Krishna Shroff: ಬರೀ ಟೈಗರ್ ಶ್ರಾಫ್ ಅಲ್ಲ, ಅವರ ಸಹೋದರಿ ಕೃಷ್ಣಾ ಸಹ ಫಿಟ್ನೆಸ್ ಫ್ರೀಕ್! ಇವರ ದಿನಚರಿ ಹೇಗಿರುತ್ತೆ ನೋಡಿ

ಕೃಷ್ಣಾ ಸಹ ತನ್ನ ಸಹೋದರ ಟೈಗರ್ ಶ್ರಾಫ್ ನಷ್ಟೆ ಫಿಟ್ನೆಸ್ ಬಗ್ಗೆ ಉತ್ಸಾಹವನ್ನು ಹೊಂದಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಇವರ ಅನೇಕ ತಾಲೀಮಿನ ವಿಡಿಯೋಗಳನ್ನು ನೋಡಬಹುದು. ಕೃಷ್ಣಾ ಅವರು ತಮ್ಮ ದೈನಂದಿನ ವರ್ಕೌಟ್, ತನ್ನ ಪ್ರೀತಿ, ಮಹಿಳೆಯರಿಗಾಗಿ ವೇಟ್ಲಿಫ್ಟಿಂಗ್, ಬಾಡಿ-ಶೇಮಿಂಗ್, ಟೈಗರ್ ಶ್ರಾಫ್ ಅವರೊಂದಿಗಿನ ಬಂಧ ಮತ್ತು ಅವರಿಬ್ಬರ ಬಾಲ್ಯ.. ಹೀಗೆ ಎಲ್ಲದರ ಬಗ್ಗೆ ಮನಬಿಚ್ಚಿ ಹೇಳಿಕೊಂಡಿದ್ದಾರೆ ನೋಡಿ.

ಟೈಗರ್ ಶ್ರಾಫ್  ಮತ್ತು ಕೃಷ್ಣಾ ಶ್ರಾಫ್

ಟೈಗರ್ ಶ್ರಾಫ್ ಮತ್ತು ಕೃಷ್ಣಾ ಶ್ರಾಫ್

  • Share this:
ಬಾಲಿವುಡ್ ನ ಹಿರಿಯ ನಟ ಜಾಕಿ ಶ್ರಾಫ್ ತಮ್ಮ ವಿಭಿನ್ನ ನಟನೆಯಿಂದ ಮನೆ ಮಾತಾಗಿದ್ದವರು. ಈಗ ಅವರ ಮಗ ಟೈಗರ್ ಶ್ರಾಫ್ (Tiger Shroff) ತನ್ನ ಚಲನಚಿತ್ರಗಳಿಗಿಂತಲೂ, ಫಿಟ್ನೆಸ್ ಮತ್ತು ದೇಹದಾರ್ಡ್ಯತೆಯಿಂದ ಬಾಲಿವುಡ್ ನಲ್ಲಿ ತುಂಬಾನೇ ಜನಪ್ರಿಯರಾಗಿದ್ದಾ. ಬರೀ ಟೈಗರ್ ಅಷ್ಟೇ ಫಿಟ್ನೆಸ್ (Fitness) ಬಗ್ಗೆ ಇಷ್ಟೊಂದು ಒಲವು ಇದೆ ಅಂತ ತಿಳಿದುಕೊಳ್ಳಬೇಡಿ, ಏಕೆಂದರೆ ಇವರ ಸಹೋದರಿ ಕೃಷ್ಣಾ ಶ್ರಾಫ್ (Krishna Shroff) ಸಹ ದೊಡ್ಡ ಫಿಟ್ನೆಸ್ ಫ್ರೀಕ್ ಅಂತ ಬಹಳ ಜನಕ್ಕೆ ಗೊತ್ತಿರಲಿಕ್ಕಿಲ್ಲ. ಕೃಷ್ಣಾ ಅವರು ಬೋಲ್ಡ್‌ ಲುಕ್ ಗೆ ಮತ್ತು ತಮ್ಮ ಲೈಫ್‌ಸ್ಟೈಲ್‌ನಿಂದಾಗಿ (Lifestyle) ಸಖತ್‌ ಫೇಮಸ್‌ ಅಗಿರೋರು. ಕಳೆದ ವರ್ಷ ಅವರ ಟಾಪ್‌ಲೆಸ್‌ ಫೋಟೋವೊಂದು ಇಂಟರೆನೆಟ್‌ ನಲ್ಲಿ ಸಖತ್‌ ವೈರಲ್‌ ಆಗಿದ್ದು, ಸಿಕ್ಕಾಪಟ್ಟೆ ಲೈಕ್ಸ್ ಹಾಗೂ ಕಾಮೆಂಟ್‌ಗಳನ್ನು ಗಳಿಸಿತ್ತು.

ಆದರೆ ಒಂದೊಮ್ಮೆ ಕೃಷ್ಣಾ ತುಂಬಾನೇ ಸೋಮಾರಿಯಾಗಿದ್ದರಂತೆ ಮತ್ತು ಜೀವನದಲ್ಲಿ ಯಾವುದೇ ಗುರಿ ಇರಲಿಲ್ವಂತೆ. ಆದರೆ ಒಂದು ದಿನ ಅವರು ತಮ್ಮ ಜೀವನವನ್ನು ಬದಲಾಯಿಸುವ ಏನನ್ನಾದರೂ ಮಾಡಲು ನಿರ್ಧರಿಸಿದರಂತೆ. ಹೀಗೆ ಅವರ ಫಿಟ್ನೆಸ್ ಜರ್ನಿ ಪ್ರಾರಂಭವಾಯಿತು. ಆಕೆ ಇಂದು ಯಶಸ್ವಿ ಫಿಟ್ನೆಸ್ ಉದ್ಯಮಿಯಾಗಿದ್ದಾಳೆ. ಕೃಷ್ಣಾ ಸಹ ತನ್ನ ಸಹೋದರ ಟೈಗರ್ ಶ್ರಾಫ್ ನಷ್ಟೆ ಫಿಟ್ನೆಸ್ ಬಗ್ಗೆ ಉತ್ಸಾಹವನ್ನು ಹೊಂದಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಇವರ ಅನೇಕ ತಾಲೀಮಿನ ವಿಡಿಯೋಗಳನ್ನು ನೋಡಬಹುದು.

ಸುದ್ದಿ ಮಾಧ್ಯಮದೊಂದಿಗೆ ವಿಶೇಷ ಇ-ಮೇಲ್ ಸಂದರ್ಶನದಲ್ಲಿ, ಕೃಷ್ಣಾ ಅವರು ತಮ್ಮ ದೈನಂದಿನ ವರ್ಕೌಟ್, ತನ್ನ ಪ್ರೀತಿ, ಮಹಿಳೆಯರಿಗಾಗಿ ವೇಟ್ಲಿಫ್ಟಿಂಗ್, ಬಾಡಿ-ಶೇಮಿಂಗ್, ಟೈಗರ್ ಶ್ರಾಫ್ ಅವರೊಂದಿಗಿನ ಬಂಧ ಮತ್ತು ಅವರಿಬ್ಬರ ಬಾಲ್ಯ.. ಹೀಗೆ ಎಲ್ಲದರ ಬಗ್ಗೆ ಮನಬಿಚ್ಚಿ ಹೇಳಿಕೊಂಡಿದ್ದಾರೆ ನೋಡಿ.

ಫಿಟ್ನೆಸ್ ಬಗ್ಗೆ ಇರುವ ಆಸಕ್ತಿ ಮತ್ತು ಪ್ರೀತಿಯ ಬಗ್ಗೆ ಕೃಷ್ಣಾ ಏನ್ ಹೇಳಿದ್ದಾರೆ ಗೊತ್ತೇ?
ಕೃಷ್ಣಾ ಅವರು “ಫಿಟ್ನೆಸ್ ನನಗೆ ಜೀವನದಲ್ಲಿ ಒಂದು ಉದ್ದೇಶವನ್ನು ಮತ್ತು ಸಮಾಜದಲ್ಲಿ ಒಂದು ಸ್ಥಾನವನ್ನು ನೀಡಿದೆ. ನನ್ನದೇ ಆದ ಒಂದು ಗುರುತನ್ನು ನೀಡಿದೆ, ನನ್ನ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ಅದು ಅಸಾಧ್ಯವೆಂದು ನಾನು ಭಾವಿಸಿದ್ದೆ” ಅಂತ ಹೇಳಿದರು.

ಕೃಷ್ಣಾ ಅವರ ದಿನಚರಿ ಏನನ್ನೆಲ್ಲಾ ಒಳಗೊಂಡಿರುತ್ತೆ ಗೊತ್ತೇ?
ತಮ್ಮ ದೈನಂದಿನ ದಿನಚರಿಯನ್ನು ವಿವರಿಸುತ್ತಾ ಕೃಷ್ಣಾ “ನಾನು ನನ್ನ ದಿನವನ್ನು ವರ್ಕೌಟ್ ನೊಂದಿಗೆ ಪ್ರಾರಂಭಿಸಲು ಬಯಸುತ್ತೇನೆ, ಏಕೆಂದರೆ ಅದು ದಿನದ ಉಳಿದ ಭಾಗಕ್ಕೆ ಟೋನ್ ಅನ್ನು ಹೊಂದಿಸುತ್ತದೆ. ನಾನು ವರ್ಕೌಟ್ ಗಾಗಿ ಮಾತ್ರವಲ್ಲ, ನನ್ನ ದಿನದ ಉಳಿದ ಭಾಗದಲ್ಲಿ ಹೆಚ್ಚು ಶಕ್ತಿಯುತವಾಗಿ, ಉತ್ಸಾಹದಿಂದಿರಲು ಇದು ನಿಜವಾಗಿಯೂ ನನಗೆ ಸಹಾಯ ಮಾಡುತ್ತದೆ” ಎಂದು ಹೇಳಿದರು.

ಇದನ್ನೂ ಓದಿ:  Ileana and Sebastian: ನಟಿ ಇಲಿಯಾನಾ, ಕತ್ರಿನಾ ಸಹೋದರ ಸೆಬಾಸ್ಟಿಯನ್ ಡೇಟಿಂಗ್?

“ನಾನು ವೇಟ್ ಲಿಫ್ಟಿಂಗ್ ಮತ್ತು ಕಾರ್ಡಿಯೋವನ್ನು ಮಾಡುತ್ತೇನೆ, ಆದರೆ ನನ್ನ ದೇಹದಲ್ಲಿರುವ ಸ್ನಾಯುಗಳನ್ನು ಬಲಪಡಿಸಿಕೊಳ್ಳಲು ನಾನು ನನ್ನ ಕಾರ್ಡಿಯೋವನ್ನು ನಿಧಾನವಾಗಿ ಮತ್ತು ಸ್ಥಿರವಾಗಿಡುತ್ತೇನೆ. ನನ್ನ ದೇಹದಲ್ಲಿ ರಕ್ತ ಪರಿಚಲನೆ ಸುಗಮವಾಗಿ ನಡೆಯುವುದಕ್ಕಾಗಿ ಟ್ರೆಡ್ಮಿಲ್ ನಲ್ಲಿ 40 ನಿಮಿಷಗಳ ಹಗುರವಾದ ನಡಿಗೆ ಕೂಡ ನಾನು ಮಾಡುತ್ತೇನೆ” ಎಂದು ಕೃಷ್ಣಾ ಹೇಳಿದರು.

ಕೃಷ್ಣಾ ಮತ್ತು ಟೈಗರ್ ಶ್ರಾಫ್ ಒಟ್ಟಿಗೆ ವರ್ಕೌಟ್ ಮಾಡ್ತಾರಾ? ಜಿಮ್ ನಲ್ಲಿ ಇವರಿಬ್ಬರು ಪರಸ್ಪರ ಸವಾಲು ಹಾಕಿಕೊಳ್ಳುತ್ತಾರಾ?
ಈ ಪ್ರಶ್ನೆಗೆ ಉತ್ತರಿಸಿದ ಕೃಷ್ಣಾ “ನಾವು ಕೆಲವು ಬಾರಿ ಒಟ್ಟಿಗೆ ಜಿಮ್ ನಲ್ಲಿ ವರ್ಕೌಟ್ ಮಾಡುತ್ತೇವೆ ಮತ್ತು ಸ್ವಲ್ಪ ಸಮಯದವರೆಗೆ ನಾವಿಬ್ಬರೂ ಒಬ್ಬ ತರಬೇತುದಾರರ ಮಾರ್ಗದರ್ಶನದಲ್ಲಿ ಜಿಮ್ ನಲ್ಲಿ ವರ್ಕೌಟ್ ಮಾಡಿದ್ದೇವೆ. ಮಹಿಳೆಯರು ಪುರುಷನಂತೆ ವರ್ಕೌಟ್ ಮಾಡಲು ಸಾಧ್ಯವಿಲ್ಲ ಎಂಬುದು ಸಂಪೂರ್ಣ ಮಿಥ್ಯೆಯಾಗಿದೆ. ಟೈಗರ್ ನೊಂದಿಗೆ ನಾನು ಅನೇಕ ಬಾರಿ ಸವಾಲಿನ ವರ್ಕೌಟ್ ಮಾಡಿದ್ದೇನೆ” ಎಂದು ಹೇಳಿದ್ದಾರೆ.

ಜಿಮ್ ನಲ್ಲಿ ಮತ್ತು ಹೊರಗೆ ಟೈಗರ್ ನೊಂದಿಗಿನ ಸಂಬಂಧ..
“ಟೈಗರ್ ಮತ್ತು ನಾನು ಯಾವಾಗಲೂ ವಿಶೇಷ ಬಂಧವನ್ನು ಹೊಂದಿದ್ದೇವೆ. ಅವನು ನನ್ನ ಜೀವನದ ಎಲ್ಲಾ ಆಯಾಮಗಳಲ್ಲಿಯೂ ನನ್ನ ಅತಿದೊಡ್ಡ ಬೆಂಬಲದ ಮೂಲವಾಗಿದ್ದಾನೆ ಮತ್ತು ಅವನು ಇವತ್ತು ಏನೇ ಆಗಿರಲಿ, ನಾನು ಅತ್ಯಂತ ಸುರಕ್ಷಿತ ಎಂದು ಭಾವಿಸುವ ವ್ಯಕ್ತಿ ಆತ” ಅಂತ ಕೃಷ್ಣಾ ಹೇಳಿದರು.
ಮಹಿಳೆಯರು ವೇಟ್ ಲಿಫ್ಟಿಂಗ್ ಮಾಡುವ ವಿಷಯದ ಬಗ್ಗೆ ಕೃಷ್ಣಾ ಅನಿಸಿಕೆ
ಇದರ ಬಗ್ಗೆ ಮಾತಾಡುತ್ತಾ ಕೃಷ್ಣಾ ಅವರು “ಮೊದಲೇ ಹೇಳಿದಂತೆ, ಒಬ್ಬ ಮಹಿಳೆ ಮತ್ತು ಒಬ್ಬ ಪುರುಷನು ಒಂದೇ ರೀತಿಯಲ್ಲಿ ತರಬೇತಿ ಪಡೆಯಬಹುದು ಮತ್ತು ಅದೇ ಫಲಿತಾಂಶಗಳನ್ನು ಸಾಧಿಸಬಹುದು. ಏಕೆಂದರೆ ನಾವು ಸ್ವಾಭಾವಿಕವಾಗಿ ಪುರುಷರಂತೆ ಟೆಸ್ಟೋಸ್ಟೆರಾನ್ ಅನ್ನು ಉತ್ಪಾದಿಸುವುದಿಲ್ಲ, ಮಹಿಳೆಯರು ಪುರುಷರಷ್ಟೇ ಪ್ರಮಾಣದ ಸ್ನಾಯುಗಳನ್ನು ಪಡೆಯುವುದು ದೈಹಿಕವಾಗಿ ಅಸಾಧ್ಯ. ನೀವು ಎಷ್ಟು ಭಾರ ಎತ್ತುತ್ತೀರೋ, ಅಷ್ಟು ಹೆಚ್ಚು ಕ್ಯಾಲೊರಿಗಳನ್ನು ಬರ್ನ್ ಮಾಡುತ್ತೀರಿ ಮತ್ತು ನಿಮ್ಮ ಪೌಷ್ಟಿಕಾಂಶವು ನಿಮ್ಮ ಗುರಿಗಳನ್ನು ಬೆಂಬಲಿಸಿದರೆ, ನೀವು ಹೆಚ್ಚು ತೆಳ್ಳಗಿನ ಸ್ನಾಯು ದ್ರವ್ಯರಾಶಿಯನ್ನು ಪಡೆಯುತ್ತೀರಿ” ಎಂದು ಹೇಳಿದರು.

ಕೃಷ್ಣಾ ಫಿಟ್ನೆಸ್ ಜರ್ನಿ ಹೇಗೆ ಪ್ರಾರಂಭವಾಯಿತು?
“ನನ್ನ ಫಿಟ್ನೆಸ್ ಪ್ರಯಾಣವು ಸುಮಾರು ಆರೂವರೆ ವರ್ಷಗಳ ಹಿಂದೆ ಪ್ರಾರಂಭವಾಯಿತು. ಆ ಸಮಯದಲ್ಲಿ ನಾನು ಅತ್ಯಂತ ಸೋಮಾರಿಯಾಗಿದ್ದೆ ಮತ್ತು ನನ್ನ ಜೀವನದಲ್ಲಿ ಮಾರ್ಗದರ್ಶನದ ಕೊರತೆಯಿತ್ತು. ಆಗ ನಾನು ಜೀವನದಲ್ಲಿ ಏನಾದರೊಂದು ಮಾಡಬೇಕು ಅಂತ ಅರ್ಥ ಮಾಡಿಕೊಂಡೆ. ಅಂತರ್ಜಾಲದಲ್ಲಿ ನನ್ನ ಬಗ್ಗೆ, ವಿಶೇಷವಾಗಿ ನನ್ನ ತೂಕದ ಬಗ್ಗೆ ನಾನು ಸಾಕಷ್ಟು ನಕಾರಾತ್ಮಕ ಕಾಮೆಂಟ್ ಗಳನ್ನು ಓದುತ್ತಿದ್ದೆ. ಆಗ ನನಗೆ ಫಿಟ್ನೆಸ್ ಬಗ್ಗೆ ವಿಶೇಷ ಆಸಕ್ತಿ ಶುರುವಾಯಿತು” ಎಂದು ಕೃಷ್ಣಾ ಹೇಳಿದರು.

‘ಬಾಡಿ ಶೇಮಿಂಗ್’ ಬಗ್ಗೆ ಏನ್ ಹೇಳ್ತಾರೆ ಕೃಷ್ಣಾ..
“ನಾನು ಅದರ ಬಗ್ಗೆ ಅತ್ಯಂತ ಸಂವೇದನಾಶೀಲಳಾಗಿದ್ದೆ ಮತ್ತು ಇದು ನನಗೆ ತುಂಬಾ ಅಸುರಕ್ಷಿತ ಭಾವನೆಯನ್ನು ಉಂಟು ಮಾಡಿತು. ಆದಾಗ್ಯೂ, ನಾನು ಆ ಎಲ್ಲಾ ಭಾವನೆಗಳನ್ನು ಅತ್ಯಂತ ಸಕಾರಾತ್ಮಕ ರೀತಿಯಲ್ಲಿ ತೆಗೆದುಕೊಳ್ಳಲು ಸಾಧ್ಯವಾಯಿತು. ಇದು ನನ್ನನ್ನು ಈ ಜೀವನಶೈಲಿಗೆ ಕರೆದೊಯ್ಯಿತು, ಇದಕ್ಕಾಗಿ ನಾನು ಶಾಶ್ವತವಾಗಿ ಕೃತಜ್ಞಳಾಗಿರುತ್ತೇನೆ.

ಇದನ್ನೂ ಓದಿ:  Bollywood Couple: ಬಾಲಿವುಡ್​ನ ಈ ಸ್ಟಾರ್​ ಜೋಡಿಗೆ ಆತ್ಮವಿಶ್ವಾಸದ ಜೊತೆ ಅಹಂಕಾರನೂ ಇದ್ಯಂತೆ; ಖ್ಯಾತ ಜ್ಯೋತಿಷಿ

ಪ್ರತಿಯೊಬ್ಬರೂ ಆ ಮಟ್ಟದ ವಿಷವನ್ನು ಚೆನ್ನಾಗಿ ನಿಭಾಯಿಸಲಾರರು ಅಥವಾ ನಿಭಾಯಿಸಲು ಸಾಧ್ಯವಿಲ್ಲ ಎಂದು ಜನರು ಅರ್ಥಮಾಡಿಕೊಳ್ಳುವುದು ನಿರ್ಣಾಯಕವಾಗಿದೆ ಎಂದು ನಾನು ಒತ್ತಿ ಹೇಳಲು ಬಯಸುತ್ತೇನೆ, ಆದ್ದರಿಂದ ನಿಮಗೆ ಯಾರ ಬಗ್ಗೆ ಒಳ್ಳೆಯದು ಮಾತಾಡಲು ಬರದೇ ಇದ್ದರೂ ಪರವಾಗಿಲ್ಲ, ಅವರ ಬಗ್ಗೆ ಕೆಟ್ಟದ್ದನ್ನು ಮಾತಾಡದೆ ಇರಲು ಪ್ರಯತ್ನಿಸಿ” ಎಂದು ಕೃಷ್ಣಾ ಹೇಳಿದರು.

ಕೃಷ್ಣಾ ಅವರನ್ನ ಜಾಕಿ ಶ್ರಾಫ್ ಮತ್ತು ಟೈಗರ್ ಅವರೊಂದಿಗೆ ಹೋಲಿಕೆ ಮಾಡ್ತಾರಾ ಜನ?
“ಖಂಡಿತವಾಗಿಯೂ ಜನರು ತಂದೆ ಜಾಕಿ ಶ್ರಾಫ್ ಮತ್ತು ಸಹೋದರ ಟೈಗರ್ ನೊಂದಿಗೆ ನನ್ನನ್ನು ಹೋಲಿಕೆ ಮಾಡ್ತಾರೆ. ನಾವು "ಬೆಳ್ಳಿಯ ಚಮಚ" ಬಾಯಲ್ಲಿ ಇಟ್ಟುಕೊಂಡೇ ಜನಿಸಿದ್ದೇವೆ, ನಾವು ಇನ್ನೂ ಹೆಚ್ಚಿನ ಒತ್ತಡಕ್ಕೆ ಒಳಗಾಗಿದ್ದೇವೆ. ಏಕೆಂದರೆ ತಂದೆಯ ಆ ಜನಪ್ರಿಯತೆಯನ್ನ ನಾವು ಮುಂದುವರಿಸಿಕೊಂಡು ಹೋಗುತ್ತೇವೆ ಅಥವಾ ಮೀರಿಸುತ್ತೇವೆ ಅಂತ ನಿರೀಕ್ಷಿಸಲಾಗಿತ್ತು.

ನನ್ನ ದೃಷ್ಟಿಕೋನ ಮತ್ತು ಉತ್ಸಾಹದಲ್ಲಿ ನಂಬಿಕೆಯಿಟ್ಟಿರುವ ಅನೇಕ ಜನರಿಂದ ನಾನು ತುಂಬಾ ಪ್ರೀತಿಯನ್ನು ಪಡೆದಿದ್ದೇನೆ. ನಾನು ಯಾರು ಮತ್ತು ನಾನು ಏನು ಮಾಡುತ್ತಿದ್ದೇನೆ ಅಂತ ಅವರಿಗೆ ಗೊತ್ತು ಮತ್ತು ಇದು ನನ್ನನ್ನು ಅವರು ಮೆಚ್ಚುವಂತೆ ಮಾಡಿದೆ” ಎಂದು ಟೈಗರ್ ಸಹೋದರಿ ಹೇಳಿದರು.

ತೂಕ ಇಳಿಸುವ ಗುರಿಗಳು, ಆಹಾರಕ್ರಮ, ವ್ಯಾಯಾಮಗಳ ಬಗ್ಗೆ ಏನ್ ಹೇಳ್ತಾರೆ ಜಾಕಿ ಶ್ರಾಫ್ ಮಗಳು?
“ನಿಮ್ಮ ತೂಕ ಕಡಿಮೆ ಮಾಡಿಕೊಳ್ಳುವ ತರಬೇತಿ ಪಡೆಯುವಾಗ ಅನೇಕ ರೀತಿಯ ವಸ್ತುಗಳನ್ನು ನಾವು ತ್ಯಜಿಸಬೇಕಾಗುತ್ತದೆ. ನಾನು ಮೊದಲು ಇದನ್ನು ಶುರು ಮಾಡಿದ್ದಾಗ ತಿಂಗಳುಗಳವರೆಗೆ ನನ್ನ ಸ್ನೇಹಿತರನ್ನು ಭೇಟಿ ಮಾಡಿರಲಿಲ್ಲ. ರಜಾದಿನಗಳು, ಜನ್ಮದಿನಗಳು, ಪಾರ್ಟಿಗಳು ಎಲ್ಲವನ್ನೂ ತಪ್ಪಿಸಿಕೊಂಡಿದ್ದೇನೆ.

ನನ್ನ ತರಬೇತಿ ಮತ್ತು ಪೌಷ್ಠಿಕಾಂಶವು ಹೆಚ್ಚು ಬದಲಾಗಿಲ್ಲ, ಆದರೆ ಈ ದೀರ್ಘಾವಧಿಯನ್ನು ಮುಂದುವರಿಸಲು ವಿಶ್ರಾಂತಿ ಮತ್ತು ಚೇತರಿಕೆಯ ಪ್ರಾಮುಖ್ಯತೆಯನ್ನು ನಾನು ಅರಿತುಕೊಂಡಿದ್ದೇನೆ. ಪ್ರತಿ ರಾತ್ರಿ 7 ರಿಂದ 9 ಗಂಟೆಗಳ ಕಾಲ ನಿದ್ರೆ ಮಾಡುವುದು ಮತ್ತು ಪೂರ್ತಿ ದೇಹದ ಸಡಿಲಿಕೆಗಾಗಿ ವಾರಕ್ಕೆ ಕನಿಷ್ಠ ಒಂದು ಅಥವಾ ಎರಡು ಸೆಷನ್ ಫಿಸಿಯೋಥೆರಪಿಯನ್ನು ಮಾಡುವುದು ನನ್ನ ಉದ್ದೇಶವಾಗಿದೆ” ಅಂತ ಹೇಳಿದರು.

ಕೃಷ್ಣಾ ಮತ್ತು ಟೈಗರ್ ನ ಡಯಟ್ ಹೇಗಿರುತ್ತದೆ? ಫಿಟ್ನೆಸ್ ವಿರಾಮದಲ್ಲಿ ಏನೆಲ್ಲಾ ತಿಂತಾರೆ ಇವರಿಬ್ಬರು..
“ಈ ವಿಷಯಕ್ಕೆ ಬಂದಾಗ ಟೈಗರ್ ಮತ್ತು ನಾನು ತುಂಬಾ ಭಿನ್ನವಾಗಿದ್ದೇವೆ. ಅವನು ವಾರಕ್ಕೆ ಒಂದು ದಿನ ತನಗೆ ಇಷ್ಟವಾದುದನ್ನು ತಿನ್ನುತ್ತಾನೆ. ಅವನಿಗೆ ಸಾಮಾನ್ಯವಾಗಿ ಸಿಹಿತಿಂಡಿ ಇಷ್ಟ. ಆದರೆ ನನಗೆ ಸಿಹಿತಿಂಡಿ ಅಷ್ಟಾಗಿ ಇಷ್ಟವಾಗುವುದಿಲ್ಲ. ನನಗೆ ಪಿಜ್ಜಾ, ಬರ್ಗರ್ ಮತ್ತು ನೂಡಲ್ಸ್ ಇಷ್ಟ. ನಾನು ನನ್ನ ತಾಲೀಮು ಅಥವಾ ನನ್ನ ದಿನದ ಉಳಿದ ಪೌಷ್ಟಿಕಾಂಶ ಯೋಜನೆಯೊಂದಿಗೆ ಇದನ್ನು ಸರಿದೂಗಿಸುತ್ತೇನೆ” ಅಂತ ಹೇಳಿದರು.

ಇದನ್ನೂ ಓದಿ:  Urvashi Rautela: ನಾನು ಪಂತ್​ಗೆ ಕ್ಷಮೆಯೇ ಕೇಳಿಲ್ಲ, ಉಲ್ಟಾ ಹೊಡೆದ ಊರ್ವಶಿ - ಏನ್ ಕಥೆ ನಿಮ್ದು ಅಂತಿದ್ದಾರೆ ಫ್ಯಾನ್ಸ್

ಫಿಟ್ನೆಸ್ ಪ್ರಯಾಣ ಶುರು ಮಾಡುವವರಿಗೆ ಕೃಷ್ಣಾ ಸಲಹೆ..
“ನಿಮ್ಮ ಫಿಟ್ನೆಸ್ ಪ್ರಯಾಣ ಶುರು ಮಾಡುವ ಮುಂಚೆ ನಿಮ್ಮ ಗುರಿ ಏನು ಅಂತ ಅರ್ಥ ಮಾಡಿಕೊಳ್ಳುವುದು ತುಂಬಾನೇ ಮುಖ್ಯವಾಗಿರುತ್ತದೆ. ಆದ್ದರಿಂದ ಇತರರ ಪ್ರಗತಿಯಿಂದ ನಿರುತ್ಸಾಹಗೊಳ್ಳಬೇಡಿ. ನಿಮ್ಮದೇ ಆದ ಗುರಿಯ ಕಡೆಗೆ ನಿಮ್ಮ ಗಮನವನ್ನು ಕೇಂದ್ರೀಕರಿಸಿ ಮತ್ತು ಪ್ರತಿದಿನ ನೀವು ನಿನ್ನೆಗಿಂತ ಉತ್ತಮವಾಗಿರಲು ಪ್ರಯತ್ನಿಸಿ” ಅಂತ ಕೃಷ್ಣಾ ಸಲಹೆ ನೀಡಿದರು.
Published by:Ashwini Prabhu
First published: