ಸ್ಯಾಂಡಲ್‌ವುಡ್‌ನ (Sandalwood) ಬಹು ನಿರೀಕ್ಷಿತ ಸಿನಿಮಾಗಳಲ್ಲಿ (Most Expected Movie) ಕಿಚ್ಚ ಸುದೀಪ್ (Kichcha Sudeep) ಅಭಿನಯದ ‘ವಿಕ್ರಾಂತ್ ರೋಣ’ (Vikrant Rona) ಕೂಡ ಒಂದು. ಪ್ರಾರಂಭದಿಂದಲೂ ಸಾಕಷ್ಟು ಕುತೂಹಲ ಕೆರಳಿಸಿದ್ದ ಈ ಸಿನಿಮಾ, ಇದೀಗ ಬಿಡುಗಡೆಗೆ (Release) ಸಜ್ಜಾಗಿದೆ. ಇದರ ನಡುವೆ ಇಂದು ಬೆಂಗಳೂರಿನ ಓರಾಯನ್ ಮಾಲ್ ನಲ್ಲಿ ಪ್ರೀ ಟ್ರೈಲರ್ ಇವೆಂಟ್ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ನ ಘಟಾನುಘಟಿ ತಾರೆಯರು ಭಾಗಿಯಾಗಿದ್ದು, ಅನೇಕ ದಿನಗಳ ನಂತರ ಒಂದೇ ವೇದಿಕೆಯಲ್ಲಿ ಕನ್ನಡ ಚಿತ್ರರಂಗದ ಎಲ್ಲಾ ಪ್ರಮುಖ ನಟರುಗಳು ಪಾಲ್ಗೊಳ್ಳುವ ಮೂಲಕ ಕನ್ನಡ ಚಿತ್ರರಂಗದ ಒಗ್ಗಟ್ಟನ್ನು ಮತ್ತೆ ಪ್ರದರ್ಶಿಸಿದ್ದಾರೆ. ಇನ್ನು, ಈಗಾಗಲೇ ಬಾಲಿವುಡ್ ಬ್ಯೂಟಿ (Bollywood Beauty) ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಬೆಂಗಳೂರಿಗೆ ಆಗಮಿಸಿದ್ದಾರೆ.
'ವಿಕ್ರಾಂತ್ ರೋಣ'ನ ಹೆಸರಲ್ಲಿ ಒಂದಾದ ಸ್ಯಾಂಡಲ್ವುಡ್:
ವಿಕ್ರಾಂತ್ ರೋಣ ಪ್ರೀ- ಟ್ರೈಲರ್ ಲಾಂಚ್ ಇವೆಂಟ್ ನಲ್ಲಿ ಸಂಪೂರ್ಣ ಸ್ಯಾಂಡಲ್ವುಡ್ ಒಂದಾಗಿದೆ. ಹೌದು, ಒರಾಯನ್ ಮಾಲ್ ನಲ್ಲಿ ನಡೆಯುತ್ತಿರುವ ಪ್ರೀ- ಟ್ರೈಲರ್ ಲಾಂಚ್ ಇವೆಂಟ್ ನಲ್ಲಿ ಕಿಚ್ಚನಿಗೆ ಶಿವಣ್ಣ, ರವಿಚಂದ್ರನ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಡಾಲಿ ಧನಂಜಯ, ರಮೇಶ್, ನಿರ್ದೇಶಕ ಯೋಗರಾಜ್ ಭಟ್, ಜಾಕ್ವೆಲಿನ್ ಪರ್ನಾಂಡಿಸ್, ರಾಜ್ ಬಿ ಶೆಟ್ಟಿ, ಅರ್ಜುನ್ ಜನ್ಯಾ, ನಂದ ಕಿಶೋರ್, ಸೃಜನ್ ಲೋಕೇಶ್ ಸೇರಿದಂತೆ ಅನೇಕ ತಾರೆಯರು ಪಾಲ್ಗೊಳ್ಳುವ ಮೂಲಕ ಚಿತ್ರ ರಂಗದ ಒಗ್ಗಟ್ಟನ್ನು ಪ್ರದರ್ಶಿಸಿದರು.
ವಿಕ್ರಂತ್ ರೋಣನನ್ನು ಹಾಡಿ ಹೊಗಳಿದ ತಾರೆಯರು:
ಸುದೀಪ್ ನಮ್ಮ ಫ್ಯಾಮಿಲೆ ಎಂದರೂ ತಪ್ಪಾಗಲಾರದು. ಅಲ್ಲದೇ ಸುದೀಪ್ ನನ್ನ ಹೃದಯಕ್ಕೆ ತುಂಬಾ ಹತ್ತಿರವಾದವರು ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ. ಅಲ್ಲದೇ ಶಿವಣ್ಣ ಸಹ ವೇದಿಕೆ ಮೇಲೆ ಚಿತ್ರದ ರಾ.. ರಾ.. ರಕ್ಕಮ್ಮಾ ಹಾಡಿನ ಹುಕ್ ಸ್ಟೆಫ್ ಹಾಕುವ ಮೂಲಕ ಚಿತ್ರದಲ್ಲಿ ಈ ಹಾಡು ಮತ್ತಷ್ಟು ಇಷ್ಟ ಎಂದು ಹೇಳಿದರು.
ಇದನ್ನೂ ಓದಿ: Jacqueline Fernandez: 'ರಕ್ಕಮ್ಮ'ನಿಗೆ ಕನ್ನಡ ಕಲಿಸಿದ ಕಿಚ್ಚ! "ಕನ್ನಡಿಗರಿಗೆ ನಮಸ್ಕಾರ" ಎಂದ ಜಾಕ್ವೆಲಿನ್
ರಮೇಶ್ ಸಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಸುದೀಪ್ ಅವರ ಬಗ್ಗೆ ಮಾತಾಡಿದ್ದಾರೆ. ಟ್ರೈಲರ್ ನೀಡಿದ ನಂತರ ಮಾತನಾಡಿ, ಜುಮಾಂಜಿ, ಟಾರ್ಸನ್ ನಂತಹ ಹಾಲಿವುಡ್ ಚಿತ್ರಕ್ಕೆ ಸಮನಾಗಿ ವಿಕ್ರಾಂತ್ ರೋಣ ಚಿತ್ರ ಮೂಡಿಬಂದಿದ್ದು, ಚಿತ್ರಮಂದಿರದಲ್ಲಿ ನಿಮ್ಮನ್ನು ಇನ್ನೊಂದು ಲೀಕಕ್ಕೆ ಕರೆದುಕೊಂಡು ಹೋಗುತ್ತದೆ ಎಂದಿದ್ದಾರೆ.
ನಾನು ಚಿತ್ರಂಗದ ಪರವಾಗಿ ಬಂದವನಲ್ಲ, ನಾನು ಸುದೀಪ್ ಫ್ಯಾನ್ಸ್ ಆಗಿ ಬಂದಿದ್ದೇನೆ ಎಂದು ನಟ, ನಿರ್ದೇಶಕ ರಿಷಭ್ ಶೆಟ್ಟಿ ಹೇಳಿದ್ದಾರೆ. ಅಲ್ಲದೇ ಸುದೀಪ್ ಅವರ ಈ ಪ್ರಯತ್ನ ನಮ್ಮನಂತವರಿಗೆ ಇನ್ನಷ್ಟು ಚಿತ್ರರಂಗದಲ್ಲಿ ಕೆಲಸ ಮಾಡಲು ಉತ್ಸಾಹ ಬಂದಿದೆ. ಟ್ರೈಲರ್ ಸಹ ಅದ್ಭುತವಾಗಿದೆ ಎಂದಿದ್ದಾರೆ. ಅಲ್ಲದೇ ಖಂಡಿತವಾಗಿಯೂ ನಾನು ಮತ್ತು ಸುದೀಪ್ ಒಟ್ಟಿಗೆ ಕೆಲಸ ಮಾಡುತ್ತೇವೆ ಎನ್ನುವ ಮೂಲಕ ಅಭಿಮಾನಿಗಳಿಗೆ ಮತ್ತಷ್ಟು ಕುತೂಹಲ ಮೂಡಿಸಿದರು.
ಜೂನ್ 23ರಂದು ವಿಕ್ರಾಂತ್ ರೋಣ ಟ್ರೇಲರ್ ರಿಲೀಸ್:
ಇದೇ ಜೂನ್ 23ರಂದು ಕಿಚ್ಚನ ಅಭಿಮಾನಿಗಳ ಪಾಲಿಗೆ ಸ್ಮರಣೀಯ ದಿನವಾಗಿಸಲು ವಿಕ್ರಾಂತ್ ರೋಣ ಚಿತ್ರತಂಡ ಮುಂದಾಗಿದೆ. ಜೂ.23 ರಂದು ವಿಕ್ರಾಂತ್ ರೋಣ ಟ್ರೈಲರ್ ರಿಲೀಸ್ ಮಾಡುವುದಾಗಿ ಕಿಚ್ಚ ಸುದೀಪ್ ಟ್ವಿಟ್ ಮಾಡಿದ್ದಾರೆ.
ಇದನ್ನೂ ಓದಿ: Vikrant Rona: ಜೂನ್ 23ಕ್ಕೆ ವಿಕ್ರಾಂತ್ ರೋಣ ಟ್ರೇಲರ್ ರಿಲೀಸ್, ಕಿಚ್ಚನ ಅಬ್ಬರ ನೋಡಿ ಕಣ್ತುಂಬಿಸಿಕೊಳ್ಳಲು ಅಭಿಮಾನಿಗಳ ಕಾತರ
ಜುಲೈ 28ರಂದು ವಿಕ್ರಾಂತ್ ರೋಣ ರಿಲೀಸ್:
ವಿಕ್ರಾಂತ್ ರೋಣ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ ಮತ್ತು ಸಿನಿಮಾ ಯಾವಾಗ ಥಿಯೇಟರ್‌ಗಳಿಗೆ ಬರಲಿದೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವಾಗ, ಎಲ್ಲರಿಗೂ ಗುಡ್ ನ್ಯೂಸ್ ಸಿಕ್ಕಿದೆ. ಬಹು ನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರ ಜು.28ರಂದು ರಿಲೀಸ್ ಆಗಲಿದೆ ಎಂದು ಚಿತ್ರತಂಡ ರಿಲೀಸ್ ಡೇಟ್ ಬಹಿರಂಗ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ