ಚಿತ್ರಗಳು ಗೆಲ್ಲಬೇಕು
ಇತ್ತೀಚಿನ ದಿನಗಳಲ್ಲಿ ಸೌತ್ ಸಿನಿಮಾಗಳು ಸಖತ್ ಸೌಂಡು ಮಾಡುತ್ತಿವೆ. ಕೆಜಿಎಫ್: ಚಾಪ್ಟರ್ 2, ಪುಷ್ಪ, ಕಾಂತಾರ ಮುಂತಾದ ಚಿತ್ರಗಳು ಬಾಲಿವುಡ್ ಸಿನಿಮಾಗಳನ್ನು ಹಿಂದಿಕ್ಕಿದೆ, ಇಡೀ ಸೌತ್ ಸಿನಿಮಾ ಇಂಡಸ್ಟ್ರಿ ಬಗ್ಗೆ ಎಲ್ಲರಲ್ಲೂ ಭರವಸೆ ಮೂಡಿದೆ ಇದು ಖುಷಿಯ ವಿಚಾರ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ.
Ego Less Actor @AlluArjun ❤🩹 pic.twitter.com/wgHCBzsDZw
— RAAjesh Bunny™⛏️🥁💥 (@RajeshBunny654) December 19, 2022
ದಕ್ಷಿಣ ಭಾಗಗಳ ಸಿನಿಮಾಗಳು ಒಂದಾಗುತ್ತಿದೆ. ಗಡಿ ಮೀರಿ ಚಿತ್ರಗಳು ಯಶಸ್ಸು ಸಾಧಿಸುತ್ತಿವೆ. ಒಬ್ಬರು ಇನ್ನೊಬ್ಬರ ಗೆಲುವನ್ನು ಕೊಂಡಾಡುವ ಕಾಲ ಬಂದಿದೆ. ಅನೇಕ ಸ್ಟಾರ್ ನಟರು ಕನ್ನಡ ಸಿನಿಮಾ ಕಾಂತಾರ ಬಗ್ಗೆ ಮಾತಾಡಿದ್ದಾರೆ. ಇದೀಗ ಅಲ್ಲು ಅರ್ಜುನ್ ಸಹ ಕಾಂತಾರ ಟೀಮ್ಗೆ ಅಭಿನಂದನೆ ಸಲ್ಲಿಸಿದ್ದಾರೆ.
ಕರುನಾಡ ಸಿನಿಮಾಗಳದ್ದೇ ಹವಾ!
ಈ ವರ್ಷ ಕನ್ನಡದ ಹಲವು ಸಿನಿಮಾಗಳು ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿವೆ. ಅದರಲ್ಲೂ ಯಶ್ ನಟನೆಯ ‘ಕೆಜಿಎಫ್: ಚಾಪ್ಟರ್ 2 ಹಾಗೂ ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾಗಳು ಮೋಡಿ ಮಾಡಿದ್ರು, ಇಡೀ ವಿಶ್ವವೇ ಕರ್ನಾಟಕದ ಕಡೆಗೆ ತಿರುಗಿ ನೋಡುವಂತೆ ಮಾಡಿದೆ.
ಬಾಲಿವುಡ್ನಲ್ಲೂ ಕಾಂತಾರ ಸದ್ದು
ಹಿಂದಿಯಲ್ಲಿ ಬಿಡುಗಡೆಯಾಗಿದ್ದ ಕಾಂತಾರ ಸಿನಿಮಾ ಹಲವು ಬಾಲಿವುಡ್ ಸಿನಿಮಾಗಳಿಗೆ ಸೆಡ್ಡು ಹೊಡೆದು ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿತ್ತು. ಹಲವು ಸಿನಿಮಾ ವಿಮರ್ಶಕರು ಸಿನಿಮಾ ಬಗ್ಗೆ ನಿರಂತರವಾಗಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅಲ್ಲದೇ ಸಿನಿಮಾ ಮೇಕರ್ಸ್ಗೆ ಕಾಂತಾರ ಸಿನಿಮಾ ನೋಡಿ ಕಲಿತುಕೊಳ್ಳುವುದು ಸಾಕಷ್ಟಿದೆ ಎಂದು ಸಲಹೆಗಳನ್ನು ನೀಡುತ್ತಿದ್ದಾರೆ.
ಇದನ್ನೂ ಓದಿ: Rishab Shetty: ಕಾಂತಾರದಲ್ಲಿ ಓ ಎಂದು ಕಿರುಚುವ ಸೌಂಡ್ ನಿಜವೇ? ರಿಷಬ್ ಏನಂದ್ರು?
ಹೃತಿಕ್ ರೋಷನ್ ಹೇಳಿದ್ದೇನು?
ಕಾಂತಾರ ನೋಡಿ ತುಂಬಾ ಕಲಿತೆ. ರಿಷಬ್ ಶೆಟ್ಟಿ ಅವರ ಕನ್ವಿಕ್ಷನ್ ಚಲನಚಿತ್ರವು ಅಸಾಮಾನ್ಯವಾಗಿಸುತ್ತದೆ. ಉನ್ನತ ದರ್ಜೆಯ ಕಥೆ ಹೇಳುವಿಕೆ, ನಿರ್ದೇಶನ ಮತ್ತು ನಟನೆ. ಪೀಕ್ ಕ್ಲೈಮ್ಯಾಕ್ಸ್ ರೂಪಾಂತರವು ನನಗೆ ಗೂಸ್ಬಂಪ್ಸ್ ತಂತು. ತಂಡಕ್ಕೆ ನನ್ನ ವಂದನೆ ಮತ್ತು ಗೌರವ ಎಂದು ಹೇಳಿದ್ದಾರೆ. ರಿಷಬ್ ಶೆಟ್ಟಿ ಹೃತಿಕ್ ರೋಷನ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಸೌತ್ನಲ್ಲಿ ಡಿಫರೆಂಟ್ ಸಿನಿಮಾಗಳನ್ನು ಕೊಡುವ, ಡಿಫರೆಂಟಾಗಿ ಕಥೆ ಹೇಳುವ ನಟ ಕಮಲ್ ಹಾಸನ್ ಅವರು ಕಾಂತಾರ ಸಿನಿಮಾ ನೋಡಿ ಕಾಲ್ ಮಾಡಿ ರಿಷಬ್ ಶೆಟ್ಟಿಗೆ ಅಭಿನಂದನೆ ತಿಳಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ