• Home
  • »
  • News
  • »
  • entertainment
  • »
  • KGF Chapter 2 Release Date: ಇಂದು ಸಂಜೆ ರಿವೀಲ್​ ಆಗಲಿದೆ ಕೆಜಿಎಫ್​ ಚಾಪ್ಟರ್​ 2 ಸಿನಿಮಾದ ರಿಲೀಸ್​ ದಿನಾಂಕ

KGF Chapter 2 Release Date: ಇಂದು ಸಂಜೆ ರಿವೀಲ್​ ಆಗಲಿದೆ ಕೆಜಿಎಫ್​ ಚಾಪ್ಟರ್​ 2 ಸಿನಿಮಾದ ರಿಲೀಸ್​ ದಿನಾಂಕ

ಕೆಜಿಎಫ್​ ಚಾಪ್ಟರ್​ 2

ಕೆಜಿಎಫ್​ ಚಾಪ್ಟರ್​ 2

Yash: ಹೌದು, ಚಿತ್ರತಂಡ ಇನ್ನೇನು ಕೆಜಿಎಫ್​ ಚಾಪ್ಟರ್​ 2 ಸಿನಿಮಾದ ರಿಲೀಸ್ ದಿನಾಂಕದ ಬಗ್ಗೆ ಅಪ್ಡೇಟ್​ ಕೊಟ್ಟಿದೆ. ಕೆಲವೇ ಗಂಟೆಗಳ ಹಿಂದೆಯಷ್ಟೆ ಹೊಂಬಾಳೆ ಫಿಲಂಸ್​ ಟ್ವೀಟ್ ಮಾಡಿದ್ದು, ಸಿನಿಮಾದ ರಿಲೀಸ್​ ದಿನಾಂಕದ ಬಗ್ಗೆ ಮಾಹಿತಿ ನೀಡಿದೆ.

  • Share this:

ಒಂದು ಕಡೆ ಚಿತ್ರಮಂದಿರಗಳು ಮತ್ತೆ ಆರಂಭವಾಗಿವೆ, ಮತ್ತೊಂದು ಕಡೆ ಸಿನಿಮಾ ಶೂಟಿಂಗ್ ಸಹ ಶುರುವಾಗಿದೆ. ಇದರ ನಡುವೆ ದೊಡ್ಡ ದೊಡ್ಡ ಸ್ಟಾರ್ ಹಾಗೂ ಬ್ಯಾನರ್​ಗಳ ಚಿತ್ರತಂಡಗಳು ರಿಲೀಸ್​ ದಿನಾಂಕ ಪ್ರಕಟಿಸುತ್ತಿವೆ. ಇದರ ನಡುವೆಯೇ ಇತ್ತೀಚೆಗಷ್ಟೆ ಕೆಜಿಎಫ್​ ಚಾಪ್ಟರ್​ 2 ಸಿನಿಮಾದ ಟೀಸರ್​ ಸುದ್ದಿ ಹೊರ ಬಿದ್ದಿತ್ತು. ನಂತರ ಹೇಳಿದ ಸಮಯಕ್ಕಿಂತ ಮುಂಚಿತವಾಗಿ ರಿಲೀಸ್​ ಆದ ಕೆಜಿಎಫ್​ ಚಾಪ್ಟರ್​ 2 ಟೀಸರ್​ಗೆ ಊಹಿಸಿದಕ್ಕಿಂತ ಹೆಚ್ಚಾಗಿಯೇ ಪ್ರತಿಕ್ರಿಯೆ ಸಿಕ್ಕಿತ್ತು. ಇನ್ನು ಸಿನಿಮಾದ ಟೀಸರ್​ ಸಾಕಷ್ಟು ಹೊಸ ದಾಖಲೆಗಳನ್ನು ಬರೆದಿದ್ದು, ಈಗ ಪ್ರೇಕ್ಷಕರು ಚಿತ್ರದ ಟ್ರೇಲರ್​ ಹಾಗೂ ಸಿನಿಮಾದ ರಿಲೀಸ್ ದಿನಾಂಕದ ಪ್ರಕಟಣೆಗಾಗಿ ಕಾಯುತ್ತಿದ್ದಾರೆ. ಹೊಂಬಾಳೆ ಫಿಲಂಸ್​ ನಿರ್ಮಾಣದ ಹಾಗೂ ಸ್ಟಾರ್​ ನಿರ್ದೇಶಕ ಪ್ರಶಾಂತ್​ ನೀಲ್​ ನಿರ್ದೇಶನದ ಕೆಜಿಎಫ್​ ಚಾಪ್ಟರ್ 2 ಚಿತ್ರದ ಮೇಲೆ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಇಡೀ ಭಾರತೀಯ ಸಿನಿರಂಗದ ಕಣ್ಣಿದೆ. ಈ ಚಿತ್ರದ ಕುರಿತಾದ ಒಂದು ಸಣ್ಣ ಅಪ್ಡೇಟ್​ ಬಂದರೂ ಸಾಕು ಅದು ಈಗ ಟ್ರೆಂಡ್​ ಆಗುತ್ತಿದೆ. ಇದು ಕನ್ನಡ ಸಿನಿಮಾ ಕೆಜಿಎಫ್​ ಚಾಪ್ಟರ್​ನ ಹವಾ ಎನ್ನಬಹುದು. 


ರಾಕಿ ಬಾಯ್​ನ ಮಾನ್​ಸ್ಟರ್​ ಅವತಾರ ಹಾಗೂ ಬಾಲಿವುಡ್​ನ ಖಳ ನಾಯಕ ಅಧೀರನ ನಡುವೆ ನಡೆಯುವ ಕಾಳಗ ನೋಡಲು ಸಿನಿಪ್ರಿಯರು ಕಾತರರಾಗಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಕೆಜಿಎಫ್​ ಚಾಪ್ಟರ್​ 2 ಸಿನಿಮಾದ ರಿಲೀಸ್ ದಿನಾಂಕ ಕುರಿತಾಗಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಈಗ ಅವುಗಳಿಗೆ ಬ್ರೇಕ್​ ಹಾಕುವ ಸಮಯ ಸನಿಹವಾಗಿದೆ.


KGF chapter 2 teaser, Other Language actors Praised KGF, KGF chapter 2 teaser record, Yash starrer KGF chapter 2, ಕೆಜಿಎಫ್ ಚಾಪ್ಟರ್ 2 ಟೀಸರ್, ಕೆಜಿಎಫ್ ಟೀಸರ್ ಮೆಚ್ಚಿದ ಕಲಾವಿದರು, ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2, kgf chapter 2 teaser, KGFChapter2TeaserOnJan8, Yash birthday, kgf teaser on yash birthday, kgf release dare, ಕೆಜಿಎಫ್ ಚಾಪ್ಟರ್ 2 ಟೀಸರ್, ಕೆಜಿಎಫ್ ಬಿಡುಗಡೆ ದಿನಾಂಕ, ಯಶ್ ಹುಟ್ಟುಹಬ್ಬ, ಯಶ್ ಬರ್ತಡೇಗೆ ಕೆಜಿಎಫ್ ಟೀಸರ್Bollywood and Tollywood celebrities praised kgf chapter 2 teaser after watching ae
ಕೆಜಿಎಫ್​ ಚಾಪ್ಟರ್ 2 ಟೀಸರ್​


ಹೌದು, ಚಿತ್ರತಂಡ ಇನ್ನೇನು ಕೆಜಿಎಫ್​ ಚಾಪ್ಟರ್​ 2 ಸಿನಿಮಾದ ರಿಲೀಸ್ ದಿನಾಂಕದ ಬಗ್ಗೆ ಅಪ್ಡೇಟ್​ ಕೊಟ್ಟಿದೆ. ಕೆಲವೇ ಗಂಟೆಗಳ ಹಿಂದೆಯಷ್ಟೆ ಹೊಂಬಾಳೆ ಫಿಲಂಸ್​ ಟ್ವೀಟ್ ಮಾಡಿದ್ದು, ಸಿನಿಮಾದ ರಿಲೀಸ್​ ದಿನಾಂಕದ ಬಗ್ಗೆ ಮಾಹಿತಿ ನೀಡಿದೆ.ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ. ಇಂದು ಸಂಜೆ 6:32ಕ್ಕೆ ಕೆಜಿಎಫ್​ ಚಾಪ್ಟರ್ 3 ಸಿನಿಮಾದ ರಿಲೀಸ್​ ದಿನಾಂಕ ಪ್ರಕಟಿಸಲಾಗುವುದು ಎಂದು ಟ್ವೀಟ್​ ಮಾಡಿದ್ದಾರೆ. ಈ ವಿಷಯ ಕೇಳುತ್ತಿದ್ದಂತೆಯೇ ಯಶ್​ ಹಾಗೂ ಕೆಜಿಎಫ್​ ಅಭಿಮಾನಿಗಳು ಖುಷಿಯಿಂದ ಸಂಭ್ರಮಿಸುತ್ತಿದ್ದಾರೆ. ಜೊತೆಗೆ ಟ್ವಿಟರ್​ನಲ್ಲಿ #KGFChapter2 ಅನ್ನು ಟ್ರೆಂಡ್​ ಮಾಡುತ್ತಿದ್ದಾರೆ.


ಇದನ್ನೂ ಓದಿ: ರೆಡ್ ಕಾರ್ಪೆಟ್​ ಮೇಲೆ ಕಾಲಿಡುವ ಮುನ್ನ ಕಿತ್ತು ಬಂದಿತ್ತು ಪ್ರಿಯಾಂಕಾ ಚೋಪ್ರಾ ತೊಟ್ಟಿದ್ದ ಡ್ರೆಸ್​ನ ಜಿಪ್


ಈ ಹಿಂದೆ ಕೆಜಿಎಫ್​ ಚಾಪ್ಟರ್​ 2 ಚಿತ್ರತಂಡ ಟೀಸರ್​ ರಿಲೀಸ್​ ಬಗ್ಗೆ ಪ್ರಕಟಿಸಿದಾಗ ಅಭಿಮಾನಿಗಳು #KGFChapter2TeaserOnJan8 ಎಂದು ಟ್ವಿಟರ್​​ನಲ್ಲಿ ಟ್ರೆಂಡ್​ ಮಾಡಿದ್ದರು. ಈ ಮೂಲಕ ನಿರ್ದೇಶಕ ಪ್ರಾಶಾಂತ್ ನೀಲ್​ ಹಾಗೂ ಚಿತ್ರತಂಡದ ಉತ್ಸಾಹಕ್ಕೆ ಮತ್ತಷ್ಟು ಉತ್ತೇಜನ ನೀಡಿದ್ದರು. ಈಗಲೂ ಸಹ ಅದನ್ನೇ ಮಾಡುತ್ತಿದ್ದಾರೆ ರಾಕಿ ಬಾಯ್​ ಫ್ಯಾನ್ಸ್​.


ಇದನ್ನೂ ಓದಿ: Sanvi Sudeep: ಇಂಗ್ಲಿಷ್​ ಹಾಡು ಹಾಡಿದ ಸುದೀಪ್​ ಮಗಳು ಸಾನ್ವಿ: ವಿಡಿಯೋ ನೋಡಿ ಮೆಚ್ಚಿಕೊಂಡ ಕಾರ್ತಿಕ್​ ಜಯರಾಮ್​


ಲಾಕ್​ಡೌನ್​ನಿಂದಾಗಿ ಕೆಜಿಎಫ್​ ಚಾಪ್ಟರ್​ 2 ಚಿತ್ರದ ಶೂಟಿಂಗ್​ಗೆ ಬ್ರೇಕ್​ ಬಿದ್ದಿತ್ತು. ನಂತರ ಚಿತ್ರತಂಡ ಸಿನಿಮಾದ ಕ್ಲೈಮ್ಯಾಕ್ಸ್​ ಶೂಟಿಂಗ್​ ಪೂರ್ಣಗೊಳಿಸಿದೆ. ಸಿನಿಮಾದ ಕ್ಲೈಮ್ಯಾಕ್ಸ್​ ಬಗ್ಗೆ ನಿರ್ದೇಶಕ ಪ್ರಶಾಂತ್​ ನೀಲ್​ ಅಪ್ಡೇಟ್​ ಕೊಡುತ್ತಿದ್ದಂತೆಯೇ ಟ್ವಿಟರ್​ನಲ್ಲಿ #KGFChapter2 ಟ್ರೆಂಡ್​ ಆಗಿತ್ತು.

Published by:Anitha E
First published: