ಟಾಲಿವುಡ್‌ನ ಏಜೆಂಟ್ ಸಿನಿಮಾ ಏನೋ (Tollywood Agent Movie Updates) ಮಾಡುತ್ತದೆ ಅನ್ನೋ ನಿರೀಕ್ಷೆ ಇತ್ತು. ಆದರೆ ಸಿನಿಮಾ ಸೋತು ಹೋಗಿದೆ. ಇದರಿಂದ ಇಡೀ ಟೀಮ್ ಡಿಸ್ಟರ್ಬ್ ಆಗಿದೆ. ಆದರೂ ಅಮ್ಮನ ಪ್ರೀತಿ ನೋಡಿ ಹೇಗಿದೆ? ಮಗನ ಚಿತ್ರ ತುಂಬಾ ಚೆನ್ನಾಗಿದೆ. ಒಂದಷ್ಟು ಕೊರತೆಗಳು ಇದ್ದೇ ಇವೆ. ಆಸಕ್ತಿಯಿಂದ (Akhil Akkineni Movie Latest News) ನೋಡಿದ್ರೆ ಚಿತ್ರ ಸೂಪರ್ ಆಗಿಯೇ ಕಾಣುತ್ತದೆ. ಹಾಗಂತ ಅಖಿಲ್ ಅಕ್ಕಿನೇನಿ ಅಮ್ಮ ಅಮಲಾ ಹೇಳಿಕೊಂಡಿದ್ದರು. ಸಿನಿಮಾ ನಿರ್ಮಾಪಕರು ಈ ಎಲ್ಲ ನಂಬಿಕೆ ಮೇಲೆ ತಾವೇ (Akhil Akkineni New Cinema Updates) ತೆರೆ ಎಳೆದಿದ್ದಾರೆ. ನಾವು ಸೋತು ಹೋಗಿದ್ದೇವೆ ಅಂತಲೂ ಧೈರ್ಯದಿಂದಲೇ ಹೇಳಿಕೊಂಡಿದ್ದಾರೆ.
ಸೋಲಿನ ಅಸಲಿ ಕಾರಣವನ್ನ ಕೂಡ ಸೋಷಿಯಲ್ ಮೀಡಿಯಾ (Agent Movie Updates) ಮೂಲಕ ವಿವರಿಸಿದ್ದಾರೆ. ಅಸಲಿಗೆ ಏಜೆಂಟ್ ಚಿತ್ರದ ನಿರ್ಮಾಪಕ ಹೇಳಿದ್ದೇನು? ಈ ಎಲ್ಲ ಮಾಹಿತಿ ಇಲ್ಲಿದೆ ಓದಿ.
ಸೋಲು ಒಪ್ಪಿಕೊಳ್ಳಲು ಧೈರ್ಯ ಬೇಕು ಕಣ್ರೀ!
ಸೋಲು ಅನ್ನೋದು ಯಾರಿಗೂ ಇಷ್ಟ ಆಗೋದಿಲ್ಲ. ಆ ಪದ ಕೇಳಿದ್ರೇನೆ ಬೇಸರ ಆಗುತ್ತದೆ. ಹಾಗಂತ ಸೋಲನ್ನ ಒಪ್ಪಿಕೊಳ್ಳದೆ ಇರಲು ಸಾಧ್ಯವೇ ಇಲ್ಲ. ಅದನ್ನ ಹೇಳೋದರಲ್ಲಿ ವ್ಯತ್ಯಾಸಗಳು ಇರುತ್ತವೆ. ನೇರವಾಗಿಯೇ ನಾವು ಸೋತಿದ್ದೇವೆ ಅಂತ ಹೇಳೋರೋ ತೀರಾ ಕಡಿಮೆನೆ ಅಂತ ಹೇಳಬಹುದು.
ಕನ್ನಡದಲ್ಲಿ ಇಂತಹ ಒಂದು ಧೈರ್ಯವನ್ನ ಕಾಲಾಯ ತಸ್ಮೈ ನಮಃ ಚಿತ್ರದ ನಿರ್ಮಾಪಕ ಮಾರುತಿ ಜೆ.ಡಿ. ಅವರು ಮಾಡಿದ್ದರು. ಗಾಂಧಿನಗರದಲ್ಲಿದ್ದ ಗ್ರೀನ್ ಹೌಸ್‌ನಲ್ಲಿ ಒಂದು ಪ್ರೆಸ್ ಮೀಟ್ ಕೂಡ ಮಾಡಿದ್ದರು. ನಾವು ಸೋತು ಹೋಗಿದ್ದೇವೆ ಅಂತಲೂ ಮಾಧ್ಯಮದ ಮುಂದೆ ಹೇಳಿಕೊಂಡಿದ್ದರು.
ಸೋಲು ಒಪ್ಪಿಕೊಂಡಿದ್ದ ಕನ್ನಡದ ಆ ನಿರ್ಮಾಪಕರು!
ಸೋತು ಹೋಗಿರೋದಕ್ಕೆ ಕಾರಣವನ್ನ ಕೂಡ ಕೊಟ್ಟಿದ್ದರು. ಇದರಿಂದ ಬೇರೆ ಏನೂ ಲಾಭ ಆಗಲಿಲ್ಲ. ಆದರೆ ಅಂದು ಇದೊಂದು ಸುದ್ದಿ ಆಗಿತ್ತು. ಚಿತ್ರದ ನಿರ್ದೇಶಕ ಚಂದ್ರಶೇಖರ್ ಶ್ರೀವಾಸ್ತವ್ ತಮ್ಮ ಚಿತ್ರದ ಸೋಲಿನ ಬಗ್ಗೆ ಓಪನ್ ಆಗಿಯೇ ಹೇಳಿಕೊಂಡಿದ್ದರು.
ಈ ಒಂದು ಘಟನೆ 2012 ರಲ್ಲಿ ನಡೆದಿತ್ತು. ಆ ಟೈಮ್ ಅಲ್ಲಿಯೇ ಈ ಚಿತ್ರ ರಿಲೀಸ್ ಆಗಿತ್ತು. 11 ವರ್ಷದ ಬಳಿಕ ಬಹು ಕೋಟಿ ವೆಚ್ಚದ ಏಜೆಂಟ್ ಸಿನಿಮಾ ನಿರ್ಮಾಪಕ ಈಗ ಇಂತಹ ಒಂದು ಧೈರ್ಯ ತೋರಿಸಿದ್ದಾರೆ. ತಮ್ಮ ಸಿನಿಮಾ ಸೋತು ಹೋಗಿದೆ ಅಂತ ಓಪನ್ ಆಗಿಯೇ ಹೇಳಿಕೊಂಡಿದ್ದಾರೆ.
ಏಜೆಂಟ್ ಚಿತ್ರದ ಸೋಲಿನ ಕಾರಣ ಹೇಳಿದ ನಿರ್ಮಾಪಕ
ಹೌದು, ಏಜೆಂಟ್ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಅನಿಲ್ ಸುಂಕರ ಸೋಲಿನ ಸತ್ಯ ಬಿಚ್ಚಿಟ್ಟಿದ್ದಾರೆ. ಏಜೆಂಟ್ ಸಿನಿಮಾಕ್ಕಾಗಿಯೇ ನಾಯಕ ನಟ ಅಖಿಲ್ ಅಕ್ಕಿನೇನಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದರು. ಅವರ ಸಿಕ್ಸ್‌ಪ್ಯಾಕ್ ಲುಕ್ ಸಾಕಷ್ಟು ಹುಚ್ಚು ಹಿಡಿಸಿತ್ತು.
ಅಖಿಲ್ ಅಕ್ಕಿನೇನಿ ಅಲ್ಲದೇ ಮಲೆಯಾಳಂ ಸೂಪರ್ ಸ್ಟಾರ್ ಮುಮ್ಮುಟ್ಟಿ ಸೂಪರ್ ಕಾಪ್ ರೂಪದಲ್ಲಿ ಕಂಗೊಳಿಸಿದ್ದರು. ಬಾಲಿವುಡ್‌ನ ನಟ ಡಿನೋ ಮೋರಿಯಾ ಕೂಡ ಚಿತ್ರಕ್ಕಾಗಿ ಲುಕ್ ಬದಲಿಸಿದ್ದರು. ಆದರೆ ಈ ಸಿನಿಮಾದ ದುರಂತ ಕಥೆ ಏನೂ ಅನ್ನೋದು ಏಪ್ರಿಲ್-28 ರಂದು ತಿಳಿಯಿತು ನೋಡಿ.
ಏಜೆಂಟ್ ಸಿನಿಮಾ ಸರಿ ಇಲ್ಲ ಎಂದು ಹೇಳಿದ ಸಿನಿ ಪ್ರೇಮಿಗಳು
ಏಜೆಂಟ್ ಸಿನಿಮಾ ಚೆನ್ನಾಗಿಲ್ಲ ಅಂದೋರೇ ಹೆಚ್ಚು ಅಂತಲೇ ಹೇಳಬಹುದು. ಆ್ಯಕ್ಷನ್ ಬಿಟ್ಟು ಬೇರೆ ಏನೂ ಇಲ್ಲ. ಬರೀ ಆ್ಯಕ್ಷನ್ ಈ ಚಿತ್ರದಲ್ಲಿದೆ ಅನ್ನೋದು ಬಿಟ್ರೆ, ಕಥೆ ಚಿತ್ರದಲ್ಲಿ ಇಲ್ವೇ ಇಲ್ಲ ಅನ್ನೋದು ಕೂಡ ಅಷ್ಟೇ ಸತ್ಯ ಅನ್ನುವ ಅರ್ಥದಲ್ಲಿ ಸಿನಿಮಾಗೆ ಕಾಮೆಂಟ್ಸ್ ಬಂದಿವೆ.
ಆದರೆ ಅಖಿಲ್ ಅಕ್ಕಿನೇನಿ ಅಮ್ಮ ಅಮಲಾ ಅದನ್ನ ಒಪ್ಪಿಕೊಂಡಿಲ್ಲ ಬಿಡಿ. ಸಿನಿಮಾವನ್ನ ಆಸಕ್ತಿಯಿಂದ ನೋಡಬೇಕು. ಆಗಲೇ ಅದೇನೂ ಅನ್ನೋದು ತಿಳಿಯುತ್ತದೆ. ಕೆಲವು ತಪ್ಪುಗಳಾಗಿವೆ. ಅದು ಸಹಜ ಕೂಡ ಆದರೆ ಸಿನಿಮಾ ಸೂಪರ್ ಅಂತ ಮಗನ ಪರ ಬ್ಯಾಟಿಂಗ್ ಮಾಡಿದ್ದರು.
ಟಾಲಿವುಡ್ ಏಜೆಂಟ್ ಸಿನಿಮಾ ಸೋತಿರೋದ್ಯಾಕೆ?
ಇದರ ಬೆನ್ನಲ್ಲಿಯೇ ಚಿತ್ರದ ನಿರ್ಮಾಪಕರಾದ ಅನಿಲ್ ಸುಂಕರ ತಮ್ಮ ಚಿತ್ರ ಸೋತು ಹೋಗಿದೆ ಅಂತ ಹೇಳಿಕೊಂಡಿದ್ದಾರೆ. ನಾವು ಸ್ಕ್ರಿಪ್ಟ್ ಇಲ್ಲದೇ ಸಿನಿಮಾ ಮಾಡಿದೇವು. ಇದರಿಂದಲೇ ನಾವು ಸೋತು ಹೋಗಿದ್ದೇವೆ. ನಮಗೆ ನಮ್ಮ ತಪ್ಪಿನ ಅರಿವಾಗಿದೆ. ಇದರಿಂದ ಪಾಠವನ್ನೂ ಕಲಿತಿದ್ದೇವೆ ಅಂತ ವಿವರಿಸಿದ್ದಾರೆ.
ಇದನ್ನೂ ಓದಿ: Bad Manners Movie: ಸಾರಾಯಿ ಕುಡಿದ್ರೆ ಮೈ ಜುಮ್ ಅಂತೈತೆ ಎಂದು ಹಾಡಿದ ಹಾಸ್ಯ ನಟ ಉಮೇಶ್
ಅಲ್ಲಿಗೆ ಕೋಟಿ ಕೋಟಿ ದುಡ್ಡುಹಾಕಿ ನಿರ್ಮಿಸಿದ್ದ ಏಜೆಂಟ್ ಸಿನಿಮಾದ ಸೋಲಿನ ಕಾರಣ ಏನೂ ಅನ್ನೋದು ಇದೀಗ ಎಲ್ಲರಿಗೂ ತಿಳಿದಿದೆ. ಆದರೆ ಸಿನಿಮಾ ಖರೀದಿಸಿದ ವಿತರಕರ ಕಥೆ ಹೇಳೋದು ಬೇಡ್ವೇ ಬೇಡ ಬಿಡಿ. ಇನ್ನುಳಿದಂತೆ ಏಜೆಂಟ್ ಸೋಲಿನ ಸುಳಿಯಲ್ಲಿ ಸಿಲುಕಿ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ