ಸಾಮಾನ್ಯವಾಗಿ ಸಿನಿಮಾ ಸ್ಟಾರ್ಗಳ ಬಗ್ಗೆ ಸಾಮಾಜಿಕ ಜಾಲತಾಣ ಹಾಗೂ ಅವರ ಸಂದರ್ಶನಗಳನ್ನು ನೋಡಿ ತಿಳಿದುಕೊಳ್ಳಬಹುದು. ಆದರೆ ಅವರನ್ನೇ ಕೇಳಿ ಅವರ ಬಗ್ಗೆ ಅರಿಯುವ ಅವಕಾಶ ಬಹಳ ಕಡಿಮೆ.
ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರ ಮಡದಿ ನಮ್ರತಾ ಶಿರೋಡ್ಕರ್ ಒಂದು ಕಾಲದಲ್ಲಿ ಸ್ಟಾರ್ ಆಗಿದ್ದವರು. ಬಾಲಿವುಡ್ ಹಾಗೂ ಟಾಲಿವುಡ್ನಲ್ಲಿ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿರುವ ನಟಿ. ಪ್ರಿನ್ಸ್ ಮಹೇಶ್ ಅವರನ್ನು ವಿವಾಹವಾದ ನಂತರ ಸಿನಿಮಾ ಬಿಟ್ಟು ಮನೆಯಲ್ಲಿ ಕುಟುಂಬದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
![Prince Mahesh Babu wished his wife Namratha on her birthday]()
ಮಹೇಶ್ ಬಾಬು ಅವರ ಕುಟುಂಬ
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಮ್ರತಾ ಶಿರೋಡ್ಕರ್ ಸದಾ ತಮ್ಮ ಮಕ್ಕಳು ಹಾಗೂ ಗಂಡನ ಕುರಿತಾದ ಪೋಸ್ಟ್ಗಳನ್ನು ಮಾಡುತ್ತಿರುತ್ತಾರೆ. ಇಂತಹ ಸೆಲೆಬ್ರಿಟಿ ಜೊತೆ ಚಾಟ್ ಮಾಡುವ ಅವಕಾಶ ನಿಮ್ಮದಾಗಿದೆ.
ಇಂದು ಸಂಜೆ 5ಕ್ಕೆ ಇನ್ಸ್ಟಾಗ್ರಾಂನಲ್ಲಿ ನಮ್ರತಾ ಅವರೊಂದಿಗೆ ಚಾಟ್ ಮಾಡುತ್ತಾ, ನಿಮ್ಮ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಬಹುದಾಗಿದೆ. ಆಸ್ಕ್ ಮಿ ಎಂಬ ಕಾರ್ಯಕ್ರಮದಲ್ಲಿ ನಮ್ರತಾ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಲಾಕ್ಡೌನ್ನಿಂದಾಗಿ ಮನೆಯಲ್ಲೇ ಇರುವ ನೆಟ್ಟಿಗರಿಗಾಗಿ ಇನ್ಸ್ಟಾಗ್ರಾಂ ಈ ಕಾರ್ಯಕ್ರಮ ಆಯೋಜಿಸಿದೆ.
Ranjani Raghavan: ಒಳ್ಳೆಯ ದಿನಗಳ ನಿರೀಕ್ಷೆಯಲ್ಲಿ ಪುಟ್ಟಗೌರಿ ರಂಜನಿ ರಾಘವನ್..!
ಇದನ್ನೂ ಓದಿ: Radhika Pandit: ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ರಾಕಿಂಗ್ ದಂಪತಿ: ಏನಂತಾರೆ ರಾಧಿಕಾ..? ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ