• Home
 • »
 • News
 • »
 • entertainment
 • »
 • Katrina Kaif: ಕತ್ರಿನಾ ಕೈಫ್​ ಬರ್ತ್‌ಡೇ ಪಾರ್ಟಿಯಲ್ಲಿ ವಿಕ್ಕಿ ಡ್ಯಾನ್ಸ್‌! ವೈರಲ್‌ ಆಯ್ತು ವಿಡಿಯೋ

Katrina Kaif: ಕತ್ರಿನಾ ಕೈಫ್​ ಬರ್ತ್‌ಡೇ ಪಾರ್ಟಿಯಲ್ಲಿ ವಿಕ್ಕಿ ಡ್ಯಾನ್ಸ್‌! ವೈರಲ್‌ ಆಯ್ತು ವಿಡಿಯೋ

ಕತ್ರಿನಾ ಕೈಫ್, ವಿಕ್ಕಿ ಕೌಶಲ್

ಕತ್ರಿನಾ ಕೈಫ್, ವಿಕ್ಕಿ ಕೌಶಲ್

ಪತ್ನಿ ಕತ್ರಿನಾ ಕೈಫ್‌ಗಾಗಿ ವಿಕ್ಕಿ ಕೌಶಲ್ ಡ್ಯಾನ್ಸ್ ಮಾಡಿದ್ದ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ. ಕತ್ರಿನಾ ಕೈಫ್ ಅವರ ಸ್ನೇಹಿತೆ ಮಿನಿ ಮಾಥುರ್ ಅವರು ತಮ್ಮ ಇನ್‌ಸ್ಟಾ ಗ್ರಾಮ್ ಪ್ರೊಫೈಲ್‌ನಲ್ಲಿ ಇತ್ತೀಚಿಗೆ ಪೋಸ್ಟ್ ಮಾಡಿದ್ದಾರೆ.

 • Trending Desk
 • 2-MIN READ
 • Last Updated :
 • Karnataka, India
 • Share this:

ಸಾಮಾನ್ಯವಾಗಿ ತಾವು ಪ್ರೀತಿಸುವ ಗರ್ಲ್‌ ಫ್ರೆಂಡ್‌ (Girl friend) ಅಥವಾ ಬಾಯ್‌ಫ್ರೆಂಡ್‌ಗೆ, ಗಂಡ- ಅಥವಾ ಹೆಂಡತಿಗೆ ವಿಶೇಷ ದಿನಗಳಂದು ಸ್ಪೆಷಲ್‌ ಗಿಫ್ಟ್‌ (Special Gift) ನೀಡ್ತಾರೆ. ಏನನ್ನ ಮಾಡಿದ್ರೆ ಅವರಿಗೆ ಖುಷಿಯಾಗುತ್ತೋ ಅದನ್ನೇ ಸ್ಪೆಷಲ್‌ ಆಗಿ ಮಾಡ್ತಾರೆ. ಅವರಿಷ್ಟದ ಗಿಫ್ಟ್‌, ಪ್ರವಾಸ ಅಥವಾ ಸರ್‌ಪ್ರೈಸ್‌ ಪಾರ್ಟಿ (Party) ನೀಡ್ತಾರೆ. ಅದರಲ್ಲೂ ಬರ್ತ್‌ಡೇಗೆ ಇನ್ನಷ್ಟು ವಿಶೇಷವಾಗಿರೋದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಜನಸಾಮಾನ್ಯರು ಇಂಥದ್ದನ್ನು ಮಾಡಿದರೂ ಸೆಲೆಬ್ರಿಟಿಗಳು ಮಾಡಿರೋ ಸರ್‌ಪ್ರೈಸ್‌ ಗಳು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತವೆ. ಹಾಗೆಯೇ ನಟಿ ಕತ್ರೀನಾ ಕೈಫ್‌ (Katrina Kaif) ಬರ್ತ್‌ಡೇ ದಿನ ಅವರ ಪತಿ ವಿಕ್ಕಿ ಕೌಶಲ್‌ ನೀಡಿದ್ದ ಸರ್‌ಪ್ರೈಸ್‌ ಇದೀಗ ವೈರಲ್‌ ಆಗಿದೆ.


ಕತ್ರೀನಾ ಗಾಗಿ ಡ್ಯಾನ್ಸ್‌ ಪರ್ಫಾರ್ಮನ್ಸ್‌ ನೀಡಿದ್ದ ವಿಕ್ಕಿ


ಹೌದು, ಪತ್ನಿ ಕತ್ರಿನಾ ಕೈಫ್‌ಗಾಗಿ ವಿಕ್ಕಿ ಕೌಶಲ್ ಡ್ಯಾನ್ಸ್ ಮಾಡಿದ್ದ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ. ಈ ವೀಡಿಯೊವನ್ನು ಕತ್ರಿನಾ ಕೈಫ್ ಅವರ ಸ್ನೇಹಿತೆ ಮಿನಿ ಮಾಥುರ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಇತ್ತೀಚಿಗೆ ಪೋಸ್ಟ್ ಮಾಡಿದ್ದಾರೆ


.


ಆ ಪೋಸ್ಟ್‌ಗೆ, "2022 ರಲ್ಲಿ ಕೃತಜ್ಞರಾಗಿರಲು ಹಲವಾರು ವಿಷಯಗಳಿವೆ. ಆದ್ದರಿಂದ ನಾವು ಅತ್ಯಂತ ಪ್ರಮುಖವಾದ ʼಪ್ರೀತಿʼಯಿಂದ ಅದನ್ನು ಪ್ರಾರಂಭಿಸೋಣ! ಏಕೆಂದರೆ ನಮಗೆ ಬೇಕಾಗಿರುವುದು ಪ್ರೀತಿ" ಎಂದು ಮಿನಿ ಮಾಥುರ್ ಶೀರ್ಷಿಕೆ ನೀಡಿದ್ದಾರೆ.
ವಿಡಿಯೋದಲ್ಲಿ ಏನಿದೆ?


ಕಳೆದ ವರ್ಷದ ಕತ್ರೀನಾ ಹುಟ್ಟುಹಬ್ಬ ಆಚರಣೆಗಾಗಿ ದಂಪತಿ ಮಾಲ್ಡೀವ್ಸ್‌ ಗೆ ತೆರಳಿದ್ದರು. ಈ ವೇಳೆ ನಟ ವಿಕ್ಕಿ ಕೌಶಲ್ ಮತ್ತು ಶರ್ವರಿ ಇಬ್ಬರೂ ಸೇರಿ ಸಾಂಗ್‌ ಗಳಿಗೆ ಡ್ಯಾನ್ಸ್ ಮಾಡುತ್ತಿದ್ದರೆ ಸ್ವಲ್ಪ ದೂರದಲ್ಲೇ ಕುಳಿತಿದ್ದ ಕತ್ರಿನಾ ಕೈಫ್ ನಗುತ್ತಿರುವುದನ್ನು ವಿಡಿಯೋ ಒಳಗೊಂಡಿದೆ. ವಿಡಿಯೋದಲ್ಲಿ ವಿಕ್ಕಿ ಚೆಕ್‌ರೆಡ್‌ ಶರ್ಟ್‌ ಹಾಗೂ ವೈಟ್‌ ಕಲರ್‌ ಪ್ಯಾಂಟ್‌ ಧರಿಸಿದ್ದರೆ, ಕತ್ರೀನಾ ಬಿಳಿ ಬಣ್ಣದ ಔಟ್‌ಫಿಟ್‌ ಧರಿಸಿದ್ದರು.


ಕತ್ರೀನಾಗಾಗಿ 45 ನಿಮಿಷಗಳ ಕಾಲ ಡ್ಯಾನ್ಸ್‌ ಮಾಡಿದ್ದ ವಿಕ್ಕಿ


ಕಾಫಿ ವಿತ್ ಕರಣ್ 7 ರಲ್ಲಿ, ಈ ಬಗ್ಗೆ ನಟಿ ಕತ್ರಿನಾ ಕೈಫ್ ಹೇಳಿಕೊಂಡಿದ್ದರು. ಅದರಲ್ಲಿ ಕಾರ್ಯಕ್ರಮದ ಹೋಸ್ಟ್‌ ಕರಣ್‌ ಜೋಹರ್‌ , ನಿಮ್ಮ ಪತಿ ವಿಕ್ಕಿ ಮಾಡಿರುವ ಅತಿ ಅದ್ಭುತವಾದ ಕೆಲಸ ಯಾವುದು ಅಂತ ಕೇಳಿದಾಗ ಅವರು ಈ ಘಟನೆಯನ್ನು ನೆನಪು ಮಾಡಿಕೊಂಡಿದ್ದರು.


ಕಳೆದ ವರ್ಷ ಮಾಲ್ಡೀವ್ಸ್‌ನಲ್ಲಿ ತನ್ನ ಹುಟ್ಟುಹಬ್ಬದಂದು ವಿಕ್ಕಿ ಕೆಲವು ಹಾಡುಗಳಿಗೆ ಪ್ರದರ್ಶನ ನೀಡಿದ್ದನ್ನು ಕತ್ರಿನಾ ಬಹಿರಂಗಪಡಿಸಿದ್ದರು. "ನನ್ನ ಜನ್ಮದಿನದಂದು ನಾನು ತುಂಬಾ ಕಷ್ಟದ ಪರಿಸ್ಥಿತಿಯಿಂದ ಹೊರಬರುತ್ತಿದ್ದೆ. ಸಾಂಕ್ರಾಮಿಕ ಕೋವಿಡ್‌ನೊಂದಿಗೆ ಕೆಟ್ಟ ಸಮಯವನ್ನು ಕಳೆದಿದ್ದೆ. ನನಗೆ ಯಾವುದು ಖುಷಿ ನೀಡುತ್ತದೆ ಅನ್ನುವ ಬಗ್ಗೆ ತಿಳಿದು ಅದನ್ನೇ ಅವರು ಮಾಡಿದರು. ಅವರು ನನಗೆ ಅಕ್ಷರಶಃ ಖುಷಿಯಾಗುವ ಕೆಲಸವನ್ನು ಮಾಡಿದರು. ನನ್ನ ಪ್ರತಿಯೊಂದು ಹಾಡಿಗೆ ಅವರು ಡ್ಯಾನ್ಸ್‌ ಅನ್ನು ಸುಮಾರು 45 ನಿಮಿಷಗಳ ಕಾಲ ಮಾಡಿದರು” ಎಂಬುದಾಗಿ ಕತ್ರಿನಾ ಕೈಫ್ ಹೇಳಿದ್ದರು.


ಇನ್ನು ಹೊಸ ವರ್ಷಾಚರಣೆಗೆಂದು ವಿಕ್ಕಿ ಹಾಗೂ ಕತ್ರೀನಾ ದಂಪತಿ ರಾಜಸ್ಥಾನಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿಯ ಕೆಲವೊಂದಿಷ್ಟು ನಿಸರ್ಗದ ಫೋಟೋಗಳನ್ನು ಇನ್‌ಸ್ಟಾಗ್ರಾಂ ನಲ್ಲಿ ಪೋಸ್ಟ್‌ ಮಾಡಿದ್ದರು.


ಇದನ್ನೂ ಓದಿ: Rashmika-Samantha: ಸಮಂತಾ ವಿಚಾರದಲ್ಲಿ ನಾನು ತುಂಬಾ ಪೊಸೆಸಿವ್​​; ಸ್ಯಾಮ್​ ಕಾಯಿಲೆ ಬಗ್ಗೆ ರಶ್ಮಿಕಾ ಮಂದಣ್ಣ ಮಾತು


ಅಂದಹಾಗೆ ನಟಿ ಕತ್ರಿನಾ ಕೈಫ್ 2 ವರ್ಷಗಳ ಡೇಟಿಂಗ್ ನಂತರ ಡಿಸೆಂಬರ್ 2021 ರಲ್ಲಿ ವಿಕ್ಕಿ ಕೌಶಲ್ ಅವರನ್ನು ವಿವಾಹವಾದರು. ಅವರು ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿ ಸಪ್ತಪದಿ ತುಳಿದರು. ಖಾಸಗಿ ಕಾರ್ಯಕ್ರಮದಲ್ಲಿ ಕೆಲವೇ ಕೆಲವು ಚಿತ್ರರಂಗದ ಸ್ನೇಹಿತರು ಹಾಗೂ ಕುಟುಂಬದವರು ಹಾಜರಿದ್ದರು. ಇನ್ನು ಕತ್ರೀನಾ ಟೈಗರ್‌ 3 ಚಿತ್ರದಲ್ಲಿ ಸಲ್ಮಾನ್‌ ಖಾನ್‌ ಜೊತೆಗೆ ನಟಿಸುತ್ತಿದ್ದಾರೆ. ಅಲ್ಲದೇ ಜೀಲೇ ಜರಾ ಚಿತ್ರದಲ್ಲೂ ಕತ್ರೀನಾ ಅಭಿನಯಿಸುತ್ತಿದ್ದಾರೆ.

Published by:ಪಾವನ ಎಚ್ ಎಸ್
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು