Roberrt: ಶುಭ ಶುಕ್ರವಾರದಂದು ಚಾಲೆಂಜಿಂಗ್ ಸ್ಟಾರ್ ಟೆಂಪಲ್ ರನ್ : ಪಂಚ ದೇವಾಲಯಗಳಲ್ಲಿ ಪೂಜೆ ಮಾಡಿಸಿದ ಡಿಬಾಸ್ ದರ್ಶನ್ !

Roberrt: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿ ಪಕ್ಷಿಗಳಲ್ಲೂ ದೇವರನ್ನು ಕಾಣ್ತಾರೆ. ಅಯ್ಯಪ್ಪ ಮಾಲೆ ಧರಿಸೋದಿರಬಹುದು, ಆಗಾಗ ಮೈಸೂರಿನ ಚಾಮುಂಡಿ ಬೆಟ್ಟ ಹತ್ತಿ ದೇವಿಯ ದರ್ಶನ ಪಡೆಯೋದಿರಬಹುದು, ಅಷ್ಟೇ ಯಾಕೆ ತಾವು ಯಾವ ಗಾಡಿ ಹೊಸದಾಗಿ ಖರೀದಿ ಮಾಡಿದ್ರೂ, ಅದರ ಮೊದಲ ಪೂಜೆ ಆಗೋದೇ ಚಾಮುಂಡಿದೇವಿಯ ಸನ್ನಿಧಿಯಲ್ಲಿ. ದೇವರು ಅಂದ್ರೆ ದರ್ಶನ್‍ಗೆ ಅಷ್ಟು ಶ್ರದ್ಧೆ, ಭಕ್ತಿಯಿದೆ.

Anitha E | news18
Updated:June 28, 2019, 9:06 PM IST
Roberrt: ಶುಭ ಶುಕ್ರವಾರದಂದು ಚಾಲೆಂಜಿಂಗ್ ಸ್ಟಾರ್ ಟೆಂಪಲ್ ರನ್ : ಪಂಚ ದೇವಾಲಯಗಳಲ್ಲಿ ಪೂಜೆ ಮಾಡಿಸಿದ ಡಿಬಾಸ್ ದರ್ಶನ್ !
ದೇವಾಲಯಗಳಿಗೆ ಭೇಟಿ ನೀಡಿದ ದರ್ಶನ್​
Anitha E | news18
Updated: June 28, 2019, 9:06 PM IST
ಚಾಲೆಂಜಿಂಗ್ ಸ್ಟಾರ್ ದರ್ಶನ್ ದೈವಭಕ್ತ. ಮೈಸೂರಿಗೆ ಹೋದಾಗ ಚಾಮುಂಡಿಯ ದರ್ಶನ ಮಾಡದೇ ಇರಲ್ಲ. ಅವರು ಖರೀದಿಸುವ ಹೊಸ ಕಾರುಗಳು ಮೊದಲು ಪೂಜೆಯಾಗೊದೇ ಚಾಮುಂಡಿಯ ಸನ್ನಿಧಿಯಲ್ಲಿ. ದಚ್ಚು ಸಿನಿಮಾಗಳಲ್ಲೂ ದೇವರ ದರ್ಶನ ಆಗೇ ಆಗುತ್ತೆ. ಇಂತಹ ದೈವಭಕ್ತ ದರ್ಶನ್, ಶುಭ ಶುಕ್ರವಾರ ಪಂಚದೇವರ ಮೊರೆ ಹೋಗಿದ್ದಾರೆ. ಹಾಗಾದ್ರೆ ಡಿಬಾಸ್ ಟೆಂಪಲ್ ರನ್ ಮಾಡಿದ್ಯಾಕೆ ? ದೇವರ ಬಳಿ ಏನ್ ಕೇಳ್ಕೊಂಡ್ರು? ಈ ಸ್ಟೋರಿ ಓದಿ...

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿ ಪಕ್ಷಿಗಳಲ್ಲೂ ದೇವರನ್ನು ಕಾಣ್ತಾರೆ. ಅಯ್ಯಪ್ಪ ಮಾಲೆ ಧರಿಸೋದಿರಬಹುದು, ಆಗಾಗ ಮೈಸೂರಿನ ಚಾಮುಂಡಿ ಬೆಟ್ಟ ಹತ್ತಿ ದೇವಿಯ ದರ್ಶನ ಪಡೆಯೋದಿರಬಹುದು, ಅಷ್ಟೇ ಯಾಕೆ ತಾವು ಯಾವ ಗಾಡಿ ಹೊಸದಾಗಿ ಖರೀದಿ ಮಾಡಿದ್ರೂ, ಅದರ ಮೊದಲ ಪೂಜೆ ಆಗೋದೇ ಚಾಮುಂಡಿದೇವಿಯ ಸನ್ನಿಧಿಯಲ್ಲಿ. ದೇವರು ಅಂದ್ರೆ ದರ್ಶನ್‍ಗೆ ಅಷ್ಟು ಶ್ರದ್ಧೆ, ಭಕ್ತಿಯಿದೆ.

ನಟ ದರ್ಶನ್​


ಇಂತಹ ದಚ್ಚು, ಶುಭ ಶುಕ್ರವಾರದಂದು ತಮ್ಮ ಗೆಳೆಯರ ಜತೆ ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಧರ್ಮಸ್ಥಳದ ಮಂಜುನಾಥ, ಕುಕ್ಕೆ ಸುಬ್ರಹ್ಮಣ್ಯ, ಸೌತಡ್ಕ ಮಹಾಗಣಪತಿ, ಪುತ್ತೂರಿನ ಮಹಾಲಿಂಗೇಶ್ವರ..ಹೀಗೆ ದಕ್ಷಿಣ ಕನ್ನಡದ ದೇವಾಲಯಗಳಿಗೆ ಭೇಟಿ ನೀಡಿ ದೇವರ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ. ಅವರ ಜತೆಗೆ ನಿರ್ಮಾಪಕ ರಾಮ್‍ಮೂರ್ತಿ ಹಾಗೂ ಇನ್ನೂ ಕೆಲ ಸ್ನೇಹಿತರೂ ಇದ್ದರು. ಬಿಳಿ ಪಂಚೆ, ಶರ್ಟ್ ಧರಿಸಿ ದರ್ಶನ್ ಈ ಎಲ್ಲ ದೇವಸ್ಥಾನಗಳಿಗೂ ಭೇಟಿ ನೀಡಿದ್ದಾರೆ.

ಪುತ್ತೂರಿನಲ್ಲಿ ಗೆಳೆಯರೊಬ್ಬರ ಮನೆ ಗೃಹಪ್ರವೇಶಕ್ಕೆ ಹೋಗಿದ್ದ ದರ್ಶನ್, ವಾಪಸ್ಸಾಗುವಾಗ ಹೀಗೆ ದೇವಾಲಯಗಳಿಗೆ ಹೋಗಿ, ದೇವರ ದರ್ಶನ ಪಡೆದು, ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಸದ್ಯ ದರ್ಶನ್ 'ರಾಬರ್ಟ್' ಚಿತ್ರದ ಶೂಟಿಂಗ್‍ನಲ್ಲಿ ಬ್ಯುಸಿಯಿದ್ದು, ಒಡೆಯ ಡಬ್ಬಿಂಗ್‍ನಲ್ಲೂ ತೊಡಗಿಸಿಕೊಂಡಿದ್ದಾರೆ. ಇನ್ನು ಇದೇ ಜುಲೈ 7ರಂದು 'ಕುರುಕ್ಷೇತ್ರ' ಚಿತ್ರದ ಆಡಿಯೋ ಲಾಂಚ್ ಆಗಲಿದ್ದು, ಆಗಸ್ಟ್ ಮೊದಲ ವಾರ ವರಮಹಾಲಕ್ಷ್ಮಿ ಹಬ್ಬದಂದು ಸಿನಿಮಾ ತೆರೆಗೆ ಬರಲಿದೆ.

ಇದನ್ನೂ ಓದಿ: Rashmika Mandanna: ಸಿನಿಮಾ ಆರಂಭಕ್ಕೂ ಮೊದಲೇ ಕೋಟಿಗೆ ಮಾರಾಟವಾಯ್ತು ರಶ್ಮಿಕಾರ ಚಿತ್ರದ ಪ್ರಸಾರ ಹಕ್ಕು​

ಆ ಬಳಿಕ ಕ್ರಮವಾಗಿ ಒಡೆಯ ಹಾಗೂ 'ರಾಬರ್ಟ್' ರಿಲೀಸ್ ಆಗಲಿವೆ. ಅವುಗಳ ನಡುವೆ ಇದೇ ಆಗಸ್ಟ್​  ದರ್ಶನ್ 'ಮದಕರಿ' ಚಿತ್ರ ಸೆಟ್ಟೇರಲಿದ್ದು, ಹೊಸ ವರ್ಷಕ್ಕೆ ತಮ್ಮನ್ನು ಹೀರೋ ಮಾಡಿದ 'ಮೆಜೆಸ್ಟಿಕ್' ಚಿತ್ರದ ನಿರ್ಮಾಪಕ ರಾಮ್‍ಮೂರ್ತಿ ಜತೆಗೆ ಹೊಸ ಸಿನಿಮಾ ಮಾಡಲಿದ್ದಾರೆ 'ಯಜಮಾನ'. ಹೀಗೆ ಸಾಲು ಸಾಲು ಸಿನಿಮಾಗಳು ಒಂದರ ಹಿಂದೊಂದರಂತೆ ತೆರೆಗೆ ಬರಲು ರೆಡಿಯಾಗುತ್ತಿರುವ ಕಾರಣ, ಡಿಬಾಸ್ ದೇವರ ಮೊರೆ ಹೋಗಿದ್ದಾರೆ.
Loading...

DBoss Darshan: 'ರಾಬರ್ಟ್'​ ಚಿತ್ರೀಕರಣದ ನಡುವೆ ಧರ್ಮಸ್ಥಳಕ್ಕೆ ಭೇಟಿ ನೀಡಿದ ದರ್ಶನ್​

First published:June 28, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...