'ಠಗ್ಸ್​ ಆಫ್ ಹಿಂದೊಸ್ತಾನ್'​ ಚಿತ್ರೀಕರಣದ ವೇಳೆ ನಿಜವಾಗಿಯೂ ಸ್ಫೋಟಗೊಂಡ ಹಡಗು: ಇಲ್ಲಿದೆ ವಿಡಿಯೋ..!

news18
Updated:October 12, 2018, 3:50 PM IST
'ಠಗ್ಸ್​ ಆಫ್ ಹಿಂದೊಸ್ತಾನ್'​ ಚಿತ್ರೀಕರಣದ ವೇಳೆ ನಿಜವಾಗಿಯೂ ಸ್ಫೋಟಗೊಂಡ ಹಡಗು: ಇಲ್ಲಿದೆ ವಿಡಿಯೋ..!
news18
Updated: October 12, 2018, 3:50 PM IST
ನ್ಯೂಸ್​ 18 ಕನ್ನಡ 

'ಠಗ್ಸ್ ಆಫ್ ಹಿಂದೊಸ್ತಾನ್'.... ಬಾಲಿವುಡ್‍ನ ಈ ವರ್ಷದ ಬಹು ನಿರೀಕ್ಷಿತ ಸಿನಿಮಾ. ಅಮಿತಾಭ್​-ಅಮೀರ್ ಇಬ್ಬರೂ ಮೇರು ನಟರು ಒಂದೇ ಫ್ರೇಂನಲ್ಲಿ ಎದುರಾಗುವ ರೋಚಕ ಕತೆಯಿದು. ಸ್ವಾತಂತ್ರ್ಯ ಪೂರ್ವದ ದೇಶಭಕ್ತ ದರೋಡೆಕೋರರ ಕಹಾನಿ ಇದು. ಚಿತ್ರದ ಟ್ರೈಲರ್ ನೋಡಿದ್ದವರಿಗೆ ಅಮಿತಾಭ್ ಅಂತಹದ್ದೊಂದು ಸಾಹಸ ಮಾಡಿರಬಹುದಾ..? ಇದರ ಮೇಕಿಂಗ್ ಹೇಗಿರಬಹುದು ಅನ್ನೋ ಕುತೂಹಲ ಕಾಡಿತ್ತು.

ಈ ಸಿನಿಮಾದಲ್ಲಿ ಹಡಗಿನೊಳಗಿನ ಫೈಟ್ಸ್ ನೋಡಿ ಹಾಲಿವುಡ್ ಸಿನಿಮಾಗೂ ಸೆಡ್ಡು ಹೊಡೆಯೋ ಹಾಗಿದೆಯಲ್ಲ ಅಂತ ನೀವೂ ಥ್ರಿಲ್ಲಾಗಿರುತ್ತೀರಾ. ಆ ಭಾಗದ ಶೂಟಿಂಗ್ ಮೂರು ತಿಂಗಳು ಹಡಗಿನೊಳಗೆ ನಡದಿದೆ. ಹಡಗಿನೊಳಗಿನ ಶೂಟಿಂಗ್‍ಗಾಗಿ ಮಾಲ್ಟಾ ಪ್ರದೇಶದಲ್ಲಿ ಎಲ್ಲ ವ್ಯವಸ್ಥೆ ಮಾಡಲಾಗಿತ್ತಂತೆ. ಅದರ ಮೇಕಿಂಗ್ ಚಿತ್ರತಂಡ ಬಿಡುಗಡೆ ಮಾಡಿದ್ದು ರೋಚಕವಾಗಿದೆ.ಈಗ ಹೊರಬಂದಿರುವ 'ಠಗ್ಸ್ ಆಫ್ ಹಿಂದೊಸ್ತಾನ್​' ಟ್ರೈಲರ್​ಗೆ ಚಿತ್ರತಂಡ ತಯಾರಿ ಮಾಡಿಕೊಂಡಿರೋದು 2016ರಲ್ಲಿ ಮತ್ತು ಶೂಟಿಂಗ್ ನಡೆಸಿರೋದು 2017ರಲ್ಲಿ. ಈಗ ಚಿತ್ರ ರಿಲೀಸ್‍ಗೆ ಸಿದ್ಧವಾಗಿದೆ. ಮೇಕಿಂಗ್ ಬಗ್ಗೆ ಮಾತನಾಡಿರೋ ಬಿಗ್‍ಬಿ ಅಮಿತಾಭ್ ಬಚ್ಚನ್ ನಾನಂತೂ ಇಲ್ಲಿಯವರೆಗೂ ಇಂತಹ ಸಿನಿಮಾದಲ್ಲಿ ನಟಿಸಿಯೇ ಇರಲಿಲ್ಲ ಎನ್ನುತ್ತಾರೆ.

ಇದೇ ಸೆಟ್‍ನಲ್ಲಿ ಶೂಟಿಂಗ್‍ನಲ್ಲಿರುವಾಗಲೇ ಅಮಿತಾಭ್ ಅನಾರೋಗ್ಯದಿಂದ ಬಳಲಿದ್ದರು. ಅಲ್ಲದೆ ತುಂಬಾ ಭಾರದ ಕಾಸ್ಟ್ಯೂಮ್​ ಧರಿಸಿ, ಈ ವಯಸ್ಸಿನಲ್ಲಿ ಈ ಮಟ್ಟಿಗಿನ ರಿಸ್ಕ್ ತೆಗೆದುಕೊಂಡು ಹಡಗಿನೊಳಗಿನ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡಿರುವುದು ಅಮಿತಾಭ್ ಅವರ ಹೆಚ್ಚುಗಾರಿಕೆ ಎನ್ನಬಹುದು.

Loading...

ಚಿತ್ರತಂಡ ಬಿಡುಗಡೆ ಮಾಡಿರುವ ಮಾಡಿರುವ ಮೂರು ಮೇಕಿಂಗ್ ವಿಡಿಯೋಗಳಲ್ಲಿ ಕೊನೆಯ ಮೇಕಿಂಗ್ ವಿಡಿಯೋ ಶೂಟಿಂಗ್‍ಗಾಗಿ ಕಟ್ಟಿದ್ದ ಹಡಗನ್ನು ಬ್ಲ್ಯಾಸ್ಟ್ ಮಾಡಿ ಉಡಾಯಿಸುವ ದೃಶ್ಯ ಅದ್ಭುತವಾಗಿದೆ. ಹಡಗನ್ನು ಸ್ಫೋಟಿಸುವುದು ನೈಜವಾಗಿರಬೇಕು ಅನ್ನೋ ಕಾರಣದಿಂದಲೇ ಗ್ರಾಫಿಕ್ಸ್​ನಲ್ಲಿ ತೋರಿಸುವ ಬದಲು ಚಿತ್ರತಂಡ ನೈಜವಾಗಿ ಬ್ಲಾಸ್ಟ್ ಮಾಡಿ ತೆರೆಯ ಮೇಲೆ ಮೂಡಿಸಲಾಗಿದೆ.


ಇನೊ ಬಾನೆಲ್ಲೋ ಅನ್ನೋ ಮಾಲ್ಟಾದ ಕಲಾ ನಿರ್ದೇಶಕ ಮೂಡಿಸಿರುವ ಮೋಡಿ ಚಿತ್ರದಲ್ಲಿ ಹೈಲೈಟ್ ಆಗಿದೆ. ಫಾತಿಮಾ ಸನಾ ಶೇಖ್ ಬಿಲ್ಲು ಬಾಣದ ಮೂಲಕ ಅಬ್ಬರಿಸುವ ಮೇಕಿಂಗ್ ಕೂಡ ಇದೇ ಮಾಲ್ಟಾ ಹಡಗಿನೊಳಗಿನ ಹೈಲೈಟ್‍ಗಳಲ್ಲೊಂದು. ಫಾತಿಮಾ ಪ್ರಕಾರ ಅಮಿತಾಭ್ ಅಷ್ಟು ತೂಕದ ಕಾಸ್ಟ್ಯೂಮ್ ಮೈಮೇಲೆ ಹೊತ್ತು ನಟಿಸೋದನ್ನು ನೋಡಿದ್ದು ತಮ್ಮ ಪಾತ್ರಕ್ಕೆ ಮತ್ತಷ್ಟು ಸ್ಪೂರ್ತಿ ತುಂಬಿದೆಯಂತೆ.

ವಿಜಯ್ ಕೃಷ್ಣ ಆಚಾರ್ಯ ನಿರ್ದೇಶನದ ಚಿತ್ರದ ಕ್ಯಾಮೆರಾ ಕೈಚಳಕ ಮನುಷ್ ನಂದನ್ ಅವರದ್ದು. ಇಂತಹ ಚಿತ್ರವನ್ನು ಕ್ಯಾಮೆರಾ ಕಣ್ಣುಗಳಲ್ಲಿ ಹಿಡಿದಿಡೋದು ನಿಜಕ್ಕೂ ಸವಾಲೇ ಎನ್ನುವ ಕ್ಯಾಮೆರಾಮನ್ ಠಗ್ಸ್ ಕಥೆಯಲ್ಲಿ ದೃಶ್ಯ ವೈಭವವನ್ನು ಅದ್ದೂರಿಯಾಗಿಸಿದ್ದಾರೆ. 18ನೇ ಶತಮಾನದ ಕಥೆಯಾಗಿರುವುದರಿಂದ ಚಿತ್ರದ ಕಲರಿಂಗನ್ನೂ ಬೇರೆಯದ್ದೇ ರೀತಿಯಲ್ಲಿ ತರುವ ಮೂಲಕ ಚಿತ್ರಕ್ಕೆ ಹೊಸ ಫ್ಲೇವರ್ ನೀಡಿದ್ದಾರೆ.

ಅಮಿತಾಭ್​-ಅಮೀರ್​ ಕಾಳಗ ನೋಡೋಕೆ ನವೆಂಬರ್ 8ಕ್ಕೆ ದಿನಾಂಕ ನಿಗದಿಯಾಗಿದೆ. ಇಬ್ಬರು ಸೂಪರ್​ ಸ್ಟಾರ್​ಗಳ ಸಿನಿಮಾಗೆ ಕತ್ರಿನಾ ಸಾಥ್ ಕೂಡ ಇದ್ದು, ಮಾದಕ ನೃತ್ಯ ಮತ್ತು ಅಮೀರ್ ಜೊತೆ ರೊಮಾನ್ಸ್​ ಮಾಡುವ ಮೂಲಕ 'ಧೂಮ್' ನಂತರ ಮತ್ತೊಮ್ಮೆ ಜೊತೆಯಾಗಿದ್ದಾರೆ.

ಮೇಕಿಂಗ್ ನೋಡೋದೇ ಒಂದು ವೈಭವದಂತೆ ಭಾಸವಾಗುತ್ತಿದ್ದು, ಬ್ರಿಟೀಷರ ವಿರುದ್ಧ ಸಮರ ಸಾರುವ ದರೋಡೆಕೋರರ ಕಥೆ ಭಾರತೀಯ ಚಿತ್ರರಂಗದ ಎಲ್ಲ ದಾಖಲೆಗಳನ್ನು ಮುರಿಯಲಿದೆ ಅನ್ನೋ ನಂಬಿಕೆ ಚಿತ್ರತಂಡಕ್ಕಿದೆ.

 

 
First published:October 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...