Telugu Big Boss 3: ಕಿರುತೆರೆಗೆ ಕರಾವಳಿ ಬ್ಯೂಟಿ: ಕಾರ್ಯಕ್ರಮವೊಂದಕ್ಕೆ ನಿರೂಪಕಿಯಾಗಲಿರುವ ಅನುಷ್ಕಾ ಶೆಟ್ಟಿ..!

ಟಾಲಿವುಡ್​ನಲ್ಲಿ ಕಳೆದ ಕೆಲ ತಿಂಗಳಿನಿಂದ ಚರ್ಚೆಯಾಗುತ್ತಿರುವ ಹಾಟ್​ ಟಾಪಿಕ್​ ಎಂದರೆ 'ಬಿಗ್​ಬಾಸ್​ 3'. ಈ ಕಾರ್ಯಕ್ರಮವನ್ನು ಈ ಬಾರಿ ನಿರೂಪಣೆ ಮಾಡೋದು ಯಾರು ಎನ್ನುವ ವಿಷಯಕ್ಕೆ ಇನ್ನೂ ಸರಿಯಾದ ಕ್ಲಾರಿಟಿ ಸಿಕ್ಕಿಲ್ಲ. ನಿನ್ನೆವರೆಗೆ ಈ ಕಾರ್ಯಕ್ರಮವನ್ನು ವಿಜಯ್​ ದೇವರಕೊಂಡ ನಿರೂಪಣೆ ಮಾಡಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಈಗ ಈ ಪಟ್ಟಿಗೆ ಹೊಸ ಹೆಸರು ಸೇರಿಕೊಂಡಿದೆ.

Anitha E | news18
Updated:April 25, 2019, 5:47 PM IST
Telugu Big Boss 3: ಕಿರುತೆರೆಗೆ ಕರಾವಳಿ ಬ್ಯೂಟಿ: ಕಾರ್ಯಕ್ರಮವೊಂದಕ್ಕೆ ನಿರೂಪಕಿಯಾಗಲಿರುವ ಅನುಷ್ಕಾ ಶೆಟ್ಟಿ..!
ಅನುಷ್ಕಾ ಶೆಟ್ಟಿ
Anitha E | news18
Updated: April 25, 2019, 5:47 PM IST
'ಭಾಗಮತಿ' ಸಿನಿಮಾದ ನಂತರ ಸದ್ದಿಲ್ಲದಂತೆ ವಿದೇಶಕ್ಕೆ ಹಾರಿದ್ದ ಟಾಲಿವುಡ್​ ಸ್ವೀಟಿ ಇತ್ತೀಚೆಗಷ್ಟೆ ಹಿಂತಿರುಗಿದ್ದಾರೆ. ಅದರಲ್ಲೂ ದೇಹದ ತೂಕ ಇಳಿಸಿಕೊಳ್ಳುವ ಸಲುವಾಗಿ ವಿದೇಶಕ್ಕೆ ಹೋಗಿದ್ದ ಅನುಷ್ಕಾ ಶೆಟ್ಟಿ ಸದ್ಯ ಮಾಧವನ್​ ಜತೆ ಸಿನಿಮಾವೊಂದರಲ್ಲಿ ಅಭಿನಯಿಸುತ್ತಿದ್ದಾರೆ.

ಇದನ್ನೂ ಓದಿ: Telugu Bigg Boss 3: ತೆಲುಗು ಬಿಗ್​ಬಾಸ್ ಸೀಸನ್​ 3ಕ್ಕೆ ವಿಜಯ್​ ದೇವರಕೊಂಡ ಸಾರಥ್ಯ..!​

ಹೀಗಿರುವಾಗಲೇ ಅನುಷ್ಕಾ ಶೆಟ್ಟಿ ಕುರಿತಾದ ಮತ್ತೊಂದು ವಿಷಯ ಒಂದು ಟಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿದೆ. ಅದೇ ಈ ಕರಾವಳಿ ಹುಡುಗಿ ಸದ್ಯದಲ್ಲೇ ಕಿರುತೆರೆಗೆ ಎಂಟ್ರಿ ಕೊಡಲಿರುವ ವಿಷಯ.

ಹೌದು, ಟಾಲಿವುಡ್-ಕಾಲಿವು ಡ್​ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಅನುಷ್ಕಾ ಶೆಟ್ಟಿ ಕಿರುತೆರೆಗೂ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ. ತೆಲುಗಿನ ಜನಪ್ರಿಯ ಕಿರುತೆರೆ ಶೋಗಳಲ್ಲಿ ಒಂದಾದ 'ಬಿಗ್​ಬಾಸ್​ ಸೀಸನ್​ 3'ಕ್ಕೆ ಅನುಷ್ಕಾ ಶೆಟ್ಟಿ ನಿರೂಪಕಿ ಅನ್ನೋ ಸುದ್ದಿ ಟಾಲಿವುಡ್​ನಲ್ಲಿ ಜೋರಾಗಿ ಸದ್ದು ಮಾಡುತ್ತಿದೆ.

ಈ ಹಿಂದೆ ಜೂನಿಯರ್​ ಎನ್​ಟಿಆರ್​ ಬಿಗ್​ಬಾಸ್​ 3 ನಿರೂಪಣೆ ಮಾಡಲಿದ್ದಾರೆ ಅನ್ನೋ ಮಾತು ಹರಿದಾಡುತ್ತಿತ್ತು. ಆದರೆ ಸದ್ಯ ಅವರು ರಾಜಮೌಳಿ ನಿರ್ದೇಶನದ 'RRR' ಸಿನಿಮಾದಲ್ಲಿ ಬ್ಯುಸಿಯಾಗಿರುವುದರಿಂದ ಈ ಕಾರ್ಯಕ್ರಮಕ್ಕೆ ಬರುತ್ತಿಲ್ಲ. ನಂತರ ನಟ ನಾಗಾರ್ಜುನ, ಚಿರಂಜೀವಿ, ವೆಂಕಟೇಶ್, ನಾನಿ ಅವರ ಹೆಸರುಗಳೂ ಓಡಾಡುತ್ತಿದ್ದವು. ಆದರೆ ನಂತರ ಈ ಪಟ್ಟಿಗೆ 'ಅರ್ಜುನ್​ ರೆಡ್ಡಿ' ಖ್ಯಾತಿಯ ವಿಜಯ್​ ದೇವರಕೊಂಡ ಅವರ ಹೆಸರೂ ಸೇರಿಕೊಂಡಿತು.

ಇದನ್ನೂ ಓದಿ: Avengers Endgame Leaked: 'ಅವೆಂಜರ್ಸ್​: ಎಂಡ್​ ಗೇಮ್​' ಸಿನಿಮಾ ಲೀಕ್​ ಆದರೂ ಬಾಕ್ಸಾಫಿಸ್ ಗಳಿಕೆಗೆ ಆಗೊಲ್ಲ ಧಕ್ಕೆ; ಕಾರಣ?
Loading...

ವಿಜಯ್​ ದೇವರಕೊಂಡ 'ಡಿಯರ್ ಕಾಮ್ರೆಡ್​' ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಇನ್ನೂ ಕೆಲವು ಸಿನಿಮಾಗಳಿಗೆ ಸಹಿ ಮಾಡಿದ್ದಾರೆ. ಇಷ್ಟು ಬ್ಯುಸಿಯಾಗಿರುವ ನಟ ಈ ಕಾರ್ಯಕ್ರಮದ ನಿರೂಪಣೆಗೆ ಬರುವುದು ಕಷ್ಟ ಎನ್ನವ ಕಾರಣಕ್ಕೆ ಈಗ ಈ ಪಟ್ಟಿಗೆ ಅನುಷ್ಕಾ ಶೆಟ್ಟಿ ಹೆಸರು ಸೇರಿಕೊಂಡಿದೆ. ಆದರೆ ಇದು ಎಷ್ಟು ದಿನ ಇರುತ್ತೋ ಅಥವಾ ಇದೇ ಮೊದಲ ಬಾರಿಗೆ ತೆಲುಗು 'ಬಿಗ್​ಬಾಸ್​' ಕಾರ್ಯಕ್ರಮವನ್ನು ನಟಿಯೊಬ್ಬರು ನಿರೂಪಣೆ ಮಾಡುವಂತೆ ಆಗುತ್ತದೆಯೋ ನೋಡಬೇಕಿದೆ.

PHOTOS: 'ಟಕ್ಕರ್' ಕೊಡಲು ಬಂದಿದ್ದಾನೆ ಡಿಬಾಸ್​ ಹುಡುಗ ಮನೋಜ್​​
First published:April 25, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626