• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Tiger Shroff: ದಿಶಾ ಜೊತೆ ಬ್ರೇಕಪ್ ಆಗಿ ಇನ್ನೂ ತಿಂಗಳಾಗಿಲ್ಲ, ಶ್ರದ್ಧಾ ಕಪೂರ್‌ ಇಷ್ಟ ಎಂದ ಟೈಗರ್ ಶ್ರಾಫ್

Tiger Shroff: ದಿಶಾ ಜೊತೆ ಬ್ರೇಕಪ್ ಆಗಿ ಇನ್ನೂ ತಿಂಗಳಾಗಿಲ್ಲ, ಶ್ರದ್ಧಾ ಕಪೂರ್‌ ಇಷ್ಟ ಎಂದ ಟೈಗರ್ ಶ್ರಾಫ್

 ಟೈಗರ್ ಶ್ರಾಫ್ ಮತ್ತು ಶ್ರದ್ಧಾ ಕಪೂರ್‌

ಟೈಗರ್ ಶ್ರಾಫ್ ಮತ್ತು ಶ್ರದ್ಧಾ ಕಪೂರ್‌

ಟೈಗರ್ ಶ್ರಾಫ್ ತಮ್ಮ ರಿಲೇಶನ್‌ಶಿಪ್ ವದಂತಿಗಳಿಗೆ (Rumor) ತೆರೆ ಎಳೆದಿದ್ದು ತಾವು ಸಿಂಗಲ್ ಆಗಿರುವುದಾಗಿ ಹೇಳಿಕೊಂಡಿದ್ದಾರೆ. ಅದಾಗ್ಯೂ ತನ್ನೊಂದಿಗೆ 'ಬಾಗಿ' ಚಿತ್ರದಲ್ಲಿ ನಟಿಸಿದ ಶ್ರದ್ಧಾ ಕಪೂರ್‌ನೊಂದಿಗೆ (Shraddha Kapoor) ತಾನೂ ಯಾವಾಗಲೂ ಮೋಹಕ್ಕೊಳಗಾಗಿರುವೆ ಎಂಬುದನ್ನು ಅವರು ಒಪ್ಪಿಕೊಳ್ಳುತ್ತಾರೆ.

ಮುಂದೆ ಓದಿ ...
  • Share this:

ಕಾಫಿ ವಿತ್ ಕರಣ್‌ ಸೀಸನ್ 7 ನ (Koffee With Karan Season 7) ಮುಂಬರಲಿರುವ ಎಪಿಸೋಡ್ ಕೆಲವೊಂದು ರಹಸ್ಯಗಳನ್ನು ಬಹಿರಂಗಪಡಿಸಲಿದೆ. ಅಂತೆಯೇ ಕೆಲವೊಂದು ಊಹಾಪೋಹಗಳಿಗೂ ತೆರೆ ಎಳೆಯಲಿದೆ. ಟೈಗರ್ ಶ್ರಾಫ್ (Tiger Shroff) ಹಾಗೂ ಕೃತಿ ಸೇನೋನ್ (Kriti Sanon) ಈ ಬಾರಿಯ ಕಾಫಿ ವಿತ್ ಕರಣ್‌ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಲಿದ್ದು ಸಾಕಷ್ಟು ಬಹಿರಂಗಪಡಿಸುವಿಕೆಗಳು, ತಪ್ಪೊಪ್ಪಿಗೆಗಳು ಹಾಗೂ ಹಿಂದೆಂದೂ ಕೇಳಿರದ ಊಹೆಗಳ ಬಗ್ಗೆ ಮಾತುಕಥೆಗಳು ಪ್ರೇಕ್ಷಕರ ಮನರಂಜಿಸಲಿದೆ. ಟೈಗರ್ ಶ್ರಾಫ್ ತಮ್ಮ ರಿಲೇಶನ್‌ಶಿಪ್ ವದಂತಿಗಳಿಗೆ (Rumor) ತೆರೆ ಎಳೆದಿದ್ದು ತಾವು ಸಿಂಗಲ್ ಆಗಿರುವುದಾಗಿ ಹೇಳಿಕೊಂಡಿದ್ದಾರೆ. ಅದಾರೂ ತನ್ನೊಂದಿಗೆ 'ಬಾಗಿ' ಚಿತ್ರದಲ್ಲಿ ನಟಿಸಿದ ಶ್ರದ್ಧಾ ಕಪೂರ್‌ನೊಂದಿಗೆ (Shraddha Kapoor) ತಾನೂ ಯಾವಾಗಲೂ ಪ್ರೀತಿಗೆ ಒಳಗಾಗಿದ್ದೆ ಎಂಬುದನ್ನು ಅವರು ಒಪ್ಪಿಕೊಳ್ಳುತ್ತಾರೆ.


ಒಂಟಿ ಎಂಬುದನ್ನು ಒಪ್ಪಿಕೊಂಡ ಟೈಗರ್ ಶ್ರಾಫ್
ನಾನು ಒಂಟಿಯಾಗಿರುವೆ ಹಾಗೂ ಪ್ರಸ್ತುತ ಸಂಗಾತಿಗಾಗಿ ಹುಡುಕುತ್ತಿರುವೆ ಹೀಗೆ ಹೇಳಿರುವ ಟೈಗರ್ ತಮ್ಮ ಮಾತುಗಳನ್ನು ಮುಂದುವರಿಸುತ್ತಾ, ತನ್ನ ಹೆಸರಿನೊಂದಿಗೆ ಥಳುಕು ಹಾಕಿಕೊಂಡಿರುವ ಹಾಗೂ ಯಾವಾಗಲೂ ರೂಮರ್‌ಗಳಿಗೆ ಆಹಾರವಾಗಿರುವ ಕೆಲವೊಂದಿಷ್ಟು ಹೆಸರುಗಳನ್ನು ಪ್ರಕಟಿಸಲು ಮುಂದಾದರು. ಶ್ರದ್ಧಾ ಕಪೂರ್ ಬಾಗಿಯಲ್ಲಿ ನನ್ನ ಸಹ ನಟಿಯಾಗಿದ್ದರು. ಆಕೆಯೊಂದಿಗೆ ನಾನು ಪ್ರೀತಿಗೆ ಒಳಗಾಗಿದ್ದೆ. ಇದನ್ನು ನಾನು ಇಲ್ಲವೆನ್ನುವುದಿಲ್ಲ. ಆಕೆ ಅದ್ಭುತ ನಟಿ ಹಾಗೂ ಸುಂದರಿ ಎಂಬುದಾಗಿ ಟೈಗರ್ ಹೊಗಳಿದ್ದಾರೆ.


ಇಂಡಸ್ಟ್ರಿಯಲ್ಲಿ ಸಿಂಗಲ್ ಆಗಿ ಯಾರೂ ಉಳಿದಿಲ್ಲ
ಕಳೆದ ರಾತ್ರಿ ನಡೆದ 67 ನೇ Wolf777news ಫಿಲ್ಮ್‌ಫೇರ್ ಅವಾರ್ಡ್ಸ್ 2022 ರಲ್ಲಿ ಕೃತಿ ಸೇನಾನ್ ಅವರನ್ನು ನೀವು ಇಂಡಸ್ಟ್ರೀಯಿಂದ ಡೇಟ್‌ಗೆ ಕರೆದೊಯ್ಯಲು ಬಯಸುವವರನ್ನು ರೆಡ್ ಕಾರ್ಪೆಟ್‌ಗೆ ಕರೆ ತರಬೇಕೆಂದಿದ್ದರೆ ಅದು ಯಾರಾಗಿರುತ್ತಾರೆ? ಎಂದು ಕೇಳಿದಾಗ ನಟಿ ವ್ಯಂಗ್ಯವಾಡುತ್ತಾ ನನಗೂ ಒಬ್ಬ ಬಾಯ್‌ಫ್ರೆಂಡ್ ಇದ್ದಿದ್ದರೆ ಒಳ್ಳೆದಿತ್ತು ಆತ ಕೂಡ ಇಲ್ಲಿರುತ್ತಿದ್ದ. ಆದರೆ ನನಗೆ ಗೊತ್ತಿದ್ದ ಪ್ರಕಾರ ಇಂಡಸ್ಟ್ರೀಯಲ್ಲಿ ಈಗ ಯಾರೂ ಸಿಂಗಲ್ ಇಲ್ಲ ಎಂದು ಉತ್ತರಿಸಿದ್ದಾರೆ.


ಇದನ್ನೂ ಓದಿ:  Jothe Jotheyali: ಸಂಚಲನ ಮೂಡಿಸಿದ ವಿಶ್ವಾಸ್ ದೇಸಾಯಿ! ಹರೀಶ್ ರಾಜ್ ಪಾತ್ರದ ಗುಟ್ಟೇನು?


ಸೆಲೆಬ್ರಿಟಿಗಳೊಂದಿಗೆ ಮುಕ್ತ ಹರಟೆಯ ಕಾಫಿ ವಿದ್ ಕರಣ್ ಕಾರ್ಯಕ್ರಮ
ಕಾಫಿ ವಿತ್ ಕರಣ್ ಎಪಿಸೋಡ್‌ನಲ್ಲಿ ಖ್ಯಾತನಾಮರು ಹಾಜರಿರುತ್ತಾರೆ. ಆಲಿಯಾ ಭಟ್-ರಣಬೀರ್ ಕಪೂರ್ ಮತ್ತು ಕತ್ರಿನಾ ಕೈಫ್-ವಿಕ್ಕಿ ಕೌಶಲ್ ಮತ್ತು ಮಾಜಿ ಜೋಡಿ ಸಾರಾ ಅಲಿ ಖಾನ್-ಕಾರ್ತಿಕ್ ಆರ್ಯನ್ ಅವರಂತಹ ಪ್ರಸಿದ್ಧ ಜೋಡಿಗಳನ್ನು ಕಾಫಿ ವಿತ್ ಕರಣ್‌ನಲ್ಲಿ ಕರಣ್ ಜೋಹರ್ ಆಹ್ವಾನಿಸಿದ್ದಾರೆ. ಕರಣ್ ಜೋಹರ್ ನಡೆಸಿಕೊಡುವ ಈ ಕಾರ್ಯಕ್ರಮವು ಅನೇಕ ವಿವಾದಗಳಿಗೆ ಕಾರಣವಾಗಿದ್ದು ಭಾಗವಹಿಸುವ ಅತಿಥಿಗಳೊಂದಿಗೆ ಕರಣ್ ಮುಕ್ತವಾದ ಪ್ರಶ್ನೆಗಳನ್ನು ಕೇಳುತ್ತಾರೆ.


ನಟ ನಟಿಯರ ರಿಲೇಶನ್‌ಶಿಪ್ ಕುರಿತು, ಪ್ರೀತಿ, ಗಾಸಿಪ್‌ಗಳು, ಹೀಗೆ ವೈಯಕ್ತಿಕ ಪ್ರಶ್ನೆಗಳನ್ನು ಕೇಳುತ್ತಾರೆ. ಇದಕ್ಕೆ ಅತಿಥಿಗಳು ಕೂಡ ಮುಕ್ತವಾಗಿ ಉತ್ತರಿಸುತ್ತಾರೆ. ತಮ್ಮ ಕ್ರಶ್‌ಗಳ ಕುರಿತು ಕರಣ್ ತಾರೆಯರ ಬಳಿ ಪ್ರಶ್ನೆಗಳನ್ನು ಕೇಳುತ್ತಾರೆ ಹಾಗೂ ನಟ ನಟಿಯರು ಇದಕ್ಕೆ ಮುಕ್ತ ಉತ್ತರವನ್ನು ನೀಡುತ್ತಾರೆ.


ಇದನ್ನೂ ಓದಿ:  Anupam Kher: ಬಾಲಿವುಡ್ ಚಿತ್ರಗಳಸೋಲಿನ ಬಗ್ಗೆ ಅನುರಾಗ್ ಕಶ್ಯಪ್ ಹೇಳಿಕೆಗೆ ಅನುಪಮ್ ಖೇರ್ ಖಡಕ್ ಉತ್ತರ!


ಟೈಗರ್‌ನೊಂದಿಗೆ ಬಾಗಿ 2 ನಟಿ ದಿಶಾ ಪಟಾನಿ ಅವರ ಹೆಸರು ಥಳುಕು ಹಾಕಿಕೊಂಡಿತ್ತು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗುಸು ಗುಸು ಕೂಡ ಬಾಲಿವುಡ್ ಅಂಗಳದಿಂದ ಕೇಳಿಬರುತ್ತಿತ್ತು. ಇದರ ನಡುವೆಯೇ ದಿಶಾ ಅವರೊಂದಿಗೆ ಟೈಗರ್ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಕೂಡ ಅಪ್ಪಳಿಸಿದೆ. ಈಗ ಕಾಫಿ ವಿದ್ ಕರಣ್ ಸೀಸನ್‌ನಲ್ಲಿ ಟೈಗರ್ ನಾನು ಸಿಂಗಲ್ ಹಾಗೂ ಸಂಗಾತಿಗಾಗಿ ಹುಡುಕಾಡುತ್ತಿರುವೆ ಎಂಬುದಾಗಿ ಹೇಳಿಕೊಂಡಿದ್ದು, ದಿಶಾ ಹಾಗೂ ಟೈಗರ್ ನಡುವೆ ಏನೂ ನಡೆದಿಲ್ಲ ಎಂಬುದನ್ನು ಖಾತ್ರಿಪಡಿಸಿದೆ.


ಇಂಡಸ್ಟ್ರೀಯಲ್ಲಿ ಬೇಡಿಕೆ ನಟರಾಗಿರುವ ಟೈಗರ್
2014 ರಲ್ಲಿ ಹೀರೋಪಂತಿ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಟೈಗರ್, ವಿಕಾಸ್ ಬೆಹ್ಲ್ ನಿರ್ದೇಶನದ ಆ್ಯಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟೈಗರ್‌ನೊಂದಿಗೆ ಕೃತಿ ಸೇನಾನ್ ಕೂಡ ನಟಿಸಿದ್ದು, ಅಮಿತಾಭ್ ಬಚ್ಚನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

top videos
    First published: