ಮುರಿದುಬಿತ್ತು ಬಾಲಿವುಡ್​ ಹಾಟ್​ ಜೋಡಿಯ ಸಂಬಂಧ; ಯಾರವರು? ಕಾರಣವೇನು?

ಪ್ರೀತಿಯ ಬಗ್ಗೆ ಟೈಗರ್​-ದಿಶಾ ಎಲ್ಲಿಯೂ ಹೇಳಿಕೊಂಡಿಲ್ಲ. ಹೀಗಿರುವಾಗ ಅವರು ಬ್ರೇಕ್​ಅಪ್​ ಆದ ಬಗ್ಗೆ ಹೇಳಿಕೊಳ್ಳುವುದುಂಟೇ ಎಂಬುದು ಅನೇಕರ ಪ್ರಶ್ನೆ. ಸದ್ಯ ಇಬ್ಬರೂ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಿದ್ದಾರೆ.

Rajesh Duggumane | news18
Updated:June 26, 2019, 12:06 PM IST
ಮುರಿದುಬಿತ್ತು ಬಾಲಿವುಡ್​ ಹಾಟ್​ ಜೋಡಿಯ ಸಂಬಂಧ; ಯಾರವರು? ಕಾರಣವೇನು?
ಟೈಗರ್​​ ಶ್ರಾಫ್​- ದಿಶಾ
  • News18
  • Last Updated: June 26, 2019, 12:06 PM IST
  • Share this:
ಪ್ರೀತಿ-ಪ್ರೇಮದ ವಿಚಾರದಲ್ಲಿ ಬಾಲಿವುಡ್​ ಕಲಾವಿದರು ಆಗ್ಗಾಗ ಸುದ್ದಿಯಲ್ಲಿರುತ್ತಾರೆ. ಈ ಸಾಲಿನಲ್ಲಿ ಟೈಗರ್​ ಶ್ರಾಫ್​-ದಿಶಾ ಪಟಣಿ ಕೂಡ ಇದ್ದರು. ಆದರೆ, ಇವರ ಸಂಬಂಧ ಸದ್ದಿಲ್ಲದೆ ಮುರಿದುಬಿದ್ದಿದೆ. ಬಾಲಿವುಡ್​ ಅಂಗಳದಲ್ಲಿ ಸದ್ಯ ಹೀಗೊಂದು ವಿಚಾರ ಹರಿದಾಡುತ್ತಿದೆ.

ಕಳೆದ ಮೂರು ವರ್ಷಗಳಿಂದ ಟೈಗರ್​-ದಿಶಾ ಪರಸ್ಪರ ಪ್ರೀತಿಸುತ್ತಿದ್ದರು. ಅನೇಕ ಕಡೆಗಳಲ್ಲಿ ಒಟ್ಟಾಗಿಯೂ ಇವರು ಕಾಣಿಸಿಕೊಂಡಿದ್ದರು. ಅಲ್ಲದೆ, ‘ಬಾಘಿ 2’ ಚಿತ್ರದಲ್ಲಿ ಟೈಗರ್​-ದಿಶಾ ಒಟ್ಟಿಗೆ ತೆರೆ ಹಂಚಿಕೊಂಡಿದ್ದರು. ಇಷ್ಟಾದರೂ ಯಾರೊಬ್ಬರೂ ಪ್ರೀತಿಯ ವಿಚಾರವನ್ನು ಬಹಿರಂಗಪಡಿಸಿರಲಿಲ್ಲ. ಈಗ ಇವರ ಸಂಬಂಧ ಅಂತ್ಯವಾಗಿದೆ.

ಪರಸ್ಪರ ಭಿನ್ನಾಭಿಪ್ರಾಯ ಹೊಂದಿದ್ದು, ಇದೇ ಕಾರಣಕ್ಕೆ ಇಬ್ಬರೂ ಬೇರೆಯಾಗಿದ್ದಾರೆ. ಆಪ್ತ ವಲಯದವರು ಹೇಳುವ ಪ್ರಕಾರ ಇವರ ನಡುವೆ ಈ ಮೊದಲು ಭಿನ್ನಾಭಿಪ್ರಾಯ ಇದ್ದರೂ ಪರಸ್ಪರ ಹೊಂದಿಕೊಂಡು ಹೋಗುತ್ತಿದ್ದರಂತೆ. ಆದರೆ, ಈಗ ಬೇರೆಯಾಗುವ ನಿರ್ಧಾರಕ್ಕೆ ಈ ಜೋಡಿ ಬಂದಿದೆ. ಮುಂದಿನ ದಿನಗಳಲ್ಲಿ ಉತ್ತಮ ಗೆಳೆಯರಾಗಿಲು ಇವರು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಸಲ್ಲು-ದಿಶಾ 'ಸ್ಲೋ ಮೋಷನ್...'​ ಹಾಡಿಗೆ ಸಿಗುತ್ತಿದೆ ಭರ್ಜರಿ ಪ್ರತಿಕ್ರಿಯೆ..!

ಪ್ರೀತಿಯ ಬಗ್ಗೆ ಟೈಗರ್​-ದಿಶಾ ಎಲ್ಲಿಯೂ ಹೇಳಿಕೊಂಡಿಲ್ಲ. ಹೀಗಿರುವಾಗ ಅವರು ಬ್ರೇಕ್​ಅಪ್​ ಆದ ಬಗ್ಗೆ ಹೇಳಿಕೊಳ್ಳುವುದುಂಟೇ ಎಂಬುದು ಅನೇಕರ ಪ್ರಶ್ನೆ. ಸದ್ಯ ಇಬ್ಬರೂ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಿದ್ದಾರೆ.

ಕಳೆದ ವರ್ಷ ಇವರ ನಟನೆಯ ‘ಬಾಘಿ 2’ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ 150 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿತ್ತು. ಸಿನಿಮಾಕ್ಕೆ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಬಂದರೂ ಸಿನಿಮಾ ಇಷ್ಟೊಂದು ಕಲೆಕ್ಷನ್​ ಮಾಡಿದ್ದು ಅನೇಕರ ಅಚ್ಚರಿಗೆ ಕಾರಣವಾಗಿತ್ತು. ದಿಶಾ-ಟೈಗರ್​ ಕಾಂಬಿನೇಷನ್​ಅನ್ನು ಜನ ಮೆಚ್ಚಿಕೊಂಡಿದ್ದಾರೆ, ಹಾಗಾಗಿ ‘ಬಾಘಿ 2’ ಇಷ್ಟು ದೊಡ್ಡ ಗಳಿಕೆ ಮಾಡಿದೆ ಎನ್ನುವ ಮಾತು ಕೇಳಿ ಬಂದಿತ್ತು.

ಇದನ್ನೂ ಓದಿ:  ಪ್ರತಿ ದಿನ ಟೈಗರ್ ಶ್ರಾಫ್ ಅವರ ಮೊಬೈಲ್ ಚೆಕ್ ಮಾಡುತ್ತಾರಂತೆ ಅವರ ಗರ್ಲ್’ಫ್ರೆಂಡ್’ ದಿಶಾ…
First published:June 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading