'ಯಜಮಾನ'ನ ಶಿವನಂದಿ ಈಗ ಯೂಟ್ಯೂಬ್​ನಲ್ಲಿ: ಕೆಲವೇ ಗಂಟೆಗಳಲ್ಲಿ ಲಕ್ಷದ ಗಡಿ ದಾಟಿದ ವೀಕ್ಷಣೆ..!

Anitha E | news18
Updated:March 15, 2019, 5:20 PM IST
'ಯಜಮಾನ'ನ ಶಿವನಂದಿ ಈಗ ಯೂಟ್ಯೂಬ್​ನಲ್ಲಿ: ಕೆಲವೇ ಗಂಟೆಗಳಲ್ಲಿ ಲಕ್ಷದ ಗಡಿ ದಾಟಿದ ವೀಕ್ಷಣೆ..!
'ಯಜಮಾನ' ಸಿನಿಮಾದಲ್ಲಿ ದರ್ಶನ್​
Anitha E | news18
Updated: March 15, 2019, 5:20 PM IST
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಯಜಮಾನ' ಚಿತ್ರದ ಕೆಲವು ಲಿರಿಕಲ್​ ಹಾಡುಗಳನ್ನು ನಾವು  ನೋಡಬಹುದಿತ್ತು. ಆದರೆ ಈಗ ಈ ಸಿನಿಮಾದ ಟೈಟಲ್​ ವಿಡಿಯೋ ಹಾಡು ಬಿಡುಗಡೆಯಾಗಿದೆ.

ಇದನ್ನೂ ಓದಿ: ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಡಬಲ್​ ಗಿಫ್ಟ್​: ಪುನೀತ್​ ಹೊಸ ಸಿನಿಮಾದ ಮೋಷನ್​ ಪೋಸ್ಟರ್​ ಬಿಡುಗಡೆ..!

ಡಿ-ಬೀಟ್ಸ್​ ಮ್ಯೂಸಿಕ್​ ಇಂದು 'ಶಿವನಂದಿ....' ವೀಡಿಯೋ ಹಾಡನ್ನು ಬಿಡುಗಡೆ ಮಾಡಿದೆ.  ಈಗಾಗ್ಲೇ ಈ ಹಾಡು ಸಖತ್ ಫೇಮಸ್ ಆಗಿದ್ದು, ಯೂಟ್ಯೂಬ್‍ನಲ್ಲೂ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

ದರ್ಶನ್​ ಸಿನಿಮಾ ಸಂಬಂಧಿಸಿದಂತೆ ಯಾವುದೇ ವಿಷಯ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡರೆ ಸಾಕು, ಅದು ಕೆಲವೇ ಗಂಟೆಗಳಲ್ಲಿ ವೈರಲ್​ ಆಗುತ್ತದೆ. ಅದಕ್ಕಾಗಿಯೇ ಯಜಮಾನ ಸಿನಿಮಾದ ಟ್ರೈಲರ್​ ಬಿಡುಗಡೆಯಅದಾಗ ಅದಕ್ಕೆ ಸಿಕ್ಕ ವೀಕ್ಷಣೆ ಕಂಡು ಯೂಟ್ಯೂಬ್​ ತನ್ನ ಅಧಿಕೃತ ಖಾತೆ ಮೂಲಕ ದರ್ಶನ್​ರಿಗೆ ಶೂಭಕೋರಿತ್ತು.ಈ ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 4 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಸಿಕ್ಕಿದೆ. ಶೈಲಜಾ ನಾಗ್​ ಹಾಗೂ ಬಿ. ಸುರೇಶ್​ ನಿರ್ದೇಶನದ ಈ ಸಿನಿಮಾದಲ್ಲಿ ದರ್ಶನ್​ಗೆ ನಾಯಕಿಯಾಗಿ ಕೊಡಗಿನ ವೈಯ್ಯಾರಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಅರೆ. ಈ ಸಿನಿಮಾ ತೆರೆಕಂಡ ನಂತರ ಒಟ್ಟಾರೆ 50 ಕೋಟಿ ಗಳಿಕೆ ಮಾಡಿದೆ ಎನ್ನಲಾಗುತ್ತಿದೆ.
Loading...

PHOTOS: ಸೀರೆಯುಟ್ಟು ಕ್ಯಾಮೆರಾಗೆ ಪೋಸ್​ ನೀಡಿದ ತುಪ್ಪದ ಹುಡುಗಿ ರಾಗಿಣಿ ..!
First published:March 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...