Vishnuvardhan Birthday: ಕಲಾವಿದರ ಆರಾಧ್ಯ ದೈವ ಈ ಮಹಾನ್ ಸಾಹಸ ಸಿಂಹನಿಗೆ 72 ನೇ ಜನುಮ ದಿನ

ಕನ್ನಡ ಚಿತ್ರರಂಗದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಎಲ್ಲ ಕಲಾವಿದರ ಆರಾಧ್ಯ ದೈವವೇ ಆಗಿದ್ದಾರೆ. ಈ ಆರಾಧ್ಯ ದೈವ ಎಲ್ಲ ಕಾಲಕ್ಕೂ ಎಲ್ಲರ ಹೃದಯದಲ್ಲಿ ಶಾಶ್ವತ ಜಾಗ ಮಾಡಿಕೊಂಡ ಮಹಾನ್ ಸೂಪರ್ ಸ್ಟಾರ್. ಈ ಮಹಾನ್ ಕಲಾವಿದನಿಗೆ ಈ ದಿನ 73 ನೇ ಜನುಮ ದಿನ.

ಈ ದಿನ ವಿಷ್ಣು 73ನೇ ಜನುಮ ದಿನ

ಈ ದಿನ ವಿಷ್ಣು 73ನೇ ಜನುಮ ದಿನ

  • Share this:
ಕನ್ನಡ ಚಿತ್ರರಂಗದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ (Vishnuvardhan) ಎಲ್ಲ ಕಲಾವಿದರ ಆರಾಧ್ಯ ದೈವವೇ ಆಗಿದ್ದಾರೆ. ಭೌತಿಕವಾಗಿ ಅವರಿಲ್ಲ ಅನ್ನೋದು ಬಿಟ್ಟರೇ, ಅವರನ್ನ ಆರಾಧಿಸೋ ಕಲಾವಿದರಿಗೆ (Artist) ಕೊರತೆ ಇಲ್ಲ. ವಿಷ್ಣು ಎಲ್ಲ ಕಾಲಕ್ಕೂ ಎಲ್ಲರ ಹೃದಯದಲ್ಲಿ ಶಾಶ್ವತ ಜಾಗ ಮಾಡಿಕೊಂಡ ಮಹಾನ್ ಕಲಾವಿದ. ಈ ಕಲಾವಿದನ್ನ ಪ್ರತಿ ವರ್ಷ ನೆನಪಿಸಿಕೊಳ್ಳದೇ ಇರೋ ಅಭಿಮಾನಿಗಳೂ ಇಲ್ಲ, ಕಲಾವಿದರೂ ಇಲ್ಲ. ಎಲ್ಲರ ಮನಸ್ಸಿನಲ್ಲಿ ಜೀವಂತವಾಗಿಯೇ ಇರೋ ಸಾಹಸ ಸಿಂಹ ವಿಷ್ಣುವರ್ಧನ್ ಅವರು ನಮ್ಮೊಂದಿಗೆ ಇದ್ದಿದ್ದರೇ, ಅವರಿಗೆ ಇಂದಿಗೆ 72 ವರ್ಷ (72 Birthday) ತುಂಬುತ್ತಿತ್ತು. ಆದರೆ ವಿಷ್ಣು ಇಲ್ಲದೇ ಅಭಿಮಾನಿಗಳು ಅವರ ಜನ್ಮ ದಿನವನ್ನ ವಿಶೇಷವಾಗಿಯೇ ಆಚರಿಸುತ್ತಾರೆ. ಅವರ ನೆನಪಿನಲ್ಲಿ ಜನ್ಮ ದಿನಕ್ಕೆ ವಿಶೇಷ (Special)ಕಾರ್ಯಗಳನ್ನೂ ಮಾಡಿಕೊಂಡು ಬರ್ತಿದ್ದಾರೆ. ಇಂತಹ ವಿಶೇಷ ನಾಯಕ ನಟನ ಬಗ್ಗೆ ಒಂದಷ್ಟು ಬರೆಯೋ ಖುಷಿ ನಮ್ಮದು. ಇಲ್ಲಿದೆ ಓದಿ.

ಸಾಹಸ ಸಿಂಹ ವಿಷ್ಣುವರ್ಧನ್ ಸಾಹಸಕ್ಕೆ ಮಾತ್ರ ಸೀಮಿತವಾಗಿದ್ದವರಲ್ಲ. ಅವರ ಅಭಿನಯಕ್ಕೆ ಎಂತಹ ಕಲ್ಲು ಹೃದಯವೂ ಕರಗುತ್ತಿತ್ತು. ಬಂಧನದಂತ ಸಿನಿಮಾದಲ್ಲಿ ವಿಷ್ಣುವರ್ಧನ್ ಅಭಿನಯ ಈಗಲೂ ಹಚ್ಚ ಹಸಿರಾಗಿಯೇ ಇದೆ. ಅಪಾರ ಪ್ರೀತಿಯನ್ನ ತುಂಬಿಕೊಂಡು ಪ್ರೀತಿಸೋ ಹುಡುಗಿಗೆ ಹೇಳಲು ಪರಿತಪಿಸೋ ಆ ಅಭಿನಯಕ್ಕೆ ಯಾರೂ ಸೋಲದೇವರೇ ಇಲ್ಲ.

ಕನ್ನಡಿಗರ ಸಾಹಸ ಸಿಂಹ ಎಲ್ಲ ಕಲಾವಿದರ ಶಾಶ್ವತ ಸ್ಪೂರ್ತಿ
ವಿಷ್ಣುವರ್ಧನ್ ಅವರ ನಾಗರಹಾವು ಸಿನಿಮಾ ಏನೂ ಕಡಿಮೇನೆ. ಆ ಕಾಲದಲ್ಲಿಯೇ ವಿಷ್ಣು ಆ್ಯಂಗ್ರಿ ಯಂಗ್ ಮ್ಯಾನ್ ಆಗಿಯೇ ಎಲ್ಲ ಯುವಕರ ಪ್ರತಿನಿಧಿಯಂತೆ ಕಂಡರು. ನಾಗರಹಾವು ಸಿನಿಮಾದ ಆ ರಾಮಾಚಾರಿ ಮುಂದಿನ ಪೀಳಿಗೆಯ ಎಲ್ಲ ಹೀರೋಗಳಿಗೆ ಸ್ಪೂರ್ತಿನೇ ಆಗಿ ಬಿಟ್ಟರು.

ನಾಗರಹಾವು ಸಿನಿಮಾದ ಆ ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿಯ ಸಿನಿಮಾನೇ ಬಂದು ಬಿಡ್ತು. ಇದೇ ಸಿನಿಮಾದ ಕ್ಲೈಮ್ಯಾಕ್ಸ್ ಕೂಡ ಅದೇ ಚಿತ್ರದುರ್ಗದ ಕೋಟೆಯಲ್ಲಿ ಆಗಿರೋದು ವಿಷ್ಣು ಅಭಿಮಾನಿಗಳ ಹೃದಯ ಗೆದ್ದಿತ್ತು. ನಾಗರಹಾವು ಸಿನಿಮಾವನ್ನ ಕೂಡ ನೆನಪಿಸಿತ್ತು.

Today Kannada Veteran Actor Vishnuvardhan 73rd Birthday
ಕನ್ನಡಿಗರ ಆರಾಧ್ಯ ದೈವ ಸಾಹಸ ಸಿಂಹ


ಸಾಹಸ ಸಿಂಹ ವಿಷ್ಣುವರ್ಧನ್ ಕಿಚ್ಚನಿಗೂ ಸ್ಪೂರ್ತಿ-ರಾಕಿಂಗ್ ಯಶ್ ಗೂ ಸ್ಪೂರ್ತಿ
ವಿಷ್ಣುವರ್ಧನ್ ಅವ್ರು ಕೇವಲ ರಾಕಿಂಗ್ ಸ್ಟಾರ್ ಸಿನಿಮಾಗೆ ಮಾತ್ರ ಸ್ಪೂರ್ತಿ ಆಗಲಿಲ್ಲ. ವಿಷ್ಣು ಸಾರ್ ಕಿಚ್ಚ ಸುದೀಪ್ ಅವರಿಗೂ ಸ್ಪೂರ್ತಿನೇ ಸರಿ. ಕಿಚ್ಚನ ಸಿನಿಮಾದಲ್ಲೂ ವಿಷ್ಣುವರ್ಧನ್ ಛಾಯೆ ಕಂಡು ಬರೋದು ಅಷ್ಟೇ ಸತ್ಯ.

ಇದನ್ನೂ ಓದಿ: Real Star Upendra Kabzaa: ರಿಯಲ್ ಸ್ಟಾರ್ ಹುಟ್ಟುಹಬ್ಬಕ್ಕೆ ಕಬ್ಜ ಗಿಫ್ಟ್! ಖಡಕ್ ಟೀಸರ್‌ಗೆ ಉಪ್ಪಿ ಫ್ಯಾನ್ಸ್ ಫಿದಾ

ವಿಷ್ಣುವರ್ಧನ್ ಅವ್ರು ಸಿನಿಮಾಗಳೆಲ್ಲ ಆದರ್ಶಕ್ಕೆ ಅತಿ ಹೆಚ್ಚು ಮಹತ್ವ ಕೊಡಲಾಗುತ್ತಿತ್ತು. ವಿಷ್ಣುವರ್ಧನ್ ನಿರ್ವಹಿಸುತ್ತಿದ್ದ ಪಾತ್ರಗಳು ಎಂದೂ ತಮ್ಮ ತೆರೆ ಮೇಲಿನ ನಾಯಕಿಯರನ್ನ ಏಕವಚನದಲ್ಲಿ ಕೂಗಿದ್ದು ಇಲ್ಲವೇ ಇಲ್ಲ.

ಸಾಹಸ ಸಿಂಹ ವಿಷ್ಣುವರ್ಧನ್ ಅವರಿಗೆ ಹೆಣ್ಣುಮಕ್ಕಳ ಬಗ್ಗೆ ಅಪಾರ ಗೌರವ
ಬಹು ವಚನದಲ್ಲಿಯೇ ಕರೆಯುತ್ತಿದ್ದರು. ಹೆಣ್ಣುಮಕ್ಕಳ ಬಗ್ಗೆ ಅಷ್ಟೊಂದು ಗೌರವವನ್ನ ರಿಯಲ್ ಲೈಫ್ ಮತ್ತು ರೀಲ್ ಲೈಫ್​ ಅಲ್ಲೂ ವಿಷ್ಣುವರ್ಧನ್ ಕೊಡ್ತಾಯಿದ್ದರು. ವಿಷ್ಣುವರ್ಧನ್ ಸಿನಿಮಾಗಳನ್ನ ಒಂದೊಂದಾಗಿ ಇಲ್ಲಿ ಹೇಳ್ತಾ ಹೋದ್ರೆ, ಸುಪ್ರಭಾತ ಕೂಡ ಒಂದು ವಿಶೇಷ ಸಿನಿಮಾನೇ ಆಗಿತ್ತು.

Today Kannada Veteran Actor Vishnuvardhan 73rd Birthday
ಸಾಹಸ ಸಿಂಹನ ವಿವಿಧ ಪಾತ್ರಗಳ ವೈಭವ


ಈ ಚಿತ್ರದಲ್ಲಿ ವಿಷ್ಣುವರ್ಧನ್ ಸರಿಯಾಗಿ ಮಾತು ಆಡೋಕೆ ಬರದೆ ಇರೋ ಒಬ್ಬ ವ್ಯಕ್ತಿಯಾಗಿ ಕಾಣಿಸಿಕೊಂಡ್ರು. ಈ ಒಂದು ವಿಶೇಷ ಪಾತ್ರದ ಮೂಲಕ ಈಗಲೂ ಕಾಡೋ ವಿಷ್ಣುವರ್ಧನ್ ನಮ್ಮ ಮನಸ್ಸಿನಲ್ಲಿ ಇನ್ನೂ ಹಾಗೆ ಇದ್ದಾರೆ.

ವಿಷ್ಣುವರ್ಧನ್ ಅಭಿನಯದ ಬಂಧನ ಎಲ್ಲ ಕಾಲಕ್ಕೂ ಸೂಪರ್ ಹಿಟ್
ವಿಷ್ಣುವರ್ಧನ್ ಅವರ ಈ ಬಂಧನ ಕೂಡ ಒಂದು ವಿಶೇಷ ಚಿತ್ರವೇ ಆಗಿದೆ. ಪ್ರೀತಿ-ಪ್ರೇಮ, ಗಂಡ-ಹೆಂಡ್ತಿ ಹೀಗೆ ಗಟ್ಟಿ ಸಂಬಂಧದ ಕಥೆ ಹೇಳೋ ಈ ಸಿನಿಮಾ, ನಿಜಕ್ಕೂ ಒಂದು ಅದ್ಭುತ ಚಿತ್ರವೇ ಆಗಿತ್ತು.

ಇದನ್ನೂ ಓದಿ: Actor Dhananjay: ಡಾಲಿ ಧನಂಜಯ್ ಮದುವೆಯಾಗೋ ಹುಡುಗಿ ಹೀಗಿರಬೇಕಂತೆ!

ವಿಷ್ಣುವರ್ಧನ್ ಅವರಿಗೆ ಹೇಳಿ ಮಾಡಿಸಿದ ಸಿನಿಮಾ ಇದಾಗಿತ್ತು. ವಿಷ್ಣುವರ್ಧನ್ ಅವರ ಆಪ್ತಮಿತ್ರ ಚಿತ್ರವನ್ನ ಯಾರು ಮರೆಯೋಕೆ ಸಾಧ್ಯ ಹೇಳಿ, ವಿಷ್ಣು ಈ ಒಂದೇ ಒಂದು ಚಿತ್ರದಲ್ಲಿ ಡಬಲ್ ರೋಲ್ ಮಾಡಿಯೇ ಇಡೀ ಕನ್ನಡ ನಾಡಿನ ಸಿನಿಪ್ರೇಮಿಗಳಲ್ಲಿ ಹೊಸ ಸಂಚಲನವನ್ನೇ ಮೂಡಿಸಿಬಿಟ್ಟರು.

ಅಂತಹ ವಿಷ್ಣುವರ್ಧನ್ ಅವರ ಜನ್ಮ ದಿನಕ್ಕೆ ಅವರ ಸಿನಿಮಾಗಳನ್ನ ನೆನಪಿಸಿಕೊಳ್ಳೋದೇ ಒಂದು ಖುಷಿ. ಆ ಖುಷಿಯಲ್ಲಿ ಅವರ ಬಗ್ಗೆ ಹೇಳೋದೂ ಕೂಡ ಇನ್ನೊಂದು ಖುಷಿ ಅಂತಲೇ ಹೇಳಬಹುದು.
First published: