Banda Nodu Pailwaan: ಗತ್ತು ತೋರಿಸಲು ಬಂದ ನೋಡು ಸ್ಯಾಂಡಲ್​ವುಡ್​ ಪೈಲ್ವಾನ​..!

Banda Nodu Pailwaan: ಪೈಲ್ವಾನನನ್ನು ಪರಿಚಯಿಸುವ ಟೈಟಲ್​ ಹಾಡಿನ ಝಲಕ್​ ಈ ಹಿಂದೆ ಸಿನಿಮಾದ ಟೀಸರ್​ನಲ್ಲಿ ಸಿಕ್ಕಿತ್ತಾದರೂ ಈಗ ಅದನ್ನು ಸಂಪೂರ್ಣವಾಗಿ ಕಣ್ತುಂಬಿಕೊಳ್ಳುವ ಅವಕಾಶ ನಿಮ್ಮದಾಗಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳದಲ್ಲಿ ಏಕಕಾಲಕ್ಕೆ ಬಂದ ನೋಡು ಪೈಲ್ವಾನ್​... ಹಾಡನ್ನು ಬಿಡುಗಡೆ ಮಾಡಲಾಗಿದೆ.

Anitha E | news18
Updated:July 11, 2019, 6:46 PM IST
Banda Nodu Pailwaan: ಗತ್ತು ತೋರಿಸಲು ಬಂದ ನೋಡು ಸ್ಯಾಂಡಲ್​ವುಡ್​ ಪೈಲ್ವಾನ​..!
ಪೈಲ್ವಾನ್​ ಸಿನಿಮಾದಲ್ಲಿ ಸುದೀಪ್​
Anitha E | news18
Updated: July 11, 2019, 6:46 PM IST
- ಅನಿತಾ ಈ, 

ಕೇವಲ ಪೋಸ್ಟರ್​ಗಳು ಹಾಗೂ ಟೀಸರ್​ನಿಂದಲೇ ನೋಡುಗರನ್ನು ಹುಚ್ಚೆಬ್ಬಿಸಿದ್ದ ಕಿಚ್ಚ ಸುದೀಪ್​ ಅಭಿನಯದ 'ಪೈಲ್ವಾನ್​' ಸಿನಿಮಾದ ಟೈಟಲ್​ ಟ್ರ್ಯಾಕ್​​ ಬಿಡುಗಡೆಯಾಗಿದೆ. ಈ ಹಿಂದೆ ಸಿನಿಮಾದ ಟೀಸರ್​ನಲ್ಲಿ ಈ ಹಾಡಿನ ಝಲಕ್​ ತೋರಿಸಲಾಗಿತ್ತು.

'ಪೈಲ್ವಾನ'ನನ್ನು ಪರಿಚಯಿಸುವ ಈ ಹಾಡನ್ನು ಬಿಡುಗಡೆ ಮಾಡುವುದಾಗಿ ಈ ಹಿಂದೆಯೇ ಹೇಳಲಾಗುತ್ತಿದ್ದಾದರೂ, ಕೆಲವೇ ಗಂಟೆಗಳ ಹಿಂದೆ ಲಹರಿ ಸಂಸ್ಥೆ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಈ ಕುರಿತಾಗಿ ಟ್ವೀಟ್​ ಸಹ ಮಾಡಿತ್ತು. ​

Pailwaan Title track
ತೆಲುಗಿನಲ್ಲೂ ಬಿಡುಗಡೆಯಾಗಲಿದೆ 'ಪೈಲ್ವಾನ್​' ಟೈಟಲ್​ ಟ್ಯ್ರಾಕ್​


Pailwaan Title track
'ಪೈಲ್ವಾನ್​' ಸಿನಿಮಾ ಟೈಟಲ್​ ಸಾಂಗ್​


ಅರ್ಜುನ್​ ಜನ್ಯ ಸಂಗೀತ ನೀಡಿರುವ ಈ ಚಿತ್ರದ ಟೈಟಲ್​ ಟ್ರ್ಯಾಕ್​ಗೆ ವಿ. ನಾಗೇಂದ್ರ ಪ್ರಸಾದ್​ ಸಾಹಿತ್ಯಕ್ಕೆ ವ್ಯಾಸ ರಾಜ್​ ಕಂಠದಾನ ಮಾಡಿದ್ದಾರೆ. 'ಪೈಲ್ವಾನ್​' ಸಿನಿಮಾದ ಕನ್ನಡ ಹಾಡಿನ ಲಿಂಕ್​ ಇಲ್ಲಿದೆ ನೋಡಿ...


Loading...

ಎಲ್ಲರಿಗೂ ತಿಳಿದಿರುವಂತೆಯೇ ಕನ್ನಡದ ಜೊತೆಗೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳದಲ್ಲೂ ಈ ಚಿತ್ರ ಬಿಡುಗಡೆಯಾಗಲಿದ್ದು, ಇಂದು ಐದೂ ಭಾಷೆಗಳಲ್ಲಿ ಟೈಟಲ್​ ಟ್ರ್ಯಾಕ್​ ಬಿಡುಗಡೆಯಾಗಿದೆ.









ಸ್ವಪ್ನ ಕೃಷ್ಣ ನಿರ್ಮಾಣದ ಹಾಗೂ ಕೃಷ್ಣ ನಿರ್ದೇಶನದ 'ಪೈಲ್ವಾನ' ಸಿನಿಮಾದಲ್ಲಿ ಆಕಾಂಕ್ಷ ಸಿಂಗ್​ ಸುದೀಪ್​ಗೆ ಜೊತೆಯಾಗಿದ್ದಾರೆ. ಉಳಿದಂತೆ ಬಾಲಿವುಡ್​ ನಟ ಸುನೀಲ್​ ಶೆಟ್ಟಿ, ಕಬೀರ್ ದುಹಾನ್​ ಸಿಂಗ್​, ಶರತ್ ಲೋಹಿತಾಶ್, ಅವಿನಾಶ್ ಸೇರಿದಂತೆ​ ಮುಂತಾದವರು ತಾರಾಗಣದಲ್ಲಿದ್ದಾರೆ.

ಈ ಸಿನಿಮಾದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಇನ್ನೂ ನಡೆಯುತ್ತಿರುವ ಕಾರಣದಿಂದ ಚಿತ್ರದ ರಿಲೀಸ್​ ಡೇಟ್​ ಅನ್ನು ಮುಂದೂಡಲಾಗಿದೆ. ವರಮಹಾಲಕ್ಷ್ಮಿ ಹಬ್ಬಕ್ಕೆ ತೆರೆ ಕಾಣಬೇಕಿದ್ದ ಸಿನಿಮಾ ಈಗ ಸುದೀಪ್​ ಹುಟ್ಟುಹಬ್ಬಕ್ಕೆ ಅಂದರೆ ಸೆಪ್ಟೆಂಬರ್​ನಲ್ಲಿ ಗಣಪತಿ ಹಬ್ಬದ ಸಮಯಕ್ಕೆ ತೆರೆಗಪ್ಪಳಿಸಲಿದೆ.

Urvashi Rautela: ಮತ್ತೇರಿಸುತ್ತಿದೆ ಡಿಬಾಸ್​ ಹುಡುಗಿ ಊರ್ವಶಿಯ ಈ ಹಾಟ್​ ಲುಕ್​..!

First published:July 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...