HOME » NEWS » Entertainment » TODAY DARSHAN STARRER ROBERRT PRE RELEASE EVENT HAPPENING IN HYDERABAD AE

Roberrt: ಹೈದರಾಬಾದಿನಲ್ಲಿ ನಡೆಯಲಿದೆ ರಾಬರ್ಟ್​ ಪ್ರಿ- ರಿಲೀಸ್​ ಕಾರ್ಯಕ್ರಮ..!

Darshan: ತರುಣ್​ ಸುಧೀರ್​ ನಿರ್ದೇಶನದ ಹಾಗೂ ಉಮಾಪತಿ ಹಣ ಹೂಡಿರುವ ಸಿನಿಮಾ ರಾಬರ್ಟ್​. ಈ ಸಿನಿಮಾದ ಪ್ರಿ-ರಿಲೀಸ್ ಕಾರ್ಯಕ್ರಮ ಇಂದು ಸಂಜೆ ಹೈದರಾಬಾದಿನಲ್ಲಿ ನಡೆಯಲಿದೆ. ತೆಲುಗು ನೆಲದಲ್ಲಿ ರಾಬರ್ಟ್​ ಸಿನಿಮಾ ಪ್ರಚಾರ ಕಾರ್ಯಕ್ಕೆ ಇಂದು ಕಿಕ್​ ಸ್ಟಾರ್ಟ್​ ಸಿಗಲಿದೆ.

Anitha E | news18-kannada
Updated:February 26, 2021, 10:38 AM IST
Roberrt: ಹೈದರಾಬಾದಿನಲ್ಲಿ ನಡೆಯಲಿದೆ ರಾಬರ್ಟ್​ ಪ್ರಿ- ರಿಲೀಸ್​ ಕಾರ್ಯಕ್ರಮ..!
ಹೈದರಾಬಾದಿನಲ್ಲಿ ರಾಬರ್ಟ್​ ಪ್ರಿ-ರಿಲೀಸ್​ ಕಾರ್ಯಕ್ರಮ
  • Share this:
ದರ್ಶನ್​ ಅಭಿನಯದ ರಾಬರ್ಟ್​ ಸಿನಿಮಾದ ಟ್ರೇಲರ್​ ರಿಲೀಸ್ ಆದಾಗಿನಿಂದ ಸಿನಿಪ್ರಿಯರಲ್ಲಿ ಸಿನಿಮಾ ನೋಡುವ ಕುತೂಹಲ ಹೆಚ್ಚಾಗಿದೆ. ಈ ಹಿಂದೆಯೇ ಚಿತ್ರದ ಹಾಡುಗಳು ಹಾಗೂ ಟೀಸರ್​ ರಿಲೀಸ್ ಆಗಿದ್ದಾಗ ಚಿತ್ರದ ಬಗ್ಗೆ ದರ್ಶನ್​ ಅಭಿಮಾನಿಗಳಲ್ಲಿ ಇದ್ದ ನಿರೀಕ್ಷೆ ಈಗ ದುಪಟ್ಟಾಗಿದೆ. ಇನ್ನು ಮಾಚ್​ 11ರಂದು ತೆಲುಗು ಹಾಗೂ ಕನ್ನಡದಲ್ಲಿ ಸಿನಿಮಾ ರಿಲೀಸ್​ ಆಗಲಿದ್ದು, ಟಾಲಿವುಡ್​ ಪ್ರೇಕ್ಷಕರಲ್ಲೂ ಸಹ ರಾಬರ್ಟ್​ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಅದರಲ್ಲೂ ಈ ಸಲ ಸಿನಿಮಾದಲ್ಲಿ ತೆಲುಗು ಹಾಗೂ ಕನ್ನಡದ ಪ್ರೇಕ್ಷಕರಿಗೆ ಮುಖ ಪರಿಚಯವಿರುವ ತಾರಾ ಬಳಗವನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ಕುರುಕ್ಷೇತ್ರ ಸಿನಿಮಾದಿಂದಾಗಿ ದರ್ಶನ್​ ಅವರ ಪರಿಚಯ ಈಗಾಗಲೇ ತೆಲುಗು ಸಿನಿಪ್ರಿಯರಿಗೆ ಆಗಿದೆ. ಹೀಗಾಗಿಯೇ ರಾಬರ್ಟ್​ ಸಿನಿಮಾದ ಬಗೆಗಿನ ಕುತೂಹಲವನ್ನು ಹೆಚ್ಚಿಸುವ ಸಲುವಾಗಿ ಚಿತ್ರತಂಡ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. ಅದರ ಭಾಗವಾಗಿಯೇ ಇತ್ತೀಚೆಗಷ್ಟೆ ಚಿತ್ರದಿಂದ ಲವ್​ ಸಾಂಗ್​ ಒಂದನ್ನು ರಿಲೀಸ್​ ಮಾಡಿದೆ.

ತರುಣ್​ ಸುಧೀರ್​ ನಿರ್ದೇಶನದ ಹಾಗೂ ಉಮಾಪತಿ ಹಣ ಹೂಡಿರುವ ಸಿನಿಮಾ ರಾಬರ್ಟ್​. ಈ ಸಿನಿಮಾದ ಪ್ರಿ-ರಿಲೀಸ್ ಕಾರ್ಯಕ್ರಮ ಇಂದು ಸಂಜೆ ಹೈದರಾಬಾದಿನಲ್ಲಿ ನಡೆಯಲಿದೆ. ತೆಲುಗು ನೆಲದಲ್ಲಿ ರಾಬರ್ಟ್​ ಸಿನಿಮಾ ಪ್ರಚಾರ ಕಾರ್ಯಕ್ಕೆ ಇಂದು ಕಿಕ್​ ಸ್ಟಾರ್ಟ್​ ಸಿಗಲಿದೆ.

Roberrt, Darshan, Roberrt pre-release event in Hubballi on Feb 28 , Roberrt Pre-release Event, Hubballi, Roberrt pre-release event on Feb 28, ರಾಬರ್ಟ್, ರಾಬರ್ಟ್ ಪ್ರಿ ರಿಲೀಸ್ ಈವೆಂಟ್, ಫೆಬ್ರವರಿ 28ಕ್ಕೆ ರಾಬರ್ಟ್ ಪ್ರಿ ರಿಲೀಸ್ ಈವೆಂಟ್, Roberrt Trailer, Tollywood, Sandlawood, Happy Birthday darshan, Happy Birthday DBoss, Roberrt Telugu Trailer, Roberrt Kannada Trailer, Sandalwood, Darshan Birthday, Roberrt, Tharun Sudhir, Roberrt Trailer, Tollywood, ದರ್ಶನ್​, ಹುಟ್ಟುಹಬ್ಬದ ಸಂಭ್ರಮದಲ್ಲಿ ದರ್ಶನ್​, ಡಿಬಾಸ್​ ಹುಟ್ಟುಹಬ್ಬ, ರಾಬರ್ಟ್​ ಸಿನಿಮಾ, ಮಾರ್ಚ್​ 11ಕ್ಕೆ ರಾಬರ್ಟ್​ ಸಿನಿಮಾ ರಿಲೀಸ್​, ರಾಬರ್ಟ್​ ಟ್ರೇಲರ್​ ರಿಲೀಸ್, ತೆಲುಗಿನಲ್ಲೂ ರಾಬರ್ಟ್​ ಟ್ರೇಲರ್​, ದರ್ಶನ್​ ಹುಟ್ಟುಹಬ್ಬ, jagapathi BAbu, Ravishankar, ಜಗಪತಿಬಾಬು, ರವಿಶಂಕರ್​
ರಾಬರ್ಟ್​ ಸಿನಿಮಾದ ಪೋಸ್ಟರ್​


ಹೈದರಾಬಾದಿನ ಫಿಲ್​ನಗರದಲ್ಲಿರುವ ಜೆಆರ್​ಸಿ ಕನ್ವೆಂಕ್ಷನ್​ನಲ್ಲಿ ಸಂಜೆ ಇಂದು ಸಂಜೆ 6ಕ್ಕೆ ರಾಬರ್ಟ್​ ಸಿನಿಮಾ ಪ್ರಿ-ರಿಲೀಸ್​ ಇವೆಂಟ್ ನಡೆಯಲಿದೆ. ಈ ಕಾರ್ಯಕ್ರಮದ ಮೂಲಕ ರಾಬರ್ಟ್​ ಚಿತ್ರದ ಪ್ರಚಾರ ಕಾರ್ಯ ಆರಂಭವಾಗಲಿದೆ.


ನಂತರ ಫೆ.28ರಂದು  ಉತ್ತರ ಕರ್ನಾಟಕದಲ್ಲಿ ಅಂದರೆ, ಹುಬ್ಬಳ್ಳಿಯಲ್ಲಿ ಈ ಇವೆಂಟ್​ ನಡೆಸಲು ಚಿತ್ರತಂಡ ತಯಾರಿ ನಡೆಸಿದೆ. ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ಸಂಜೆ 6ಕ್ಕೆ ಈ ಕಾರ್ಯಕ್ರಮ ಆರಂಭವಾಗಲಿದೆ.ಉತ್ತರ ಕರ್ನಾಟಕದ ಪ್ರೇಕ್ಷಕರನ್ನು ಸೆಳೆಯುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎನ್ನಲಾಗುತ್ತಿದೆ. ಈ ಹಿಂದೆ ಇದನ್ನು ಗುಲ್ಬರ್ಗದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಕರೋನಾ ಕಾರಣದಿಂದಾಗಿ ಆಗ ಅದನ್ನು ಅಲ್ಲಿಗೆ ಕೈಬಿಡಲಾಯಿತು. ಈಗ ಮತ್ತೆ ಇದೇ ಇವೆಂಟ್​ಗಾಗಿ ಹುಬ್ಬಳ್ಳಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.ದರ್ಶನ್​ ಹುಟ್ಟುಹಬ್ಬದ ದಿನ ರಿಲೀಸ್ ಆದ ಸಿನಿಮಾದ ಟ್ರೇಲರ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಲಕ್ಷಗಟ್ಟಲೆ ವೀಕ್ಷಣೆ ಪಡೆದುಕೊಂಡಿರುವ ರಾಬರ್ಟ್​ ಟ್ರೇಲರ್​ ಸಿನಿಮಾ ಬಗೆಗಿನ ಕುತೂಹಲವನ್ನು ಮತ್ತಷ್ಟು ಹೆಚ್ಚು ಮಾಡಿದೆ. ಇನ್ನು ಶನಿವಾರವಷ್ಟೆ ಈ ಸಿನಿಮಾದ ಕಣ್ಣು ಹೊಡಿಯಾಕ ಅನ್ನೋ ಲವ್​ ಸಾಂಗ್​ ಸಹ ರಿಲೀಸ್​ ಆಗಿದೆ. ಈ ಹಾಡು ಈಗಾಗಲೇ ರಾಬರ್ಟ್​ ಅಭಿಮಾನಿಗಳ ಮನ ಗೆದಿದ್ದೆ. ತೆಲುಗು ಹಾಗೂ ಕನ್ನಡದಲ್ಲಿ ಈ ಹಾಡು ರಿಲೀಸ್​ ಆಗಿದೆ.

ಇದನ್ನೂ ಓದಿ: ಬಿಗ್​ ಬಾಸ್​ ಅಂಗಳದಲ್ಲಿ ಮತ್ತೆ ಕೇಳಿ ಬಂತು ಹುಚ್ಚ ವೆಂಕಟ್​ ಹೆಸರು: ಸುದೀಪ್​ ಹೇಳಿದ್ದು ಹೀಗೆ..!

ಈ ಸಿನಿಮಾದಲ್ಲಿ ಆಶಾ ಭಟ್​ ನಾಯಕಿಯಾಗಿ ನಟಿಸಿದ್ದಾರೆ. ಇನ್ನು ಆಶಾ ಭಟ್​ ಸಾಂಪ್ರದಾಯಿಕ ಹಾಗೂ ಸ್ಟೈಲಿಶ್​ ಲುಕ್​ನಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಸಲ ಆಶಾ ಭಟ್​ ನಾಯಕಿಯಾಗಿ ಕನ್ನಡದ ಸಿನಿಪ್ರಿಯರ ಎದುರು ಬರಲಿದ್ದಾರೆ.


View this post on Instagram


A post shared by Asha Bhat (@asha.bhat)


ಈ ಚಿತ್ರದಲ್ಲಿ ಟಾಲಿವುಡ್​ನ ಖ್ಯಾತ ನಟ ಜಗಪತಿ ಬಾಬು ವಿಲನ್​ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ರವಿಶಂಕರ್​ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಒಟ್ಟಾರೆ ಕೊರೋನಾ ಲಾಕ್​ಡೌನ್​ ನಂತರ ಬೆಳ್ಳಿತೆರೆಯಲ್ಲಿ ದರ್ಶನ್​ ಅವರನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.
Published by: Anitha E
First published: February 26, 2021, 10:38 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories