Movie Reviews: ಕಮಾಲ್​ ಮಾಡಿದ್ನಾ ತ್ರಿವಿಕ್ರಮ? ಹರಿ ಕಥೆ ಗಿರಿ ಕಥೆ ನೋಡಿ ಏನಂದ್ರು ಪ್ರೇಕ್ಷಕರು?

ಸ್ಯಾಂಡಲ್​ವುಡ್​ನಲ್ಲಿ ಇಂದು ಬಿಡುಗಡೆ ಆಗಿರುವ 4 ಚಿತ್ರಗಳು ಹೇಗಿವೆ? ಸಿನಿಮಾ ನೋಡಿದ ಪ್ರೇಕ್ಷಕ ಮಹಾ ಪ್ರಭುಗಳು ಚಿತ್ರದ ಕುರಿತು ಏನಂತಿದ್ದಾರೆ? ಎಲ್ಲವನ್ನೂ ನೋಡೋಣ ಬನ್ನಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸ್ಯಾಂಡಲ್​ವುಡ್ ನ ಸಿನಿ ರಸಿಕರಿಗೆ ಇಂದು ಭರ್ಜರಿ ಹಬ್ಬ. ಏಕೆಂದರೆ ಇಂದು ಕನ್ನಡದಲ್ಲಿ ಬರೋಬ್ಬರಿ 4 ಚಿತ್ರಗಳು ಬಿಡುಗಡೆ ಆಗಿವೆ. ರಿಷಭ್ ಶೆಟ್ಟಿ (Rishab Shetty) ಅಭಿನಯದ ‘ಹರಿ ಕಥೆ ಅಲ್ಲ ಗಿರಿಕಥೆ‘ (Harikathe Alla Girikathe) ಚಿತ್ರ, ರವಿಚಂದ್ರನ್ ಅವರ ಪುತ್ರನಾದ ವಿಕ್ರಮ್ ಅವರ ‘ತ್ರಿವಿಕ್ರಮ‘ (Trivikrama) ಸಿನಿಮಾ, ನಟ ಸುನೀಲ್  ಕಂಬ್ಯಾಕ್ ಮಾಡುತ್ತಿರುವ ‘ತುರ್ತು ನಿರ್ಗಮನ‘ (Thurthu Nirgamana) ಹಾಗೂ ನಟ ಕಿರಣ್ ರಾಜ್ ಅಭಿನಯದ ‘ಬಡ್ಡೀಸ್‘ (Buddies) ಚಿತ್ರಗಳು ಇಂದು ರಿಲೀಸ್ ಆಗಿದೆ. ಹಾಗಿದ್ರೆ ಇಂದು ಬಿಡುಗಡೆ ಆಗಿರುವ 4 ಚಿತ್ರಗಳು ಹೇಗಿವೆ? ಸಿನಿಮಾ ನೋಡಿದ ಪ್ರೇಕ್ಷಕ ಮಹಾ ಪ್ರಭುಗಳು ಚಿತ್ರದ ಕುರಿತು ಏನಂತಿದ್ದಾರೆ? ಎಲ್ಲವನ್ನೂ ನೋಡೋಣ ಬನ್ನಿ, ಇಲ್ಲಿದೆ ಈ ಚಿತ್ರಗಳ ವಿಮರ್ಷೆ.

ಗಿರಿಯ ಕಥೆ ಹೇಳುತ್ತಾ ಸಾಗುವ ‘ಹರಿ ಕಥೆ ಅಲ್ಲ ಗಿರಿಕಥೆ‘

ನಿರ್ದೇಶನದ ಜೊತೆಗೆ ನಟನೆಯಲ್ಲೂ ಗಮನಸೆಳೆದಿರುವ ರಿಷಬ್ ಶೆಟ್ಟಿ ಅವರ ಬಹುನಿರೀಕ್ಷಿತ ‘ಹರಿ ಕಥೆ ಅಲ್ಲ ಗಿರಿಕಥೆ‘ ಚಿತ್ರವು ಇಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ಓರ್ವ ಸಿನಿಮಾ ನಿರ್ದೇಶಕನಾಗುವ ಹಂಬಲದಲ್ಲಿರುವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಮೂವರು ಗಿರಿ ಗಳಿದ್ದು, ಇವರುಗಳ ಹಿನ್ನಲೆಯಿಂದ ಪ್ರಾರಂಭವಾಗುವ ಸಿನಿಮಾ ಇಂಟರ್​ವಲ್ ಸಮಯಕ್ಕೆ ಈ ಮೂವರನ್ನೂ ಒಂದೆಡೆ ತಂದು ನಿಲ್ಲಿಸುತ್ತದೆ. ನಂತರದಲ್ಲಿ ಸಿನಿಮಾ ಕನಸು ಕಾಣುತ್ತಿದ್ದ ಈ ಮೂವರೂ ಒಂದು ಕೇಸ್​ ನಲ್ಲಿ ಪೊಲೀಸರ ಅತಿಥಿಗಳಾಗುತ್ತಾರೆ. ಒಟ್ಟಾರೆಯಾಗಿ ಸಿನಿಮಾಗೆ ಇವರುಗಳು ಬರುತ್ತಾರೋ ಇಲ್ಲವೋ ಎನ್ನುವುದೇ ಚಿತ್ರದ ಒನ್ ಲೈನ್ ಸ್ಟೋರಿ.

ಇನ್ನು, ಚಿತ್ರದಲ್ಲಿ ಕಾಮಿಡಿ ಭಾಗಗಳು ಸಖತ್ ವರ್ಕೋಟ್ ಆಗಿದೆ. ಆದರೆ ಅಲ್ಲಲ್ಲಿ ಕಥೆಯ ಎಳೆಯು ತಪ್ಪಿದೆ ಎಂದು ಹೇಳಬುದು. ಆದರೆ ಇಂತಹ ಸಂದರ್ಭದಲ್ಲಿ ಕಾಮಿಡಿ ಭಾಗವು ಚಿತ್ರವನ್ನು ಮುಂದುವರೆಸಿದೆ ಎನ್ನಬಹುದು. ಅದ್ದೂರಿ ಆಡಂಬರವಿಲ್ಲದೆ, ಸಿಂಪಲ್ ಆಗಿ ಸಿನಿಮಾ ಮೂಡಿಬಂದಿದೆ. ಒಟ್ಟಾರೆಯಾಗಿ  ನಿರ್ದೇಶಕರಾದ ಅನಿರುದ್ಧ್‌ ಮತ್ತು ಕರಣ್‌ ಅವರ ಪ್ರಯತ್ನ ಉತ್ತಮವಾಘಿ ಫಲ ನೀಡಿದೆ.

ಇದನ್ನೂ ಓದಿ: Weekend Planner: ಥಿಯೇಟರ್ ನಲ್ಲಿ ಮಿಸ್ ಮಾಡ್ಕೊಂಡಿರೋ ಸಿನಿಮಾಗಳನ್ನು ಮನೆಯಲ್ಲೇ ಕೂತು ನೋಡಿ, ಈ ವಾರ ಸಿನಿರಸಿಕರಿಗೆ ಭರ್ಜರಿ ರಸದೌತಣ

ಮಾಸ್​ ಆಗಿ ಎಂಟ್ರಿ ಕೊಟ್ಟ ವಿಕ್ರಮ್:

ಕ್ರೇಜಿ ಸ್ಟಾರ್' ರವಿಚಂದ್ರನ್ ಅವರ ಪುತ್ರ ವಿಕ್ರಮ್ ಅವರ ಅಭಿನಯದ ‘ತ್ರಿವಿಕ್ರಮ‘ ಚಿತ್ರ ಸಹ ಇಂದು ರಿಲೀಸ್ ಆಗಿದೆ. ಈ ಚಿತ್ರದ ಮೂಲಕ ವಿಕ್ರಮ್ ಅವರು ನಾಯಕನಾಗಿ ಪೂರ್ಣ ಚಂದನವನಕ್ಕೆ ಕಾಲಿಟ್ಟಿದ್ದಾರೆ. ಇನ್ನು, ಕಥೆಯಲ್ಲಿ ವಿಕ್ಕಿ (ವಿಕ್ರಮ್) ಓರ್ವ ಮಧ್ಯಮ ವರ್ಗದ ಮನೆಯವನಾಗಿರುತ್ತಾನೆ.  ಆದರೆ ವಿಕ್ಕಿಗೆ ಶ್ರೀಮಂತ ಮನೆಯ ಹುಡುಗಿಯ ಮೇಲೆ ಲವ್ ಆಗುತ್ತದೆ. ಇಂತಹ ವಿಭಿನ್ನ ಕುಟುಂಬದ ಪ್ರೇಮ ಕಥೆ ಅಂತಿಮದಲ್ಲಿ ಎಲ್ಲಿಗೆ ಹೋಗಿ ನಿಲ್ಲುತ್ತದೆ ಎನ್ಉವುದೇ ಚಿತ್ರದ ಜೀವಾಳವಾಗಿದೆ.

ಇನ್ನು, ಚಿತ್ರದಲ್ಲಿ ವಿಕ್ರಮ್ ಅವರ ಡ್ಯಾನ್ಸ್ ಮತ್ತು ಫೈಟ್​ ಗಳು ಉತ್ತಮವಾಗಿ ಮೂಡಿಬಂದಿದೆ. ಸ್ಯಾಂಡಲ್​ ವುಡ್​ಗೆ ಮತ್ತೊರ್ವ ಮಾಸ್​ ಹೀರೋ ಸಿಕ್ಕಂತಾಗಿದೆ. ಆದರೆ ನಟನೆಯಲ್ಲಿ ಇನ್ನಷ್ಟು ಪಳಗಬೇಕಿದ್ದು, ಮುಂದಿನ ಚಿತ್ರಗಳಲ್ಲಿ ಇದು ಸರಿಯಾಗಲಿದೆ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಕೊನೆಯದಾಗಿ ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರವಾಗಿದ್ದು, ನಿರ್ದೇಶಕ ಸಹನಮೂರ್ತಿ ಅವರು ಚಿತ್ರವನ್ನು ನೀಟ್​ ಆಗಿ ತೆರೆಯ ಮೇಲೆ ತಂದಿದ್ದಾರೆ.

ಇದನ್ನೂ ಓದಿ: Vikrant Rona: ವಿಕ್ರಾಂತ್ ರೋಣ ಟ್ರೈಲರ್​ಗೆ ಭರ್ಜರಿ ರೆಸ್ಪಾನ್ಸ್, ದಾಖಲೆ ಬರೆದ ಕಿಚ್ಚ

ಬಡ್ಡೀಸ್ ಮೂಲಕ್ ಸ್ಯಾಂಡಲ್​ವುಡ್​ಗೆ ಕಿರನ್ ರಾಜ್:

ಇನ್ನು, ಸ್ಯಾಂಡಲ್​ವುಡ್​ಗೆ ಬಡ್ಡೀಸ್ ಚಿತ್ರದ ಮೂಲಕ ಸಂಪೂರ್ಣ ಪ್ರಮಾಣದ ನಾಯಕನಾಗಿ ಪಾದಾರ್ಪಣೆ ಮಾಡಿರುವ ನಟ ಕಿರಣ್ ರಾಜ್​ ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಲ್ಲದೇ ಅನೇಕ ವರ್ಷಗಳ ನಂತರ ಕಂಬ್ಯಾಕ್ ಮಾಡಿರುವ ನಟ ಸುನೀಲ್ ಅವರ ‘ತುರ್ತು ನಿರ್ಗಮನ‘ ಚಿತ್ರಕ್ಕೂ ಸಹ ಪ್ರೇಕ್ಷಕರು ಒಲ್ಳೆಯ ರೆಸ್ಪಾನ್ಸ್ ನೀಡಿದ್ದಾರೆ. ಒಟ್ಟಾರೆಯಾಗಿ ಈ ವೀಕೆಂಡ್​ ನಲ್ಲಿ ಬೇಸರ ಕಳೆಯಲು ಚಿತ್ರಮಂದಿರದತ್ತ ಹೋಗುವವರಿಗೆ ಸ್ಯಾಂಡಲ್​ ವುಡ್​ನ 4 ಚಿತ್ರಗಳು ನಿಮಗಾಗಿ ಕಾಯುತ್ತಿವೆ.
Published by:shrikrishna bhat
First published: