ಪ್ರಸ್ತುತ ಭಾರತದ ಕೇಂದ್ರ ಕ್ಯಾಬಿನೇಟ್ನಲ್ಲಿ (Cabinet) ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಖಾತೆಯ ಸಚಿವರಾದ ಸ್ಮೃತಿ ಜುಬಿನ್ ಇರಾನಿ ಅವರು ರಾಜಕೀಯಕ್ಕೆ ಬರುವ ಮುಂಚೆ ಫ್ಯಾಷನ್ ರೂಪದರ್ಶಿ ಮತ್ತು ನಿರ್ಮಾಪಕಿ ಅಷ್ಟೇ ಅಲ್ಲದೆ ಒಬ್ಬ ಜನಪ್ರಿಯ ಕಿರುತೆರೆಯ ಜನಪ್ರಿಯ ನಟಿಯಾಗಿದ್ದರು ಎಂಬುದು ಬಹುತೇಕವಾಗಿ ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಇವರು ಮೇ (May) 2014 ರಿಂದ ಭಾರತದ ಕೇಂದ್ರ ಕ್ಯಾಬಿನೆಟ್ ನಲ್ಲಿ ಸಚಿವರಾಗಿದ್ದಾರೆ. ಇವರು ಒಬ್ಬ ರಾಜಕಾರಿಣಿ ಆಗಿ ಎಷ್ಟು ಜನಪ್ರಿಯತೆಯನ್ನು ಪಡೆದಿದ್ದಾರೋ, ಅಷ್ಟೇ ಜನಪ್ರಿಯತೆಯನ್ನು ಇವರು ನಟಿಯಾಗಿದ್ದಾಗ ಸಹ ಪಡೆದಿದ್ದರು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಸ್ಮೃತಿ ಇರಾನಿ (Smriti Irani) ಅವರು ಮೊದಲು ತಮ್ಮ ವೃತ್ತಿಜೀವನವನ್ನು ಒಬ್ಬ ರೂಪದರ್ಶಿಯಾಗಿ ಪ್ರಾರಂಭಿಸಿದರು ಮತ್ತು ಕ್ರಮೇಣ ರಾಜಕೀಯಕ್ಕೆ (Political) ಧುಮಕುವ ಮೊದಲು ದೂರದರ್ಶನದಲ್ಲಿ ಬರುವ ಧಾರವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡರು ಅಂತ ಹೇಳಬಹುದು.
ಸ್ಮೃತಿ ಅವರು ನಟಿಯಾಗಿದ್ದಾಗ ಖ್ಯಾತ ನಿರ್ಮಾಪಕಿಯಾದ ಏಕ್ತಾ ಕಪೂರ್ ಅವರ ಧಾರಾವಾಹಿ, ಬಾಲಾಜಿ ಟೆಲಿಫಿಲ್ಮ್ ನ ‘ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ’ ಎಂಬ ಸಾಂಸಾರಿಕ ಧಾರವಾಹಿಯಲ್ಲಿ ಸ್ಮೃತಿ ಇರಾನಿ ಅವರು ತುಳಸಿಯಾಗಿ ನಟಿಸಿ ಲಕ್ಷಾಂತರ ಅಭಿಮಾನಿಗಳ ಹೃದಯಗಳನ್ನು ಗೆದ್ದಿದ್ದರು. ಒಟ್ಟಿನಲ್ಲಿ ಹೇಳುವುದಾದರೆ ಮನೆಯಲ್ಲಿರುವ ಹೆಣ್ಣುಮಕ್ಕಳ ಫೇವರಿಟ್ ಆಗಿದ್ದರು ಈ ನಟಿ ಅಂತ ಹೇಳಿದರೆ ಸುಳ್ಳಲ್ಲ.
ಹೀಗಾಗಿ ಅವರು ತಮ್ಮ ನಟನೆಯಿಂದ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಅವರ ಬಗ್ಗೆ ಅಪ್ಡೇಟ್ ಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.
ಇದನ್ನೂ ಓದಿ: ಆರ್ಸಿಬಿ ತಂಡದ ಸ್ಟ್ರೆಂಥ್-ವೀಕ್ನೆಸ್ ಏನು? ಇಲ್ಲಿದೆ ಬೆಂಗಳೂರು ತಂಡದ ಪ್ಲೇಯಿಂಗ್ 11
ಅವರ ಜನ್ಮದಿನದಂದು (ಮಾರ್ಚ್ 23), ಅವರ ಪ್ರಮುಖ ಥ್ರೋಬ್ಯಾಕ್ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ನೋಡಿ. ಯಾವುದಪ್ಪಾ ಆ ವಿಡಿಯೋ ಅಂತ ನಿಮಗೆ ತಿಳಿದುಕೊಳ್ಳಲು ತುಂಬಾನೇ ಕುತೂಹಲ ಇರಬೇಕಲ್ಲವೇ?
25 ವರ್ಷಗಳ ಹಿಂದಿನ ವೀಡಿಯೋ ಈಗ ವೈರಲ್ ಆಗಿದೆ ನೋಡಿ
ಸ್ಮೃತಿ ಇರಾನಿ ಅವರ 25 ವರ್ಷಗಳ ಹಿಂದೆ ಎಂದರೆ ಬರೋಬ್ಬರಿ 1998 ರಲ್ಲಿ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಎಲಾನ್ ನೊಂದಿಗೆ ರ್‍ಯಾಂಪ್ ನಲ್ಲಿ ನಡೆಯುವಾಗ ಅವರು ಟ್ಯಾಂಗರಿನ್ ಸ್ಲೀವ್ ಲೆಸ್ ಟಾಪ್ ಮತ್ತು ಮಿನಿ ಸ್ಕರ್ಟ್ ನಲ್ಲಿ ಅದ್ಭುತವಾಗಿ ಕಾಣುತ್ತಿದ್ದರು.
View this post on Instagram
2019 ರಲ್ಲಿ ರಾಹುಲ್ ಗಾಂಧಿಯವರನ್ನು ಸೋಲಿಸಿದ ಸ್ಮೃತಿ
ಸ್ಮೃತಿ ಇರಾನಿ ಅವರು 2003 ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರಿದರು. ಅವರು 2004 ರಲ್ಲಿ ಮಹಾರಾಷ್ಟ್ರ ಯುವ ಘಟಕದ ಉಪಾಧ್ಯಕ್ಷರಾದರು. 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸೋಲಿಸುವ ಮೂಲಕ ಸ್ಮೃತಿ ಅವರು ಅಮೇಥಿ ಕ್ಷೇತ್ರದ ಸಂಸದರಾಗಿ ಹೊರ ಹೊಮ್ಮಿದರು.
ಇದನ್ನೂ ಓದಿ: ಹೆಚ್ಐವಿ ಟೆಸ್ಟ್ ಮಾಡಿಸಿಕೊಂಡಿದ್ರಂತೆ ಟೀಂ ಇಂಡಿಯಾ ಗಬ್ಬರ್ ಸಿಂಗ್! ಏನಿದು ಧವನ್ ಜೀವನದ ಸೀಕ್ರೆಟ್?
2000 ರಲ್ಲಿ, ಸ್ಮೃತಿ ಇರಾನಿ ಟಿವಿ ಧಾರಾವಾಹಿಗಳಾದ ‘ಆತಿಶ್’ ಮತ್ತು ‘ಹಮ್ ಹೈ ಕಲ್ ಆಜ್ ಔರ್ ಕಲ್’ ಮೂಲಕ ಪಾದಾರ್ಪಣೆ ಮಾಡಿದರು. ಡಿಡಿ ಮೆಟ್ರೋದಲ್ಲಿ ಕವಿತಾ ಧಾರಾವಾಹಿಯಲ್ಲಿಯೂ ಅವರು ನಟಿಸಿದ್ದಾರೆ.
ಆದರೆ ಬಾಲಾಜಿ ಟೆಲಿಫಿಲ್ಮ್ಸ್ ನ ಏಕ್ತಾ ಕಪೂರ್ ಅವರ ‘ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ’ ಸೀರಿಯಲ್ ನಿಂದಾಗಿ ಅವರು ದೊಡ್ಡ ಸ್ಟಾರ್ ಆದರು. ಅವರ ಅತ್ಯುತ್ತಮ ನಟನೆಗಾಗಿ ಅವರು ಸತತ ಐದು ಭಾರತೀಯ ದೂರದರ್ಶನ ಅಕಾಡೆಮಿ ಪ್ರಶಸ್ತಿಗಳನ್ನು ಗೆದ್ದ ದಾಖಲೆಯನ್ನು ಹೊಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ