• Home
  • »
  • News
  • »
  • entertainment
  • »
  • Mohan Shankar Birthday: ಕನ್ನಡದ ಮಲ್ಟಿಟ್ಯಾಲೆಂಟೆಡ್ ಮೋಹನ್ ಶಂಕರ್​ಗೆ ಹ್ಯಾಪಿ ಬರ್ತ್​ಡೇ!

Mohan Shankar Birthday: ಕನ್ನಡದ ಮಲ್ಟಿಟ್ಯಾಲೆಂಟೆಡ್ ಮೋಹನ್ ಶಂಕರ್​ಗೆ ಹ್ಯಾಪಿ ಬರ್ತ್​ಡೇ!

ಇವತ್ತು ನಟ-ನಿರ್ದೇಶಕ ಮೋಹನ್ ಶಂಕರ್ ಹುಟ್ಟುಹಬ್ಬ

ಇವತ್ತು ನಟ-ನಿರ್ದೇಶಕ ಮೋಹನ್ ಶಂಕರ್ ಹುಟ್ಟುಹಬ್ಬ

ಕನ್ನಡದ 20 ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದಾರೆ. ಚಿತ್ರಕಥೆಯನ್ನೂ ಬರೆದುಕೊಟ್ಟಿದ್ದಾರೆ. ಇಷ್ಟೆಲ್ಲ ಮಾಡುತ್ತಲೇ ಬಿಗ್ ಬಾಸ್ ಮನೆಗೂ ಹೋಗಿದ್ದರು. ಬಿಗ್ ಬಾಸ್ ಸೀಸನ್-4 ರಲ್ಲಿ ಮೋಹನ್ ದೊಡ್ಮನೆಗೆ ಪ್ರವೇಶ ಮಾಡಿದ್ದರು. ಐವರು ಫೈನಲಿಸ್ಟ್​ಗಳಲ್ಲಿ ಮೋಹನ್ ಕೂಡ ಇದ್ದರು.

ಮುಂದೆ ಓದಿ ...
  • Share this:

ಕನ್ನಡದ ಬಹು ಪ್ರತಿಭಾವಂತ ನಟ-ನಿರ್ದೇಶಕ-ರೈಟರ್ ಮೋಹನ್ (Mohan Shankar) ಅವರಿಗೆ ಇವತ್ತು ಜನ್ಮ ದಿನ. 49 ನೇ ಜನ್ಮ ದಿನ ಆಚರಿಸಿಕೊಳ್ತಿರೋ ಮೋಹನ್, ನಟರು ಹೌದು, ನಿರ್ದೇಶಕರು (Director) ಹೌದು, ಚಿತ್ರಕಥೆ ಬರೆದು ಗೊತ್ತಿದೆ. ಸಿನಿಮಾಗಳಿಗೆ ಕತೆಯಗಳನ್ನೂ ಬರೆದಿರೋದು ವಿಶೇಷ. ಮೋಹನ್ ಅವರ ಪೂರ್ಣ ಹೆಸರು ಮೋಹನ್ ಶಂಕರ್ ಅಂತಲೇ ಇದೆ. ಆದರೆ ಕನ್ನಡ ಇಂಡಸ್ಟ್ರೀಯಲ್ಲಿ ಮೋಹನ್ ಅಂತಲೇ ಚಿರಪರಿಚಿತರು. ಬೆಳ್ಳಿ ಪರದೆ ಮೇಲೆ ಹಾಸ್ಯಪಾತ್ರದ ಮೂಲಕವೂ ಜನರನ್ನ ಸೆಳೆದ ಮೋಹನ್ ಅವ್ರು, ಪುಟ್ಟ ಪರದೆ (Small Screen) ಮೇಲೂ ಖಡಕ್ ಆಗಿಯೇ ವಿಭಿನ್ನವಾಗಿಯೇ ಕಾಣಿಸಿಕೊಂಡಿದ್ದಾರೆ. ಪುಟ್ಟ ಪರದೆ-ಹಿರಿ ಪರದೆ ಅಂತಲೇ ಎರಡಲ್ಲೂ ಮಿಂಚುತ್ತಿದ್ದಾರೆ.


ಕ್ರೇಜಿ ಸ್ಟಾರ್ ರವಿಚಂದ್ರನ್ ಚಿತ್ರಗಳಲ್ಲಿ ಮೋಹನ್ ಅಭಿನಯ ಇದ್ದೇ ಇರುತ್ತದೆ. ಮಲ್ಲ ಸಿನಿಮಾದಲ್ಲೂ ಮೋಹನ್ ಅಭಿನಯಿಸಿದ್ದಾರೆ. ಮೋಹನ್ ಅವರ ಸಿನಿಮಾ ಪಯಣದಲ್ಲಿ ಬಂದ ಸಿನಿಮಾನಗಳಲ್ಲಿ ಹಾಸ್ಯ ಸ್ಪರ್ಶದ ಮತ್ತು ಹಾಸ್ಯಮಯ ಕಂಟೆಂಟ್ ಇರೋ ಚಿತ್ರಗಳೇ ಹೆಚ್ಚಿವೆ.


ಮಲ್ಟಿಟ್ಯಾಲೆಂಡೆಟ್ ಮೋಹನ್ ಅವರಿಗೆ ಇವತ್ತು ಹುಟ್ಟು ಹಬ್ಬ
ಮೋಹನ್ ಸಿನಿಮಾರಂಗಕ್ಕೆ 2000 ರಲ್ಲಿಯೇ ಕಾಲಿಟ್ಟರು. ಯಾರಿಗೆ ಸಾಲುತ್ತೆ ಸಂಬಳ ಸಿನಿಮಾ ಮೂಲಕವೇ ಬೆಳ್ಳಿ ಪರದೆಗೆ ಕಾಲಿಟ್ಟರು. ಇದಾದ ಬಳಿಕ ಕುರಿಗಳು ಸಿರೀಸ್ ಚಿತ್ರಗಳಲ್ಲಿ ಮೋಹನ್ ಎಲ್ಲರ ಗಮನ ಸೆಳೆದರು.


Today Kannada Actor-Director Mohan Shankar Birthday
ಕನ್ನಡದ ನಟ-ನಿರ್ದೇಶಕ ಮೋಹನ್ ಶಂಕರ್


ಕುರಿಗಳು ಸಾರ್ ಕುರಿಗಳು, ಕೋತಿಗಳು ಸಾರ್ ಕೋತಿಗಳು ಚಿತ್ರದಲ್ಲಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಜನರನ್ನ ರಂಜಿಸಿದರು. ತಮ್ಮ ಹಾಸ್ಯಮಯ ಮ್ಯಾನರಿಸಂನಿಂದಲೂ ಹಾಸ್ಯ ಪ್ರಿಯರ ಹೃದಯ ಗೆದ್ದರು.


ಮೋಹನ್ ನಟರು ಹೌದು, ನಿರ್ದೇಶಕರೂ ಹೌದು
ಅಭಿನಯದ ಜೊತೆಗೆ ಮೋಹನ್ ಅವರು ಒಬ್ಬ ನಿರ್ದೇಶಕರೂ ಹೌದು. ಕೃಷ್ಣಾ ನೀ ಲೇಟಾಗಿ ಬಾರೋ ಚಿತ್ರದ ಮೂಲಕವೇ ಮೋಹನ್ ನಿರ್ದೇಶನ ಆರಂಭಿಸಿದರು. ಈ ಚಿತ್ರದಲ್ಲಿ ಸ್ವತಃ ಮೋಹನ್ ನಾಯಕರಾಗಿದ್ದರು.


ಇದನ್ನೂ ಓದಿ:Guru Shishyaru Review: ಗುರು ಶಿಷ್ಯರು ಸಿನಿಮಾ ಹೇಗಿದೆ? ಇಲ್ಲಿದೆ ನೋಡಿ ರಿವ್ಯೂ


ಈ ಮೊದಲೇ ಹೇಳಿದಂತೆ ಮೋಹನ್ ಕಥೆಯನ್ನೂ ಬರೆದಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಲವ-ಕುಶ ಚಿತ್ರಕ್ಕೆ ಕಥೆಯನ್ನೂ ಬರೆದುಕೊಟ್ಟಿದ್ದರು.


ನಟ ಮೋಹನ್ ಸಂಭಾಷಣೆಗಾರ-ಚಿತ್ರಕಥೆಗಾರ
ಅದೇ ಮೋಹನ್, ಕನ್ನಡದ 20 ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದಾರೆ. ಚಿತ್ರಕಥೆಯನ್ನೂ ಬರೆದುಕೊಟ್ಟಿದ್ದಾರೆ. ಇಷ್ಟೆಲ್ಲ ಮಾಡುತ್ತಲೇ ಪುಟ್ಟ ಪರದೆಯ ಬಿಗ್ ಬಾಸ್ ಮನೆಗೂ ಹೋಗಿದ್ದರು. ಬಿಗ್ ಬಾಸ್ ಸೀಸನ್-4 ರಲ್ಲಿ ಮೋಹನ್ ದೊಡ್ಮನೆಗೆ ಪ್ರವೇಶ ಮಾಡಿದ್ದರು. ಐವರು ಫೈನಲಿಸ್ಟ್​ಗಳಲ್ಲಿ ಮೋಹನ್ ಕೂಡ ಇದ್ದರು.


Today Kannada Actor-Director Mohan Shankar Birthday
ನಟ-ನಿರ್ದೇಶಕ ಮೋಹನ್ ಶಂಕರ್


ಮೋಹನ್ ಶಂಕರ್ ಇಲ್ಲಿವರೆಗೂ ಒಟ್ಟು 6 ಚಿತ್ರಗಳಿಗೆ ಚಿತ್ರಕಥೆ ಬರೆದಿದ್ದಾರೆ. ಬರೋಬ್ಬರಿ 6 ಸಿನಿಮಾಗಳನ್ನೂ ಡೈರೆಕ್ಟ್ ಮಾಡಿದ್ದಾರೆ. ಹೀಗೆ ಕಥೆ-ಚಿತ್ರಕಥೆ ಅಂತಲೇ ಮೋಹನ್ ಬರವಣಿಗೆಯಲ್ಲೂ ತಮ್ಮನ್ನ ಗುರುತಿಸಿಕೊಂಡಿದ್ದಾರೆ.


ಮೋಹನ್ ಕಿರುತೆರೆಯ ಪಯಣ ಕೂಡ ಯಶಸ್ವಿಯಾಗಿಯೂ ಇದೆ. ಹಾಗೆ ಇಲ್ಲಿ ಆರಂಭಿಸಿದ ಪಯಣ ಕಥೆಗಾರ ಸೀರಿಯಲ್ ಮೂಲಕವೇ ಆಗಿದೆ. ಈ ಸೀರಿಯಲ್ ಬಳಿಕ ಸಿಲ್ಲಿ-ಲಲ್ಲಿ ಹಾಸ್ಯಮಯ ಸೀರಿಯಲ್​ ನಲ್ಲೂ ಮೋಹನ್ ಅಭಿನಯಿಸಿದ್ದಾರೆ.


ನಾಗಿಣಿ-2 ಮೂಲಕ ಮತ್ತೆ ಪುಟ್ಟ ಪರದೆಗೆ ಮೋಹನ್ ಎಂಟ್ರಿ
ನಾಗಿಣಿ-2 ಸೀರಿಯಲ್ ನಲ್ಲೂ ಖಡಕ್ ವಿಲನ್ ರೀತಿಯ ಪಾತ್ರದಲ್ಲಿಯೇ ಮೋಹನ್ ಅಭಿನಯಿಸಿ ಗಮನ ಸೆಳೆದಿದ್ದಾರೆ. ಹೀಗೆ ಮಲ್ಟಿಟ್ಯಾಲೆಂಟೆಡ್ ಮೋಹನ್ ಅವ್ರು ಇವತ್ತು ಜನ್ಮ ದಿನದ ಸಂಭ್ರಮದಲ್ಲಿಯೇ ಇದ್ದಾರೆ.


ಇದನ್ನೂ ಓದಿ: Silk Smitha: Silk Smitha: Silk Smitha: 36ನೇ ವಯಸ್ಸಿಗೆ ನಿಗೂಢ ಸಾವು,​ ಮಾದಕ ಚೆಲುವೆ ಸಿಲ್ಕ್‌ ಸ್ಮಿತಾ ಕುರಿತಾದ ಕೆಲ ಇಂಟರೆಸ್ಟಿಂಗ್ ವಿಚಾರ!


ಸೆಪ್ಟೆಂಬರ್ 24, 1973 ರಂದು ಹುಟ್ಟಿದ ಮೋಹನ್ ಅವರಿಗೆ ಇವತ್ತು ಹುಟ್ಟಿದ ಹಬ್ಬ. 49 ನೇ ಜನ್ಮ ದಿನ ಆಚರಿಸಿಕೊಳ್ತಿರೋ ಮೋಹನ್ ಅವರಿಗೆ ನಮ್ಮ ಕಡೆಯಿಂದಲೂ ಹುಟ್ಟುಹಬ್ಬದ ಶುಭಾಶಯಗಳು.

First published: