news18-kannada Updated:May 25, 2020, 9:52 PM IST
ವ್ ಇನ್ ಮೂವಿ ಥಿಯೇಟರ್
ಇಂದು ಟೆಕ್ನಾಲಜಿ ಬೆಳದು ನಿಂತಿವೆ. ಬೆರಳ ತುದಿಯಲ್ಲೇ ಸಿನಿಮಾ ನೋಡುವ ಅವಕಾಶ ಇದೆ. ಆದರೂ ಥಿಯೇಟರ್ ನಲ್ಲಿ ಸಿನಿಮಾ ನೋಡುವ ಮಜಾನೇ ಬೇರೆ. ಪರದೆ ಮೇಲೆ ಬರುವ ಭಾವುಕ ದೃಶ್ಯವನ್ನು ಕಂಡು ಏಕಕಾಲದಲ್ಲಿ ಭಾವುಕರಾಗೋದು, ಹಾಸ್ಯ ದೃಶ್ಯ ಬಂದಾಗ ನಕ್ಕು ನಲಿಯೋದು, ಹೀಗೆ ವಿವಿಧ ಭಾವನೆಗಳನ್ನ ಏಕಕಾಲದಲ್ಲಿ ಸಾವಿರಾರು ಜನ ವ್ಯಕ್ತಪಡಿಸುವುದರಲ್ಲಿ ಥ್ರಿಲ್ಲೇ ಬೇರೆ. ಅದನ್ನ ಥಿಯೇಟರ್ನಲ್ಲಷ್ಟೇ ಅನುಭವಿಸಬೇಕು. ಆಂಡ್ರಾಯ್ಡ್ ಫೋನ್, ಓಟಿಟಿ ಫ್ಲಾಟ್ ಫಾರಂನಲ್ಲಿ ಆ ರೀತಿಯ ಮಜಾ ಸಿಗೋದು ಕಷ್ಟ.
ಆದರೆ ಸದ್ಯ ಕೊರೋನಾ ಎಂಬ ಮಹಾಮಾರಿ ಅಟ್ಟಹಾಸ ತೋರುತ್ತಿದೆ. ಚೈನಾ ಮೂಲದ ಕೋವಿಡ್ ವೈರಸ್ ಗೆ 100 ವರ್ಷಗಳಿಗೂ ಹಳೆಯದಾದ ಥಿಯೇಟರ್ ಕಲ್ಚರ್ ಸ್ತಬ್ಧವಾಗಿದೆ. ಜಗತ್ತಿನೆಲ್ಲೆಡೆ ಚಿತ್ರಮಂದಿರಗಳು ಬಾಗಿಲು ಹಾಕಿವೆ. ಇನ್ನೊಂದಷ್ಟು ತಿಂಗಳುಗಳ ಕಾಲ ಹೀಗೆಯೇ ಮುಂದುವರೆಯುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ.
ಹೀಗಾಗಿ ಅಮೇರಿಕಾದಲ್ಲಿ ಸಿನಿಮಾ ನೋಡುವುದಕ್ಕೆ ಆಲ್ಟರ್ನೇಟಿವ್ ಪ್ಲಾನ್ ಕಾರ್ಯರೂಪಕ್ಕೆ ಬಂದಿದೆ. ಅದುವೇ 'ಡ್ರೈವ್ ಇನ್ ಮೂವಿ ಥಿಯೇಟರ್'.
ಅಮೆರಿಕಾದಲ್ಲಿ ಮೇ 6 ರಂದು ಚಾರಿಟಿಗಾಗಿ 'ಡ್ರೈವ್ ಇನ್ ಮೂವಿ ಥಿಯೇಟರ್' ಮೂಲಕ ಡರ್ಟಿ ಡ್ಯಾನ್ಸಿಂಗ್ ಸಿನಿಮಾ ಪ್ರದರ್ಶನಗೊಂಡಿದೆ. ಆನ್ಲೈನ್ ನಲ್ಲಿ ಇದರ ಟಿಕೆಟ್ ಕೇವಲ ಐದೇ ನಿಮಿಷಗಳಲ್ಲಿ ಸೋಲ್ಡ್ ಔಟ್ ಆಗಿದೆಯಂತೆ.
ಇನ್ನು ಮಿಯಾಮಿ ನಗರದ ಕ್ಲಾರ್ಫಿಕ್ಸ್ ಸಿನಿಮಾಸ್ ನಲ್ಲಿ ಜುರಾಸಿಕ್ ಪಾರ್ಕ್ ಹಾಗೂ ಹೆಡ್ ಗಾಗ್ ಸಿನಿಮಾಗಳು ಪ್ರದರ್ಶನಗೊಂಡಿವೆ. ಅಂದಹಾಗೆ ಈ 'ಡ್ರೈವ್ ಇನ್ ಮೂವಿ ಥಿಯೇಟರ್' ಈಗ ಹೊಸದಾಗಿ ಹುಟ್ಟಿಕೊಂಡದ್ದೇನಲ್ಲ. ಇದು ದಶಕಗಳ ಹಿಂದೆಯೇ ಶುರುವಾಗಿತ್ತು. ಮೂವತ್ತು ವರ್ಷಗಳ ಹಿಂದೆ ಬೆಂಗಳೂರಿನಲ್ಲೂ ಇಂತದ್ದೊಂದು ಥಿಯೇಟರ್ ಇತ್ತು.
ಅಷ್ಟಕ್ಕೂ ಈ ‘ಡ್ರೈವ್ ಇನ್ ಮೂವಿ ಥಿಯೇಟರ್‘ ಅಂದರೆ ಏನು ಅಂತ ವಿವರಿಸುವುದಾದರೆ. ಜನ ಕಾರು ಪಾರ್ಕಿಂಗ್ ನಲ್ಲಿ, ದೊಡ್ಡದಾದ ಓಪನ್ ಪ್ಲೇಸ್ ನಲ್ಲಿ ಕೂಳಿತು ಸಿನಿಮಾ ನೋಡುವುದಾಗಿದೆ. ಸುಮಾರು 100 ರಿಂದ 150 ಕಾರು ಪಾರ್ಕಿಂಗ್ ಮಾಡಬಹುದಾದಂತಹ ಸ್ಥಳದಲ್ಲಿ, ನೆಲದಿಂದ 10 ಅಡಿ ಎತ್ತರದಲ್ಲಿ ಸ್ಕ್ರೀನ್, ಎಲ್ಲರಿಗೂ ಕಾಣುವಂತೆ ವ್ಯವಸ್ಥೆ ಮಾಡಲಾಗಿರುತ್ತೆ. ಓಪನ್ ಗ್ರೌಂಡ್ ನಲ್ಲಿ ನಡೆಯುವ ಪ್ರದರ್ಶನ ಇದಾಗಿರುವುದರಿಂದ ರಾತ್ರಿ ಹೊತ್ತು ಮಾತ್ರ ಇಂತಹ 'ಡ್ರೈವ್ ಇನ್ ಮೂವಿ ಥಿಯೇಟರ್' ನಲ್ಲಿ ಪ್ರದರ್ಶನ ವ್ಯವಸ್ಥೆ ಇರುತ್ತದೆ.
ದೀಪಿಕಾ ಆಸೆಯೊಂದನ್ನು ರಣವೀರ್ ಸಿಂಗ್ ಇನ್ನೂ ಈಡೇರಿಸಿಲ್ಲವಂತೆ !; ಏನದು?Roposo: ಸದ್ದಿಲ್ಲದೆ ಜನಪ್ರಿಯಗೊಳ್ಳುತ್ತಿದೆ ಈ ವಿಡಿಯೋ ಶೇರಿಂಗ್ ಆ್ಯಪ್!
First published:
May 25, 2020, 9:48 PM IST