Agent Movie: ಟಾಲಿವುಡ್‌ ಏಜೆಂಟ್ ಸಿನಿಮಾದಲ್ಲಿ ಗುಂಡಿನ ಸುರಿಮಳೆ, ಹೇಗಿದೆ ಟ್ರೈಲರ್?

ಅಖಿಲ್ ಅಕ್ಕಿನೇನಿ ಏಜೆಂಟ್ ಟ್ರೈಲರ್ ಸೂಪರ್

ಅಖಿಲ್ ಅಕ್ಕಿನೇನಿ ಏಜೆಂಟ್ ಟ್ರೈಲರ್ ಸೂಪರ್

ಏಜೆಂಟ್ ಸಿನಿಮಾದಲ್ಲಿ ಹಾಲಿವುಡ್‌ ಮಟ್ಟದ ಆ್ಯಕ್ಷನ್‌ಗಳಿವೆ. ಇವುಗಳ ಝಲಕ್ ಈಗ ಚಿತ್ರದ ಮೊದಲ ಟ್ರೈಲರ್‌ನಲ್ಲಿ ನಿಮಗೆ ಸಿಗುತ್ತವೆ. ಇವುಗಳನ್ನ ನೋಡ್ತಾ ಹೋದ್ರೆ, ಇಂಗ್ಲೀಷ್ ಸಿನಿಮಾ ನೋಡಿದ ಫೀಲ್ ಕೂಡ ನಿಮಗೆ ಇಲ್ಲಿ ಸಿಗುತ್ತದೆ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಟಾಲಿವುಡ್‌ನ ಅಕ್ಕಿನೇನಿ ಫ್ಯಾಮಿಲಿಯ ಅಖಿಲ್ (Agent Movie Updates) ಅಭಿನಯದ ಏಜೆಂಟ್ ಸಿನಿಮಾದ ಟ್ರೈಲರ್ ಭಾರೀ ಭರವಸೆ ಮೂಡಿಸಿದೆ. ಏಜೆಂಟ್ ರೋಲ್‌ ಅಲ್ಲಿ ಅಖಿಲ್ ಕಿಚ್ಚು ಹಚ್ಚಿದ್ದಾರೆ. ಹಾಲಿವುಡ್‌ ಸಿನಿಮಾ (Tollywood Movie Trailer) ಮಾದರಿಯಲ್ಲಿ ಈ ಸಿನಿಮಾ ರೆಡಿ ಆಗಿದೆ. ಅಖಿಲ್ ಅಂತು ಇಡೀ ಸಿನಿಮಾದಲ್ಲಿ ಭಯಂಕರ ಆ್ಯಕ್ಷನ್ ಮಾಡಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಟ್ರೈಲರ್‌ನಲ್ಲಿ ಅನೇಕ ಸೀನ್‌ಗಳನ್ನ (Akhil Akkineni New Movie) ನೀವು ನೋಡಬಹುದು. ಏಜೆಂಟ್ ಸಿನಿಮಾದಲ್ಲಿ ಮಾಲಿವುಡ್‌ನ ಸೂಪರ್ ಸ್ಟಾರ್ ಮುಮ್ಮುಟ್ಟಿ ಕೂಡ ಅಭಿನಯಿಸಿದ್ದಾರೆ. ಇವರ ಪಾತ್ರ ಕೂಡ ಜಬರ್‌ದಸ್ತ್ ಆಗಿಯೇ ಇದೆ. ಬಾಲಿವುಡ್‌ನ ನಟ ಡಿನೋ ಮೋರಿಯಾ ಪಾತ್ರವಂತೂ ಖಡಕ್ (Agent Movie First Trailer) ಆಗಿಯೇ ಇದೆ. ಇದೆಲ್ಲದರ ಸುತ್ತ ಒಂದು ಸ್ಟೋರಿ ಇಲ್ಲಿದೆ.


ತೆಲುಗು ಸಿನಿಮಾರಂಗದಲ್ಲಿ ಭಾರೀ ಸಿನಿಮಾಗಳು ಬರ್ತಿವೆ. ಮೊನ್ನೆ ಮೊನ್ನೆ ದಸರಾ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದೆ. ಈ ಚಿತ್ರದ ಬಳಿಕ ಇಲ್ಲಿ ಹಲವು ಸಿನಿಮಾಗಳು ದೊಡ್ಡಮಟ್ಟದಲ್ಲಿ ರೆಡಿ ಆಗುತ್ತಿವೆ.


Tollywood Actor Akhil Akkineni Acted Agent Movie First Trailer Release
ಭಾರೀ ಭರವಸೆ ಮೂಡಿಸಿದ ಟಾಲಿವುಡ್ ಏಜೆಂಟ್ ಸಿನಿಮಾ


ಭಾರೀ ಭರವಸೆ ಮೂಡಿಸಿದ ಟಾಲಿವುಡ್ ಏಜೆಂಟ್ ಸಿನಿಮಾ


ಇದರ ಮಧ್ಯೆ ಅಖಿಲ್ ಅಕ್ಕಿನೇನಿ ಅಭಿನಯದ ಏಜೆಂಟ್ ಸಿನಿಮಾ ಭಾರೀ ಭರವಸೆ ಮೂಡಿಸಿದೆ. ಏಜೆಂಟ್ ಹೆಸರಿಗೆ ತಕ್ಕನಾಗಿಯೇ ಅಖಿಲ್ ಅಕ್ಕಿನೇನಿ ಈ ಚಿತ್ರಕ್ಕೆ ರೆಡಿಯಾಗಿದ್ದಾರೆ. ಇವರ ಪಾತ್ರಕ್ಕೆ ಇಲ್ಲಿ ಭಾರೀ ಸ್ಕೋಪ್ ಕೂಡ ಇದೆ. ಹಾಗಾಗಿಯೇ ಅಖಿಲ್ ಇಲ್ಲಿ ಏಜೆಂಟ್ ಆಗಿಯೇ ಅಬ್ಬರಿಸಿದ್ದಾರೆ.




ಏಜೆಂಟ್ ಸಿನಿಮಾದಲ್ಲಿ ಹಾಲಿವುಡ್‌ ಮಟ್ಟದ ಆ್ಯಕ್ಷನ್‌ಗಳಿವೆ. ಇವುಗಳ ಝಲಕ್ ಈಗ ಚಿತ್ರದ ಮೊದಲ ಟ್ರೈಲರ್‌ನಲ್ಲಿ ನಿಮಗೆ ಸಿಗುತ್ತವೆ. ಇವುಗಳನ್ನ ನೋಡ್ತಾ ಹೋದ್ರೆ, ನಿಮಗೂ ಥ್ರಿಲ್ ಆಗುತ್ತದೆ. ಇಂಗ್ಲೀಷ್ ಸಿನಿಮಾ ನೋಡಿದ ಫೀಲ್ ಕೂಡ ನಿಮಗೆ ಇಲ್ಲಿ ಸಿಗುತ್ತದೆ.


ಟಾಲಿವುಡ್‌ ಸಿನಿಮಾದಲ್ಲಿ ಮಾಲಿವುಡ್ ಸೂಪರ್ ಸ್ಟಾರ್


ಏಜೆಂಟ್ ಚಿತ್ರದಲ್ಲಿ ಮಾಲಿವುಡ್‌ ಸೂಪರ್ ಸ್ಟಾರ್ ಮಮ್ಮುಟ್ಟಿ ಕೂಡ ಇದ್ದಾರೆ. ಇವರೂ ಇಲ್ಲಿ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಇವರೂ ಕೂಡ ಇಲ್ಲಿ ಸಖತ್ ಆ್ಯಕ್ಷನ್ ಮಾಡಿದ್ದಾರೆ ಅಂತ ಹೇಳಬಹುದು.




ಏಜೆಂಟ್ ಸಿನಿಮಾದ ಹಿಂದೆ ದೊಡ್ಡ ತಂಡವೇ ಇದೆ. ಈ ತಂಡದ ಪರಿಶ್ರಮ ಇಲ್ಲಿ ಎದ್ದು ಕಾಣುತ್ತದೆ. ರಸೂಲ್ ಎಲ್ಲೋರ್ ಕ್ಯಾಮೆರಾವರ್ಕ್ ಇಲ್ಲಿ ಗಮನ ಸೆಳೆಯುತ್ತದೆ. ನಿರ್ದೇಶಕ ಸುರೇಂದರ್ ರೆಡ್ಡಿ ಕಲ್ಪನೆಯ ಈ ಚಿತ್ರ ದೊಡ್ಡಮಟ್ಟದಲ್ಲಿ ಈಗಲೇ ಭರವಸೆ ಮೂಡಿಸಿದೆ.


ಅಖಿಲ್ ಅಕ್ಕಿನೇನಿ ಏಜೆಂಟ್ ಟ್ರೈಲರ್ ಸೂಪರ್


ಅಖಿಲ್ ಅಕ್ಕಿನೇನಿ ಈ ಒಂದು ಚಿತ್ರಕ್ಕಾಗಿಯೇ ಸಖತ್ ತಯಾರಿ ಮಾಡಿಕೊಂಡಿದ್ದಾರೆ. ಸಾಕ್ಷಿ ವೈದ್ಯ ಈ ಚಿತ್ರದಲ್ಲಿ ಅಖಿಲ್‌ಗೆ ಜೋಡಿ ಆಗಿದ್ದಾರೆ. ಹಿಪ್ ಹಾಪ್ ತಮೀಜಾ ಸಂಗೀತ ಈ ಚಿತ್ರಕ್ಕಿದೆ. ಒಂದ್ ಒಳ್ಳೆ ಆ್ಯಕ್ಷನ್ ಫೀಲ್ ಕೊಡ್ತಿರೋ ಏಜೆಂಟ್ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಆಗಿದೆ.


Tollywood Actor Akhil Akkineni Acted Agent Movie First Trailer Release
ಟಾಲಿವುಡ್‌ ಸಿನಿಮಾದಲ್ಲಿ ಮಾಲಿವುಡ್ ಸೂಪರ್ ಸ್ಟಾರ್


ಬಾಲಿವುಡ್‌ನ ಡಿನೋ ಮೋರಿಯಾ ಪಾತ್ರವೂ ಸಖತ್ ಆಗಿಯೇ ಬಂದಿದೆ. ದಿ ಗಾಡ್ ಹೆಸರಿನ ಪಾತ್ರದಲ್ಲಿ ಮಿಂಚುತ್ತಿರೋ ಡಿನೋ ಮೋರಿಯಾ ಇಲ್ಲಿ ಖಡಕ್ ಡೈಲಾಗ್ ಕೂಡ ಹೊಡೆಯುತ್ತಾರೆ. ಅದರ ಝಲಕ್ ಟ್ರೈಲರ್‌ನಲ್ಲಿ ಸಿಗುತ್ತದೆ. ಲುಕ್ ಅಂತೂ ಈಗಾಗಲೇ ರಿಲೀಸ್ ಆಗಿ ಎಲ್ಲರ ಗಮನ ಸೆಳೆದಿದೆ.


ಇದನ್ನೂ ಓದಿ: Ranveer Singh: ರಣವೀರ್‌ ಸಿಂಗ್‌ ಸ್ಟೈಲ್‌ ಬಗ್ಗೆ ಜೋಕ್‌ ಮಾಡಿದ ದೀಪಿಕಾ; ವಿಡಿಯೋ ವೈರಲ್​


ಏಪ್ರಿಲ್-28 ರಂದು ಏಜೆಂಟ್ ಎಲ್ಲೆಡೆ ರಿಲೀಸ್ ಆಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ರಿಲೀಸ್ ಆಗುತ್ತಿದೆ. ಎಲ್ಲ ಭಾಷೆಯ ಸಿನಿಪ್ರೇಮಿಗಳಿಗೂ ಈ ಚಿತ್ರ ಭರ್ಜರಿ ಆ್ಯಕ್ಷನ್ ಸೀನ್‌ಗಳ ಅನುಭವ ಕೊಡಲಿದೆ

top videos
    First published: