• Home
  • »
  • News
  • »
  • entertainment
  • »
  • Vogue: ವೋಗ್‌ ಮುಖಪುಟದಲ್ಲಿ ಏಕವ್ಯಕ್ತಿಯಾಗಿ ಕಾಣಿಸಿಕೊಂಡ ಮೊದಲ ನಟ; ಇತಿಹಾಸ ನಿರ್ಮಿಸಿದ ತಿಮೊಥಿ

Vogue: ವೋಗ್‌ ಮುಖಪುಟದಲ್ಲಿ ಏಕವ್ಯಕ್ತಿಯಾಗಿ ಕಾಣಿಸಿಕೊಂಡ ಮೊದಲ ನಟ; ಇತಿಹಾಸ ನಿರ್ಮಿಸಿದ ತಿಮೊಥಿ

ತಿಮೋಥಿ ಚಾಲಮೆಟ್

ತಿಮೋಥಿ ಚಾಲಮೆಟ್

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಲ್ಲಿರುವ ತಿಮೋಥಿ ಚಾಲಮೆಟ್ ವೋಗ್‌ ನಿಯತಕಾಲಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತು 106 ವರ್ಷಗಳ ಇತಿಹಾಸದಲ್ಲಿ ಬ್ರಿಟಿಷ್ ವೋಗ್‌ನ ಪ್ರಿಂಟ್ ಕವರ್‌ನಲ್ಲಿ ಏಕವ್ಯಕ್ತಿಯಾಗಿ ಕಾಣಿಸಿಕೊಂಡ ಮೊದಲ ವ್ಯಕ್ತಿ ಎಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಮುಂದೆ ಓದಿ ...
  • Share this:

ಫ್ಯಾಷನ್ (Fashion), ಸೌಂದರ್ಯ, ಸಂಸ್ಕೃತಿ, ಜೀವನ ಸೇರಿದಂತೆ ಹಲವು ವಿಷಯಗಳನ್ನು ಒಳಗೊಂಡ ಅಮೇರಿಕಾದ ಪ್ರತಿಷ್ಠಿತ ಮ್ಯಾಗ್‌ ಜಿನ್‌ (magazine) ಎಂದರೆ ಅದು ವೋಗ್‌. ವೋಗ್‌ ನ (Vogue) ಪ್ರತಿಸಂಚಿಕೆಯ ಮುಖಪುಟಕ್ಕಾಗಿಯೂ ಕಲಾವಿದರು, ನಟ-ನಟಿಯರು ಸೇರಿ ಖ್ಯಾತನಾಮರ ಫೋಟೋಶೂಟ್‌ ನಡೆಸಿ ಅದೇ ಫೋಟೋವನ್ನು ಕವರ್‌ ಫೋಟೋಗೆ ಹಾಕಲಾಗುತ್ತದೆ. ವೋಗ್‌ ನಿಯತಕಾಲಿಕೆಯಲ್ಲಿ ಕವರ್‌ ಫೋಟೋ ಬರುವುದೆಂದರೆ ಕಲಾವಿದರಿಗೆ ಒಂದು ಗರಿಮೆ ಸಿಕ್ಕಿದಂತೆ. ಹೌದು, ಇಲ್ಲೊಬ್ಬ ನಟನಿಗೆ (Actor) ಈ ಗರಿಮೆ ಲಭಿಸಿದ್ದಲ್ಲದೇ, ಅವರು ಹೊಸ ಇತಿಹಾಸವೊಂದನ್ನು (History) ಸಹ ಬರೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿರುವ ತಿಮೋಥಿ ಚಾಲಮೆಟ್ ವೋಗ್‌ ನಿಯತಕಾಲಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತು 106 ವರ್ಷಗಳ ಇತಿಹಾಸದಲ್ಲಿ ಬ್ರಿಟಿಷ್ ವೋಗ್‌ನ (British Vogue) ಪ್ರಿಂಟ್ ಕವರ್‌ನಲ್ಲಿ ಏಕವ್ಯಕ್ತಿಯಾಗಿ ಕಾಣಿಸಿಕೊಂಡ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.


ವೋಗ್‌ ಮುಖಪುಟದಲ್ಲಿ ಮೊದಲು ಏಕವ್ಯಕ್ತಿಯಾಗಿ ಕಾಣಿಸಿಕೊಂಡ ಮೋಥಿ ಚಾಲಮೆಟ್
'ಕಾಲ್ ಮಿ ಬೈ ಯುವರ್ ನೇಮ್', 'ಡ್ಯೂನ್', 'ಇಂಟರ್‌ಸ್ಟೆಲ್ಲರ್' ಮತ್ತು ಇತರ ಚಿತ್ರಗಳಲ್ಲಿ ನಟಿಸಿರುವ 26 ವರ್ಷದ ಅಮೇರಿಕನ್ ನಟ ತಿಮೋತಿ ಚಾಲಮೆಟ್ ವೋಗ್‌ ನಿಯತಕಾಲಿಕೆಯ ಮುಖಪುಟದಲ್ಲಿ ಏಕವ್ಯಕ್ತಿಯಾಗಿ ಕಾಣಿಸಿಕೊಂಡ ಮೊದಲ ಕಲಾವಿದರಾಗಿದ್ದಾರೆ. ಚಾಲಮೆಟ್, ತನ್ನ ಸ್ಟೈಲ್‌ ಮತ್ತು ಫ್ಯಾಷನ್ ನಿಂದಲೇ ಅತಿಹೆಚ್ಚು ಟ್ರೆಂಡಿಂಗ್‌ ನಲ್ಲಿರುತ್ತಾರೆ. ಇವರ ರೆಡ್‌ ಕಾರ್ಪೆಟ್‌ ಲುಕ್‌ ಗಾಗಿ ಕೂಡ ಮೆಚ್ಚುಗೆ ಪಡೆದಿದ್ದಾರೆ.


ಶರ್ಟ್‌ಲೆಸ್ ಸೂಟ್ ಧರಿಸಿ ಸಖತ್‌ ಮಿಂಚಿಂಗ್
ಚಾಲಮೆಟ್, ವೋಗ್ ನಿಯತಕಾಲಿಕದ ಅಕ್ಟೋಬರ್ ಸಂಚಿಕೆಗಾಗಿ ಫೋಟೋ ಶೂಟ್‌ ಮಾಡಿಸಿಕೊಂಡಿದ್ದಾರೆ. ಈ ಫೋಟೋಶೂಟ್‌ ಗಾಗಿ ಅವರು ಸರಂಜಾಮು ಅಂದರೆ ಶರ್ಟ್‌ಲೆಸ್ ಸೂಟ್ ಧರಿಸಿ ಸಖತ್‌ ಮಿಂಚಿದ್ದಾರೆ. ಫ್ಯಾಶನ್‌ ಐಕಾನ್‌ ಎಂದೇ ಖ್ಯಾತಿ ಪಡೆದಿರುವ ಇವರು ಕಳೆದ ವಾರ ವೆನಿಸ್ ಚಲನಚಿತ್ರೋತ್ಸವದಲ್ಲಿ ಬ್ಯಾಕ್‌ಲೆಸ್ ಹಾಲ್ಟರ್‌ನೆಕ್ ಟಾಪ್ ಧರಿಸಿ ಎಲ್ಲರ ಕಣ್ಣು ಕುಕ್ಕುವಂತೆ ಮಾಡಿದ್ದರು. ಫ್ಯಾಶನ್‌ ಲೋಕದಲ್ಲಿ ಆ ಉಡುಪುಗಳು ಸಾಕಷ್ಟು ವೈರಲ್‌ ಕೂಡ ಆಗಿದ್ದವು.ಇದನ್ನೂ ಓದಿ:  Vijay Deverakonda: ಖುಷಿ ಸಿನಿಮಾದಲ್ಲಿ ಸಮಂತಾ ಸೇರಿ ಇಬ್ಬರ ಜೊತೆ ವಿಜಯ್ ದೇವರಕೊಂಡ ರೊಮ್ಯಾನ್ಸ್


ಇದೊಂದು ಗೌರವ ಎಂದ ಚಾಲಮೆಟ್
ವೋಗ್‌ನೊಂದಿಗೆ ಮಾತನಾಡುತ್ತಾ ಚಾಲಮೆಟ್, ನಿಯತಕಾಲಿಕದ ಮುಖಪುಟದಲ್ಲಿ ಏಕವ್ಯಕ್ತಿಯಾಗಿ ಕಾಣಿಸಿಕೊಂಡ ಮೊದಲ ವ್ಯಕ್ತಿಯಾದ ಖುಷಿಯನ್ನು ವ್ಯಕ್ತಪಡಿಸಿದರು. ಇದೊಂದು "ಅಸಾಧಾರಣ ಮತ್ತು ವಿಚಿತ್ರವಾಗಿದೆ. ಮತ್ತು ಇದನ್ನು ಕೇವಲ ಒಂದು ಗೌರವ ಎಂದು ನಾನು ಭಾವಿಸುತ್ತೇನೆ" ಎಂದು ತಿಳಿಸಿದರು.


ತನ್ನ ಸಂಪಾದಕರ ಪತ್ರದಲ್ಲಿ ಬರೆಯುತ್ತಾ, ವೋಗ್‌ನ ಪ್ರಧಾನ ಸಂಪಾದಕ ಎಡ್ವರ್ಡ್ ಎನ್ನಿನ್‌ಫುಲ್, ಚಲಾಮೆಟ್ ಆಯ್ಕೆಯು ಭಾಗಶಃ ಅವರು ಅನುಸರಿಸಿದ ಫ್ಯಾಶನ್ ವ್ಯಕ್ತಿತ್ವವಾಗಿದೆ, ಇದು ಮಹಿಳೆಯರು ಮತ್ತು ಪುರುಷರಿಗೆ ಸಮಾನವಾಗಿ ಸ್ಫೂರ್ತಿ ನೀಡುವ ಶೈಲಿಯು ಸಹಜ ಮತ್ತು ಸ್ವಯಂ-ಭರವಸೆ ಹೊಂದಿದೆ. ಮಿನುಗುವ ಸೂಟ್‌ನಿಂದ ಹಿಡಿದು ತನ್ನ ದೈನಂದಿನ ವಾರ್ಡ್‌ರೋಬ್‌ನ ವಿಂಟೇಜ್ ಟಿ-ಶರ್ಟ್‌ಗಳು, ಡೆನಿಮ್‌ನವರೆಗೆ ಆತನು ಎಲ್ಲಾ ಲುಕ್‌ ನಲ್ಲೂ ಅದ್ಭುತವಾಗಿ ಕಾಣುತ್ತಾನೆ" ಎಂದು ಬರೆದಿದ್ದಾರೆ.


ಚಾಲ್‌ ಮೆಟ್‌ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ 
ಚಾಲ್‌ ಮೆಟ್‌ ಕೂಡ ಅವರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸ್ಟೀವನ್ ಮೀಸೆಲ್ ಎಂಬ ಛಾಯಾಚಿತ್ರ ತೆಗೆದ ವೋಗ್ ಶೂಟ್ ನಲ್ಲಿ ಅವರ ಉಡುಪುಗಳು ತುಂಬಾ ಭಿನ್ನವಾಗಿವೆ. ಫೋಟೋ ಒಂದರಲ್ಲಿ ಕಪ್ಪು ಬಣ್ಣದ ಬಟ್ಟೆಗೆ ಪರ್ಲ್ ಚೋಕರ್ ಅನ್ನು ಧರಿಸಿರುತ್ತಾರೆ ಮತ್ತು ಇತರ ಛಾಯಾಚಿತ್ರಗಳಲ್ಲಿ ಕಿತ್ತಳೆ ಮತ್ತು ಗುಲಾಬಿ ಕಾರ್ಡಿಜನ್ ಮತ್ತು ಒಂದು ಜೊತೆ ಕಪ್ಪು ಚರ್ಮದ ಪ್ಯಾಂಟ್ ಅನ್ನು ಧರಿಸಿದ್ದಾರೆ.ಇದನ್ನೂ ಓದಿ: Emraan Hashmi: ಬಾಲಿವುಡ್ ನಟ ಇಮ್ರಾನ್ ಹಶ್ಮಿ ಮೇಲೆ ಕಾಶ್ಮೀರದಲ್ಲಿ ಕಲ್ಲು ತೂರಾಟ


ಬ್ರಿಟಿಷ್ ವೋಗ್‌ನ ಮುದ್ರಣ ಆವೃತ್ತಿಯ ಮುಖಪುಟದಲ್ಲಿ ಏಕವ್ಯಕ್ತಿಯಾಗಿ ಕಾಣಿಸಿಕೊಂಡ ಮೊದಲ ವ್ಯಕ್ತಿ ನಟನಾಗಿದ್ದರೂ, ಪತ್ರಿಕೆಯ ಇತಿಹಾಸದಲ್ಲಿ ಪೂರ್ವನಿದರ್ಶನಗಳಿವೆ. ಹ್ಯಾರಿ ಸ್ಟೈಲ್ಸ್ 2020ರಲ್ಲಿ ಅಮೇರಿಕನ್ ವೋಗ್‌ನ ಮುಖಪುಟದಲ್ಲಿ ಮೊದಲ ವ್ಯಕ್ತಿಯಾಗಿದ್ದರು. ಮತ್ತು ಸ್ಟೈಲ್ಸ್‌ನ ಮಾಜಿ ಬ್ಯಾಂಡ್‌ಮೇಟ್ ಝೈನ್ ಮಲಿಕ್ ವಾಸ್ತವವಾಗಿ ಬ್ರಿಟಿಷ್ ವೋಗ್‌ನ ಮೊದಲ ವ್ಯಕ್ತಿಯಾಗಿದ್ದು, 2018 ರಲ್ಲಿ ಡಿಜಿಟಲ್ ಕವರ್‌ನಲ್ಲಿ ಕಾಣಿಸಿಕೊಂಡರು.

Published by:Ashwini Prabhu
First published: