'ವಾಂಟೆಡ್-2' ಸಿನಿಮಾದಿಂದ ಸಲ್ಲು ಔಟ್​-ಟೈಗರ್​ ಇನ್​

news18
Updated:July 2, 2018, 12:52 PM IST
'ವಾಂಟೆಡ್-2' ಸಿನಿಮಾದಿಂದ ಸಲ್ಲು ಔಟ್​-ಟೈಗರ್​ ಇನ್​
news18
Updated: July 2, 2018, 12:52 PM IST
ನ್ಯೂಸ್​ 18 ಕನ್ನಡ 

'ಏಕ್​ ಬಾರ್​ ಜೋ ಮೈನೆ ಕಮಿಟ್ಮೆಂಟ್​ ಕರ್​ ದಿ, ವುಸ್​ ಕೆ ಬಾದ್​ ಮೆ ಅಪ್ನೆ ಆಪ್​ ಕಿ ಬಿ ನಹೀ ಸುನ್​ತಾ' ಈ ಡೈಲಾಗ್​ ಕೇಳಿದ ಕೂಡಲೇ ಕಣ್ಮುಂದೆ ಬರುವುದು ಸಲ್ಮಾನ್​. ಈ ಸಿನಿಮಾದ ಎರಡನೇ ಭಾಗ ಮಾಡುವುದಾದರೆ ಸಲ್ಲು ಅಭಿಮಾನಿಗಳು ಆನಂದಿಂದ ಕುಣಿಯೋಕೆ ಆರಂಭಿಸುತ್ತಾರೆ. ಆದರೆ ಸಲ್ಮಾನ್​ ಈ ಸಲ 'ವಾಟೆಂಡ್​ 2' ಸಿನಿಮಾದ ಭಾಗ ಆಗುವುದಿಲ್ಲವಂತೆ.

'ರೇಸ್​-3' ಸಿನಿಮಾದ ಬಿಡುಗಡೆ ಸಮಯದಲ್ಲಿ ನೀಡಿದ್ದ ಸಂದರ್ಶನವೊಂದರಲ್ಲಿ ಸಲ್ಮಾನ್​ 'ವಾಂಟೆಡ್​-2' ಸಿನಿಮಾದಲ್ಲಿ ಅಭಿನಯಿಸುವುದಿಲ್ಲ ಎಂದು ಹೇಳಿದ್ದಾರೆ. ಇದಾದ ನಂತರ ನಿರ್ಮಾಪಕ ಬೋನಿ ಕಪೂರ್​ ಹಾಗೂ ನಿರ್ದೇಶಕ ಪ್ರಭುದೇವಾ ಹೊಸ ನಾಯಕನ ಹುಟುಕಾಟ ಆರಂಭಿಸಿದ್ದರು. ಆದರೆ ಫಿಲ್ಮಿಬೀಟ್​ ಮಾಡಿರುವ ವರದಿ ಪ್ರಕಾರ ಈ ಸಿನಿಮಾಗೆ ನಾಯಕ ಸಿಕ್ಕಿದ್ದಾನೆ. ಅದು 'ಭಾಗಿ' ಸಿನಿಮಾದ ನಾಯಕ ಟೈಗರ್​ ಶ್ರಾಫ್​ ಅಂತೆ.

'ಭಾಗಿ', 'ಭಾಗಿ-2' ಸಿನಿಮಾಗಳಲ್ಲಿ ಸಾಹಸ ದೃಶ್ಯಗಳಲ್ಲಿ ಅಭಿನಯಿಸುವ ಮೂಲಕ ಆ್ಯಕ್ಷನ್​ ನಾಯಕನಾಗಿ ಟೈಗರ್​ ಗುರುತಿಸಿಕೊಂಡಿದ್ದಾರೆ. ಹೀಗಿರುವಾಗ ಸದ್ಯ ಪ್ರಭುದೇವಾ ಅವರ ಬಳಿ ಇದಕ್ಕಿಂತ ಒಳ್ಳೆಯ ಆಯ್ಕೆ ಇರಲು ಸಾಧ್ಯವಿಲ್ಲ. ಸದ್ಯ ಟೈಗರ್​  ಸದ್ಯ ಕರಣ್​ ಜೋಹರ್​ ಅವರ 'ಸ್ಟುಡೆಂಟ್​ ಆಫ್​ ದ ಇಯರ್​-2' ಸಿನಿಮಾದಲ್ಲಿ ವ್ಯಸ್ತವಾಗಿದ್ದಾರೆ. ಈ ಸಿನಿಮಾದಲ್ಲಿ ಟೈಗರ್​ ಜತೆ ಅನನ್ಯಾ ಪಾಂಡೆ ಹಾಗೂ ತಾರಾ ಸುತಾರಿಯಾ ಕಾಣಿಸಿಕೊಳ್ಳಲಿದ್ದಾರೆ.

 
First published:July 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ