HOME » NEWS » Entertainment » TIKTOK CONTEST BY KURUKSHETRA MOVIE TEAM PARTICIPATE AND WIN FREE TICKETS AE

Kurukshetra TikTok Contest: ಕುರುಕ್ಷೇತ್ರ ಸಿನಿಮಾದ ಉಚಿತ ಟಿಕೆಟ್​ ನಿಮ್ಮದಾಗಿಸಿಕೊಳ್ಳಲು ಇಲ್ಲಿದೆ ಅವಕಾಶ..!

Kurukshetra TikTok Contest: ಈಗ ಸಿನಿಮಾ ಮತ್ತೊಂದು ವಿಷಯದಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಅದು ಈ ಸಿನಿಮಾದ ಉಚಿತ ಟಿಕೆಟ್​ ಪಡೆಯಲು ಬಯಸುವವರಿಗಾಗಿ ಆನ್​ಲೈನ್​ನಲ್ಲಿಒಂದು ಸ್ಪರ್ಧೆ ನಡೆಯುತ್ತಿದೆ. ಅದೇ ಕುರುಕ್ಷೇತ್ರ ಟಿಕ್​ಟಾಕ್​ ಸ್ಪರ್ಧೆ.

Anitha E | news18
Updated:July 27, 2019, 5:19 PM IST
Kurukshetra TikTok Contest: ಕುರುಕ್ಷೇತ್ರ ಸಿನಿಮಾದ ಉಚಿತ ಟಿಕೆಟ್​ ನಿಮ್ಮದಾಗಿಸಿಕೊಳ್ಳಲು ಇಲ್ಲಿದೆ ಅವಕಾಶ..!
ಉಚಿತ ಟಿಕೆಟ್​ಗಾಗಿ ಕುರುಕ್ಷೇತ್ರ ಟಿಕ್​ಟಾಕ್​ ಸ್ಪರ್ಧೆ
  • News18
  • Last Updated: July 27, 2019, 5:19 PM IST
  • Share this:
ದರ್ಶನ್​ ಅಭಿನಯದ 'ಕುರುಕ್ಷೇತ್ರ' ಸಿನಿಮಾ ಪೋಸ್ಟರ್​, ಟ್ರೈಲರ್ ಹಾಗೂ ಹಾಡುಗಳಿಂದಲೇ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಅಲ್ಲದೆ ಈ ಸಿನಿಮಾ ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದ್ದಂತೆಯೇ ಒಂದಲ್ಲ ಒಂದು ಕಾರಣಗಳಿಂದ ಮತ್ತಷ್ಟು ಸದ್ದು ಮಾಡುತ್ತಿದೆ.

ಈಗ ಸಿನಿಮಾ ಮತ್ತೊಂದು ವಿಷಯದಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಅದು ಈ ಸಿನಿಮಾದ ಉಚಿತ ಟಿಕೆಟ್​ ಪಡೆಯಲು ಬಯಸುವವರಿಗಾಗಿ ಆನ್​ಲೈನ್​ನಲ್ಲಿಒಂದು ಸ್ಪರ್ಧೆ ನಡೆಯುತ್ತಿದೆ. ಅದೇ 'ಕುರುಕ್ಷೇತ್ರ ಟಿಕ್​ಟಾಕ್​ ಸ್ಪರ್ಧೆ'.




ಈ ಸ್ಪರ್ಧೆಯನ್ನು ಯಾರು ಆಯೋಜಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗುತ್ತಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ದರ್ಶನ್​ ಅವರ ಅಭಿಮಾನಿ ಪುಟಗಳಲ್ಲಿ ಈ ಪೋಸ್ಟ್​ ಹರಿದಾಡುತ್ತಿದೆ.

'ಕುರುಕ್ಷೇತ್ರ' ಸಿನಿಮಾದ ಟ್ರೈಲರ್​ ಯಾವುದಾರೊಂದು ಡೈಲಾಗ್​ ಅಥವಾ ಹಾಡಿಗೆ ಟಿಕ್​ಟಾಕ್​ ಮಾಡಿ, ಅದನ್ನು ಆಗಸ್ಟ್​ 5ರೊಳಗೆ ಅದನ್ನು ಅಪ್​ಲೋಡ್ ಮಾಡಬೇಕು ಎಂದು ಹೇಳಲಾಗುತ್ತಿದೆ.

#Kurukshetra ಮತ್ತು #Dboss ಹ್ಯಾಷ್​ಟ್ಯಾಗ್​ ಹಾಕುವ ಮೂಲಕ ನೀವು ಮಾಡಿದ ವಿಡಿಯೋಗಳನ್ನು ಪೋಸ್ಟ್​ ಮಾಡಿದರೆ, ಅದರಲ್ಲಿ 15 ವಿಜಯಿಗಳನ್ನು ಆಯ್ಕೆ ಮಾಡುಲಾಗುವುದು. ಅದು ಸಹ ಯಾರ ವಿಡಿಯೋ ಟ್ರೆಂಡಿಂಗ್​ನಲ್ಲಿ ಇರುತ್ತದೆಯೋ ಅವರಲ್ಲಿ 15 ಮಂದಿಗೆ ಉಚಿತ ಸಿನಿಮಾ ಟಿಕೆಟ್​ಸಿಗಲಿದೆ ಎನ್ನಲಾಗುತ್ತಿದೆ.

ಈ ಸ್ಪರ್ಧೆ ಬಗ್ಗೆ ಸದ್ಯಕ್ಕೆ ಡಿಬಾಸ್​ ಅಭಿಮಾನಿಗಳಿಗೂ ಸರಿಯಾದ ಮಾಹಿತಿ ಇಲ್ಲ. ಆದರೂ ಸಾಕಷ್ಟು ಮಂದಿ ಈಗಾಗಲೇ ವಿಡಿಯೋಗಳನ್ನು ಮಾಡಿದ್ದು, ಅದನ್ನು ಪೋಸ್ಟ್​ ಮಾಡುತ್ತಿದ್ದಾರೆ. ಒಂದು ವೇಳೆ ನಿಮ್ಮ ಅದೃಷ್ಟ ಚೆನ್ನಾಗಿದ್ದು, ನಿಮಗೂ 'ಕುರುಕ್ಷೇತ್ರ'ದ ಉಚಿತ ಟಿಕೆಟ್ ಸಿಗಬಹುದು! ಪ್ರಯತ್ನಿಸಿ.

 

India Couture Week 2019: ವಿನ್ಯಾಸಿತ ವಸ್ತ್ರಗಳಲ್ಲಿ ರ‍್ಯಾಂಪ್​ ಮೇಲೆ ಮಾರ್ಜಾಲ ನಡಿಗೆ ಮಾಡಿದ ಬಿ-ಟೌನ್​ ನಟಿಮಣಿಯರು


First published: July 27, 2019, 5:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories