Tiger 3: ಸಿನಿಮಾಗಾಗಿ ಸಿದ್ಧರಾಗುತ್ತಿರುವ ಕತ್ರಿನಾ ಕೈಫ್​: ಇಲ್ಲಿವೆ ವಿಡಿಯೋ..!

Katrina Kaif: ಮಹೇಶ್​ ಶರ್ಮಾ ನಿರ್ದೇಶನದ ಟೈಗರ್ 3 ಸಿನಿಮಾಗಾಗಿ ಕತ್ರಿನಾ ಕಪೂರ್ ಮಾಡುತ್ತಿರುವ ಪ್ರಾಕ್ಟೀಸ್ ನೋಡಿದರೆ, ಸಿನಿಮಾದಲ್ಲಿ ಭರಪೂರ ಆ್ಯಕ್ಷನ್ ಸಿಗಲಿದೆ ಅನ್ನೋದು ಖಚಿತವಾಗುತ್ತದೆ.

ಟೈಗರ್​ 3 ಸಿನಿಮಾದಲ್ಲಿ ಸಲ್ಮಾನ್​ ಖಾನ್​ ಹಾಗೂ ಕತ್ರಿನಾ ಕೈಫ್​

ಟೈಗರ್​ 3 ಸಿನಿಮಾದಲ್ಲಿ ಸಲ್ಮಾನ್​ ಖಾನ್​ ಹಾಗೂ ಕತ್ರಿನಾ ಕೈಫ್​

  • Share this:
    ಸಲ್ಮಾನ್ ಅವರ ಟೈಗರ್ 3 ಸಿನಿಮಾವು ಏಕ್‍ ಥಾ ಟೈಗರ್ ಮತ್ತು ಟೈಗರ್ ಜಿಂದಾ ಹೈ ಸಿನಿಮಾಗಳ ಮುಂದುವರೆದ ಭಾಗವಾಗಿದೆ. ಈ ಸಿನಿಮಾದ ಚಿತ್ರೀಕರಣ ಈ ಹಿಂದೆಯೇ ಆರಂಭವಾಗಬೇಕಿತ್ತು. ಆದರೆ ಸಿನಿಮಾಗಾಗಿ ನಿರ್ಮಿಸಿದ್ದ ಸೆಟ್​ ತೌಕ್ತೆ ಚಂಡಮಾರುತದಿಂದ ಹಾನಿಗೊಂಡಿತ್ತು. ಈಗ ಮತ್ತೆ ಟೈಗರ್​ 3 ಸಿನಿಮಾಗಾಗಿ ಕಲಾವಿದರು ಸಿದ್ಧಗೊಳ್ಳುತ್ತಿದ್ದಾರೆ. ಹೌದು, ಕತ್ರಿನಾ ಕೈಫ್ ಹಾಗೂ ಸಲ್ಮಾನ್ ಜೋಡಿಯೇ ಈ ಸಿನಿಮಾದಲ್ಲೂ ಮುಂದುವರೆದಿದೆ. ಈ ಸಿನಿಮಾದಲ್ಲಿನ ಪಾತ್ರಕ್ಕಾಗಿ ಅಗತ್ಯ ತಯಾರಿಯಲ್ಲಿ ತೊಡಗಿದ್ದಾರೆ ಸಲ್ಮಾನ್​ ಖಾನ್ ಹಾಗೂ ಕತ್ರಿನಾ ಕೈಫ್​. ಈ ಹಿಂದಿನ ಸಿನಿಮಾಗಳಂತೆ ಈ ಚಿತ್ರದಲ್ಲೂ ಸಪಾಯಕಾರಿ ಸ್ಟಂಟ್​ ಹಾಗೂ ಆಕ್ಷನ್​ ಸೀಕ್ವೆನ್ಸ್​ಗಳಿರವೆಯಂತೆ. ಅದಕ್ಕಾಗಿಯೇ ಕತ್ರಿನಾ ಈಗ ತರಬೇತಿ ಪಡೆಯುತ್ತಿದ್ದಾರೆ. ಈ ಬಗ್ಗೆ ಕತ್ರಿನಾ ಒಂದು ಪುಟ್ಟ ವಿಡಿಯೋ ಸಹ ಹಂಚಿಕೊಂಡಿದ್ದಾರೆ.

    ಏಕ್‍ ಥಾ ಟೈಗರ್ ಮತ್ತು ಟೈಗರ್ ಜಿಂದಾ ಹೈ ಸಿನಿಮಾಗಳಲ್ಲಿ ಕತ್ರಿನಾ ಕೈಫ್​ ಸಖತ್ ಆ್ಯಕ್ಷನ್ ಸೀಕ್ವೆನ್ಸ್​ಗಳಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲೂ ಅವರ ಆ್ಯಕ್ಷನ್ ಕಹಾನಿ ಮುಂದುವರೆದಿದೆ. ಅದಕ್ಕೆ ಅವರು ಈಗ ಕೆಲವು ಆ್ಯಕ್ಷನ್ ಮೂವ್​ಮೆಂಟ್​ಗಳನ್ನು ಕಲಿಯುತ್ತಿದ್ದಾರೆ. ಅದರ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ ಕತ್ರಿನಾ ಕೈಫ್​​.










    View this post on Instagram






    A post shared by Katrina Kaif (@katrinakaif)






    ಮಹೇಶ್​ ಶರ್ಮಾ ನಿರ್ದೇಶನದ ಟೈಗರ್ 3 ಸಿನಿಮಾಗಾಗಿ ಕತ್ರಿನಾ ಕಪೂರ್ ಮಾಡುತ್ತಿರುವ ಪ್ರಾಕ್ಟೀಸ್ ನೋಡಿದರೆ, ಸಿನಿಮಾದಲ್ಲಿ ಭರಪೂರ ಆ್ಯಕ್ಷನ್ ಸಿಗಲಿದೆ ಅನ್ನೋದು ಖಚಿತವಾಗುತ್ತದೆ.

    ಇದನ್ನೂ ಓದಿ: Bigg Boss Kannada Season 8: ಅರವಿಂದ್​ಗೆ ಸೀಕ್ರೆಟ್​ ಟಾಸ್ಕ್ ಕೊಟ್ಟ ಬಿಗ್ ಬಾಸ್​..!

    ಟೈಗರ್ 3 ಚಿತ್ರದ ಶೂಟಿಂಗ್​ಗಾಗಿ ದುಬೈ ಮಾರುಕಟ್ಟೆಯ ಸೆಟ್​ ನಿರ್ಮಿಸಾಲಗಿತ್ತು. ತೌಕ್ತೆ ಚಂಡಮಾರುತದಿಂದಾಗಿ ಫಿಲ್ಮ್‌ ಸಿಟಿ ಹೆಚ್ಚು ಹಾನಿಗೊಳಗಾಗಿತ್ತು. ಅದೃಷ್ಟವಶಾತ್ ಆಗ ಶೂಟಿಂಗ್‌ ಅನ್ನು ನಿಲ್ಲಿಸಲಾಗಿತ್ತು. ಈ ಪ್ರದೇಶದಲ್ಲಿ ಸಾಕಷ್ಟು ನಷ್ಟ ಉಂಟಾಗಿದೆ. ಆದರೂ ಯಾವುದೇ ಜೀವಹಾನಿ ಸಂಭವಿಸಲಿಲ್ಲ ಎಂದು ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ನೌಕರರ ಅಧ್ಯಕ್ಷ ಬಿ.ಎನ್ ತಿವಾರಿ ತಿಳಿಸಿದ್ದರು.

    ಸಲ್ಮಾನ್ ಅವರ ಟೈಗರ್ 3 ಸಿನಿಮಾವು ಏಕ್‍ ಥಾ ಟೈಗರ್ ಮತ್ತು ಟೈಗರ್ ಜಿಂದಾ ಹೈ ಸಿನಿಮಾಗಳ ಮುಂದುವರೆದ ಭಾಗವಾಗಿದೆ. ಮೊದಲ ಭಾಗ 2012ರಲ್ಲಿ ಬಿಡುಗಡೆಯಾಗಿ ಬಾಕ್ಸಾಫಿಸ್​ನಲ್ಲಿ ಧೂಳೆಬ್ಬಿಸಿತ್ತು. ಮೊದಲ ಸಿನಿಮಾದಲ್ಲಿ 200 ಕೋಟಿ ಗಳಿಕೆ ತಂದುಕೊಟ್ಟಿತು. ಇನ್ನು ಐದು ವರ್ಷಗಳ ನಂತರ ಟೈಗರ್ ಜಿಂದಾ ಹೈ ಸಿನಿಮಾದಲ್ಲಿ ಒಂದಾದ ಈ ಜೋಡಿ ಮತ್ತೊಮ್ಮೆ ಕಮಾಲ್ ಮಾಡಿತು. ಇಷ್ಟೊಂದು ಹಿಟ್ ಸಿನಿಮಾಗಳ ಮುಂದುವರೆದ ಭಾಗವಾಗಿರುವ ಟೈಗರ್ 3 ಸಿನಿಮಾದ ಬಗ್ಗೆ ಅಭಿಮಾನಿಗಳು ಕುತೂಹಲರಾಗಿದ್ದಾರೆ.

    ಇದನ್ನೂ ಓದಿ: ಹುಟ್ಟುಹಬ್ಬಕ್ಕೆ ಅಧೀರನ ಹೊಸ ಪೋಸ್ಟರ್​ ಉಡುಗೊರೆಯಾಗಿ ಕೊಟ್ಟ ಕೆಜಿಎಫ್ ಚಾಪ್ಟರ್ 2 ಚಿತ್ರತಂಡ

    ಈ ಸಿನಿಮಾದಲ್ಲಿ ಇಮ್ರಾನ್ ಹಶ್ಮಿ ಅಭಿನಯಿಸುತ್ತಿದ್ದು, ಈ ಸಿನಿಮಾದ ಟ್ರೇ ಲರ್ ಈಗಾಗಲೇ ಬಿಡುಗಡೆಯಾಗಿದೆ. ಇದರ ಜೊತೆಗೆ ಸಲ್ಮಾನ್ ಅವರ ಅಂತಿಮ್: ದ ಫೈನಲ್ ಟ್ರೂಥ್ ಸಿನಿಮಾ ಕೂಡ ತಯಾರಾಗಿದೆ. ಇನ್ನು ಕಭೀ ಈದ್, ಕಭೀ ದಿವಾಲಿ ಈ ಸಿನಿಮಾವನ್ನು ತಮ್ಮ ಕೈಯಲ್ಲಿ ಇಟ್ಟುಕೊಂಡಿದ್ದಾರೆ. ಇನ್ನು ಕತ್ರಿನಾ ಕೂಡ ಫೋನ್ ಬೂತ್, ಸೂರ್ಯವಂಶಿ, ಸೂಪರ್ ಹೀರೋ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

    ದೊಡ್ಡ ಮಟ್ಟದ ನಿರೀಕ್ಷೆಯೊಂದಿಗೆ ಒಟಿಟಿ ಹಾಗೂ ವಿದೇಶದಲ್ಲಿ ಚಿತ್ರಮಂದಿರದಲ್ಲಿ ರಿಲೀಸ್​ ಆದ ರಾಧೆ ಸಿನಿಮಾ ನೆಲಕಚ್ಚಿದೆ. ಕೇವಲ ಸಲ್ಮಾನ್​ ಖಾನ್​ ಅವರನ್ನು ನೋಡಲು ಬಯಸುವವರಿಗೆ ಮಾತ್ರ ಈ ಸಿನಿಮಾ ಎಂದೂ ಹೇಳಲಾಗುತ್ತಿದೆ. ಸಿನಿಮಾಗೆ ಐಎಂಡಿಬಿಯಲ್ಲೂ ತುಂಬಾ ಕಡಿಮೆ ರೇಟಿಂಗ್​ ಸಿಕ್ಕಿದೆ. ಸಲ್ಮಾನ್​ ಖಾನ್​ ಸಿನಿಮಾದ ಮೇಲೆ ಸಾಕಷ್ಟು ಮೀಮ್ಸ್​ಗಳನ್ನು ಮಾಡಲಾಗಿದ್ದು, ಸಲ್ಮಾನ್​ ಅವರನ್ನು ಟ್ರೋಲ್​ ಮಾಡಲಾಗಿತ್ತು.
    Published by:Anitha E
    First published: