Krrish 4: ಮತ್ತೆ ಮರಳಲಿರುವ ಜಾದೂ, ಕ್ರಿಶ್ 4 ಸಿನಿಮಾದಲ್ಲಿ ಏನೆನೆಲ್ಲಾ ಇರುತ್ತೆ ಗೊತ್ತಾ?

ಕೆಲವು ದಿನಗಳ ಹಿಂದೆ, ಕೋಯಿ ಮಿಲ್ ಗಲಾ ದಿಂದ ಕ್ರಿಶ್ ಯುನಿವರ್ಸ್‍ಗೆ ಜಾದೂ ಮರಳುವ ಸಾಧ್ಯತೆಯ ಬಗ್ಗೆ ಮಾತನಾಡಿದ್ದರು. ಇವು ನಿಜವಾಗಿದ್ದರೆ ಸೂಪರ್ ಹೀರೋ ಕ್ರಿಶ್‍ನ ಅಭಿಮಾನಿಗಳಿಗೆ ಸಂತೋಷವಾಗುವುದಂತೂ ಖಂಡಿತಾ.

ಹೃತಿಕ್ ರೋಷನ್- ಕ್ರಿಶ್​

ಹೃತಿಕ್ ರೋಷನ್- ಕ್ರಿಶ್​

  • Share this:
ಈ ವರ್ಷದ ಜೂನ್‍(June)ನಲ್ಲಿ ಕ್ರಿಶ್ ಸಿನಿಮಾ(Krrish Cinema)ದ 15ನೇ ವರ್ಷದ ಸಂಭ್ರಮ ಆಚರಿಸಿದ ಹೃತಿಕ್ ರೋಶನ್(Hrithik Roshan ), ಕ್ರಿಶ್ 4(Krrish-4) ಚಿತ್ರದ ಘೋಷಣೆಯನ್ನು ಕೂಡ ಮಾಡಿದ್ದರು. “ಹಿಂದಿನದ್ದು ಮುಗಿದಿದೆ ಭವಿಷ್ಯ ಏನನ್ನು ಹೊತ್ತು ತರಲಿದೆ ನೋಡೋಣ. #15YearsOfKrrish #Krrish4“ ಎಂದು ಅಡಿ ಬರಹವುಳ್ಳ ಪೋಸ್ಟ್ ಮೂಲಕ ಅವರು ಚಿತ್ರದ ಕಥಾ ವಸ್ತುವಿನ ಬಗ್ಗೆ ಚಿಕ್ಕ ಸುಳಿವನ್ನು ಬಿಟ್ಟುಕೊಟ್ಟಿದ್ದರು. 2013ರಲ್ಲಿ ಬಿಡುಗಡೆ ಆಗಿದ್ದ ಕ್ರಿಶ್ 3ರಲ್ಲಿ, ಹೃತಿಕ್ ದ್ವಿಪಾತ್ರದಲ್ಲಿ ಅಭಿನಯಿಸಿದ್ದರು ಮತ್ತು ಪ್ರಿಯಾಂಕ ಚೋಪ್ರಾ(Priyanka Chopra), ವಿವೇಕ್ ಒಬೆರಾಯ್(Vivek Oberoi) ಮತ್ತು ಕಂಗನಾ ರಣಾವತ್(Kangana Ranaut) ಅವರನ್ನು ಒಳಗೊಂಡಿದ್ದ ತಾರಾಗಣವಿತ್ತು. ಆ ವರ್ಷ ಬಾಕ್ಸ್ ಆಫೀಸ್‍(Box Office)ನಲ್ಲಿ ಜಯಭೇರಿ ಬಾರಿಸಿದ್ದ ಚಿತ್ರವದು. ಕ್ರಿಶ್ 4ರಲ್ಲಿ ಏನೆಲ್ಲಾ ಇರಲಿದೆ ? ಇಲ್ಲಿದೆ ಮಾಹಿತಿ.

ಕ್ರಿಶ್ 4ಗೆ ಹೃತಿಕ್ ಸಿದ್ಧತೆ

ಸಂಗೀತ ನಿರ್ದೇಶಕ ರಾಜೇಶ್ ರೋಶನ್, ಕ್ರಿಶ್ 4ರ ಸಂಗೀತದ ಬಗ್ಗೆ ಮಾತನಾಡುತ್ತಾ, “ ನಾವು ಕ್ರಿಶ್ 4ರ ಸಂಗೀತದ ಕೆಲಸವನ್ನು ಇನ್ನೂ ಆರಂಭಿಸಿಲ್ಲ, ಆದರೆ ಅಂತಿಮ ಸ್ಕ್ರಿಪ್ಟ್ ಸಿದ್ಧವಾದ ಕೂಡಲೇ ಆರಂಭಿಸುತ್ತೇವೆ. ರಾಕೇಶ್ ಅವರು ಸ್ಕ್ರಿಪ್ಟ್ ಸಿದ್ಧಪಡಿಸುತ್ತಿದ್ದಾರೆ. ಸಮಯ ಕಳೆದಂತೆ ನೀವು ಕೂಡ ಶಬ್ಧ ಮತ್ತು ಸಂಗೀತ ಹೊಸ ತಂತ್ರಗಳೊಂದಿಗೆ ಬೆಳೆಯುತ್ತೀರಿ, ಅದನ್ನು ನಾನು ಕ್ರಿಶ್ 4ರ ಸಂಯೋಜನೆಯಲ್ಲಿ ಬಳಸಿಕೊಳ್ಳಲು ಬಯಸುತ್ತೇನೆ. ಈಗ ಪ್ರತಿ ಮನೆಗಳಲ್ಲೂ ಸಂಗೀತ ಸಿಸ್ಟಮ್ ಹೆಚ್ಚು ಸುಧಾರಿತವಾಗಿದೆ, ಈ ಆವಿಷ್ಕಾರಗಳಿಗೆ ಹೊಂದಿಕೊಳ್ಳಲು ಆಧುನಿಕ ತಂತ್ರಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಬಹುಶಃ ಹೃತಿಕ್ ಹಾಡಬಹುದು, ಒಂದು ಹಾಡಂತೂ ಖಂಡಿತಾ ಇರುತ್ತದೆ“ ಎಂದು ಹೇಳಿದ್ದಾರೆ.

ಇದನ್ನೂ ಓದಿ:Rajinikanth: ಮನೆಗೆ ಮರಳಿದ ಸೂಪರ್​ ಸ್ಟಾರ್​ ರಜನಿಕಾಂತ್​: ಸುದ್ದಿ ತಿಳಿದು `ಅಣ್ಣಾತೆ’ ಫ್ಯಾನ್ಸ್​ ದಿಲ್​ಖುಷ್!

ಸಮಯದ ಪ್ರಯಾಣ

ಈ ಸೂಪರ್ ಹೀರೋ ಸಿನಿಮಾದ 4ನೇ ಭಾಗವು ಟೈಮ್ ಟ್ರಾವೆಲ್ ಕುರಿತ ಕಥೆಯನ್ನು ಕೂಡ ಹೊಂದಿದೆ. “ಕೋಯಿ ಮಿಲ್ ಗಯಾ ಮತ್ತು ಕ್ರಿಶ್ ಒಂದೇ ಕಡೆ ಸೇರುವಂತ ಕಥೆಯೊಂದನ್ನು ಹಣೆಯಲು ನಿರ್ಮಾಪಕರು ಪ್ರಯತ್ನಿಸುತ್ತಿದ್ದಾರೆ. ಜಾದೂವನ್ನು ಹಿಂದಕ್ಕೆ ತರುವ ಆಲೋಚನೆ ಜಾರಿಯಲ್ಲಿರುವಾಗ, ನಿರ್ಮಾಪಕರು ಸಮಯದ ಪ್ರಯಾಣದ ಪರಿಕಲ್ಪನೆಯ ಗುರಿ ಹೊಂದಿದ್ದಾರೆ. ಕ್ರಿಶ್ ಸರಣಿ ಬಲವಾದ ವೈಜ್ಞಾನಿಕ ಹಿನ್ನೆಲೆಯನ್ನು ಹೊಂದಿದೆ ಮತ್ತು ಎಲ್ಲಾ ಸಿನಿಮಾಗಳ ಮೂಲಕ ಕಾಲದ ಅನುಕ್ರಮವಾದ ಪ್ರಾಮುಖ್ಯತೆ ಹೊಂದಿದೆ. ಕೋಯಿ ಮಿಲ್ ಗಯಾದಲ್ಲಿಮ ರೋಹಿತ್ ಮೆಹರಾ ಜಾದೂ ಜೊತೆ ಸಂವಹನ ನಡೆಸಲು ತನ್ನ ತಂದೆಯ ಸಲಕರಣೆಗಳನ್ನು ಬಳಸುತ್ತಾನೆ, ಆದರೆ ಕ್ರಿಶ್‍ನಲ್ಲಿ ರೋಹಿತ್ ಸ್ವಂತ ಆಸಕ್ತಿಯಿಂದ ಟೈಮ್ ಮೆಶಿನ್ ಅಭಿವೃದ್ಧಿ ಪಡಿಸುತ್ತಾನೆ. ಟೈಮ್ ಟ್ರಾವೆಲ್ ಕ್ರಿಶ್ 4ರ ಪ್ರಮುಖ ಅಂಶವಾಗಿದೆ” ಎಂದು ಮೂಲಗಳು ತಿಳಿಸಿವೆ.

ಜೀವನಕ್ಕಿಂತ ದೊಡ್ಡ ಕಥೆ

ನಿರ್ದೇಶಕ ರಾಕೇಶ್ ರೋಶನ್ ಮತ್ತು ನಟ ಹೃತಿಕ್, ಕೆಲವು ವರ್ಷಗಳಿಂದ ಸ್ಕ್ರಿಪ್ಟ್ ಕುರಿತು ತಮ್ಮ ಬರಹಗಾರರ ತಂಡದೊಂದಿಗೆ ಕೆಲಸ ಮಾಡುತ್ತಿದ್ದಾರೆ. ಅಷ್ಟು ಮಾತ್ರವಲ್ಲದೆ, ಈ ಅಪ್ಪ-ಮಗನ ಜೋಡಿ ಪಾಶ್ಚಿಮಾತ್ಯ ವಿಶುವಲ್ ಎಫೆಕ್ಟ್ ತಜ್ಞರ ಜೊತೆಯೂ ಮಾತುಕಥೆ ನಡೆಸುತ್ತಿದೆ. “ಕ್ರಿಶ್ ಸಿನಿಮಾ ರೋಶನ್ ಕುಟುಂಬದ ಮನಸ್ಸಿಗೆ ಹತ್ತಿರವಾದದ್ದು ಮತ್ತು ಅವರು, ವಾಸ್ತವಕ್ಕೆ ಹತ್ತಿರವಾದ, ಆದರೂ ಜೀವನಕ್ಕಿಂತ ವಿಶಾಲವಾದ ಪೂರ್ಣ ಪ್ರಮಾಣದ ಸಿನಿಮಾ ತಯಾರಿಸಲು ಉತ್ಸುಕರಾಗಿದ್ದಾರೆ” ಎಂದು ಮೂಲಗಳು ತಿಳಿಸಿವೆ.

ಖಳ ನಾಯಕರ ಸೇನೆ

ಮಾಧ್ಯಮವೊಂದರ ವರದಿಯ ಪ್ರಕಾರ, ಕ್ರಿಶ್ 4ರಲ್ಲಿ ಹೃತಿಕ್ ಅವರು ಖಳ ನಾಯಕರ ಸೇನೆಯನ್ನು ಎದುರಿಸುವ ಸಾಧ್ಯತೆ ಇದೆ. “ನಿರ್ದೇಶಕರು ನಾಯಕನ ವಿರುದ್ಧ ಹೋರಾಡಲು ಸೂಪರ್ ವಿಲನ್‍ಗಳ ಸೇನೆಯನ್ನು ಪರಿಚಯಿಸುವ ಆಲೋಚನೆಯಲ್ಲಿದ್ದಾರೆ ಮತ್ತು ಪ್ರತೀ ಖಳನಿಗೆ ಪ್ರತ್ಯೇಕ ಲುಕ್ ನೀಡುವುದಕ್ಕಾಗಿ ಹಾಲಿವುಡ್‍ನಿಂದ ವಿನ್ಯಾಸಗಾರರನ್ನು ಕರೆಸಿದ್ದಾರೆ” ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Puneeth Rajkumar Death: ಮಂತ್ರಾಲಯದಲ್ಲಿ ವೀಣೆ ಜಾರಿಕೊಂಡಿದ್ದು ಪುನೀತ್ ಸಾವಿನ ಮುನ್ಸೂಚನೆಯಾ? ವಿಡಿಯೋ ವೈರಲ್

ಮರಳಲಿರುವ ಜಾದೂ

ಕೆಲವು ದಿನಗಳ ಹಿಂದೆ, ಕೋಯಿ ಮಿಲ್ ಗಲಾ ದಿಂದ ಕ್ರಿಶ್ ಯುನಿವರ್ಸ್‍ಗೆ ಜಾದೂ ಮರಳುವ ಸಾಧ್ಯತೆಯ ಬಗ್ಗೆ ಮಾತನಾಡಿದ್ದರು. ಇವು ನಿಜವಾಗಿದ್ದರೆ ಸೂಪರ್ ಹೀರೋ ಕ್ರಿಶ್‍ನ ಅಭಿಮಾನಿಗಳಿಗೆ ಸಂತೋಷವಾಗುವುದಂತೂ ಖಂಡಿತಾ.
Published by:Latha CG
First published: