ಫಿಕ್ಸ್​ ಆಯಿತು ಉಪ್ಪಿ-ರವಿ ಮಾಮನ ಹೊಸ ಸಿನಿಮಾದ ಟೈಟಲ್​..!

news18
Updated:August 6, 2018, 5:59 PM IST
ಫಿಕ್ಸ್​ ಆಯಿತು ಉಪ್ಪಿ-ರವಿ ಮಾಮನ ಹೊಸ ಸಿನಿಮಾದ ಟೈಟಲ್​..!
news18
Updated: August 6, 2018, 5:59 PM IST
ನ್ಯೂಸ್​ 18 ಕನ್ನಡ 

ಸ್ಯಾಂಡಲ್‍ವುಡ್‍ನಲ್ಲಿ ಮಲ್ಟಿಸ್ಟಾರರ್ ಸಿನಿಮಾ ಹೆಚ್ಚಾಗುತ್ತಿದೆ. ಇದೇ ಪಟ್ಟಿಗೆ ರಿಯಲ್ ಸ್ಟಾರ್ ಉಪೇಂದ್ರ ಮತ್ತು ರವಿಚಂದ್ರನ್ ಒಟ್ಟಿಗೆ ಅಭಿನಯಿಸುತ್ತಿರೋ ಸಿನಿಮಾ ಕೂಡ ಸೇರಲಿದೆ. ಸದ್ಯ ಈ ಚಿತ್ರಕ್ಕೆ ಇದೀಗ ಟೈಟಲ್ ಫಿಕ್ಸ್ ಆಗಿದ್ದು, ಫೋಟೋಶೂಟ್‍ಗೆ ಭರ್ಜರಿ ತಯಾರಿ ನಡೆಸುತ್ತಿದೆ ಚಿತ್ರತಂಡ.

ಓಂ ಪ್ರಕಾಶ್ ರಾವ್ ಈ ಹಿಂದೆಯೆ ಉಪ್ಪಿ ಮತ್ತು ರವಿಚಂದ್ರನ್ ಅವರನ್ನ ಹಾಕಿಕೊಂಡು ಸಿನಿಮಾ ಮಾಡುವುದಾಗಿ ಪ್ರಕಟಿಸಿದ್ದರು. ಅಂತೆಯೇ ಚಿತ್ರಕ್ಕೆ ಟೈಟಲ್ ಇಡುವ ಸಮಯದಲ್ಲಿ ಕೊಂಚ ಗೊಂದಲ ಆಗಿತ್ತು. 'ರವಿ ಚಂದ್ರ' ಅಥವಾ 'ದಿಲ್ ಉಪೇಂದ್ರ' ಎಂಬ ಈ ಎರೆಡು ಟೈಟಲ್‍ನಲ್ಲಿ ಒಂದನ್ನು ಇಡಲು ನಿಧರಿಸಿದ್ದ ತಂಡ ಇದೀಗ 'ರವಿ-ಚಂದ್ರ' ಟೈಟಲ್ ಅನ್ನೇ ಫೈನಲ್ ಮಾಡಿದೆ.

ಅದರಂತೆ ಚಿತ್ರ ಕೂಡ ಆದಷ್ಟು ಬೇಗ ಸೆಟ್ಟೇರಲಿದ್ದು, ಅದಕ್ಕೂ ಮುಂಚಿತವಾಗಿ ಚಿತ್ರದ ಫೋಟೋಶೂಟ್ ನಡೆಯಲಿದೆ. ಇದೇ ತಿಂಗಳ 11ರಂದು ಫೋಟೋಶೂಟ್ ನಡೆಯಲಿದ್ದು, 20ರಿಂದ ಚಿತ್ರದ ಚಿತ್ರೀಕರಣ ಆರಂಭವಗಲಿದೆ.

ಹಾಗೇ ಚಿತ್ರಕ್ಕೆ ಶಾನ್ವಿ ಶ್ರೀವಾತ್ಸವ್ ಹಾಗೆ ನಿಮಿಕಾ ರತ್ನಾಕರ್ ನಟಿಯರಾಗಿದ್ದು, ಕನಕಪುರ ಶ್ರೀನಿವಾಸ್ ಚಿತ್ರ ನಿರ್ಮಾಣದ ಹೊಣೆ ಹೊತ್ತುಕೊಂಡಿದ್ದಾರೆ.

 
First published:August 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...