Tiger 3 ಸಿನಿಮಾ ಚಿತ್ರೀಕರಣದಲ್ಲಿ ಸಲ್ಮಾನ್​ಗೆ ಜೊತೆಯಾಗಲಿರುವ ಯುಲಿಯಾ ವಂಟೂರ್‌

ಕತ್ರಿನಾ ಕೈಫ್​ ಹಾಗೂ ಸಲ್ಮಾನ್ ಖಾನ್​ ಈ ಹಿಂದೆ ಅಂದರೆ ಏಕ್​ ಥಾ ಟೈಗರ್ ಸಿನಿಮಾದ ಚಿತ್ರೀಕರಣದ ವೇಳೆ ಟರ್ಕಿಯಲ್ಲಿ ನಾಲ್ಕು ಲೊಕೇಷನ್​ಗಳಲ್ಲಿ ಶೂಟಿಂಗ್ ಮಾಡಿದ್ದರು. ನಾಯಕನನ್ನು ಪರಿಚಯಿಸುವ ದೃಶ್ಯಗಳ ಚಿತ್ರೀಕರಣ ಇಸ್ತಾನ್​ಬುಲ್​ನಲ್ಲಿರುವ ಮೇಡನ್​ ಟವರ್​ ಬಳಿ ಚಿತ್ರೀಕರಿಸಲಾಗಿತ್ತು. 

ಸಲ್ಮಾನ್ ಖಾನ್​ ಹಾಗೂ ಲುಲಿಯಾ ವಂಟೂರ್‌

ಸಲ್ಮಾನ್ ಖಾನ್​ ಹಾಗೂ ಲುಲಿಯಾ ವಂಟೂರ್‌

  • Share this:
ಬಾಲಿವುಡ್​ನ ಬ್ಯಾಡ್​ ಸಲ್ಮಾನ್ ಖಾನ್​ ಸದ್ಯ ತಮ್ಮ ಬಹುನಿರೀಕ್ಷಿತ ಸಿನಿಮಾ ಟೈಗರ್ 3 ಶೂಟಿಂಗ್​ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ರೋಮ್​ನ ಸೇಂಠ್​ ಪೀಟರ್ಸ್​ಬರ್ಗ್​ನಲ್ಲಿ ಐದು ದಿನಗಳ ಶೂಟಿಂಗ್ ಶೆಡ್ಯೂಲ್​ ಮುಗಿಸಿರುವ ಸಲ್ಮಾನ್​ ಖಾನ್​ (Salman Khan) ಅವರ ಟೈಗರ್ 3 (Tiger 3) ಸಿನಿಮಾ ತಂಡ ಈಗ ಟರ್ಕಿಯತ್ತ (Turkey) ಮುಖ ಮಾಡಿದೆ. ಸಲ್ಮಾನ್​ ಖಾನ್​ ಇಸ್ತಾನ್​ಬುಲ್​ನಲ್ಲಿ (Istanbul) ಶೂಟಿಂಗ್ ಮಾಡಲಿದ್ದಾರೆ. ಟೈಗರ್​ 3 ಸಿನಿಮಾದ ಚಿತ್ರೀಕರಣದ ಸುದ್ದಿ ನಡುವೆ ಮತ್ತೆ ಸದ್ದು ಮಾಡುತ್ತಿದ್ದಾರೆ ಸಲ್ಮಾನ್‌ ಖಾನ್‌ ಅವರ ಇತ್ತೀಚಿನ ಪ್ರೇಯಸಿ ಎಂದು ಹೇಳಲಾಗುವ ರೊಮೇನಿಯಾದ ಯುಲಿಯಾ ವಂಟೂರ್‌. ಹೌದು, ಗಾಯಕಿ ಯೂಲಿಯಾ ವಂಟೂರ್ ಸಹ ಈಗ ಟರ್ಕಿ ತಲುಪಿದ್ದಾರಂತೆ. ಯೂಲಿಯಾ ವಂಟೂರ್​ ಟರ್ಕಿಯಲ್ಲಿ ಉಳಿದುಕೊಂಡಿರುವ ಹೋಟೆಲ್​ನ ಕೋಣೆಯಿಂದ ಒಂದು ವಿಡಿಯೋ ಮಾಡಿದ್ದು, ಅದು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಯೂಲಿಯಾ ವಂಟೂರ್​ ಅವರು ಸಲ್ಮಾನ್​ ಖಾನ್​ ಅವರ ಪ್ರೇಯಸಿ ಎಂದೇ ಹೇಳಲಾಗುತ್ತದೆ. ಆದರೆ ಭಾಯಿಜಾನ್ ಮಾತ್ರ ಇಬ್ಬರೂ ಒಳ್ಳೆಯ ಸ್ನೇಹಿತರು ಎನ್ನುತ್ತಾರೆ. ಇನ್ನು ಸಲ್ಮಾನ್​ ಅಭಿನಯದ ರಾಧೆ. ದ ಮೋಸ್ಟ್​ ವಾಂಟೆಡ್​ ಭಾಯ್​ ಸಿನಿಮಾದಲ್ಲಿ ಹಾಡು ಹಾಡುವ ಮೂಲಕ ಬಾಲಿವುಡ್​ನಲ್ಲಿ ಗಾಯಕಿಯಾಗಿ ಕರಿಯರ್ ಆರಂಭಿಸಿದವರು ಈ ಯೂಲಿಯಾ.

Radhe Piracy, Delhi High court, Radhe, OTT Ralease, Radhe Movie OTT Release, Bollywood, ರಾಧೆ ಸಿನಿಮಾ, ಸಲ್ಮಾನ್​ ಖಾನ್​, ರಾಧೆ ಸಿನಿಮಾ ಒಟಿಟಿ ರಿಲೀಸ್​, salman khan, salman farming, salman farming video, ms dhoni farming, dhoni in agriculture, dhoni organic farming, salman agriculture, ಸಲ್ಮಾನ್​ ಖಾನ್​, ಸುಶಾಂತ್ ಸಿಂಗ್​ ಆತ್ಮಹತ್ಯೆ, ಸಲ್ಮಾನ್​ ಖಾನ್​ ಟ್ರ್ಯಾಕ್ಟರ್​ ಓಡಿಸಿದ ವಿಡಿಯೋ, ಕೃಷಿ ಮಾಡುತ್ತಿರುವ ಸಲ್ಮಾನ್ ಖಾನ್​​, ಟ್ರೋಲಾದ ಸಲ್ಮಾನ್ ಖಾನ್​
ಸಲ್ಮಾನ್​ ಖಾನ್


ಕತ್ರಿನಾ ಕೈಫ್​ ಹಾಗೂ ಸಲ್ಮಾನ್ ಖಾನ್​ ಈ ಹಿಂದೆ ಅಂದರೆ ಏಕ್​ ಥಾ ಟೈಗರ್ ಸಿನಿಮಾದ ಚಿತ್ರೀಕರಣದ ವೇಳೆ ಟರ್ಕಿಯಲ್ಲಿ ನಾಲ್ಕು ಲೊಕೇಷನ್​ಗಳಲ್ಲಿ ಶೂಟಿಂಗ್ ಮಾಡಿದ್ದರು. ನಾಯಕನನ್ನು ಪರಿಚಯಿಸುವ ದೃಶ್ಯಗಳ ಚಿತ್ರೀಕರಣ ಇಸ್ತಾನ್​ಬುಲ್​ನಲ್ಲಿರುವ ಮೇಡನ್​ ಟವರ್​ ಬಳಿ ಚಿತ್ರೀಕರಿಸಲಾಗಿತ್ತು.

ಇದನ್ನೂ ಓದಿ: Disha Madan: ಎರಡನೇ ಮಗುವಿನ ನಿರೀಕ್ಷೆಯಲ್ಲಿ ಕುಲವಧು ಧಾರಾವಾಹಿ ಖ್ಯಾತಿಯ ನಟಿ ದಿಶಾ ಮದನ್​..!

ಮಹೇಶ್​ ಶರ್ಮಾ ನಿರ್ದೇಶನದ ಟೈಗರ್ 3 ಚಿತ್ರದ ಶೂಟಿಂಗ್​ಗಾಗಿ ದುಬೈ ಮಾರುಕಟ್ಟೆಯ ಸೆಟ್​ ನಿರ್ಮಿಸಾಲಗಿತ್ತು. ತೌಕ್ತೆ ಚಂಡಮಾರುತದಿಂದಾಗಿ ಫಿಲ್ಮ್‌ ಸಿಟಿ ಹೆಚ್ಚು ಹಾನಿಗೊಳಗಾಗಿತ್ತು. ಅದೃಷ್ಟವಶಾತ್ ಆಗ ಶೂಟಿಂಗ್‌ ಅನ್ನು ನಿಲ್ಲಿಸಲಾಗಿತ್ತು. ಈ ಪ್ರದೇಶದಲ್ಲಿ ಸಾಕಷ್ಟು ನಷ್ಟ ಉಂಟಾಗಿದೆ. ಆದರೂ ಯಾವುದೇ ಜೀವಹಾನಿ ಸಂಭವಿಸಲಿಲ್ಲ ಎಂದು ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ನೌಕರರ ಅಧ್ಯಕ್ಷ ಬಿ.ಎನ್ ತಿವಾರಿ ತಿಳಿಸಿದ್ದರು.

ಸಲ್ಮಾನ್ ಅವರ ಟೈಗರ್ 3 ಸಿನಿಮಾವು ಏಕ್‍ ಥಾ ಟೈಗರ್ ಮತ್ತು ಟೈಗರ್ ಜಿಂದಾ ಹೈ ಸಿನಿಮಾಗಳ ಮುಂದುವರೆದ ಭಾಗವಾಗಿದೆ. ಮೊದಲ ಭಾಗ 2012ರಲ್ಲಿ ಬಿಡುಗಡೆಯಾಗಿ ಬಾಕ್ಸಾಫಿಸ್​ನಲ್ಲಿ ಧೂಳೆಬ್ಬಿಸಿತ್ತು. ಮೊದಲ ಸಿನಿಮಾದಲ್ಲಿ 200 ಕೋಟಿ ಗಳಿಕೆ ತಂದುಕೊಟ್ಟಿತು. ಇನ್ನು ಐದು ವರ್ಷಗಳ ನಂತರ ಟೈಗರ್ ಜಿಂದಾ ಹೈ ಸಿನಿಮಾದಲ್ಲಿ ಒಂದಾದ ಈ ಜೋಡಿ ಮತ್ತೊಮ್ಮೆ ಕಮಾಲ್ ಮಾಡಿತು. ಇಷ್ಟೊಂದು ಹಿಟ್ ಸಿನಿಮಾಗಳ ಮುಂದುವರೆದ ಭಾಗವಾಗಿರುವ ಟೈಗರ್ 3 ಸಿನಿಮಾದ ಬಗ್ಗೆ ಅಭಿಮಾನಿಗಳು ಕುತೂಹಲರಾಗಿದ್ದಾರೆ.

ಈ ಸಿನಿಮಾದಲ್ಲಿ ಇಮ್ರಾನ್ ಹಶ್ಮಿ ಅಭಿನಯಿಸುತ್ತಿದ್ದು, ಈ ಸಿನಿಮಾದ ಟ್ರೇ ಲರ್ ಈಗಾಗಲೇ ಬಿಡುಗಡೆಯಾಗಿದೆ. ಇದರ ಜೊತೆಗೆ ಸಲ್ಮಾನ್ ಅವರ ಅಂತಿಮ್: ದ ಫೈನಲ್ ಟ್ರೂಥ್ ಸಿನಿಮಾ ಕೂಡ ತಯಾರಾಗಿದೆ. ಇನ್ನು ಕಭೀ ಈದ್, ಕಭೀ ದಿವಾಲಿ ಈ ಸಿನಿಮಾವನ್ನು ತಮ್ಮ ಕೈಯಲ್ಲಿ ಇಟ್ಟುಕೊಂಡಿದ್ದಾರೆ. ಇನ್ನು ಕತ್ರಿನಾ ಕೂಡ ಫೋನ್ ಬೂತ್, ಸೂರ್ಯವಂಶಿ, ಸೂಪರ್ ಹೀರೋ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

ಇದನ್ನೂ ಓದಿ: Alia Bhatt: ಸಡಕ್ 2 ಚಿತ್ರ ನೆಲ ಕಚ್ಚಿದರೂ ಆಲಿಯಾ ಭಟ್​ ಕೈಯಲ್ಲಿವೆ ಸಾಲು ಸಾಲು ಸಿನಿಮಾಗಳು

ದೊಡ್ಡ ಮಟ್ಟದ ನಿರೀಕ್ಷೆಯೊಂದಿಗೆ ಒಟಿಟಿ ಹಾಗೂ ವಿದೇಶದಲ್ಲಿ ಚಿತ್ರಮಂದಿರದಲ್ಲಿ ರಿಲೀಸ್​ ಆದ ರಾಧೆ ಸಿನಿಮಾ ನೆಲಕಚ್ಚಿದೆ. ಕೇವಲ ಸಲ್ಮಾನ್​ ಖಾನ್​ ಅವರನ್ನು ನೋಡಲು ಬಯಸುವವರಿಗೆ ಮಾತ್ರ ಈ ಸಿನಿಮಾ ಎಂದೂ ಹೇಳಲಾಗುತ್ತಿದೆ. ಸಿನಿಮಾಗೆ ಐಎಂಡಿಬಿಯಲ್ಲೂ ತುಂಬಾ ಕಡಿಮೆ ರೇಟಿಂಗ್​ ಸಿಕ್ಕಿದೆ. ಸಲ್ಮಾನ್​ ಖಾನ್​ ಸಿನಿಮಾದ ಮೇಲೆ ಸಾಕಷ್ಟು ಮೀಮ್ಸ್​ಗಳನ್ನು ಮಾಡಲಾಗಿದ್ದು, ಸಲ್ಮಾನ್​ ಅವರನ್ನು ಟ್ರೋಲ್​ ಮಾಡಲಾಗಿತ್ತು.
Published by:Anitha E
First published: