• Home
 • »
 • News
 • »
 • entertainment
 • »
 • Chiranjeevi Sarja: ನಾನು ನಗಲು ನೀನೇ ಕಾರಣ, ಚಿರಂಜೀವಿ ಸರ್ಜಾ ಹುಟ್ಟುಹಬ್ಬದಂದು ಮೇಘನಾ ಭಾವನಾತ್ಮಕ ಪತ್ರ

Chiranjeevi Sarja: ನಾನು ನಗಲು ನೀನೇ ಕಾರಣ, ಚಿರಂಜೀವಿ ಸರ್ಜಾ ಹುಟ್ಟುಹಬ್ಬದಂದು ಮೇಘನಾ ಭಾವನಾತ್ಮಕ ಪತ್ರ

ಚಿರಂಜೀವಿ ಸರ್ಜಾ ಹುಟ್ಟುಹಬ್ಬದಂದು ಮೇಘನಾ ಭಾವನಾತ್ಮಕ ಪೋಸ್ಟ್

ಚಿರಂಜೀವಿ ಸರ್ಜಾ ಹುಟ್ಟುಹಬ್ಬದಂದು ಮೇಘನಾ ಭಾವನಾತ್ಮಕ ಪೋಸ್ಟ್

'ಜನ್ಮದಿನದ ಶುಭಾಶಯಗಳು ನನ್ನ ಸಂತೋಷ! ಏನೇ ಆಗಲಿ, ಯಾರೇ ಆಗಲಿ, ಒಂದಲ್ಲ, ಎರಡಲ್ಲ, ನಾನು ಮುಗುಳ್ನಗಲು ಕಾರಣ ನಿನಗಾಗಿ' ನನ್ನ ಪ್ರೀತಿಯ ಪತಿ ಚಿರು. I Love You.

 • News18 Kannada
 • Last Updated :
 • Karnataka, India
 • Share this:

  ಸ್ಯಾಂಡಲ್‍ವುಡ್ (Sandalwood) ನಟ (Hero) ಚಿರಂಜೀವಿ (Chiranjeevi) ಸರ್ಜಾ ಹುಟ್ಟುಹಬ್ಬ (Birthday) ಇಂದು. ಅವರ ನೆನಪು ಮಾತ್ರ ನಮಗೆ ಉಳಿದಿರೋದು. ಹೃದಯಾಘಾತದಿಂದ 2020 ಜೂನ್ ನಲ್ಲಿ ಚಿರು ನಮ್ಮನ್ನು ಬಿಟ್ಟು ಹೋಗಿದ್ದಾರೆ. ಅಭಿಮಾನಿಗಳಾಗಿ ನಾವು ಅವರನ್ನು ಚಲನಚಿತ್ರದ ಮೂಲಕ ಮತ್ತೆ ನೆನಪು ಮಾಡಿಕೊಳ್ಳಬಹುದು. ಅವರ ನೆನಪು ನಮಗೆ ಉಳಿದಿದೆ. ಆದ್ರೆ ಪ್ರೀತಿಸಿ ಮದುವೆಯಾದ ಮೇಘನಾ ರಾಜ್, ಇನ್ನೂ ಚಿರು ನೆನಪಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಒಳಗೆ ಎಷ್ಟೇ ನೋವಿದ್ದರೂ ಎಲ್ಲವನ್ನೂ ಸಹಿಸಿಕೊಂಡು ಮುದ್ದು ಮಗನಿಗಾಗಿ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಚಿರು ಹುಟ್ಟುಹಬ್ಬಕ್ಕೆ ಮೇಘನಾ ರಾಜ್ (Meghana Raj) ಭಾವನಾತ್ಮಕ (Emotional) ಪೋಸ್ಟ್ (Post) ಹಾಕಿದ್ದಾರೆ. 'ಏನೇ ಆಗಲಿ, ಯಾರೇ ಆಗಲಿ, ಒಂದಲ್ಲ, ಎರಡಲ್ಲ, ನಾನು ನಗಲು ಕಾರಣ ನಿನಗಾಗಿ ಮಾತ್ರ' ಎಂದು ಬರೆದುಕೊಂಡಿದ್ದಾರೆ.


  ಹೃದಯ ಸ್ತಂಭನದಿಂದ ಚಿರು ನಿಧನ
  ಮೇಘನಾ ರಾಜ್ ಅವರು 5 ತಿಂಗಳ ಗರ್ಭಿಣಿಯಾಗಿದ್ದಾಗ ಪತಿ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡರು. ಕನ್ನಡ ನಟ ಚಿರಂಜೀವಿ ಜೂನ್ 7, 2020 ರಂದು ಭಾರೀ ಹೃದಯ ಸ್ತಂಭನದಿಂದ ನಿಧನರಾದರು. ಮೇಘನಾ, ನಟನ ಅಕಾಲಿಕ ಮರಣದ ನಂತರ ಛಿದ್ರಗೊಂಡರು. ಪ್ರೀತಿಸಿ ಮದುವೆಯಾದ ಪತಿ ಇನ್ನು ಇಲ್ಲ ಎಂದು ಬೇಸರಗೊಂಡಿದ್ದರು. ಈಗ ಮೇಘನಾ ಅವರು ಜೀವನ ನಡೆಸುತ್ತಿರುವುದೇ ಮಗ ರಾಯನ್ ಗಾಗಿ. ಇಂದು ದಿವಂಗತ ನಟ ಚಿರಂಜೀವಿ ಸರ್ಜಾ ಹುಟ್ಟುಹಬ್ಬ.


  ಈ ಲವ್ ಯೂ ಚಿರು
  ಪ್ರೀತಿಯ ಪತಿ ಚಿರು ಹುಟ್ಟುಹಬ್ಬದಂದು ಮೇಘನಾ ರಾಜ್ ಪೋಸ್ಟ್ ವೊಂದನ್ನು ಹಾಕಿಕೊಂಡಿದ್ದಾರೆ. ಅವರ ಮದುವೆ ಫೋಟೋದ ಜೊತೆ ಭಾವನಾತ್ಮಕ ಲೈನ್ ಬರೆದುಕೊಂಡಿದ್ದಾರೆ. 'ಜನ್ಮದಿನದ ಶುಭಾಶಯಗಳು ನನ್ನ ಸಂತೋಷ! ಏನೇ ಆಗಲಿ, ಯಾರೇ ಆಗಲಿ, ಒಂದಲ್ಲ, ಎರಡಲ್ಲ, ನಾನು ಮುಗುಳ್ನಗಲು ಕಾರಣ ನಿನಗಾಗಿ' ನನ್ನ ಪ್ರೀತಿಯ ಪತಿ ಚಿರು. ಐ ಲವ್ ಯೂ ಎಂದು ಹಾಕಿಕೊಂಡಿದ್ದಾರೆ.

  View this post on Instagram


  A post shared by Meghana Raj Sarja (@megsraj)
  ಶುಭಾಶಯಗಳ ಮಹಾಪೂರ
  ಮೇಘನಾ ರಾಜ್ ಹಾಕಿರುವ ಚಿರಂಜೀವಿ ಅವರ ಹುಟ್ಟುಹಬ್ಬದ ಪೋಸ್ಟ್ ಶುಭಾಶಯಗಳ ಮಹಾಪೂರವೇ ಬಂದಿದೆ. ಸ್ನೇಹಿತರು, ಅಭಿಮಾನಿಗಳು ಮತ್ತು ಸಹೋದ್ಯೋಗಿಗಳನ್ನು ಭಾವನಾತ್ಮಕವಾಗಿ ಕಾಮೆಂಟ್ ಮಾಡಿದ್ದಾರೆ. ಮೇಘನಾ ಅವರು ಎಲ್ಲರಿಗೂ ಧನ್ಯವಾದ ತಿಳಿದ್ದಾರೆ.


  ಇದನ್ನೂ ಓದಿ: Ramachari: ದಟ್ಟ ಕಾಡಿನಲ್ಲಿ ಒಬ್ಬಂಟಿ ಚಾರು, ಜೀವ ಉಳಿಸಿಕೊಳ್ಳಲು ಓಟ - ಅಮ್ಮನಿಂದ ಮಗಳ ಪ್ರಾಣಕ್ಕೆ ಬರ್ತಿದೆ ಕುತ್ತು!


  ಚಿರಂಜೀವಿ ಸರ್ಜಾ ಚಲನಚಿತ್ರಗಳು
  ಚಿರಂಜೀವಿ ಸರ್ಜಾ 22 ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 2009 ರಲ್ಲಿ ವಾಯುಪುತ್ರ ಚಿತ್ರದಲ್ಲಿ ನಟಿಸಿದ್ದಾರೆ. 2013ರಲ್ಲಿ ವರದನಾಯಕ, ಹಾರರ್ ಹಾಸ್ಯ ಚಂದ್ರಲೇಖ (2014), ಸಾಹಸ ಚಿತ್ರ ರುದ್ರ ತಾಂಡವ (2015) ಮತ್ತು ದಿ ಆಕ್ಷನ್ ಥ್ರಿಲ್ಲರ್ ಅಮ್ಮಾ ಐ ಲವ್ ಯೂ (2018). ಸರ್ಜಾ ಅವರ ಇತರ ಗಮನಾರ್ಹ ಚಿತ್ರಗಳಲ್ಲಿ ಮಿಸ್ಟರಿ ಥ್ರಿಲ್ಲರ್ ಆಟಗಾರ (2015) ಸೇರಿವೆ. ಭಯಾನಕ ಚಲನಚಿತ್ರ ಆಕೆ (2017) ಯಲ್ಲೂ ನಟಿಸಿದ್ದಾರೆ.


  ಅಕ್ಟೋಬರ್ 2017 ರಲ್ಲಿ, ಚಿರು, ನಟಿ ಮೇಘನಾ ರಾಜ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಅವರು 30 ಏಪ್ರಿಲ್ 2018 ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾದರು. ನಂತರ 2 ಮೇ 2018 ರಂದು ಅರಮನೆ ಮೈದಾನದಲ್ಲಿ ಸಾಂಪ್ರದಾಯಿಕ ಹಿಂದೂ ಸಂಪ್ರದಾಯದಂತೆ ವಿವಾಹವಾದರು.


  ಇದನ್ನೂ ಓದಿ: BBK Season 09: ಸಾನ್ಯಾ ಹೊಸ ಅವತಾರ, ಪ್ರಶಾಂತ್ ಪ್ಲ್ಯಾನ್​​ಗೆ ಬಕ್ರಾ ಆದ ರಾಜಣ್ಣ! 


  ಮಗನ ಸಂಪೂರ್ಣ ಜವಾಬ್ದಾರಿ


  ನಟ ಚಿರಂಜೀವಿ ಸರ್ಜಾ ಸಾವನ್ನಪ್ಪಿ, ಮೇಘನಾ ಒಂಟಿಯಾಗಿದ್ದಾರೆ. ಮೇಘನಾ ರಾಜ್ ಚಿರು ನೆನಪಲ್ಲೇ ಜೀವನ ಸಾಗಿಸುತ್ತಿದ್ದಾರೆ. ಜೊತೆಗೆ ಮಗನ ಸಂಪೂರ್ಣ ಜವಾಬ್ದಾರಿ ಹೊತ್ತು, ರಾಯನ್ ಲಾಲನೆ ಪಾಲನೆಯಲ್ಲೇ ಬ್ಯುಸಿ ಆಗಿದ್ದಾರೆ.


  Sandalwood Actor Chiranjeevi Sarja Birthday, Meghan raj Emotional post in social media, Chiranjeevi Films, ಚಿರಂಜೀವಿ ಸರ್ಜಾ ಹುಟ್ಟುಹಬ್ಬದಂದು ಮೇಘನಾ ಭಾವನಾತ್ಮಕ ಪೋಸ್ಟ್, ಚಿರಂಜೀವಿ ಹುಟ್ಟುಹಬ್ಬ, Kannada news, Karnataka news,
  ಮೇಘನಾ ರಾಜ್


  ಚಿರಂಜೀವಿ ಸರ್ಜಾ ಮತ್ತು ರಾಯನ್ ರಾಜ್ ಸರ್ಜಾ ಹೆಸರುಗಳು ತಮ್ಮ ಕೈಮೇಲೆ ಶಾಶ್ವತವಾಗಿ ಇರಲಿ ಎಂದು ಮೇಘನಾ ರಾಜ್ ಅವರು ಟ್ಯಾಟೋ ಹಾಕಿಸಿಕೊಂಡಿದ್ದಾರೆ. ಆ ಫೋಟೋಗಳನ್ನು ಕೆಲ ದಿನಗಳ ಹಿಂದೆ ಶೇರ್ ಮಾಡಿದ್ದರು

  Published by:Savitha Savitha
  First published: