ಬಾಲಿವುಡ್​ ಲೆಜೆಂಡ್​ ಆರ್​ ಡಿ ಬರ್ಮನ್​ ಬಗ್ಗೆ ನಿಮಗೆ ತಿಳಿಯದ ಕೆಲ ಕುತೂಹಲಕಾರಿ ಸಂಗತಿಗಳು!

Anitha E | news18
Updated:June 27, 2018, 3:15 PM IST
ಬಾಲಿವುಡ್​ ಲೆಜೆಂಡ್​ ಆರ್​ ಡಿ ಬರ್ಮನ್​ ಬಗ್ಗೆ ನಿಮಗೆ ತಿಳಿಯದ ಕೆಲ ಕುತೂಹಲಕಾರಿ ಸಂಗತಿಗಳು!
Anitha E | news18
Updated: June 27, 2018, 3:15 PM IST
ನ್ಯೂಸ್​ 18 ಕನ್ನಡ 

ಬಾಲಿವುಡ್​ನ ಸ್ವರ ಮಾಂತ್ರಿಕ ಆರ್​.ಡಿ. ಬರ್ಮನ್​ ಯಾರಿಗೆ ಗೊತ್ತಿಲ್ಲ ಹೇಳಿ. ಸಂಗೀತ ತಿಳಿಯದವರಿಗೂ ಸಹ ಬರ್ಮನ್​ ಅವರ ಹೆಸರು ಹೇಳುತ್ತಲೇ ಅವರ ಕಣ್ಣುಗಳು ಅರಳುತ್ತವೆ. ಅವರ ಹೆಸರು ಬಂದಾಗಲೆಲ್ಲ ಬರೆಯುವವರಿಗೂ ಮತ್ತೆ ಮತ್ತೆ ಬರೆಯಬೇಕೆನಿಸುತ್ತದೆ. ಅಷ್ಟರ ಮಟ್ಟಿಗೆ ಸಂಗೀತದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ.

ಇಂದು ಆರ್​.ಡಿ. ಬರ್ಮನ್​ ಅವರ ಹುಟ್ಟುಹಬ್ಬ. ಅವರ ಬಗ್ಗೆ ಕುತೂಹಕಾರಿ ಅಂಶಗಳನ್ನು ನಿಮಗೆ ತಿಳಿಸಲಿದ್ದೇವೆ.

ಒಂದು ವರ್ಷದ ಅವಧಿಯಲ್ಲಿ ಸುಮಾರು 19 ಸಿನಿಮಾಗಳಿಗೆ ಸಂಗೀತ ನೀಡಿದ್ದ ಸಂಗೀತ ನಿರ್ದೇಶ ಎಂದರೆ ಅದು ಆರ್​.ಡಿ ಬರ್ಮನ್​. ಇದು ನಡೆದದ್ದು 1972ರಲ್ಲಿ.

ಮೊದಲ ಬಾರಿಗೆ ಬಾಲಿವುಡ್​ನಲ್ಲಿ ಬ್ರೆಜಿಲ್​ನ ಬೊಸ್ಸಾ ನೋವಾ ಸಂಗೀತ ಉಪಕರಣವನ್ನು ಪರಿಚಯಿಸಿದ ಮೊದಲ ಸಂಗೀತ ನಿರ್ದೇಶಕ.

ಒಮ್ಮೆ ಆರ್​ ಡಿ ಬರ್ಮನ್ ಅವರಿಗೆ ಮಳೆ ಹನಿ ತೊಟ್ಟಿಡುವ ಶಬ್ದದ ಅಗತ್ಯವಿತ್ತು. ಆದರೆ ಅಂದು ಸಂಗೀತಗಾರರು ಮುಷ್ಕರದಲ್ಲದ್ದ ಕಾರಣ, ಖುದ್ದು ಬರ್ಮನ್​ ಅವರೇ ತಮ್ ಮನೆಯ ಬಾಲ್ಕನಿಯಲ್ಲಿ ಮಳೆ ಹನಿ ತೊಟ್ಟಿಡುವುದನ್ನು ರೆರ್ಕಾಡ್​ ಮಾಡುತ್ತಾ ಕುಳಿತ್ತಿದ್ದರಂತೆ.

ಪಂಚಂದಾ ಅವರಿಗೆ ನೈಸರ್ಗಿಕವಾಗಿ ಸಿಗುವ ವಸ್ತುಗಳಿಂದಲೇ ಸಂಗೀತವನ್ನು ತೆಗೆಯುವ ಪ್ರತಿಭೆ ಇತ್ತು. ಇದಕ್ಕೆ ಉದಾಹರಣೆ 'ಯಾದೋಂಕಿ ಬಾರಾತ್​' ಸಿನಿಮಾದ 'ಚುರಾಲಿಯಾ ಹೈ ತುಮ್​ ನೆ ಜೋ......' ಹಾಡಿನಲ್ಲಿ ಗಾಜಿನ ಗ್ಲಾಸ್​ಗಳನ್ನು ತಾಗಿಸಿದಾಗ ಬರುವ ಶಬ್ದವನ್ನು ಸಂಗೀತವನ್ನಾಗಿ ಬಳಸಿಕೊಂಡಿದ್ದಾರೆ.
Loading...1975ರಲ್ಲಿ ತೆರೆಕಂಡ 'ಖುಷ್ಬೂ' ಸಿನಿಮಾದ 'ಓ ಮಾಂಜಿ ರೇ....'  ಹಾಡಿನಲ್ಲಿ ಸೋಡಾ ತುಂಬಿರುವ ಬಾಟಲಿಯಿಂದ ಫೂಕ್​ ಶಬ್ದವನ್ನು ಬಳಸಿಕೊಂಡಿದ್ದಾರೆ.


'1942: ಲವ್​ ಸ್ಟೋರಿ' ಸಿನಿಮಾಗಾಗಿ ಬರ್ಮನ್​ ಅವರಿಗೆ ಉತ್ತಮ ಸಂಗೀತ ನಿರ್ದೇಶಕ  ಫಿಲ್ಮ್​ಫೇರ್​ ಪ್ರಶಸ್ತಿ ಬಂದಿತ್ತಾದರೂ , ಅದು ಅವರ ಸಾವಿನ ನಂತರ.

ನಟ ರಾಜೇಶ್​ ಖನ್ನಾ, ಗಾಯಕ ಕಿಶೋರ್​ ಕುಮಾರ್​ ಹಾಗೂ ಆರ್​.ಡಿ. ಬರ್ಮನ್​ ಅವರು ಒಟ್ಟಾಗಿ 32 ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.

1956ರಲ್ಲಿ ತೆರೆಕಂಡ 'ಫಂಟೂಸ್'​ ಸಿನಿಮಾಗಾಗಿ 'ಯೇ ಮೇರೆ ಟೋಪಿ ಪಲಟ್​ ಕೆ ಆ' ಹಾಡನ್ನು ಪಂಚಂದಾ ಅವರು 9ನೇ ತರಗತಿಯಲ್ಲಿರುವಾಗಲೇ ಬರೆದಿದ್ದರು.

18 ಬಾರಿ ಉತ್ತಮ ಸಂಗಿತ ನಿರ್ದೇಶಕನ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದ ಇವರು 3 ಫಿಲ್ಮ್​ ಫೇರ್​ ಪ್ರಶಸ್ತಿ ಪಡೆದಿದ್ದಾರೆ.

ಬರ್ಮನ್​ ಅವರನ್ನು ಅವರ ಅಜ್ಜಿ  ಪ್ರೀತಿಯಿಂದ ತಬ್ಲು ಎಂದು ಕರೆಯುತ್ತಿದ್ದರು. ಆದರೆ ಅವರು ಐದು ವಿಧವಾಗಿ ಅಳುತ್ತಿದ್ದ ಕಾರಣ ಅವರಿಗೆ ಬಾಲ್ಯದಲ್ಲೇ ಪಂಚಂ ಎಂಬ ಅಡ್ಡ ಹೆಸರು ಬಂದಿತ್ತು ಎನ್ನಲಾಗುತ್ತದೆ.

ಮೌತ್ ಆರ್ಗನ್​ ನುಡಿಸುವುದನ್ನು ಅಭ್ಯಾಸ ಮಾಡಿದ್ದ ಇವರು, 'ಯೆ ಅಪ್ನಾ ದಿಲ್​ ತೋ ಆವಾರ...' ಹಾಡಿಗೆ ತಾವೇ ಅದನ್ನು ನುಡಿಸಿದ್ದರು.

ಒಮ್ಮೆ ಹಾಡಿನ ಸಂಯೋಜನೆ ಮಾಡುವಾಗ ಗಿಟಾರ್​ ನುಡಿಸುವ ಅಮೃರ್​ರಾವ್​ ಎಂಬುವರ ಶರ್ಟ್​ ತೆಗೆಸಿದ್ದರಂತೆ ಪಂಚಂದಾ. ಕಾರಣ ಅವರಿಗೆ ಯಾವುದೋ ಒಂದು ರಾಗ ಬಾರಿಸಲು ಅವರ ಬೆನ್ನು ಬೇಕಾದ ಕಾರಣದಿಂದ ಎಲ್ಲರ ಎದುರು ಅವರ ಶರ್ಟ್​ ತೆಗೆಸಲಾಗಿತ್ತು.

'ಶೋಲೆ' ಸಿನಿಮಾದ 'ಮೆಹಬೂಬಾ ಓ ಮಹಬೂಬ ..'  ಹಾಡನ್ನು ಗಾಯಕ ಕಿಶೋರ್​ ಕುಮಾರ್​ ಹಾಡವುವವರಿದ್ದರು ಆದರೆ, ಅಂದು ಹಾಡಿನ ರೆರ್ಕಾಡಿಂಗ್​ಗೆ ಕಿಶೋರ್​ ಗೈರಾದ ಕಾರಣ ಬರ್ಮನ್​ ಅವರೇ ಹಾಡನನ್ಉ ಹಾಡಿ ರೆಕಾರ್ಡ್​ ಮಾಡಿದ್ದರು. ಆದರೆ ಈ ಹಾಡು ಸಿನಿಮಾದ ನಿರ್ದೇಶಕರಿಗೆ ತುಂಬಾ ಇಷ್ಟವಾದ ಕಾರಣ ಅದನ್ನೇ ಸಿನಿಮಾದಲ್ಲಿ ಬಳಸಿಕೊಳ್ಳಲಾಯಿತು.

First published:June 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...