ಟಾಲಿವುಡ್ ಕಿಂಗ್ (Tollywood King) ನಾಗಾರ್ಜುನ ಅಕ್ಕಿನೇನಿ (Nagarjuna Akkineni) ಹಾಗೂ ಒಂದು ಕಾಲದ ಖ್ಯಾತ ನಟಿ ತಬು (Tabu) ನಡುವೆ ಲವ್ವಿ-ಡವ್ವಿ ಇದೆ ಎಂಬ ವಿಚಾರ ಆಗ ಸಾಕಷ್ಟು ಸದ್ದು ಮಾಡಿತ್ತು. ನಟಿ ಟಬು ಜೊತೆಗೆ ನಾಗಾರ್ಜುನ ಹೆಸರು ಥಳುಕು ಹಾಕಿಕೊಂಡಿದ್ದಲ್ಲದೇ ಚಿತ್ರರಂಗದಲ್ಲಿ ಈ ವಿಷಯಯ ಆಗಿನ ಒಂದು ಹೆಚ್ಚಿನ ಚರ್ಚಿತ ಗಾಸಿಪ್ (Gossip) ಕೂಡ ಆಗಿತ್ತು. ಈ ಜೋಡಿ ಸುಮಾರು ವರ್ಷಗಳ ಕಾಲ ಡೇಟಿಂಗ್‌ನಲ್ಲಿದ್ದರೂ (Dating) ಕೂಡ ಈ ಬಗ್ಗೆ ಇಬ್ಬರೂ ಕಲಾವಿದರು ತುಟಿಕ್-ಪಿಟಿಕ್ ಎಂದಿರಲಿಲ್ಲ. ಈಗಲೂ ನಾವಿಬ್ಬರೂ ಒಳ್ಳೆಯ ಸ್ನೇಹಿತರು (Friends) ಎಂದು ಹೇಳಿಕೊಳ್ಳುತ್ತಿದ್ದಾರೆ.
ತಬು-ನಾಗರ್ಜುನ್ ನಡುವಿನ ಗಾಸಿಪ್! ಏನಂದ್ರು ಟಾಲಿವುಡ್ ಕಿಂಗ್?
ನಾಗಾರ್ಜುನ ಅಕ್ಕಿನೇನಿ ಅವರ ಹಳೆಯ ಸಂದರ್ಶನದ ವಿಡಿಯೋ ಒಂದರಲ್ಲೂ ಸಹ ಟಬು ನನಗೆ ಇನ್ನೂ ಸಹ ಉತ್ತಮ ಸ್ನೇಹಿತೆ. ನಮ್ಮ ಸ್ನೇಹವು ತುಂಬಾ ಹಳೆಯದ್ದು ಎಂದು ಟಬು ಸ್ನೇಹವನ್ನು ಹೊಗಳಿದ್ದಾರೆ.
ಟಬು ನನಗೆ ಉತ್ತಮ ಸ್ನೇಹಿತೆ
2017ರ ಸಂದರ್ಶನವೊಂದರಲ್ಲಿ, ನಾಗಾರ್ಜುನ ಅವರಿಗೆ ನಟಿ ಟಬು ಬಗ್ಗೆ ಕೇಳಲಾಯಿತು. ಟಬು ಹೆಸರು ಕೇಳುತ್ತಿದ್ದಂತೆ ಮುಖ ಅರಳಿಸಿ ನಗು ಬೀರಿ ಅವರ ಬಗ್ಗೆ ನಾಗರ್ಜುನ್ ಮಾತನಾಡಿದರು.
ಅವಳದ್ದು ಸುಂದರ ವ್ಯಕ್ತಿತ್ವ ಮತ್ತು ಉತ್ತಮ ಸ್ನೇಹಿತೆ. ನನಗೆ 21 ವರ್ಷ ಮತ್ತು ಅವಳಿಗೆ 16 ವರ್ಷ ಇದ್ದಾಗಿನಿಂದಲೂ ನಾವಿಬ್ಬರು ಸ್ನೇಹಿತರು. ಇಂದಿಗೂ ನಮ್ಮ ಸ್ನೇಹ ಹಾಗೆ ಇದೆ ಎಂದಿದ್ದಾರೆ ಅಕ್ಕಿನೇನಿ. ನನ್ನ ಮಾತನ್ನು ಜನ ಬೇರೆ ರೀತಿ ಅರ್ಥ ಮಾಡಿಕೊಳ್ಳಬಹುದು. ಆದರೆ ನಿಜವಾದದ್ದು ನಾವಿಬ್ಬರೂ ಸ್ನೇಹಿತರು ಅನ್ನೋದು ಮಾತ್ರ ಎಂದಿದ್ದಾರೆ.
ಜೀವನದ ಆಪ್ತ ವ್ಯಕ್ತಿಗಳಲ್ಲಿ ನಾಗರ್ಜುನ್ ಒಬ್ಬರು - ಟಬು
ಮತ್ತೊಂದೆಡೆ, ಟಬು ಅವರು ಕೂಡ ತನ್ನ ಜೀವನದಲ್ಲಿ ಅತ್ಯಂತ ಹತ್ತಿರದ ವ್ಯಕ್ತಿಗಳಲ್ಲಿ ನಾಗಾರ್ಜುನ್ ಕೂಡ ಒಬ್ಬರು ಎಂದು ಹೇಳಿದ್ದಾರೆ. ನಮ್ಮಿಬ್ಬರ ನಡುವಿನ ಸಂಬಂಧವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದರು.
2007 ರಲ್ಲಿ ಕರಣ್ ಜೋಹರ್ ಅವರ ಟಾಕ್ ಶೋ, ಕಾಫಿ ವಿತ್ ಕರಣ್ ಸಂಚಿಕೆಯಲ್ಲಿ, ಈ ಬಗ್ಗೆ ಮಾತನಾಡಿದ ಟಬು ಡೇಟಿಂಗ್ ವದಂತಿಗಳ ಬಗ್ಗೆ ಮಾತನಾಡಿದರು.
ತನ್ನ ಜೀವನದಲ್ಲಿ ಆಪ್ತ ವ್ಯಕ್ತಿಗಳಲ್ಲಿ ಅವರು ಒಬ್ಬರು. ಅವರ ಜೊತೆಗಿನ ಸ್ನೇಹ ಸಂಬಂಧ ವಿಶೇಷವಾದದ್ದು ಮತ್ತು ಇದು ಯಾವತ್ತಿಗೂ ಬದಲಾಗುವುದಿಲ್ಲ ಎಂದು ಟಬು ಹೇಳಿದ್ದರು.
ತೆರೆಮೇಲೂ ಮೋಡಿ ಮಾಡಿದ್ದ ಹಿಟ್ ಜೋಡಿ
ನಾಗಾರ್ಜುನ ಮತ್ತು ಟಬು ತೆರೆಮೇಲೂ ಮೋಡಿ ಮಾಡಿದ ಜೋಡಿ. ಇಬ್ಬರ ಕೆಮಿಸ್ಟ್ರಿಗೆ ಪ್ರೇಕ್ಷಕರು ಫಿದಾ ಆಗಿದ್ದರು. ನಿನ್ನೆ ಪೆಲ್ಲಾಡುತಾ, ಆವಿಡಾ ಮಾ ಆವಿಡಾ ಅಲ್ಲಿ ಮತ್ತು ಸಿಸಿಂದ್ರಿ ಮುಂತಾದ ಚಿತ್ರಗಳಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: Neha Dhupia: ಮದುವೆಗೂ ಮುನ್ನ ಗರ್ಭಿಣಿಯಾದ ಬಾಲಿವುಡ್ ನಟಿ! ನೇಹಾ ಧೂಪಿಯಾಗೆ ಪೋಷಕರು ಕೊಟ್ರು ಡೆಡ್ಲೈನ್!
1993 ರಲ್ಲಿ ಬಿಡುಗಡೆಯಾದ 'ನಿನ್ನೆ ಪೆಲ್ಲಾಡುತಾ' ಒಂದು ರೋಮ್ಯಾಂಟಿಕ್ ಫ್ಯಾಮಿಲಿ ಸಿನಿಮಾವಾಗಿದ್ದು, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಹ ಬಂದಿದೆ. ಈ ಚಿತ್ರವನ್ನು ಕೃಷ್ಣ ವಂಶಿ ನಿರ್ದೇಶಿಸಿದ್ದಾರೆ ಮತ್ತು ನಾಗಾರ್ಜುನ ಮತ್ತು ತಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇಬ್ಬರ ನಡುವಿನ ಗಾಸಿಫ್ ನಡುವೆಯೂ ಚಿತ್ರದಲ್ಲಿ ಉತ್ತಮವಾಗಿ ಇಬ್ಬರೂ ಅಭಿನಯಿಸಿ ಪ್ರೇಕ್ಷಕ ಪ್ರಭುಗಳಿಂದ ಮೆಚ್ಚುಗೆ ಪಡೆದುಕೊಂಡಿದ್ದರು.
ಇನ್ನೂ ನಾಗಾರ್ಜುನ ಕೊನೆಯ ಬಾರಿಗೆ 'ಬ್ರಹ್ಮಾಸ್ತ್ರ ಭಾಗ ಒಂದು, ಶಿವ ಮತ್ತು ಘೋಸ್ಟ್ ನಲ್ಲಿ ಕಾಣಿಸಿಕೊಂಡಿದ್ದರೆ, ತಬು ಅವರು ಕೂಡ ಇನ್ನೂ ಚಿತ್ರರಂಗದಲ್ಲಿ ಬ್ಯುಸಿ ಇರುವ ನಟಿ. 'ಅಂಧಧುನ್,' 'ಹೈದರ್' ಮತ್ತು 'ದೃಶ್ಯಂ' ನಂತಹ ಚಿತ್ರಗಳಲ್ಲಿ ಟಬು ನಟಿಸಿದ್ದಾರೆ. ದೃಶ್ಯಂ ಚಿತ್ರ ಭಾರಿ ಮೆಚ್ಚುಗೆ ಪಡೆದುಕೊಂಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ