Khaby Lame: ಇವನಂದ್ರೆ ಎಲ್ರಿಗೂ ಸಖತ್ ಇಷ್ಟ, ಟಿಕ್​ ಟಾಕ್​ನಲ್ಲಿ ಖಾಬಿನೇ ನಂಬರ್ ಒನ್!

ಖಾಬಿ ಲೇಮ್ ಅವರ ಟಿಕ್ ಟಾಕ್ ಫಾಲೋವರ್ಸ್ ನಲ್ಲಿ ನಂಬರ್ ಒನ್ ಆಗಿದ್ದಾರೆ. ಈ ಮೂಲಕ ಅವರು ಪ್ರಪಂಚದಲ್ಲಿಯೇ ಅತೀ ಹೆಚ್ಚು ಟಿಕ್ ಟಾಕ್ ಫಾಲೋವರ್ಸ್ ಗಳನ್ನು ಹೊಂದಿದವರಾಗಿದ್ದಾರೆ. 

ಖಾಬಿ ಲೇಮ್

ಖಾಬಿ ಲೇಮ್

  • Share this:
ಪ್ರಸ್ಥುತ ಕಾಲಮಾನದಲ್ಲಿ ಪ್ರತಿವಬ್ಬರ ಬಳಿಯೂ ಸ್ಮಾರ್ಟ್ ಫೋನ್ (Smartphone) ಎಂಬುದು ಇದ್ದೇ ಇರುತ್ತದೆ. ಅದರಲ್ಲಿಯೂ ಇಂಟರ್​ನೆಟ್​ (Internet) ಎನ್ನುವುದು ಆರಂಭವಾದ ಮೇಲೆ ಎಲ್ಲವೂ ನಮ್ಮ ಅಂಗೈ ತುದಿಗೆ ಸಿಗುತ್ತಿದೆ. ಈಗಂತೂ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್ ಹಾಗೂ ಕಿರು ವಿಡಿಯೋಗಳು ಸಾಕಷ್ಟು ಸಂಚಲನ ಸೃಷ್ಟಿ ಮಾಡಿದೆ. ಈ ಚಿಕ್ಕ ವಿಡಿಯೋಗಳಿಂದ (Videos) ಅದೆಷ್ಟೋ ಯುವ ಪ್ರತಿಭೆಗಳಿಗೆ ಉತ್ತಮ ಪ್ಲಾಟ್​ ಫಾರ್ಮ್​ ಸಿಕ್ಕಿದೆ ಎನ್ನಬಹುದು. ಟಿಕ್​ ಟಾಕ್ (TikTok) ಎಂಬ ಕಿರಿ ವಿಡಿಯೋ ಆ್ಯಪ್ ನಿಂದ ಪ್ರಾರಂಭವಾದ ಈ ಹೊಸ ಯುಗ ಇದೀಗ ಹಲವಾರು ಆಯಾಮಗಳನ್ನು ತೆಗೆದುಕೊಂಡಿದೆ. ಸದ್ಯ ಭಾರತದಲ್ಲಿ ಟಿಕ್​ ಟಾಕ್ ಅನ್ನು ಬ್ಯಾನ್ ಮಾಡಲಾಗಿದೆ. ಇದರ ಪರಿಯಾಯವಾಗಿ ಇನ್ಸ್ಟಾಗ್ರಾಂ (Instagram) ಸಿದ್ಧವಾಗುತ್ತಿದೆ. ರೀಲ್ಸ್ ಗಳು ಹೆಚ್ಚು ಜನಪ್ರೀಯವಾಗಿದೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಇದೀಗ ಟಿಕ್ ಟಾಕ್​ ನಲ್ಲಿ ಪ್ರಪಂಚದಲ್ಲಿಯೇ ಅತೀ ಹೆಚ್ಚು ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ಹಾಲಿವುಡ್​ ಸ್ಟಾರ್​ ಗಳನ್ನೂ ಈ ಮೂಲಕ ಹಿಂದಿಕ್ಕಿದ್ದಾರೆ.

ಹಾಲಿವುಡ್​ ಸ್ಟಾರ್​ ಗಳನ್ನೇ ಹಿಂದಿಕ್ಕಿದ ಖಾಬಿ ಲೇಮ್:

ನೀವೆಲ್ಲಾ ಟಿಕ್ ಟಾಕ್ ಅಥವಾ ಇನ್ಟ್ಸಾಗ್ರಾಂ ರೀಲ್ಸ್ ಗಳಲ್ಲಿ ಖಾಬಿ ಲೇಮ್ ಎಂಬ ವ್ಯಕ್ತಿಯನ್ನು ನೋಡಿರುತ್ತೀರಿ. ಕೊರೋನಾ ಲಾಕ್ ಡೌನ್ ನಂತರ ಹೆಚ್ಚು ಪ್ರಸಿದ್ದಿಗೆ ಬಂದ ಈ ವ್ಯಕ್ತಿ ಇದೀಗ ಪ್ರಪಂಚದ ಟಾಪ್ ಸೆಲೆಬ್ರಿಟಿಗಳ ಸಾಲಿಗೆ ನಿಂತಿದ್ದಾರೆ. ಹೌದು, ಖಾಬಿ ಲೇಮ್ ಅವರ ಟಿಕ್ ಟಾಕ್ ಫಾಲೋವರ್ಸ್ ನಲ್ಲಿ ನಂಬರ್ ಒನ್ ಆಗಿದ್ದಾರೆ. ಈ ಮೂಲಕ ಅವರು ಪ್ರಪಂಚದಲ್ಲಿಯೇ ಅತೀ ಹೆಚ್ಚು ಟಿಕ್ ಟಾಕ್ ಫಾಲೋವರ್ಸ್ ಗಳನ್ನು ಹೊಂದಿದವರಾಗಿದ್ದಾರೆ.

22 ವರ್ಷ ವಯಸ್ಸಿನ ಖಾಬಿ ಲೇಮ್ ಅಮೆರಿಕನ್ ಟಿಕ್‌ಟಾಕ್ ಸ್ಟಾರ್ ಚಾರ್ಲಿ ಡಿ ಅಮೆಲಿಯೊ ಅವರನ್ನು ಹಿಂದಿಕ್ಕಿದ್ದಾರೆ. ಡಿ ಅಮೆಲಿಯೊ ಅವರು ಟಿಕ್​ ಟಾಕ್​ ನಲ್ಲಿ 142.3 ಮಿಲಿಯನ್‌ ಹಿಂಬಾಲಕರನ್ನು ಹೊಂದಿದ್ದಾರೆ. ಆದರೆ ಖಾಬಿ ಅವರು 142.7 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದುವ ಮೂಲಕ ವರ್ಲ್ಡ ನಂಬರ್ ಒನ್ ಟಿಕ್ ಟಾಕ್ ಹಿಂಬಾಲರನ್ನು ಹೊಂದಿದವರಾಗಿದ್ದಾರೆ. ಅಲ್ಲದೇ ಖಾಬಿ ಇನ್ಸ್ಟಾಗ್ರಾಂ ನಲ್ಲಿಯೂ 78.3 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ.

ಇದನ್ನೂ ಓದಿ: Srinidhi Shetty: ರಾಕಿ ಭಾಯ್ ಬೆಡಗಿಯ ಮುಂದಿನ ಸಿನಿಮಾ ಯಾವ್ದು? ಶ್ರೀನಿಧಿಗೆ ಸಿನಿಮಾಗಳಲ್ಲಿ ಇದೇ ಸಮಸ್ಯೆಯಂತೆ

ಮಾತನಾಡದೇ ವಿಡಿಯೋಗಳನ್ನು ಮಾಡುವ ಖಾಬಿ:

ಖಾಬಿ ಲೇಮ್ ತಮ್ಮ ಯಾವುದೇ ವಿಡಿಯೋದಲ್ಲಿಯೂ ಮಾತನಾಡುವುದಿಲ್ಲ. ಕೇವಲ ತಮ್ಮ ಹಾವಭಾವಗಳಿಂದಲೇ ವಿಭಿನ್ನವಾಗಿ ಕಿರು ವಿಡಿಯೋಗಳನ್ನು ಮಾಡುತ್ತಿರುತ್ತಾರೆ. ಯಾವುದೇ ಕಷ್ಟದ ಕೆಲಸವನ್ನು ಮಾಡುವಬದಲು ಅದನ್ನೇ ಸುಲಭವಾಗಿ ಹೇಗೆ ಮಾಡಬಹುದು ಎನ್ನುವುದನ್ನು ಖಾಬಿ ತೋರಿಸುತ್ತಾರೆ. ಅದನ್ನೇ ವಿಭಿನ್ನವಾಗಿ ಹಾಸ್ಯಮಯವಾಗಿ ಪ್ರಸ್ತುತ ಪಡಿಸುತ್ತಾರೆ. ಅಲ್ಲದೇ ಅವರ ಸಿಗ್ನೇಚರ್ ಸ್ಟೈಲ್​ ಇಂದಿಗೂ ಟ್ರೆಂಡ್​ ಆಗಿದೆ. ಹೀಗಾಗಿ ಅವರಿಗೆ ಇನ್ಸ್ಟಾಗ್ರಾಂ ಮತ್ತು ಟಿಕ್ ಟಾಕ್ ಗಳಲ್ಲಿ ಕೊಟ್ಯಾಂತರ ಹಿಂಬಾಲಕರಿದ್ದಾರೆ.


View this post on Instagram


A post shared by Khaby Lame (@khaby00)


ಯಾರು ಈ ಖಾಬಿ ಲೇಮ್?:

ಕಬಾನೆ ಲೇಮ್ ಹೆಸರಿನ ಈ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಕಾಬಿ ಲೇಮ್ ಎಂದೇ ಪ್ರಸಿದ್ಧರು. 2000ದ ಮಾರ್ಚ್ 09ರಂದು ಜನಿಸಿದ ಖಾಬಿ ಸೆನೆಗಲ್ ಮೂಲದವರಾಗಿದ್ದಾರೆ. ಆದರೆ ಸದ್ಯ ಅವರು ಇಟಲಿಯಲ್ಲಿದ್ದು, ಇಟಲಿಯ ನಾಗರೀಕತ್ವವನ್ನೂ ಪಡೆದಿದ್ದಾರೆ. ಹಾಲಿವುಡ್ ನಟ ವಿಲ್ ಸ್ಮಿತ್, ರಾಕ್ ಖ್ಯಾತಿಯ ಡ್ವೇನ್ ಜೋನ್ಸ್‌, ಪ್ರಖ್ಯಾತ ಬ್ಯಾಂಡ್ ಬಿಟಿಎಸ್‌ಗಿಂತಲೂ ಹೆಚ್ಚು ಫಾಲೋವರ್‌ಗಳನ್ನು ಕಾಬಿ ಹೊಂದಿದ್ದಾರೆ.

ಇದನ್ನೂ ಓದಿ: Weekend Planner: ಥಿಯೇಟರ್ ನಲ್ಲಿ ಮಿಸ್ ಮಾಡ್ಕೊಂಡಿರೋ ಸಿನಿಮಾಗಳನ್ನು ಮನೆಯಲ್ಲೇ ಕೂತು ನೋಡಿ, ಈ ವಾರ ಸಿನಿರಸಿಕರಿಗೆ ಭರ್ಜರಿ ರಸದೌತಣ

ಖಾಬಿಯ ಆದಾಯ ಎಷ್ಟು ಗೊತ್ತಾ?:

ಕೇವಲ ಕಿರು ವಿಡಿಯೋಗಳನ್ನು ಮಾಡುವ ಖಾಬಿ ಆದಾಯ ಕೇಳಿದ್ರೆ ಒಮ್ಮೆ ನೀವು ಶಾಕ್ ಆಗೋದಂತೂ ಖಂಡಿತ.  ಏಕೆಂದರೆ, ಖಾಬಿ ಅವರು ಕೇವಲ ವಿಡಿಯೋಗಳ ಮೂಲಕ ಸುಮಾರು 14 ಕೋಟಿ ರೂಪಾಯಿಗಳನ್ನು ಸಂಪಾದಿಸುತ್ತಿದ್ದಾರಂತೆ. ಕಾಬಿ ರವರಿಗೆ ಜರಿಯನ್ನು ನೂಸಿ ಎಂಬ ಸುಂದರ ಗರ್ಲ್ಫ್ರೆಂಡ್ ಕೂಡ ಇದ್ದಾಳೆ.
Published by:shrikrishna bhat
First published: