• Home
  • »
  • News
  • »
  • entertainment
  • »
  • Krishna Shroff: ಬಿಕಿನಿಯಲ್ಲಿ ಮಿಂಚಿದ ಕೃಷ್ಣಾ ಶ್ರಾಫ್: ಫೋಟೋ ನೋಡಿ ಹುಬ್ಬೇರಿಸಿದ ನೆಟ್ಟಿಗರು..!

Krishna Shroff: ಬಿಕಿನಿಯಲ್ಲಿ ಮಿಂಚಿದ ಕೃಷ್ಣಾ ಶ್ರಾಫ್: ಫೋಟೋ ನೋಡಿ ಹುಬ್ಬೇರಿಸಿದ ನೆಟ್ಟಿಗರು..!

ಬಾಲಿವುಡ್​ ನಟ ಜಾಕಿ ಶ್ರಾಫ್​ ಮಗಳು ಕೃಷ್ಣಾ ಶ್ರಾಫ್​ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.   (Image: Instagram)

ಬಾಲಿವುಡ್​ ನಟ ಜಾಕಿ ಶ್ರಾಫ್​ ಮಗಳು ಕೃಷ್ಣಾ ಶ್ರಾಫ್​ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.   (Image: Instagram)

ಕೃಷ್ಣಾ ತಮ್ಮ ಸಹೋದರನಂತೆ ಸಿನಿಮಾ ಸ್ಟಾರ್ ಅಲ್ಲ! ಆದರೂ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಅನುಯಾಯಿಗಳ ಬಳಗವನ್ನು ಹೊಂದಿದ್ದಾರೆ. ಕೃಷ್ಣಾ ತಮ್ಮ ಬಿಕಿನಿ ಫೋಟೋವನ್ನು ಪೋಸ್ಟ್ ಮಾಡಿದ ಕೆಲವೇ ಸಮಯದಲ್ಲಿ ಎಲ್ಲರನ್ನು ಸೆಳೆದಿದೆ ಜೊತೆಗೆ ಮಂತ್ರಮುಗ್ಧರನ್ನಾಗಿಸಿದೆ.

  • Share this:

ಯಾವ ದೇವ ಶಿಲ್ಪಿ ಕಡೆದನೋ ನಿನ್ನ...! ಎನ್ನುತ್ತಾ ನೆಟ್ಟಿಗರನ್ನು ಬೆಕ್ಕಸ ಬೆರಗುಗೊಳಿಸುತ್ತಿವೆ ಕೃಷ್ಣಾ ಶ್ರಾಫ್  ಹೊಸ ಫೋಟೋಗಳು. ಟೈಗರ್ ಶ್ರಾಫ್ ಮತ್ತು ಆತನ ಸಹೋದರಿ ಕೃಷ್ಣಾ ಶ್ರಾಫ್ ಈ ಇಬ್ಬರೂ ಫಿಟ್ನೆಸ್ ವಿಚಾರದಲ್ಲಿ ನಿಜಕ್ಕೂ ಮಾದರಿ ಎನಿಸುತ್ತಾರೆ. ಅದ್ಭುತವಾಗಿ ಟೋನ್ ಮಾಡಿರುವ ತಮ್ಮ ಫಿಟ್ನೆಸ್ ಫೋಟೋಗಳನ್ನು ಆಗಾಗ ಈ ಇಬ್ಬರೂ ಇಂಟರ್ನೆಟ್‌ನಲ್ಲಿ ಪೋಸ್ಟ್​ ಮಾಡುವ ಮೂಲಕ ನೆಟ್ಟಿಗರನ್ನು ಬೆರಗುಗೊಳಿಸುತ್ತಾರೆ.ದೇಹದ ಮೇಲೆ ಟ್ಯಾಟೂಗಳು. ಅವುಗಳನ್ನು ಪ್ರದರ್ಶಿಸುವಂತೆ ತೊಡುವ ತುಂಡುಡುಗೆ. ಮರೂನ್ ಹಾಗೂ ಕಪ್ಪು ಬಣ್ಣದ ಬಿಕಿನಿಯಲ್ಲಿ ಕೃಷ್ಣಾ ಶ್ರಾಫ್ ಸಂಪೂರ್ಣ ಟೋನ್ ಆಗಿರುವ ತಮ್ಮ ದೇಹದ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಆ ಚಿತ್ರವನ್ನು ಅವರು 'ಅವ್ ನೇಚರ್' ಎಂದು ಕರೆದಿದ್ದಾರೆ. ಅಂದರೆ 'ಸಹಜವಾದ ಪ್ರಾಕೃತಿಕ ಸ್ಥಿತಿ' ಎಂದು ಶೀರ್ಷಿಕೆ ಹಾಕಿದ್ದಾರೆ. ಕಲಾ ಕುಂಚಗಳಿಂದ ಚಿತ್ರಿತವಾಗಿರುವ ಗೋಡೆಯ ಎದುರು ನಿಂತಿರುವ ಕೃಷ್ಣಾ ಸುಂದರಿ ಸಹಜವಾಗಿಯೇ ಎಲ್ಲರ ಗಮನ ಸೆಳೆಯುತ್ತಿದ್ದಾರೆ.


ಕೃಷ್ಣಾ ತಮ್ಮ ಸಹೋದರನಂತೆ ಸಿನಿಮಾ ಸ್ಟಾರ್ ಅಲ್ಲ! ಆದರೂ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಅನುಯಾಯಿಗಳ ಬಳಗವನ್ನು ಹೊಂದಿದ್ದಾರೆ. ಕೃಷ್ಣಾ ತಮ್ಮ ಬಿಕಿನಿ ಫೋಟೋವನ್ನು ಪೋಸ್ಟ್ ಮಾಡಿದ ಕೆಲವೇ ಸಮಯದಲ್ಲಿ ಎಲ್ಲರನ್ನು ಸೆಳೆದಿದೆ ಜೊತೆಗೆ ಮಂತ್ರಮುಗ್ಧರನ್ನಾಗಿಸಿದೆ. ಇನ್ನು ಈ ಪೋಸ್ಟ್ 63,000 ಮೆಚ್ಚುಗೆಯನ್ನು ಪಡೆದು ಲೆಕ್ಕಕ್ಕೆ ಸಿಗದಷ್ಟು ಪ್ರತಿಕ್ರಿಯೆ ಗಳಿಸಿಕೊಂಡಿದೆ. ಟೈಗರ್ ಶ್ರಾಫ್ ಅವರ ಗರ್ಲ್ ಫ್ರೆಂಡ್ ಎಂದು ಕರೆಸಿಕೊಳ್ಳುವ ಪಟಾನಿಯ ಸಹೋದರಿ ಖುಷ್ಬೂ ಪಟಾನಿ ಕೂಡ ಈ ಪೋಸ್ಟ್‌ಗೆ ಕಮೆಂಟ್ ಮಾಡಿದ್ದಾರೆ. 'ಸೂಪರ್ ಹಾಟ್' ಎಂದು ಕಮೆಂಟ್ ಹಾಕಿ ಬೆಂಕಿಯ ಎಮೋಜಿಯನ್ನು ಸೇರಿಸಿದ್ದಾರೆ.
ಕೃಷ್ಣಾ ಶ್ರಾಫ್  ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿದ್ದು, ಹೆಚ್ಚಾಗಿ ಬಿಕಿನಿಯಲ್ಲೇ ಕಾಣಿಸಿಕೊಳ್ಳುತ್ತಿರುತ್ತಾರೆ. ಕೆಲವು ವಾರಗಳ ಹಿಂದೆ ಇಂತಹದ್ದೇ ಮೈ ನವಿರೇಳಿಸುವ ಚಿತ್ರವನ್ನು ಪೋಸ್ಟ್ ಮಾಡಿದ್ದರು. ಕೃಷ್ಣಾ ಶವರ್ ತೆಗೆದುಕೊಳ್ಳುತ್ತಿರುವ ಚಿತ್ರವನ್ನು ಕಂಡು ನೆಟ್ಟಿಗರು ಹುಬ್ಬೇರಿಸಿದ್ದರು. ಕೃಷ್ಣಾ ಕೆಂಪು ಮತ್ತು ಕಪ್ಪು ಬಣ್ಣದ ಬಿಕಿನಿಯಲ್ಲಿದ್ದು, ಆ ಚಿತ್ರಕ್ಕೆ 'ಝೆನ್' ಎಂದು ಶೀರ್ಷಿಕೆ ಕೊಟ್ಟಿದ್ದರು. ಈ ಪೋಸ್ಟ್ 84,000 ಮೆಚ್ಚುಗೆ ಮತ್ತು ಹಲವಾರು ಕಮೆಂಟ್ಸ್‌ಗಳನ್ನು ಪಡೆದುಕೊಂಡು ಮೂಕವಿಸ್ಮಿತರನ್ನಾಗಿಸಿತ್ತು.
ಇದಿಷ್ಟೇ ಅಲ್ಲದೇ ಈ ಸೂಪರ್ ಸ್ಟಾರ್ ಮಗಳ ವರ್ಕ್ಔಟ್ ವಿಡಿಯೋ ಸಾಕಷ್ಟು ಜನರನ್ನು ಆಕರ್ಷಿಸಿದೆ. ಒಟ್ಟಿನಲ್ಲಿ ಕೃಷ್ಣಾ ಅವರಿಗೆ ದೈಹಿಕ ಕಸರತ್ತು ಅಂದ್ರೆ ಬಹಳ ಇಷ್ಟ ಎನ್ನುವುದನ್ನು ಈ ವಿಡಿಯೋಗಳು ಪ್ರತಿನಿಧಿಸುತ್ತಿವೆ. ಒಂದು ವಿಡಿಯೋದಲ್ಲಿ ಕೃಷ್ಣಾ ತೂಕ ಎತ್ತುವುದು ಮತ್ತು ದೈಹಿಕ ವ್ಯಾಯಾಮ ಮಾಡುತ್ತಿದ್ದು, ಫಿಟ್ನೆಸ್ ಬಗೆಗಿನ ತಮ್ಮ ಒಲವನ್ನು ಫೋಟೋಗಳ ಮೂಲಕ ಹಂಚಿಕೊಂಡಿದ್ದರು.ಸಹೋದರ ಟೈಗರ್ ಶ್ರಾಫ್ ಜೊತೆಗೆ ಎಮ್ಎಮ್ಎ ಮ್ಯಾಟ್ರಿಕ್ಸ್ ಎನ್ನುವ ಟ್ರೈನಿಂಗ್ ಸೆಂಟರ್ ಸಹಭಾಗಿತ್ವವನ್ನು ಹೊಂದಿದ್ದಾರೆ ಕೃಷ್ಣಾ. ಇನ್ನೂ ಹಿರಿಯ ನಟ ಜಾಕಿ ಶ್ರಾಫ್ ಮತ್ತು ಆಯೇಷಾ ಶ್ರಾಫ್ ದಂಪತಿಯ ಚಿಕ್ಕ ಮಗಳಾಗಿದ್ದಾರೆ ಕೃಷ್ಣಾ. ಅಲ್ಲದೆ ಕೃಷ್ಣಾ ಅವರ ಅಮ್ಮ ಸಹ ಫಿಟ್ನೆಸ್​ ಫ್ರೀಕ್​. ಅಮ್ಮ ಹಾಗೂ ಮಗಳೂ ಒಟ್ಟಿಗೆ ಆಗಾಗ ತಮ್ಮ ಫೆಟ್ನೆಸ್​ ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅದಕ್ಕೆ ದಿಶಾ ಪಟಾನಿ ಕಮೆಂಟ್​ ಮಾಡುತ್ತಿರುತ್ತಾರೆ.

Published by:Anitha E
First published: