• Home
  • »
  • News
  • »
  • entertainment
  • »
  • Sukesh Chandrasekhar: ಬಾಲಿವುಡ್ ಮಂದಿಗೆ ಮಕ್ಕರ್ ಮಾಡಿದ ಸುಕೇಶ್: ಸಾರಾ, ಜಾಹ್ನವಿ, ಭೂಮಿಗೂ ಕೊಟ್ಟಿದ್ನಂತೆ ದುಬಾರಿ ಗಿಫ್ಟ್!

Sukesh Chandrasekhar: ಬಾಲಿವುಡ್ ಮಂದಿಗೆ ಮಕ್ಕರ್ ಮಾಡಿದ ಸುಕೇಶ್: ಸಾರಾ, ಜಾಹ್ನವಿ, ಭೂಮಿಗೂ ಕೊಟ್ಟಿದ್ನಂತೆ ದುಬಾರಿ ಗಿಫ್ಟ್!

ಬಾಲಿವುಡ್​ ನಟಿಯರಿಗೆ ದುಬಾರಿ ಗಿಫ್ಟ್​

ಬಾಲಿವುಡ್​ ನಟಿಯರಿಗೆ ದುಬಾರಿ ಗಿಫ್ಟ್​

ಜಾಕ್ವೆಲಿನ್ ಮತ್ತು ನೋರಾ ಮಾತ್ರವಲ್ಲ, ಸಾರಾ , ಜಾಹ್ನವಿ ಮತ್ತು ಭೂಮಿಯನ್ನು ಟಾರ್ಗೆಟ್ ಮಾಡಿದ್ದ ಸುಕೇಶ್ ಅವರಿಗೂ ದುಬಾರಿ ಉಡುಗೊರೆಗಳನ್ನು ನೀಡಿದ್ದಾನೆ

  • Share this:

ನಟಿಯರನ್ನೇ ಟಾರ್ಗೆಟ್​ ಮಾಡುತ್ತಿದ್ದ ಸುಕೇಶ್​ ಚಂದ್ರಶೇಖರ್ (Sukesh Chandrashekhar)​ ಮಾಡಿರೋ ವಂಚನೆ ಒಂದಲ್ಲ, ಎರಡಲ್ಲ, ಜೈಲು ಹಕ್ಕಿಯಾಗಿರೋ ಸುಕೇಶ್​ ಬಾಲಿವುಡ್​ ಮಂದಿಯನ್ನು ಹೇಗೆಲ್ಲಾ ಯಾಮಾರಿಸಿದ್ದಾನೆ ಗೊತ್ತಾ? 200 ಕೋಟಿಗೂ ಹೆಚ್ಚು ಸುಲಿಗೆ ಪ್ರಕರಣದಲ್ಲಿ ಜೈಲು ಸೇರಿರುವ ಸುಕೇಶ್ ಬಗ್ಗೆ ಮತ್ತೊಂದು ದೊಡ್ಡ ಮಾಹಿತಿ ಹೊರಬಿದ್ದಿದೆ. ಬಾಲಿವುಡ್‌ ನಟಿಯರಾದ ಜಾಕ್ವೆಲಿನ್ ಫರ್ನಾಂಡೀಸ್ (Jacqueline Fernandez) ಮತ್ತು ನೋರಾ  ಫತೇಹಿ ( NoraFatehi ) ಇಬ್ಬರೂ ಸುಕೇಶ್ ಚಂದ್ರಶೇಖರ್  ಅವರಿಂದ ಬಿಎಂಡಬ್ಲ್ಯು, ಐಫೋನ್, ಐಷಾರಾಮಿ ಬ್ಯಾಗ್‌ಗಳು ಇತ್ಯಾದಿ ಗಿಫ್ಟ್‌ ಪಡೆದಿದ್ದಾರೆ. ಜಾಕ್ವೆಲಿನ್ ಮತ್ತು ನೋರಾ ಮಾತ್ರವಲ್ಲ, ಸಾರಾ (Sara), ಜಾಹ್ನವಿ  (Janhvi) ಮತ್ತು ಭೂಮಿಯನ್ನು (Bhumi) ಟಾರ್ಗೆಟ್ ಮಾಡಿದ್ದ ಸುಕೇಶ್ ಅವರಿಗೂ ದುಬಾರಿ ಉಡುಗೊರೆಗಳನ್ನು ನೀಡಿದ್ದಾನೆ.


ದೆಹಲಿಯ ತಿಹಾರ್​ ಜೈಲಿನಲ್ಲಿರೋ ಸುಕೇಶ್​ ಕಂಬಿ ಹಿಂದೆಯೇ ಹಲವು ಪ್ಲ್ಯಾನ್​ ಮಾಡಿದ್ದಾನೆ. ವಂಚಕ ಸುಕೇಶ್​ನನ್ನು ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸ್ತಿದ್ದು, ಈತನ ಬಣ್ಣ ಒಂದೊಂದಾಗೇ ಬಯಲಾಗ್ತಿದೆ. ಬಾಲಿವುಡ್​ ನಟಿ ಹಾಗೂ ಉದ್ಯಮಿಗಳನ್ನೇ ಟಾರ್ಗೆಟ್​ ಮಾಡಿದ್ದ ಸುಕೇಶ್​ ಹೇಗೆಲ್ಲಾ ಮಕ್ಮಲ್​ ಟೋಪಿ ಹಾಕಿದ್ದಾನೆ ಅಂತ ಇದೀಗ ಬಾಯ್ಬಿಡ್ತಿದ್ದಾನೆ. ಜಾಕ್ವೆಲಿನ್ ಮತ್ತು ನೋರಾ ಅವರನ್ನು ಹೊರತುಪಡಿಸಿ ಇನ್ನೂ ಮೂವರು ನಟರನ್ನು ಸುಕೇಶ್ ಚಂದ್ರಶೇಖರ್ ಟಾರ್ಗೆಟ್ ಮಾಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.


ಜಾನ್ವಿ, ಸಾರಾ ಮತ್ತು ಭೂಮಿಯೇ ಇವನ ಟಾರ್ಗೆಟ್​


'ಇಂಡಿಯಾ ಟುಡೆ' ವರದಿ ಪ್ರಕಾರ, ಕೊಲೆಗಡುಕ ಸುಖೇಶ್ ಚಂದ್ರಶೇಖರ್ ಕೂಡ ಸಾರಾ ಅಲಿ ಖಾನ್, ಜಾಹ್ನವಿ ಕಪೂರ್ ಮತ್ತು ಭೂಮಿ ಪೆಡ್ನೇಕರ್ ಅವರನ್ನು ತನ್ನ ಬಲೆಗೆ ಸಿಲುಕಿಸಲು ಪ್ರಯತ್ನಿಸಿದ್ದ.  ವಂಚಿಸಿದ ಹಣದಲ್ಲಿ ಸುಕೇಶ್ ಅವರಿಗೆ ದುಬಾರಿ ಉಡುಗೊರೆಗಳನ್ನು ನೀಡಿದ್ದಾನೆ. ಸುಕೇಶ್ ಜಾಕ್ವೆಲಿನ್ ಫರ್ನಾಂಡಿಸ್ ಜೊತೆ ಸಂಬಂಧ ಹೊಂದಿದ್ದರು. ಸುಕೇಶ್ ಜಾಕ್ವೆಲಿನ್‌ಗೆ ಹಲವು ದುಬಾರಿ ಮತ್ತು ಐಷಾರಾಮಿ ಉಡುಗೊರೆಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಇಬ್ಬರ ವೈಯಕ್ತಿಕ ಚಿತ್ರಗಳೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ವು. ಅಷ್ಟೇ ಅಲ್ಲ ನಟಿ ನೋರಾ ಫತೇಹಿಗೆ ಕೋಟಿ ಕೋಟಿ ಗಿಫ್ಟ್ ಕೊಟ್ಟಿದ್ದಾರೆ ಸುಖೇಶ್ ಚಂದ್ರಶೇಖರ್.


ಇದನ್ನೂ ಓದಿ: Jacqueline Fernandez: ನಾನು ವಂಚಕನಲ್ಲ, ಜಾಕಲಿನ್​ ಜೊತೆ ಅಫೇರ್​ ಇದ್ದಿದ್ದು ನಿಜ ಎಂದ ಸುಕೇಶ್​!


ಜಾಕ್ವೆಲಿನ್ ಮತ್ತು ನೋರಾಗೆ ದುಬಾರಿ ಗಿಫ್ಟ್​


ಇಡಿ ತನಿಖೆ ಪ್ರಕಾರ, ಸುಕೇಶ್ ಅವರು ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಚಿನ್ನ ಮತ್ತು ವಜ್ರದ ಆಭರಣಗಳು, 4 ಪರ್ಷಿಯನ್ ಬೆಕ್ಕುಗಳು, 52 ಲಕ್ಷದ ಕುದುರೆ ಸೇರಿದಂತೆ ಹಲವು ವಸ್ತುಗಳನ್ನು ನೀಡಿದ್ದರು. ನಟಿಗಾಗಿ ಸುಕೇಶ್ ಸುಮಾರು 10 ಕೋಟಿ ಖರ್ಚು ಮಾಡಿದ್ದ. ಅಷ್ಟೆ ಅಲ್ಲ  ಕಳೆದ ವರ್ಷ ಈ ಪ್ರಕರಣದಲ್ಲಿ ಶ್ರದ್ಧಾ ಕಪೂರ್ ಮತ್ತು ಶಿಲ್ಪಾ ಶೆಟ್ಟಿ ಕುಂದ್ರಾ ಹೆಸರು ಕೂಡ ಬಂದಿತ್ತು. ವರದಿಗಳ ಪ್ರಕಾರ, ಸುಕೇಶ್ ಚಂದ್ರಶೇಖರ್  2015 ರಿಂದ ಶ್ರದ್ಧಾ ಕಪೂರ್ ಸ್ನೇಹ ಹೊಂದಿದ್ದ, ಡ್ರಗ್ಸ್ ಪ್ರಕರಣದಲ್ಲಿ ಎನ್‌ಸಿಬಿಗೆ ಸಹಾಯ ಮಾಡಿದ್ದಾನೆ ಎಂದು ಇಡಿ ಮುಂದೆ ಒಪ್ಪಿಕೊಂಡಿದ್ದ.


ದುಬಾರಿ ಉಡುಗೊರೆಗಳಿಂದ ಹಾಲಿವುಡ್ ಚಿತ್ರಗಳವರೆಗೆ, ಸುಕೇಶ್ ಜಾಕ್ವೆಲಿನ್‌ಗೆ ಆಫರ್ ಮಾಡಿದ್ದರು, ಲಿಯೊನಾರ್ಡೊ ಅವರನ್ನು ಭೇಟಿಯಾಗಲಿತ್ತು. 200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಕ್ಕಿಬಿದ್ದ ಜಾಕ್ವೆಲಿನ್ ಫರ್ನಾಂಡೀಸ್, ವಿಚಾರಣೆಗಾಗಿ ಇಡಿ ಕಚೇರಿಗೆ


ಇದನ್ನೂ ಓದಿ: Jacqueline Fernandez: 200 ಕೋಟಿ ರೂ. ವಂಚನೆ ಉರುಳು; ವಿಚಾರಣೆಗೆ ಗೈರಾದ ಕಿಚ್ಚನ ನಾಯಕಿ


ಸುಕೇಶ್ ಜೈಲು ಸೇರಿದ್ದು ಯಾಕೆ?


ರಾನ್‌ಬಾಕ್ಸಿ ಮಾಜಿ ಮಾಲೀಕನ ಪತ್ನಿ ಅದಿತಿಯನ್ನು ಸುಕೇಶ್ ಚಂದ್ರಶೇಖರ್ ಬಲೆಗೆ ಬೀಳಿಸಿ ಸುಮಾರು 215 ಕೋಟಿ ರೂ. ವಂಚಿಸಿದ ಆರೋಪದ ಮೇಲೆ ಸುಕೇಶ್‌ನನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ. ಸುಕೇಶ್ ಜೈಲಿನಿಂದಲೇ ಜಾಕ್ವೆಲಿನ್ ಫರ್ನಾಂಡಿಸ್ ಗೆ ಕರೆ ಮಾಡಿದ್ದರು. ಕೆಲವೊಮ್ಮೆ ಆತ ತಮ್ಮನ್ನು ಗೃಹ ಸಚಿವಾಲಯದ ದೊಡ್ಡ ಅಧಿಕಾರಿ ಎಂದು ಕರೆದುಕೊಳ್ಳುತ್ತಿದ್ದ. ಇದೀಗ ಸುಕೇಶ್ ಚಂದ್ರಶೇಖರ್ ಸಾರಾ, ಜಾಹ್ನವಿ ಮತ್ತು ಭೂಮಿ ಪೆಡ್ನೇಕರ್ ಅವರನ್ನೂ ಟಾರ್ಗೆಟ್​ ಮಾಡಿರೋ ದೊಡ್ಡ ಸುದ್ದಿ ಬಹಿರಂಗವಾಗಿದೆ.

Published by:Pavana HS
First published: