Happy Birthday Akkineni Naga Chaitanya: ಇಂದು ತೆಲುಗು ನಟ ಅಕ್ಕಿನೇನಿ ನಾಗಚೈತನ್ಯ (Akkineni Naga Chaitanya) ಅವರ ಹುಟ್ಟು ಹಬ್ಬ (Birthday). ಹಾಗಾಗಿ, ಅವರ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗೆ ಹೊಸ ಸರ್ಪ್ರೈಸ್ ಸಿಕ್ಕಿದೆ. ಅದು ಹೊಸ ಸಿನಿಮಾದ ಟೀಸರ್ (Teaser). ನಾಗಚೈತನ್ಯ ಮುಂದಿನ ಸಿನಿಮಾ ಬಂಗಾರ್ರಾಜುವಿನ ಟೀಸರ್ (Bangarraju Teaser) ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ನಾಗಚೈತನ್ಯ ತಂದೆ ನಾಗಾರ್ಜುನ (Nagarjuna) ಕೂಡ ನಟಿಸುತ್ತಿರುವುದು ವಿಶೇಷ. ಚಿತ್ರದಲ್ಲಿ ಬೇರೇನೂ ಅಲ್ಲ, ತಂದೆ ಮಗನ ಜೋಡಿಯ ದೃಶ್ಯಗಳನ್ನು ಕಾಣಲು ಅಭಿಮಾನಿಗಳು ಹಾತೊರೆಯುತ್ತಿದ್ದಾರೆ, ಇಂದು ಅದರ ಸಣ್ಣ ಝಲಕ್ ಸಿಕ್ಕಿದೆ ಮತ್ತು ಟೀಸರ್ನಲ್ಲಿ ನಟ ಬಂಗಾರ್ರಾಜುವಾಗಿ ಅತ್ಯಂತ ಉತ್ಸಾಹದಿಂದ ಮಿಂಚುತ್ತಿದ್ದಾರೆ.
ಸುಮಾರು ವರ್ಷಗಳ ಬಳಿಕ ತಂದೆ –ಮಗ ಇಬ್ಬರೂ ಜೊತೆಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. 2014ರಲ್ಲಿ ಬಿಡುಗಡೆ ಆಗಿದ್ದ ಮನಂ ಸಿನಿಮಾದಲ್ಲಿ ಕೂಡ ಅವರಿಬ್ಬರು ತೆರೆ ಹಂಚಿಕೊಂಡಿದ್ದರು. ಬಂಗಾರ್ರಾಜು ಸಿನಿಮಾದ ಟೀಸರ್ ಹಂಚಿಕೊಳ್ಳುತ್ತಾ ನಟ ನಾಗಾರ್ಜುನ, “ನಮ್ಮ. ಅವನ ಹುಟ್ಟುಹಬ್ಬವನ್ನು ಪ್ರಸ್ತುತಪಡಿಸುತ್ತಿದ್ದೇವೆ. ನಿನ್ನನ್ನು ಪ್ರೀತಿಸುತ್ತೇನೆ ರಾ” ಎಂದು ಬರೆದುಕೊಂಡಿದ್ದಾರೆ.
ನಿನ್ನೆ, ಈ ಸಿನಿಮಾದಲ್ಲಿನ ನಾಗಚೈತನ್ಯ ಮೊದಲ ಲುಕ್ ಅನ್ನು ಬಿಡುಗಡೆ ಮಾಡಲಾಗಿತ್ತು. ಹಿಂದಿನ ಸಿನಿಮಾಗಳ ಲುಕ್ಗಳಿಗಿಂತ ಭಿನ್ನವಾಗಿರುವ ಈ ಚಿತ್ರದಲ್ಲಿನ ಅವರ ಫ್ಯಾನ್ಸಿ ಅವತಾರ ಅಭಿಮಾನಿಗಳಿಂದ ಅಪಾರ ಮೆಚ್ಚುಗೆ ಪಡೆದಿದೆ. ಈ ಸಿನಿಮಾದಲ್ಲಿ, ನಾಗಚೈತನ್ಯ ಒಂದು ಉತ್ಸಾಹಭರಿತ ಮತ್ತು ಡೈನಮಿಕ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಇದನ್ನು ಓದಿ: ಬಣ್ಣದ ಲೋಕಕ್ಕೆ ಕಾಲಿಟ್ಟ Sai Pallavi ತಂಗಿ Pooja Kannan: ರಿಲೀಸ್ ಆಯ್ತು ಮೊದಲ ಸಿನಿಮಾದ ಪೋಸ್ಟರ್
ಬಂಗಾರ್ರಾಜು ಸಿನಿಮಾ, 2016ರಲ್ಲಿ ಬಿಡುಗಡೆ ಆಗಿದ್ದ ಸೂಪರ್ ಹಿಟ್ ಸಿನಿಮಾ ಸೊಗ್ಗಡೆ ಚಿನ್ನಿ ನಾಯನದ ಮುಂದುವರಿದ ಭಾಗವಾಗಿದೆ. ಈ ಸಿನಿಮಾವನ್ನು ಕಲ್ಯಾಣ್ ಕೃಷ್ಣ ನಿರ್ದೇಶನ ಮಾಡಿದ್ದರು. ನಟಿ ರಮ್ಯಾ ಕೃಷ್ಣ ಸೊಗ್ಗಡೆ ಚಿನ್ನಿ ನಾಯನ ಸಿನಿಮಾದ ತನ್ನ ಪಾತ್ರವನ್ನು ಈ ಸಿನಿಮಾದಲ್ಲೂ ಮುಂದುವರೆಸಲಿದ್ದಾರೆ. ಉಪ್ಪೇನಾ ಖ್ಯಾತಿಯ ಕೃತಿ ಶೆಟ್ಟಿ ನಾಗಚೈತನ್ಯ ಪ್ರೇಯಸಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾಗೆ ಅನೂಪ್ ರೂಬೆನ್ಸ್ ಸಂಗೀತವಿದೆ. ಅನುಪಮಾ ಸ್ಟುಡಿಯೋಸ್ ಮತ್ತು ಜೀ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಬಂಗಾರ್ರಾಜು ಸಿನಿಮಾನಿರ್ಮಾಣ ಮಾಡಲಾಗುತ್ತಿದೆ.
ಟೀಸರ್ ಬಿಡುಗಡೆ ಆಗಿದೆ. ಆದರೆ, ಸಿನಿಮಾ ಬಿಡುಗಡೆ ಇನ್ನೂ ದೂರವಿದೆ. ಬಂಗಾರ್ರಾಜು ಸಿನಿಮಾ ಮುಂದಿನ ವರ್ಷದ ಸಂಕ್ರಾತಿ ಹಬ್ಬ ಸಂದರ್ಭದಲ್ಲಿ ಬಿಡುಗಡೆ ಆಗಬಹುದು ಎಂಬ ನಿರೀಕ್ಷೆಯಿದೆ. ಸದ್ಯಕ್ಕೆ ನಾಗಚೈತನ್ಯ ತಮ್ಮ ಮುಂದಿನ ಚಿತ್ರ ಥ್ಯಾಂಕ್ ಯು ಚಿತ್ರೀಕರಣದಲ್ಲಿ ವ್ಯಸ್ಥರಾಗಿದ್ದಾರೆ. ಥ್ಯಾಂಕ್ ಯು ಚಿತ್ರದಲ್ಲಿ ನಟಿ ರಾಶಿ ಖನ್ನಾ ನಾಗಚೈತನ್ಯ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ವಿಕ್ರಮ್ ಕುಮಾರ್ ನಿರ್ದೇಶನ ಮಾಡುತ್ತಿದ್ದು, ಚಿತ್ರದಲ್ಲಿನ ನಾಗಚೈತನ್ಯ ಅವರ ಮೊದಲ ಲುಕ್ ಇಂದು ಬಿಡುಗಡೆ ಅಗಲಿದೆ.
ಇದನ್ನು ಓದಿ: Viral Story: ಮದುವೆಯಾದ ಮೇಲಿಂದ ವರ್ಷಕ್ಕೊಂದರಂತೆ ಮಗು ಹೆರುತ್ತಾ ಬಂದಿದ್ದಾಳೆ ಈ ಮಹಿಳೆ!
ಈ ಬಾರಿ ಅಕ್ಕಿನೇನಿ ನಾಗಚೈತನ್ಯ ಹುಟ್ಟುಹಬ್ಬಕ್ಕೆ ಪತ್ನಿ ಸಮಂತಾ ಜೊತೆಯಿಲ್ಲ. ಸಮಂತಾ ಜೊತೆಗಿನ ಸಂಬಂಧ ಕಡಿದುಕೊಂಡ ನಂತರ ನಾಗಚೈತನ್ಯ ಹಲವಾರು ಸಿನಿಮಾಗಳ ಪ್ರಾಜೆಕ್ಟ್ಗಳಲ್ಲಿ ವ್ಯಸ್ಥರಾಗಿದ್ದಾರೆ. ಅತ್ತ ಕಡೆ ಸಮಂತಾ ಕೂಡ ತಮ್ಮ ಗಮನವನ್ನು ಸಂಪೂರ್ಣವಾಗಿ ವೃತ್ತಿ ಬದುಕಿನ ಕಡೆಗೆ ತೊಡಗಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ