Shivaji Surathkal 2: ರಮೇಶ್ ಅರವಿಂದ್ ಜನ್ಮದಿನದಂದೇ ಟೀಸರ್​​ ರಿಲೀಸ್​, ಶಿವಾಜಿ ಸುರತ್ಕಲ್ ಇಲ್ಲಿ ವಿಲನ್ನಾ? ಹೀರೋನಾ?

ಶಿವಾಜಿ ಸುರತ್ಕಲ್-2 ಸಿನಿಮಾದಲ್ಲಿ ರಮೇಶ್ ಅರವಿಂದ್ ಅವರು ಡಬಲ್ ರೋಲ್ ಮಾಡುತ್ತಿದ್ದಾರೆಯೇ ? ಈ ಚಿತ್ರದಲ್ಲಿ ಇವರು ಖಳನಾಯಕರೇ ? ಹೀಗೆ ನಿಮಗೆ ಅನಿಸೋದು ಗ್ಯಾರಂಟಿ. ಈ ಪ್ರಶ್ನೆಯನ್ನ ಹುಟ್ಟುಹಾಕೋ ಕೆಲಸವನ್ನ ಈಗ ಬಿಟ್ಟಿರೋ ಟೀಸರ್ ಮಾಡುತ್ತದೆ.

ಶಿವಾಜಿ ಸುರತ್ಕಲ್-2 ಸಿನಿಮಾ ಟೀಸರ್ ರಿಲೀಸ್

ಶಿವಾಜಿ ಸುರತ್ಕಲ್-2 ಸಿನಿಮಾ ಟೀಸರ್ ರಿಲೀಸ್

  • Share this:
ಕನ್ನಡದ ಶಿವಾಜಿ ಸುರತ್ಕಲ್ (Shivaji Surathkal) ಸಿನಿಮಾ ಭಾರೀ ಕುತೂಹಲ ಹುಟ್ಟಿಸಿದ ಸಿನಿಮಾ. ಈ ಚಿತ್ರ ಟಿವಿಯಲ್ಲಿ ಪ್ರಸಾರ ಆದ್ರೆ, ಈಗಲೂ ಅಷ್ಟೇ ಕುತೂಹಲದಿಂದಲೇ ಜನ ಚಿತ್ರ ನೋಡ್ತಾರೆ. ಅಂತಹ ಈ ಸಿನಿಮಾದ ಪಾರ್ಟ್-2 ಚಿತ್ರದ ಟೀಸರ್ (Teaser Release )ರಿಲೀಸ್ ಆಗಿದೆ. ಇದರಲ್ಲಿ ಒಂದಷ್ಟು ಇಂಟ್ರಸ್ಟಿಂಗ್ ಪ್ಯಾಕ್ಟ್ ಕೂಡ ಇವೆ. ಶಿವಾಜಿ ಪಾತ್ರಧಾರಿ ರಮೇಶ್ ಅರವಿಂದ್
(Actor Ramesh Arvind) ಅವ್ರು ಈ ಸಲ ಈ ಚಿತ್ರದಲ್ಲಿ ಡಬಲ್ ರೋಲ್ ಮಾಡುತ್ತಿದ್ದಾರೇಯೇ ? ಈ ಸಿನಿಮಾದಲ್ಲಿ ನಿಜಕ್ಕೂ ಅವರು ಹೀರೋನಾ ? ಇಲ್ಲವೇ ವಿಲ್ಲನ್ನಾ ? ಈ ಎಲ್ಲ ಪ್ರಶ್ನೆಗಳನ್ನ ಈಗ ಚಿತ್ರದ ಟೀಸರ್ ಹುಟ್ಟುಹಾಕುತ್ತಿದೆ.


ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸುರತ್ಕಲ್-2 ಸಿನಿಮಾ ಬಹುತೇಕ ರೆಡಿ ಆಗಿದೆ. ಇದೇ ವೇಳೆ ರಮೇಶ್ ಅರವಿಂದ್ ಅವರ ಜನ್ಮದಿನಕ್ಕೆ ಸಿನಿಮಾ ತಂಡ ಒಂದು ವಿಶೇಷ ಟೀಸರ್ ರಿಲೀಸ್ ಪ್ಲಾನ್ ಮಾಡಿತ್ತು. ಅದರಂತೆ ಸೆಪ್ಟೆಂಬರ್-10 ರಂದು 10 ಗಂಟೆ 1 ನಿಮಿಷಕ್ಕೆ ಸಿನಿಮಾ ಟೀಸರ್ ರಿಲೀಸ್ ಆಗಿದೆ. ಈ ಟೀಸರ್ ನಲ್ಲಿ ನಾಯಕ ನಟ ರಮೇಶ್ ಅರವಿಂದ್ ಅವರ ಪಾತ್ರದ ಬಗ್ಗೆ ಒಂದಷ್ಟು ಇಂಟ್ರಸ್ಟಿಂಗ್ ವಿಷಯಗಳೂ ರಿವೀಲ್ ಆಗಿವೆ. ಅದನ್ನ ನೋಡಿದಾಗ ಸಹಜವಾಗಿಯೇ ಪ್ರಶ್ನೆಗಳೂ ಹುಟ್ಟುಕೊಳ್ಳುತ್ತವೆ.

ಶಿವಾಜಿ ಸುರತ್ಕಲ್-2 ದಲ್ಲಿ ರಮೇಶ್ ಅರವಿಂದ್ ಖಳನಾಯಕರೇ
ಶಿವಾಜಿ ಸುರತ್ಕಲ್-2 ಸಿನಿಮಾದಲ್ಲಿ ರಮೇಶ್ ಅವರಿಂದ್ ಅವರು ಡಬಲ್ ರೋಲ್ ಮಾಡುತ್ತಿದ್ದಾರೆಯೇ ? ಈ ಚಿತ್ರದಲ್ಲಿ ಇವರು ಖಳನಾಯಕರೇ ? ಹೀಗೆ ನಿಮಗೆ ಅನಿಸೋದು ಗ್ಯಾರಂಟಿ. ಈ ಪ್ರಶ್ನೆಯನ್ನ ಹುಟ್ಟುಹಾಕೋ ಕೆಲಸವನ್ನ ಈಗ ಬಿಟ್ಟಿರೋ ಟೀಸರ್ ಮಾಡುತ್ತದೆ. ಇದರ ಸುತ್ತ ಇನ್ನೂ ಒಂದಷ್ಟು ವಿಷಯ ಇದೆ. ಅದನ್ನ ಚಿತ್ರದ ನಿರ್ದೇಶಕರಾದ ಆಕಾಶ್ ಶ್ರೀವತ್ಸ ರಿವೀಲ್ ಮಾಡಿದ್ದಾರೆ.

ಶಿವಾಜಿ ಸುರತ್ಕಲ್-2 ಟೀಸರ್​ನ ಅಸಲಿ ಕಾನ್ಸೆಪ್ಟ್ ಏನು ?
ಶಿವಾಜಿ ಸುರತ್ಕಲ್-2 ಚಿತ್ರದಲ್ಲಿ ಅನೇಕ ವಿಷಯಗಳಿವೆ. ಅವುಗಳನ್ನ ನಿರ್ದೇಶಕರು ಅಷ್ಟೇ ವಿಶೇಷವಾಗಿಯೇ ಹೇಳುತ್ತಿದ್ದಾರೆ. ಪ್ರತಿ ಟೀಸರ್,ಪ್ರತಿ ಪೋಸ್ಟರ್, ಹೀಗೆ ಎಲ್ಲದರಲ್ಲೂ ಒಂದೊಂದು ಕಾನ್ಸೆಪ್ಟ್ ಮಾಡಿಕೊಂಡೇ ರಿಲೀಸ್ ಮಾಡುತ್ತಿದ್ದಾರೆ. ರಮೇಶ್ ಅರವಿಂದ್ ಅವರ ಜನ್ಮ ದಿನಕ್ಕೇನೆ ಸಿನಿಮಾ ಟೀಸರ್ ಮಾಡಲಾಗಿದೆ. ಇದರಲ್ಲಿ ರಮೇಶ್ ಅರವಿಂದ್ ಪಾತ್ರದ ವಿಶೇಷತೆಗಳನ್ನ ರಿವೀಲ್ ಮಾಡಲಾಗಿದೆ.

Shivaji Surathkal-2 Cinema Released
ಶಿವಾಜಿ ಸುರತ್ಕಲ್-2 ಸಿನಿಮಾ ಟೀಸರ್ ರಿಲೀಸ್


ಶಿವಾಜಿ ಸುರತ್ಕಲ್ ಪಾತ್ರದ ಆತ್ಮಸಾಕ್ಷಿ ಚಿತ್ರಣವೇ ಈ ಟೀಸರ್
ಶಿವಾಜಿ ಸುರತ್ಕಲ್-2 ಸಿನಿಮಾದಲ್ಲಿ ರಮೇಶ್ ಅರವಿಂದ್ ಅವ್ರು 131 ನೇ ಕೇಸ್ ಬೆನ್ನಟ್ಟಿ ಹೊರಟ್ಟಿದ್ದಾರೆ. ಈ ಕೇಸ್ ನಲ್ಲಿ ಏನೆಲ್ಲ ಆಗುತ್ತದೆ ಅನ್ನೋದು ಚಿತ್ರದಲ್ಲಿ ರಿವೀಲ್ ಆಗುತ್ತದೆ. ಆದರೆ ಆ ಟೈಮ್​ ನಲ್ಲಿಯೇ ಶಿವಾಜಿಯನ್ನ ಆತ್ಮಸಾಕ್ಷಿ ಕಾಡುತ್ತದೆ. ಅದನ್ನೇ ಈ ಟೀಸರ್ ನಲ್ಲಿ ಡಬಲ್ ರೋಲ್ ನಲ್ಲಿ ತೋರಿಸೋ ಕೆಲಸ ಆಗಿದೆ ಅಂತಲೂ ಹೇಳಬಹುದು.

ಶಿವಾಜಿ ಸುರತ್ಕಲ್-2 ಸಿನಿಮಾದಲ್ಲಿ ಏನು ವಿಶೇಷ
ಶಿವಾಜಿ ಸುರತ್ಕಲ್-2 ಸಿನಿಮಾದಲ್ಲಿ ಈ ಸಲ ನಾಜರ್ ಅಭಿನಯಿಸಿದ್ದಾರೆ. ಮೇಘನಾ ಗಾಂವ್ಕರ್ ಪೊಲೀಸ್ ಆಫೀಸರ್ ಆಗಿಯೇ ಕಾಣಿಸಿಕೊಂಡಿದ್ದಾರೆ. ರಾಧಿಕಾ ಚೇತನ್ ರೋಲ್ ಇಲ್ಲೂ ವಾಪಸ್ ಬರುತ್ತದೆ. ಶಿವಾಜಿಯ ಮಗಳ ಕ್ಯಾರೆಕ್ಟರ್ ಕೂಡ ಈ ಚಿತ್ರದಲ್ಲಿ ಇಂಟ್ರಡ್ಯೂಸ್ ಆಗುತ್ತಿದೆ. ಹೀಗೆ ಹಲವು ವಿಶೇಷತೆಗಳ ಈ ಚಿತ್ರದ ಕೆಲಸ ಇನ್ನೂ ನಡೀತಾ ಇದೆ. ಚಿತ್ರದ ಚಿತ್ರೀಕರಣವನ್ನ ನಿರ್ದೇಶಕ ಆಕಾಶ್ ಶ್ರೀವತ್ಸ ಬಹುತೇಕ ಕಂಪ್ಲೀಟ್ ಮಾಡಿದ್ದಾರೆ. ಮುಂದಿನ ವರ್ಷ  ಸಿನಿಮಾ ರಿಲೀಸ್ ಪ್ಲಾನ್ ಕೂಡ ಆಗಿದೆ.
First published: