Happy Birthday Upendra: ನಾವು ಕಂಡಂತೆ ನಮ್ಮ ಉಪ್ಪಿ ನಮಗೆ ರಿಯಲ್ ದೇವರು; ರಿಯಲ್ ಫ್ಯಾನ್ಸ್ ರಿಯಲ್ ರಿಯಾಕ್ಷನ್

ರಿಯಲ್ ಸ್ಟಾರ್ ಉಪೇಂದ್ರ ಅವ್ರು ಬಿಳಿ ಹಾಳೆ ಇದ್ದ ಹಾಗೆ. ಅಲ್ಲಿ ಯಾರ್ ಏನೇ ಬರೆದರೂ ರಿಯಲ್ ಸ್ಟಾರ್ ಬದಲಾಗೋದಿಲ್ಲ. ತಲೆನೂ ಕೆಡಸಿಕೊಳ್ಳೋದಿಲ್ಲ. ಉಪ್ಪಿ ನಮಗೆ ದೇವರು, ನಮ್ಮೆಲ್ಲ ಅಭಿಮಾನಿಗಳ ಸ್ವತ್ತು.

ಈ ದಿನ ರಿಯಲ್ ಸ್ಟಾರ್ ಉಪೇಂದ್ರ ಜನುಮ ದಿನ

ಈ ದಿನ ರಿಯಲ್ ಸ್ಟಾರ್ ಉಪೇಂದ್ರ ಜನುಮ ದಿನ

  • Share this:
ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಜನ್ಮ ದಿನ ಇವತ್ತು. ಕಳೆದ ಎರಡು ವರ್ಷದಿಂದ ಕೊರೊನಾ ಬೇರೆ. ಆಗ ಉಪ್ಪಿ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಈ ವರ್ಷ ಎಲ್ಲವೂ ನಾರ್ಮಲ್ ಆಗಿದೆ. ಅದಕ್ಕೇನೆ ಉಪ್ಪಿ ತಮ್ಮ ಹುಟ್ಟುಹಬ್ಬವನ್ನ (Upendra Happy Birthday) ಫ್ಯಾನ್ಸ್ ಜೊತೆಗೆ ಆಚರಿಸೋಕೆ ಮುಂದಾಗಿದ್ದಾರೆ. ಉಪ್ಪಿಯ ಫ್ಯಾನ್ಸ್ (Upendra Fans) ಅಂದ್ಮೇಲೆ ಕ್ರಿಯೇಟಿವಿಟಿ ಸಹಜವಾಗಿ ಇದ್ದೇ ಇರುತ್ತದೆ. ಕತ್ರಿಗುಪ್ಪೆಯ ಉಪ್ಪಿ ಮನೆಯ ಮುಂದೆ ಪ್ರತಿ ವರ್ಷದಂತೆ ರಿಯಲ್ ಫ್ಯಾನ್ಸ್ ಬಂದು ಸಂಭ್ರಮ ಪಡಲಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಈ ವರ್ಷ 53 ನೇ ಜನ್ಮ ದಿನವನ್ನ ಆಚರಿಸಿಕೊಳ್ಳುತ್ತಿದ್ದಾರೆ.

ಇವರ ಜನ್ಮ ದಿನಕ್ಕೆ ಅಭಿಮಾನಿಗಳು ಅಷ್ಟೇ ತೂಕದ ಕೇಕ್ ಅನ್ನೂ ರೆಡಿ ಮಾಡಿಕೊಂಡು ಉಪ್ಪಿಯಿಂದಲೇ ಕಟ್ ಮಾಡಿಸೋ ತವಕದಲ್ಲಿಯೇ ಇದ್ದಾರೆ. ಉಪ್ಪಿಯ ಜನ್ಮ ದಿನ ಅಂದ್ಮೇಲೆ ಸಿನಿಮಾ ತಂಡವೂ ಸುಮ್ನೆ ಕುಳಿತಿಲ್ಲ. ಆರ್ ಚಂದ್ರು ನಿರ್ದೇಶನದ ಕಬ್ಜ ಸಿನಿಮಾ ತಂಡ ಈಗಾಗಲೇ ಉಪ್ಪಿಗೆ ಟೀಸರ್ ಗಿಫ್ಟ್ ಕೊಟ್ಟಿದೆ. ಸ್ವತಃ ಉಪೇಂದ್ರ ಅವರೇ ನಿರ್ದೇಶನದ ಯು ಸಿನಿಮಾ ಕೂಡ ಉಪ್ಪಿಗಾಗಿಯೇ ವಿಶೇಷ ವೀಡಿಯೋ ಮಾಡಿಸಿದೆ. ಅದನ್ನ ರಿಲೀಸ್ ಕೂಡ ಮಾಡುತ್ತಿದೆ.

ಫ್ಯಾನ್ಸ್ ಕಂಡಂತೆ ರಿಯಲ್ ಸ್ಟಾರ್ ಉಪೇಂದ್ರ

ರಿಯಲ್ ಸ್ಟಾರ್ ಉಪೇಂದ್ರ ನಿಜಕ್ಕೂ ರಿಯಲ್ ಸೂಪರ್ ಸ್ಟಾರ್ ಬಿಡಿ. ಫ್ಯಾನ್ಸ್ ಅಂದ್ರೆ ತುಂಬಾ ಗೌರವಿಸೋ ಹೀರೋ. ಈ ಹೀರೋನ ಬಗ್ಗೆ ಫ್ಯಾನ್ಸ್ ಗೆ ವಿಶೇಷವಾದ ಗೌರವ ಕೂಡ ಇದೆ. ಮನೆಗೆ ಬರೋ ಫ್ಯಾನ್ಸ್ ಅನ್ನ ಕೊಂಚವು ನಿರಾಶೆ ಮಾಡದೇನೆ ಅವರನ್ನ ಮೀಟ್ ಆಗೋದು ಉಪ್ಪಿಯ ದೊಡ್ಡ ಗುಣ.

ಈ ರಿಯಲ್ ಗುಣವಂತನ ಬಗ್ಗೆ ಒಂದಷ್ಟು ತಾವು ಕಂಡ ಉಪ್ಪಿ ರಿಯಲ್ ಆಗಿಯೆ ಹೀಗೆ ಇರೋದು ಅಂತಲೇ ತಮ್ಮ ಮನಸ್ಸಿನ ಮಾತುಗಳನ್ನ ನಮ್ಮ ಜೊತೆಗೆ ಆಡಿದ್ದಾರೆ. ಅವುಗಳನ್ನ ಇಲ್ಲಿ ಹೇಳ್ತಾ ಹೋಗುತ್ತವೇ ಓದಿ.

ರಿಯಲ್ ಸ್ಟಾರ್ ಅಭಿಮಾನಿ: ಜ್ಯೂನಿಯರ್ ಉಪ್ಪಿ ಭಾಷಾ

ರಿಯಲ್ ಸ್ಟಾರ್ ಉಪೇಂದ್ರ ಅವ್ರು ಬಿಳಿ ಹಾಳೆ ಇದ್ದ ಹಾಗೆ. ಅಲ್ಲಿ ಯಾರ್ ಏನೇ ಬರೆದರೂ ರಿಯಲ್ ಸ್ಟಾರ್ ಬದಲಾಗೋದಿಲ್ಲ. ತಲೆನೂ ಕೆಡಸಿಕೊಳ್ಳೋದಿಲ್ಲ. ಉಪ್ಪಿ ನಮಗೆ ದೇವರು, ನಮ್ಮೆಲ್ಲ ಅಭಿಮಾನಿಗಳ ಸ್ವತ್ತು.

Today Real Star Upendra 53rd Birthday He Celebrating with His Fans
ಉಪ್ಪಿ ಫ್ಯಾನ್ ಭಾಷಾ


ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿ ದೀಪಕ್
ನಮ್ಮ ಉಪ್ಪಿ ಸಿಂಪಲ್ ಮ್ಯಾನ್. ಉಪ್ಪಿಗೆ ಅಹಂ ಇಲ್ಲವೇ ಇಲ್ಲ. ಉಪ್ಪಿ ತುಂಬಾ ವಿನಯವಂತ ನಾಯಕ ನಟ. ತುಂಬಾ ಕ್ರಿಯಾಶೀಲ ಸ್ಟಾರ್.

ರಿಯಲ್ ಸ್ಟಾರ್ ಉಪೇಂದ್ರ ಫ್ಯಾನ್ಸ್ ಗೆ ನಟನೆಗೆ ಕೊಡ್ತಾರೆ ಚಾನ್ಸ್

ಹೌದು, ರಿಯಲ್ ಸ್ಟಾರ್ ಅಭಿಮಾನಿಗಳಿಗೆ ವಿಶೇಷವಾಗಿಯೇ ಗೌರವ ಕೊಡ್ತಾರೆ. ಮನೆ ಬಳಿಗೆ ಬರೋರಿಗೆ ನಿರಾಶೆ ಮಾಡೋದಿಲ್ಲ. ಮನೆ ಬಳಿಗೆ ಬರೋ ಫ್ಯಾನ್ಸ್ ಗೆ ಟ್ಯಾಲೆಂಟ್ ಇದೆ ಅನಿಸಿದ್ರೆ, ಅವರಿಗೆ ಸಿನಿಮಾದಲ್ಲಿ ಆ್ಯಕ್ಟ್ ಮಾಡು ಅಂತಲೂ ಸಲಹೆ ಕೊಡ್ತಾರೆ.

ಇದನ್ನೂ ಓದಿ: Real Star Upendra Kabzaa: ರಿಯಲ್ ಸ್ಟಾರ್ ಹುಟ್ಟುಹಬ್ಬಕ್ಕೆ ಕಬ್ಜ ಗಿಫ್ಟ್! ಖಡಕ್ ಟೀಸರ್‌ಗೆ ಉಪ್ಪಿ ಫ್ಯಾನ್ಸ್ ಫಿದಾ

ಅದರಂತೆ ಬೆಲ್ಲಂದೂರು ಜಗದೀಶ್ ಅನ್ನೋ ಉಪ್ಪಿ ಫ್ಯಾನ್ ಈ ಬಗ್ಗೆ ಹೇಳಿಕೊಂಡಿದ್ದಾರೆ. ತಮಗೆ ಆದ ಈ ಅನುಭವವನ್ನ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ರಿಯಲ್ ಸ್ಟಾರ್ ಉಪ್ಪಿ ತಮ್ಮ ನಿರ್ದೇಶನದ ಯು ಸಿನಿಮಾದಲ್ಲಿ ಅಭಿನಯಿಸೋ ಚಾನ್ಸ್ ಕೂಡ ಕೊಟ್ಟಿದ್ದಾರೆ.
ಯು ಸಿನಿಮಾದಲ್ಲಿ ಫ್ಯಾನ್ಸ್ ಗಾಗಿಯೇ ಒಂದು ವಿಶೇಷ ದೃಶ್ಯ

Today Real Star Upendra 53rd Birthday He Celebrating with His Fans
ರಿಯಲ್ ಸ್ಟಾರ್ ಉಪೇಂದ್ರ ಫ್ಯಾನ್ ಜಗದೀಶ್ ಬೆಲ್ಲಂದೂರು


ನಿಜ, ರಿಯಲ್ ಸ್ಟಾರ್ ಉಪೇಂದ್ರ ಬಹಳ ದಿನಗಳ ಬಳಿಕ ಯು ಹೆಸರಿನ ಸಿನಿಮಾ ಡೈರೆಕ್ಟರ್ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ತಮ್ಮ ಫ್ಯಾನ್ಸ್ ಗಾಗಿಯೇ ಒಂದಷ್ಟು ಸೀನ್ ಗಳನ್ನ ಪ್ಲಾನ್ ಮಾಡಿದ್ದಾರೆ. ಈಗಾಗಲೇ ಒಂದಷ್ಟು ಸೀನ್​ಗಳನ್ನೂ ತೆಗೆದುಕೊಂಡಿದ್ದಾರೆ. ಇನ್ನೂ ಇದೆ ಕರೀತೀನಿ ಅಂತಲೂ ಫ್ಯಾನ್ಸ್ ಗೆ ಹೇಳಿದ್ದಾರೆ.

ಹೀಗೆ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಚಿತ್ರ ಜೀವನದಲ್ಲಿ ಕ್ರಿಯೇಟಿವ್ ಐಡಿಯಾ ಗಳ ಮೂಲಕ ಜನರ ಮನಸ್ಸು ಗೆದಿದ್ದಾರೆ. ಚಿತ್ರದಿಂದ ಚಿತ್ರಕ್ಕೂ ಫ್ಯಾನ್ಸ್ ಗಳನ್ನೂ ಸಂಪಾದಿಸುತ್ತಿದ್ದಾರೆ. ಪ್ರಜಾಕೀಯದಂತ ಪಕ್ಷದ ಮೂಲಕ ರಾಜಕೀಯದಲ್ಲೂ ಹೊಸ ಅಲೆ ಎಬ್ಬಿಸುತ್ತಲೇ ಇದ್ದಾರೆ.

ಇದನ್ನೂ ಓದಿ: Nishvika Naidu: ನಾನು ಸಿನಿಮಾ ಗರ್ಲ್, ಸಿನಿಮಾಗೇ ನನ್ನ ಜೀವನ ಮುಡಿಪಾಗಿಟ್ಟಿದ್ದೇನೆ ಎಂದ ನಿಶ್ವಿಕಾ ನಾಯ್ಡು

ರಿಯಲ್ ಸ್ಟಾರ್ ಉಪ್ಪಿಯೇ ಕಬ್ಜ ಸಿನಿಮಾದ ದೊಡ್ಡ ಹವಾ
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹವಾ ಕ್ರಿಯೇಟ್ ಮಾಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ರಿಲೀಸ್​ಗೆ ರೆಡಿ ಆಗಿದೆ. ಬಹು ಭಾಷೆಯಲ್ಲಿಯೇ ಈ ಸಿನಿಮಾ ಎಲ್ಲೆಡೆ ರಿಲೀಸ್ ಆಗುತ್ತಿದೆ. ಯು ಸಿನಿಮಾದ ಮೂಲಕ ಈ ಮತ್ತೆ ಡೈರೆಕ್ಷನ್ ಕೂಡ ಮಾಡುತ್ತಿದ್ದಾರೆ.

ಕನ್ನಡದ ಈ ವಿಶೇಷ ನಟ-ನಿರ್ದೇಶಕ ಉಪೇಂದ್ರ ಅವರಿಗೆ ಈ ದಿನ ಜನುಮ ದಿನ. ಈ ನಾಯಕನಿಗೆ ನಮ್ಮದೂ ಒಂದು ಶುಭಾಶಯ.
First published: